- Home
- Entertainment
- TV Talk
- Amruthadhaare Serial: ಕರ್ಮ ರಿಟರ್ನ್ಸ್ ಆಗೋದಿಲ್ಲವಾ? ಗೌತಮ್-ಭೂಮಿ ಕಣ್ಣೀರಿಗೆ ಬೆಲೆ ಇಲ್ವಾ? ಛೇ...
Amruthadhaare Serial: ಕರ್ಮ ರಿಟರ್ನ್ಸ್ ಆಗೋದಿಲ್ಲವಾ? ಗೌತಮ್-ಭೂಮಿ ಕಣ್ಣೀರಿಗೆ ಬೆಲೆ ಇಲ್ವಾ? ಛೇ...
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್ ಭೇಟಿಯಾಗಬೇಕಿದೆ. ಆದರೆ ಇಲ್ಲಿ ಕೆಟ್ಟವರಿಗೆ ಒಳ್ಳೆಯದೇ ಆಗ್ತಿದೆ, ಯಾಕೆ?

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ತನ್ನ ಮಗ ಆಕಾಶ್ ಜೊತೆ ಮನೆ ಬಿಟ್ಟು ಹೋಗಿ ಐದು ವರ್ಷಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೆ ಹೆಂಡ್ತಿ ಎಲ್ಲಿದ್ದಾಳೆ ಅಂತ ಗೌತಮ್ ದಿವಾನ್ ಹುಡುಕುತ್ತಿದ್ದಾನೆ. ಹೀಗಿರುವಾಗ ಶಕುಂತಲಾ, ಜಯದೇವ್ ಏನಾದರು?
ಈಗಾಗಲೇ ಗೌತಮ್ ದಿವಾನ್ ಹಾಗೂ ಆಕಾಶ್ ಭೇಟಿಯಾಗಿದೆ. ಆಕಾಶ್ ಸಿಕ್ಕಾಪಟ್ಟೆ ಬುದ್ಧಿವಂತ, ತರಲೆ ಅಂತ ಗೌತಮ್‌ಗೆ ಗೊತ್ತಾಗಿದೆ. ಅಷ್ಟೇ ಅಲ್ಲದೆ ಅವನನ್ನು ಕಂಡರೆ ಗೌತಮ್‌ಗೆ ಇಷ್ಟ. ಹೀಗಿರುವಾಗ ಗೌತಮ್-ಭೂಮಿಕಾ ಭೇಟಿಯಾಗಬೇಕಿದೆ. ಗೌತಮ್ ಹುಡುಕಾಟಕ್ಕೆ ಭೂಮಿ ಸಿಗುತ್ತಾಳಾ ಎಂದು ಕಾದು ನೋಡಬೇಕಿದೆ.
ಭೂಮಿಕಾ ಟೀಚರ್ ಆಗಿ ಕೆಲಸ ಮಾಡುತ್ತಿದ್ದರೆ, ಮಲ್ಲಿ ಕೂಡ ಐಎಎಸ್ ಪರೀಕ್ಷೆ ತಯಾರಿ ಮಾಡುತ್ತಿದ್ದಾಳೆ. ಇವರಿಗೆ ಹಣದ ಕೊರತೆ ಇದ್ದರೂ ಕೂಡ, ಪ್ರೀತಿ ಮಾತ್ರ ಜಾಸ್ತಿಯೇ ಇದೆ. ಇನ್ನು ಆಕಾಶ್ ಅಂತೂ ಸಿಕ್ಕಾಪಟ್ಟೆ ಬುದ್ಧಿವಂತ, ತರಲೆ, ಥೇಟ್ ಅಪ್ಪನ ಹಾಗೆ.
ಶಕುಂತಲಾ ಹಾಗೂ ಜಯದೇವ್ ಆರಾಮಾಗಿದ್ದಾರೆ, ಆಸ್ತಿಯನ್ನು ಅನುಭವಿಸುತ್ತಿದ್ದಾರೆ. ಕೆಟ್ಟವರಿಗೆ ಒಳ್ಳೆಯದಾಗತ್ತೆ ಅಂತಾಯ್ತು, ಕರ್ಮ ರಿಟರ್ನ್ಸ್ ಎನ್ನೋದು ಇಲ್ಲವೇ? ಈ ತಾಯಿ-ಮಗನಿಗೆ ಶಿಕ್ಷೆ ಆಗೋದು ಯಾವಾಗ? ಹೀಗಿರುವಾಗ ಗೌತಮ್‌ನನ್ನು ಕುರಿತು ಅನೇಕರು ಪತ್ರ ಬರೆಯುತ್ತಿದ್ದಾರೆ, ಇದನ್ನು ನೋಡಿ ತಾಯಿ-ಮಗನಿಗೂ ಸಿಟ್ಟು ಬರುತ್ತಿದೆ. ಅವರು ಮುಂದೇನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
ಈ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್, ವನಿತಾ ವಾಸು, ಕೃಷ್ಣಮೂರ್ತಿ ಕವತ್ತಾರ್, ಆನಂದ್, ದುಷ್ಯಂತ್ ಚಕ್ರವರ್ತಿ, ಅನ್ವಿತಾ ಸಾಗರ್, ರಾಣವ್, ಶ್ವೇತಾ ಮುಂತಾದವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

