ಭಾರತದ ಈ ರಾಜ್ಯದಲ್ಲಿ ಹಾವುಗಳೇ ಇಲ್ಲ, ಇದು ಭಾರತದ ಅತ್ಯಂತ ಸುಂದರ ತಾಣ
ಹಾವುಗಳು ಎಲ್ಲೆಡೆ ಇರುವ ಜೀವಿಗಳು. ಆದರೆ ನಮ್ಮ ದೇಶದ ಒಂದು ರಾಜ್ಯದಲ್ಲಿ ಹಾವುಗಳೇ ಇಲ್ಲ ಅಂದ್ರೆ ನಂಬ್ತೀರಾ? ಹೌದು, ಹಾವುಗಳೇ ಇಲ್ಲದ ಒಂದು ರಾಜ್ಯ ಇದೆ. ಅದೆಲ್ಲಿ? ಆ ವಿವರಗಳೇನು ಅಂತ ತಿಳಿದುಕೊಳ್ಳೋಣ.

ಹಾವುಗಳಿಲ್ಲದ ಭಾರತದ ರಾಜ್ಯ
ಸಾಮಾನ್ಯವಾಗಿ ಎಲ್ಲಾ ಕಡೆ ಹಾವುಗಳು ಇರುತ್ತವೆ. ಇದು ಭೂಮಿ ಮೇಲೆ ವಾಸಿಸುವ ಒಂದು ಜೀವಿ. ವಿಷಕಾರಿಯಾಗಿದ್ದರೂ ಅಥವಾ ಇಲ್ಲದಿದ್ದರೂ, ಹಾವನ್ನು ನೋಡಿದ ತಕ್ಷಣ ಜನರು ಭಯಪಡುತ್ತಾರೆ. ಪ್ರಪಂಚದಾದ್ಯಂತ ಹಾವು ಅತ್ಯಂತ ಅಪಾಯಕಾರಿ ವಿಷ ಜೀವಿ ಎಂದು ಪರಿಗಣಿಸಲಾಗಿದೆ.
ಭಾರತದಲ್ಲಿ ಸುಮಾರು 350 ಕ್ಕೂ ಹೆಚ್ಚು ವಿಧದ ಹಾವುಗಳು ಕಂಡುಬರುತ್ತವೆ. ಇನ್ನೂ ಹೇಳಬೇಕೆಂದರೆ, ಅವುಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಲೇ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾವುಗಳನ್ನು ಆಗಾಗ್ಗೆ ನೋಡಬಹುದು. ನಗರಗಳಲ್ಲೂ ಕೂಡ ಅವುಗಳನ್ನು ನೋಡುತ್ತೇವೆ. ನಿಮಗೆ ತಿಳಿದಿದೆಯೇ, ಭಾರತದಲ್ಲಿರುವ ಹಾವುಗಳಲ್ಲಿ ಶೇ.17 ರಷ್ಟು ಮಾತ್ರ ವಿಷಪೂರಿತ.
ನಮ್ಮ ದೇಶದಲ್ಲೇ ಕೇರಳ ರಾಜ್ಯದಲ್ಲಿ ಹಾವುಗಳ ಜಾತಿಗಳು ಹೆಚ್ಚಾಗಿವೆ. ಕೇರಳದ ಕಾಡುಗಳಲ್ಲಿ ವಿಶೇಷ ಹಾಗೂ ಇತರ ಎಲ್ಲೂ ಕಾಣಸಿಗದ ಹಾವಗಳಿದೆ. ಆದರೆ ಹಾವುಗಳೇ ಇಲ್ಲದ ಒಂದು ರಾಜ್ಯ ಇದೆ ಅಂತ ನಿಮಗೆ ತಿಳಿದಿದೆಯೇ? ಕೇಳಲು ನಿಮಗೆ ಆಶ್ಚರ್ಯವಾಗಬಹುದು. ಆದರೆ ಅದು ನಿಜ.
ಕೆಲವು ತಿಂಗಳ ಹಿಂದೆ ಆ ರಾಜ್ಯವನ್ನು ಭಾರತದ ಸುಂದರ ರಾಜ್ಯ ಎಂದು ಘೋಷಿಸಲಾಗಿತ್ತು. ಇದು ಒಂದು ಕೇಂದ್ರಾಡಳಿತ ಪ್ರದೇಶ. ಅದರ ಹೆಸರು ಲಕ್ಷದ್ವೀಪ. ಈ ದ್ವೀಪದ ಒಟ್ಟು ಜನಸಂಖ್ಯೆ ಸುಮಾರು 64 ಸಾವಿರ ಮಾತ್ರ. ಅತ್ಯಂತ ಸುಂದರ, ಪ್ರವಾಸಿ ತಾಣವಾಗಿರುವ ಲಕ್ಷದ್ವೀಪದಲ್ಲಿ ಹಾವುಗಳೇ ಇಲ್ಲ. ಪಗ್‌ದುಂಡಿ ಸಫಾರಿ ಅಧ್ಯಯನ ವರದಿ ಈ ಮಾಹಿತಿ ನೀಡಿದೆ.
ಪಗ್‌ದುಂಡಿ ಸಫಾರಿ ಇತ್ತೀಚೆಗೆ ತನ್ನ ಸುದೀರ್ಘ ಅದ್ಯಯನ ವರದಿ ಪ್ರಕಟಿಸಿದೆ. ಈ ವರದಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಲಕ್ಷದ್ವೀಪದಲ್ಲಿ ಒಂದೇ ಒಂದು ಹಾವುಗಳಿಲ್ಲ ಎಂದು ದಾಖಲುಪಡಿಸಿದೆ. ಲಕ್ಷದ್ವೀಪದಲ್ಲಿ 36 ದ್ವೀಪಗಳಿವೆ. ಆದರೆ ಇವುಗಳಲ್ಲಿ 10 ದ್ವೀಪಗಳಲ್ಲಿ ಮಾತ್ರ ಜನರು ವಾಸಿಸುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ದ್ವೀಪಗಳಲ್ಲಿ 100 ಕ್ಕಿಂತ ಕಡಿಮೆ ಜನರಿದ್ದಾರೆ.
ಇಷ್ಟೇ ಅಲ್ಲ, ಈ ದ್ವೀಪದಲ್ಲಿ ನಾಯಿಗಳೂ ಇಲ್ಲ. ಇಲ್ಲಿನ ಸರ್ಕಾರ ಹಾವುಗಳು ಮತ್ತು ನಾಯಿಗಳಿಲ್ಲದ ದ್ವೀಪವಾಗಿ ಇರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕ ತೆರಳಿ ಪ್ರವಾಸೋದ್ಯಮವನ್ನು ಪ್ರಚಾರ ಮಾಡಿದ್ದರು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು. ಭವಿಷ್ಯದಲ್ಲಿ ಲಕ್ಷದ್ವೀಪ ಭಾರತದ ಅತೀ ದೊಡ್ಡ ಪ್ರವಾಸಿ ತಾಣವಾಗಿಸುವಲ್ಲಿ ನಿರಂತರ ಕೆಲಸಗಳು ನಡೆಯುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.