- Home
- Entertainment
- TV Talk
- Bhagyalakshmi Serial: ಎಲ್ರಿಗೂ ಶಾಕ್ ನೀಡುವಂಥ ನಿರ್ಧಾರ ತಗೊಂಡ ಭಾಗ್ಯ; ಮೂಕವಿಸ್ಮಿತರಾದ ಮನೆಯವ್ರು
Bhagyalakshmi Serial: ಎಲ್ರಿಗೂ ಶಾಕ್ ನೀಡುವಂಥ ನಿರ್ಧಾರ ತಗೊಂಡ ಭಾಗ್ಯ; ಮೂಕವಿಸ್ಮಿತರಾದ ಮನೆಯವ್ರು
Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮನೆ ಮುಂದೆ ತಾಂಡವ್ ಕ್ಷಮೆ ಕೇಳಿದ್ದೂ ಆಯ್ತು, ಶ್ರೇಷ್ಠ ಬಂದು ಇನ್ನೊಂದಿಷ್ಟು ರಾಮಾಯಣ ಮಾಡಿದ್ದೂ ಆಯ್ತು. ಅಷ್ಟೇ ಯಾಕೆ? ಶ್ರೇಷ್ಠಾಳಿಗೆ ತಾಂಡವ್ ಬಾರಿಸಿದ್ದೂ ಆಯ್ತು.

ತಾಂಡವ್ ಬದಲಾಗಿದ್ದಾನೆ
ತಾಂಡವ್ ಬದಲಾಗಿದ್ದಾನೆ ಎಂದು ಸುನಂದಾ, ತನ್ವಿ ಬಿಟ್ಟು ಬೇರೆ ಯಾರೂ ಕೂಡ ಒಪ್ಪುತ್ತಿಲ್ಲ. ಹೀಗಾಗಿ ತಾಂಡವ್‌ನನ್ನು ಮನೆಯೊಳಗಡೆ ಕರೆಯಲು ಯಾರೂ ಕೂಡ ರೆಡಿ ಇಲ್ಲ. ಆದರೆ ತನ್ವಿ ಮಾತ್ರ ತಂದೆಯನ್ನು ಬಿಟ್ಟುಕೊಡಲು ರೆಡಿ ಇಲ್ಲ.
ಭಾಗ್ಯಗೆ ಅಚ್ಚರಿ
ಇದನ್ನೇ ದಾಳವಾಗಿಟ್ಟುಕೊಂಡು ಶ್ರೇಷ್ಠ ಕೂಡ ಒಂದಿಷ್ಟು ನಾಟಕ ಮಾಡಿದಳು, ಭಾಗ್ಯಗೆ ಬಾಯಿಗೆ ಬಂದಹಾಗೆ ಮಾತನಾಡಿದಳು. ಆದರೂ ಕೂಡ ತಾಂಡವ್ ಮಾತ್ರ ಎಲ್ಲಿಯೂ ಭಾಗ್ಯಳನ್ನು ಬಿಟ್ಟುಕೊಡಲೇ ಇಲ್ಲ. ಇದು ಭಾಗ್ಯಗೆ ಅಚ್ಚರಿ ತಂದಿದೆ.
ತನ್ವಿ ಹಠ ಹಿಡಿದಳು
ತಂದೆ ಮನೆಯೊಳಗಡೆ ಬಂದಿಲ್ಲ ಅಂದ್ರೆ, ನಾನು ಕೂಡ ಅವರ ಜೊತೆ ಹೋಗ್ತೀನಿ ಎಂದು ತನ್ವಿ ಹಠ ಹಿಡಿದಳು. ಮಗಳನ್ನು ಕಳೆದುಕೊಳ್ಳುವ ಭಯಕ್ಕೆ ಈಗ ಭಾಗ್ಯ ಕೂಡ, ತಾಂಡವ್‌ಗೆ ಮನೆಯೊಳಗಡೆ ಬರೋಕೆ ಓಕೆ ಎಂದಿದ್ದಾಳೆ. ಇದು ಅಚ್ಚರಿ ತಂದಿದೆ.
ಆದಿ-ಭಾಗ್ಯ ಮದುವೆಗೆ ಬಹುಮತವಿದೆ
ಭಾಗ್ಯಗೆ ಪ್ರೇಮ ನಿವೇದನೆ ಮಾಡಬೇಕು, ಅವಳನ್ನು ಮದುವೆ ಆಗಬೇಕು ಎಂದು ಆದಿ ಕನಸು ಕಾಣುತ್ತಿದ್ದಾನೆ. ಅತ್ತ ತಾಂಡವ್, ಭಾಗ್ಯ ಬೇಕು ಎಂದು ಪರಿತಪಿಸುತ್ತಿದ್ದಾನೆ. ಅಪ್ಪ-ಅಮ್ಮ ಮೊದಲಿನ ಥರ ಇರಲಿ ಎಂದು ತನ್ವಿ ಬಯಸುತ್ತಿದ್ದಾಳೆ. ಸುನಂದಾ ಬಿಟ್ಟು ಉಳಿದವರು ಕೂಡ ಆದಿ-ಭಾಗ್ಯ ಮದುವೆಯಾಗಿ ಚೆನ್ನಾಗಿರಲಿ ಎಂದು ನೋಡುತ್ತಿದ್ದಾರೆ.
ತಾಂಡವ್ ಮನೆಯೊಳಗಡೆ ಬಂದ
ಈಗ ಭಾಗ್ಯ ಹೇಳಿದಂತೆ ತಾಂಡವ್ ಮನೆಯೊಳಗಡೆ ಬಂದಿದ್ದಾನೆ. ಇದರಿಂದ ಆದಿ-ಭಾಗ್ಯ ದೂರ ಆಗ್ತಾರಾ? ಇವರ ನಡುವಿನ ಸ್ನೇಹ ದೂರ ಆಗತ್ತಾ ಎಂಬ ಪ್ರಶ್ನೆ ಇದೆ. ಅಷ್ಟೇ ಅಲ್ಲದೆ ಭಾಗ್ಯ ಮುಂದಿನ ನಡೆ ಏನು? ತಾಂಡವ್ ಬದಲಾಗಿದ್ದು ನೋಡಿ ಭಾಗ್ಯ ಅವನನ್ನು ಮನ್ನಿಸುತ್ತಾಳಾ ಎಂಬ ಕುತೂಹಲ ಕೂಡ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

