MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಮೈಸೂರಿನ ಜನತೆಗಾಗಿ ತಿರುಪತಿಗೆ KSTDC ವಿಶೇಷ ಟೂರ್ ಪ್ಯಾಕೇಜ್; ಟಿಕೆಟ್ ಬೆಲೆ ಎಷ್ಟು?

ಮೈಸೂರಿನ ಜನತೆಗಾಗಿ ತಿರುಪತಿಗೆ KSTDC ವಿಶೇಷ ಟೂರ್ ಪ್ಯಾಕೇಜ್; ಟಿಕೆಟ್ ಬೆಲೆ ಎಷ್ಟು?

KSTDC Travel Package: ಮೈಸೂರಿನಿಂದ ತಿರುಪತಿಗೆ ಎರಡು ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಒಂದು ದಿನದ ತಿರುಪತಿ ಟ್ರಿಪ್ ಮತ್ತು ಮೂರು ದಿನಗಳ ತಿರುಪತಿ-ಕಾಳಹಸ್ತಿ ಟ್ರಿಪ್ ಪ್ಯಾಕೇಜ್‌ಗಳು ಲಭ್ಯವಿದೆ. ಈ ಪ್ಯಾಕೇಜ್‌ಗಳ ಬೆಲೆ ಮತ್ತು ಇತರ ಮಾಹಿತಿಯನ್ನು ತಿಳಿದುಕೊಳ್ಳಿ.

1 Min read
Author : Mahmad Rafik
| Updated : Aug 10 2025, 02:52 PM IST
Share this Photo Gallery
  • FB
  • TW
  • Linkdin
  • Whatsapp
16
KSTDC ಎರಡು ವಿಶೇಷ ಟೂರ್ ಪ್ಯಾಕೇಜ್
Image Credit : Social Media

KSTDC ಎರಡು ವಿಶೇಷ ಟೂರ್ ಪ್ಯಾಕೇಜ್

ಮೈಸೂರು ಭಾಗದ ಜನತೆಗೆ KSTDC ಎರಡು ವಿಶೇಷ ಟೂರ್ ಪ್ಯಾಕೇಜ್ ನೀಡುತ್ತಿದೆ. ಈ ಟ್ರಾವೆಲ್ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳುವ ಮೂಲಕ ಸುಲಭವಾಗಿ ತಿರುಮಲದಲ್ಲಿರುವ ಬಾಲಾಜಿಯ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ. ಈ ಟ್ರಾವೆಲ್ ಪ್ಯಾಕೇಜ್ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

26
ಮೈಸೂರಿನಿಂದ ಪ್ರತಿದಿನವೂ ಇರುತ್ತೆ ಬಸ್
Image Credit : TTD website

ಮೈಸೂರಿನಿಂದ ಪ್ರತಿದಿನವೂ ಇರುತ್ತೆ ಬಸ್

KSTDCಯ 2+2 ಸೀಟರ್‌ ಹೊಂದಿರುವ ಎಸಿ ಬಸ್ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ. ಮೈಸೂರಿನ ಮಯೂರ ಹೊಯ್ಸಳ ಹೋಟ್‌ಲ್‌ನ KSTDC ಕಚೇರಿಯಿಂದ ತಿರುಪತಿಗೆ ಬಸ್ ಹೊರಡುತ್ತದೆ. ಮಾರ್ಗ ಮಧ್ಯೆ ತಿಂಡಿ ಮತ್ತು ಟೀ ಸೇವನೆಗಾಗಿ ಬಸ್‌ ಸ್ಟಾಪ್ ಮಾಡಲಾಗುತ್ತದೆ.

Related Articles

Related image1
ಮಂಗಳೂರು, ಹಾಸನ, ಸಕಲೇಶಪುರದ ತಿರುಪತಿ ಭಕ್ತಾದಿಗಳಿಗೆ ಗುಡ್‌ನ್ಯೂಸ್; ಪ್ರಯಾಣ ಸುಲಭ, ಆರಾಮದಾಯಕ!
Related image2
300 ರೂ. ಟಿಕೆಟ್ ಇಲ್ಲದೆಯೇ ಕ್ವಿಕ್ ಆಗಿ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ; TTDಯಿಂದ ಹೊಸ ಆಯ್ಕೆ
36
ತಿಂಡಿ ಮತ್ತು ಊಟದ ವ್ಯವಸ್ಥೆ
Image Credit : Social Media

ತಿಂಡಿ ಮತ್ತು ಊಟದ ವ್ಯವಸ್ಥೆ

ಬೆಳಗಿನ ಜಾವ 2 ಗಂಟೆ ಬಸ್ ತಿರುಪತಿಗೆ ತಲುಪುತ್ತದೆ. ಇಲ್ಲಿ ಪ್ರಯಾಣಿಕರಿಗೆ ಫ್ರೆಶ್ ಆಗಲು ಹೋಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ಬೆಳಗಿನ ಜಾವ 4.30ಕ್ಕೆ ದೇವಸ್ಥಾನದತ್ತ ಕರೆದುಕೊಂಡು ಹೋಗಲಾಗುತ್ತದೆ. ಬೆಟ್ಟದ ಮೇಲೆ ಸ್ಥಳೀಯ ಬಸ್ ಬಳಕೆ ಮಾಡಬೇಕಾಗುತ್ತದೆ. ಈ ಬಸ್ ಚಾರ್ಜ್ ನಿಮ್ಮ ಪ್ಯಾಕೇಜ್‌ನಲ್ಲಿಯೇ ಒಳಗೊಂಡಿರುತ್ತದೆ.

