- Home
- Life
- Travel
- ಈ ವೀಕೆಂಡ್ ಗೆ ಟ್ರಾವೆಲ್ ಪ್ಲ್ಯಾನ್ ಮಾಡುತ್ತಿದ್ದರೆ… ಈ ಬಜೆಟ್ ಫ್ರೆಂಡ್ಲಿ ತಾಣಗಳು ನಿಮ್ಮ ಲಿಸ್ಟಲ್ಲಿರಲಿ
ಈ ವೀಕೆಂಡ್ ಗೆ ಟ್ರಾವೆಲ್ ಪ್ಲ್ಯಾನ್ ಮಾಡುತ್ತಿದ್ದರೆ… ಈ ಬಜೆಟ್ ಫ್ರೆಂಡ್ಲಿ ತಾಣಗಳು ನಿಮ್ಮ ಲಿಸ್ಟಲ್ಲಿರಲಿ
ನೀವು ಬೆಂಗಳೂರಲ್ಲಿದ್ದು, ವಾರಾಂತ್ಯಕ್ಕೆ ಕಡಿಮೆ ಬಜೆಟ್ ಗೆ ಎಲ್ಲಿಗೆ ಟ್ರಾವೆಲ್ ಮಾಡಬಹುದು ಎಂದು ನೀವು ಯೋಚನೆ ಮಾಡುತ್ತಿದ್ದರೆ, ಈ ತಾಣಗಳು ಟ್ರಾವೆಲ್ ಮಾಡೋದಕ್ಕೆ ಬೆಸ್ಟ್.

ನೀವು ಬೆಂಗಳೂರಿನಲ್ಲಿದ್ದು, ಈ ವಾರಾಂತ್ಯ ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನಾಚರಣೆಯ ರಜೆ ಇದೆ. ಹಾಗಾಗಿ ಮೂರು ದಿನದ ರಜೆಯನ್ನು ಪ್ಲ್ಯಾನ್ ಮಾಡಿದ್ದರೆ, ಅದು ಕಡಿಮೆ ಬಜೆಟ್ ಗೆ ಎಲ್ಲಿ ಹೋಗೋದು ಎಂದು ಯೋಚನೆ ಮಾಡುತ್ತಿದ್ದರೆ, ಈ ತಾಣಗಳು ನಿಮ್ಮ ಲಿಸ್ಟ್ ನಲ್ಲಿರಲಿ.
ನಂದಿ ಬೆಟ್ಟ : ಬೆಂಗಳೂರಿನಲ್ಲಿ ಇದ್ದ ಮೇಲೆ ನಂದಿ ಹಿಲ್ಸ್ ಗೆ ಹೋಗದೇ ಇದ್ದರೆ ಹೇಗೆ ಅಲ್ವಾ? ಇದು ನೀವು ಭೇಟಿ ನೀಡಲೇಬೇಕಾದ ತುಂಬಾನೆ ಸುಂದರವಾದ ಸ್ಥಳವಾಗಿದೆ. ಇದು ಬೆಂಗಳೂರಿನಿಂದ ಕೇವಲ 61 ಕಿ.ಮೀ ದೂರದಲ್ಲಿದೆ. ಇಲ್ಲಿ ನೀವು ಕಡಿಮೆ ದರದಲ್ಲಿ ಫ್ಯಾಮಿಲಿ ಅಥವಾ ನಿಮ್ಮ ಪ್ರೀತಿ ಜೊತೆ ಎಂಜಾಯ್ ಮಾಡಬಹುದು.
ಕಬಿನಿ :ಇದು ಬೆಂಗಳೂರಿನಿಂದ ಸುಮಾರು 215 ಕಿ.ಮೀ ದೂರದಲ್ಲಿದೆ. ಹಚ್ಚ ಹಸಿರಿನ ಪ್ರದೇಶ ಮತ್ತು ಸುಗಮ ರಸ್ತೆಗಳು, ಸುಂದರ ಪ್ರಕೃತಿ ಎಲ್ಲವೂ ಸೇರಿ ಇದು ವನ್ಯಜೀವಿ ಪ್ರಿಯರಿಗೆ ಸ್ವರ್ಗವೇ ಸರಿ. ಇಲ್ಲಿ ನೀವು ವಿವಿಧ ವಿಧದ ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು.
ಕೂರ್ಗ್ : ಕೂರ್ಗ್ ಅಥವಾ ಮಡಿಕೇರಿಗೂ ನೀವು ಕಡಿಮೆ ಬಜೆಟ್ ನಲ್ಲಿ ಟ್ರಾವೆಲ್ ಮಾಡಬಹುದು. ಇದನ್ನು ಕರ್ನಾಟಕದ ಸ್ಕಾಟ್ ಲ್ಯಾಂಡ್ ಅಂತಾರೆ. ಪ್ರಕೃತಿ ಸೌಂದರ್ಯದ ತುಂಬಾನೆ ಸುಂದರವಾದ ತಾಣ ಇದು.
ಹೊಗೇನಕಲ್ : ಇದು ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಆದರೆ ಇದು ಕಡಿಮೆ ಬಜೆಟ್ ನ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡಬಹುದಾದ ಸುಂದರವಾದ ತಾಣ ಇದು. ಕಿರಿದಾದ ಕಮರಿಯ ಮೂಲಕ ಹರಿಯುವ ಕಾವೇರಿ ನದಿಯ ರೋಮಾಂಚಕ ದೃಶ್ಯವನ್ನು ಇಲ್ಲಿ ಕಣ್ತುಂಬಿಸಿಕೊಳ್ಳಬಹುದು.
ಊಟಿ : ಊಟಿ ಬೆಂಗಳೂರಿನಿಂದ ಸುಮಾರು ಆರು ಗಂಟೆ ದೂರದಲ್ಲಿದೆ. ಅಂದ್ರೆ 256ಬ್ ಕಿಮೀ ದೂರದಲ್ಲಿದೆ. ಇದು ಪ್ರಕೃತಿಯ ರಮಣೀಯ ನಯನಮನೋಹರ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಊಟಿ, ಕೊಡೈಕೆನೆಲ್ ನೀವು ಕಡಿಮೆ ಬಜೆಟ್ ನಲ್ಲಿ ಭೇಟಿ ನೀಡಬಹುದಾದ ತಾಣಗಳು.
ವಯನಾಡ್ : ಕೇರಳದ ಸುಂದರ ತಾಣ. ಇಲ್ಲಿ ಪ್ರಕೃತಿ ಸೌಂದರ್ಯವೇ ತುಂಬಿಕೊಂಡಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ, ಹಲವು ಜಲಪಾತಗಳಿವೆ, ಗಿರಿ ಶಿಖರಗಳಿವೆ, ಇಲ್ಲಿ ನೀವು ಪ್ರಕೃತಿಯಲ್ಲಿ ಕಳೆದು ಹೋಗಬಹುದು.
ಸಕಲೇಶಪುರ : ಇದು ಬೆಂಗಳೂರಿನಿಂದ 225 ಕಿ.ಮೀ ದೂರದಲ್ಲಿದೆ. ಸುಂದರವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ತಾಣ ಇದು. ಇಲ್ಲಿ ನೀವು ಬೆಟ್ಟಗುಡ್ಡ, ಪ್ರಶಾಂತವಾದ ವಾತಾರವರಣದಲ್ಲಿ ಎಂಜಾಯ್ ಮಾಡಬಹುದು.
ಮೈಸೂರು : ಬೆಂಗಳೂರಿಗೆ ತುಂಬಾನೆ ಹತ್ತಿರ ಇರುವಂತಹ ಸುಂದರವಾದ ತಾಣ ಅಂದ್ರೆ ಅದು ಮೈಸೂರು. ಅರಮನೆ ನಗರಿ ಮೈಸೂರಿನ ಸುಂದರ ತಾಣಗಳು, ಐತಿಹಾಸಿಕ ಕಟ್ಟಡಗಳು, ಅಲ್ಲಿನ ಹಾವಾಮಾನ ಎಲ್ಲವನ್ನೂ ನೀವು ಎಂಜಾಯ್ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

