- Home
- Entertainment
- TV Talk
- Bigg Boss ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟಿ Jyothi Rai? ಶಾಕಿಂಗ್ ಹೇಳಿಕೆ ಕೊಟ್ಟ ಹಾಟ್ ಬ್ಯೂಟಿ
Bigg Boss ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟಿ Jyothi Rai? ಶಾಕಿಂಗ್ ಹೇಳಿಕೆ ಕೊಟ್ಟ ಹಾಟ್ ಬ್ಯೂಟಿ
ಬಿಗ್ಬಾಸ್ ಕನ್ನಡ ಸೀಸನ್ಗೆ ನಟಿ ಜ್ಯೋತಿ ರೈ ಬರುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ತಮಗೆ ಆಫರ್ ಬಂದಿದ್ದು ನಿಜವಾದರೂ, ಬಿಗ್ಬಾಸ್ ಒಂದು ಸ್ಕ್ರಿಪ್ಟೆಡ್ ಶೋ ಆಗಿದ್ದು, ಅಲ್ಲಿ ತನ್ನತನ ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ಆಹ್ವಾನವನ್ನು ನಿರಾಕರಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಜ್ಯೋತಿ ರೈ ಏಕೆ ಹೋಗಲಿಲ್ಲ
ಇದಾಗಲೇ ಬಿಗ್ಬಾಸ್ ಕನ್ನಡ ಶುರುವಾಗಿ ತಿಂಗಳ ಮೇಲಾಗಿದೆ. Bigg Boss ಶುರುವಾಗುವ ಮುನ್ನ ಹಲವರ ಹೆಸರು ಕೇಳಿಬಂದಿತ್ತು. ಆ ಪೈಕಿ ಮಾದಕ ಚೆಲುವೆ ಜ್ಯೋತಿ ರೈ ಕೂಡ ಒಬ್ಬರು. ಆದರೆ ಅವರು ಕೊನೆಗೆ ಕನ್ನಡದ ಬಿಗ್ಬಾಸ್ಗೆ ಹೋಗಲಿಲ್ಲ. ತೆಲುಗು ಬಿಗ್ಬಾಸ್ನಲ್ಲಿಯೂ ಇವರ ಹೆಸರು ಕೇಳಿಬಂದಿತ್ತಾದರೂ ಅದಕ್ಕೂ ನಟಿ ಎಂಟ್ರಿ ಕೊಡಲಿಲ್ಲ.
ಬಿಗ್ಬಾಸ್ ನಿರಾಕರಿಸಲು ಕಾರಣವೇನು?
ಇದೀಗ ಅವರು ತಾವು ಬಿಗ್ಬಾಸ್ಗೆ ಏಕೆ ಹೋಗಿಲ್ಲ ಎನ್ನುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಜ್ಯೋತಿ ರೈ ಬಿಗ್ ಬಾಸ್‌ಗೆ ಬರುತ್ತಾರೆಂಬ ಊಹಾಪೋಹಗಳು ಕಳೆದ ಸೀಸನ್ ಸಮಯದಲ್ಲೂ ಕೇಳಿ ಬಂದಿತ್ತು. ಈ ಬಾರಿಯೂ ಮತ್ತೆ ಹೆಸರು ಮುನ್ನೆಲೆಗೆ ಬಂದಿತ್ತು. ಆಫರ್ ಬಂದಿರುವುದು ನಿಜ ಎನ್ನುತ್ತಲೇ ರಿಜೆಕ್ಟ್ ಮಾಡಿರುವ ಕಾರಣವನ್ನು ಹೇಳಿದ್ದಾರೆ.
ಅದು ನನಗೆ ಇಷ್ಟವಿಲ್ಲ
ನಾನು ಇದಾಗಲೇ ಸಾಕಷ್ಟು ಹೆಸರು ಗಳಿಸಿದ್ದೇನೆ. ಬಿಗ್ಬಾಸ್ನಲ್ಲಿ ನಾಲ್ಕು ಗೋಡೆಗಳ ನಡುವೆ ಸ್ಕ್ರಿಪ್ಟೆಡ್ ಕೊಟ್ಟಿದ್ದನ್ನು ಮಾತನಾಡಿ ನನ್ನತನವನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಅಲ್ಲಿ ನಮ್ಮತನನೂ ಇರುವುದಿಲ್ಲ. ಅಲ್ಲಿ ಉಳಿದುಕೊಳ್ಳುವುದಕ್ಕಾಗಿ ಇನ್ನಾರೋ ಬರೆದುಕೊಟ್ಟಿದ್ದನ್ನು ಹೇಳಿ ಬದುಕುವ ಇಷ್ಟ ನನಗಿಲ್ಲ ಎಂದಿದ್ದಾರೆ ನಟಿ.
ನಟಿ ಹೇಳಿದ್ದೇನು?
ಈ ಮೂಲಕ ಬಿಗ್ಬಾಸ್ನಲ್ಲಿ ವೀಕ್ಷಕರು ಏನು ನೋಡ್ತಾರೋ ಅದು ಜಗಳ, ಪ್ರೀತಿ ಪ್ರೇಮ, ಮಿತಿಮೀರುತ್ತಿರುವ ಅಶ್ಲೀಲತೆ, ಅಸಹ್ಯ ಎಲ್ಲವೂ ಸ್ಕ್ರಿಪ್ಟೆಡ್ ಎನ್ನುವ ವಾದಕ್ಕೆ ನಟಿ ಪುಷ್ಟಿ ನೀಡಿದ್ದಾರೆ! ಸೀರಿಯಲ್ಗಳು ಕೂಡ ಸ್ಕ್ರಿಪ್ಟೆಡ್ ಆದರೂ ಅದು ಸ್ಕ್ರಿಪ್ಟೆಡ್ ಎನ್ನುವುದು ಎಲ್ಲರಿಗೂ ತಿಳಿದಿರುತ್ತದೆ. ಆದರೆ ಇಂಥ ಷೋಗಳನ್ನು ರಿಯಾಲಿಟಿ ಷೋ ಎನ್ನುವ ಮೂಲಕ, ಹೇಳಿಕೊಟ್ಟದ್ದನ್ನು ಹೇಳಿ ತಮ್ಮತನವನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದಾರೆ ಜ್ಯೋತಿ ರೈ.
20ಕ್ಕೂ ಅಧಿಕ ಕನ್ನಡ ಸೀರಿಯಲ್
ಇನ್ನು ನಟಿಯ ಕುರಿತು ಹೇಳುವುದಾದರೆ, ಇದಾಗಲೇ ನಟಿ ಸುಮಾರು 20 ಕನ್ನಡ ಸೀರಿಯಲ್ಗಳನ್ನು ಮೇಲೆ ಫೇಮಸ್ ಆಗಿದ್ದಾರೆ. ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಗೆಜ್ಜೆಪೂಜೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ ಸೇರಿ ಅನೇಕ ಸೀರಿಯಲ್ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ.
ತೆಲುಗುವಿನಲ್ಲಿಯೂ ಬಿಜಿ
ಇವರ ಸದ್ಯ ತೆಲುಗು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಇವರು ತೆಲುಗು ನಿರ್ದೇಶಕ ಸುಕು ಪೂರ್ವಜ್ ಅವರ ಜೊತೆ ಮದುವೆಯಾಗಿ ಅಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