46
ಪದ್ಮಾವತಿ ದೇವಸ್ಥಾನದ ದರ್ಶನ
Image Credit : Social Media

ಪದ್ಮಾವತಿ ದೇವಸ್ಥಾನದ ದರ್ಶನ

ದರ್ಶನದ ಬಳಿಕ ಮಧ್ಯಾಹ್ನ 2 ಗಂಟೆಗೆ ಲಂಚ್ ಬ್ರೇಕ್ ನೀಡಲಾಗುತ್ತದೆ. ಸಂಜೆ 5 ಗಂಟೆಯಿಂದ 6 ಗಂಟೆ ನಡುವೆ ಪದ್ಮಾವತಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ. (ಇದು ತಿರುಮಲದಲ್ಲಿ ಭಕ್ತರ ಜನಸಂದಣಿ ಮತ್ತು ದರ್ಶನದ ಮೇಲೆ ನಿಗದಿಯಾಗಿರುತ್ತದೆ). ಇಲ್ಲಿಂದ ಮತ್ತೆ ಮೈಸೂರಿಗೆ ಪ್ರಯಾಣ ಆರಂಭವಾಗುತ್ತದೆ.

56
ಟೂರ್ ಪ್ಯಾಕೇಜ್ ದರ ಎಷ್ಟು?
Image Credit : Social Media

ಟೂರ್ ಪ್ಯಾಕೇಜ್ ದರ ಎಷ್ಟು?

ಮೈಸೂರು ಟು ತಿರುಪತಿ ಒಂದು ದಿನದ ಟೂರ್ ಪ್ಯಾಕೇಜ್ ಬೆಲೆ 2,935 ರೂಪಾಯಿ ಆಗಿದೆ. ಈ ಪ್ರಯಾಣದ ಟಿಕೆಟ್‌ನ್ನು KSTDC ವೆಬ್‌ಸೈಟ್‌ ಅಥವಾ ನೇರವಾಗಿ ಕಚೇರಿಗೆ ತೆರಳಿ ಬುಕ್ ಮಾಡಬಹುದಾಗಿದೆ.

66
ಮೈಸೂರು-ಕಾಳಹಸ್ತಿ ಪ್ಯಾಕೇಜ್
Image Credit : Google

ಮೈಸೂರು-ಕಾಳಹಸ್ತಿ ಪ್ಯಾಕೇಜ್

ಕೆಎಸ್‌ಟಿಡಿಸಿ ಮೈಸೂರಿನ ಜನತೆಗೆ KSTDC ಮತ್ತೊಂದು ಟೂರ್ ಪ್ಯಾಕೇಜ್ ನೀಡಿದೆ. ಇದು ಮೂರು ದಿನದ ಪ್ಯಾಕೇಜ್ ಆಗಿದ್ದು, ಕಾಳಹಸ್ತಿ ಮತ್ತು ತಿರುಪತಿಗೆ ಭೇಟಿ ನೀಡಬಹುದು. 3 ರಾತ್ರಿ ಮತ್ತು 2 ಹಗಲು ಪ್ರಯಾಣವನ್ನು ಹೊಂದಿರುತ್ತದೆ. ಈ ಟೂರ್ ಪ್ಯಾಕೇಜ್ ಬೆಲೆ ಒಬ್ಬರಿಗೆ 5,400 ರೂಪಾಯಿ, 2 ಟಿಕೆಟ್‌ಗೆ 4,500 ರೂ. ಮತ್ತು 3 ಟಿಕೆಟ್ ಬುಕಿಂಗ್‌ಗೆ 4,340 ರೂಪಾಯಿ ಆಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮೈಸೂರು
ತಿರುಪತಿ

Latest Videos
Recommended Stories
Recommended image1
ಕರ್ನಾಟಕದ ಕುರಿತು ಕನ್ನಡಿಗರಾದ ನಿಮಗೆ ಈ ಮಾಹಿತಿ ತಿಳಿದಿದ್ಯಾ?
Recommended image2
KSRTC ವೀಕೆಂಡ್ ಟೂರ್ ಪ್ಯಾಕೇಜ್: ಕಡಿಮೆ ದರದಲ್ಲಿ ತಲಕಾಡು, ಮೇಲುಕೋಟೆ, ಚಿಕ್ಕತಿರುಪತಿ ಪ್ರವಾಸ!
Recommended image3
ಸ್ವರ್ಗವೇ ಧರೆಗಿಳಿದ ಹಾಗೆ ಕಾಣುವ ಈ ತಾಣಗಳು ಹನಿಮೂನ್‌ಗೆ ಚೀಪ್‌ ಅಂಡ್‌ ಬೆಸ್ಟ್
Related Stories
Recommended image1
ಮಂಗಳೂರು, ಹಾಸನ, ಸಕಲೇಶಪುರದ ತಿರುಪತಿ ಭಕ್ತಾದಿಗಳಿಗೆ ಗುಡ್‌ನ್ಯೂಸ್; ಪ್ರಯಾಣ ಸುಲಭ, ಆರಾಮದಾಯಕ!
Recommended image2
300 ರೂ. ಟಿಕೆಟ್ ಇಲ್ಲದೆಯೇ ಕ್ವಿಕ್ ಆಗಿ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ; TTDಯಿಂದ ಹೊಸ ಆಯ್ಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved