- Home
- Entertainment
- TV Talk
- Bigg Bossಗೆ ಭಾಗ್ಯಲಕ್ಷ್ಮಿ ಎಂಟ್ರಿ! ಕಾವ್ಯಾಳನ್ನು ಎತ್ತಿ 'ಪ್ರೀತಿಯ ಸುಖ' ಎನ್ನುತ್ತ ಸೂರಜ್ ರೊಮಾನ್ಸ್: ರಾಶಿಕಾ ಹೊಟ್ಟೆಗೆ ಬೆಂಕಿ!
Bigg Bossಗೆ ಭಾಗ್ಯಲಕ್ಷ್ಮಿ ಎಂಟ್ರಿ! ಕಾವ್ಯಾಳನ್ನು ಎತ್ತಿ 'ಪ್ರೀತಿಯ ಸುಖ' ಎನ್ನುತ್ತ ಸೂರಜ್ ರೊಮಾನ್ಸ್: ರಾಶಿಕಾ ಹೊಟ್ಟೆಗೆ ಬೆಂಕಿ!
ಬಿಗ್ ಬಾಸ್ ಮನೆಗೆ 'ಭಾಗ್ಯಲಕ್ಷ್ಮಿ' ಸೀರಿಯಲ್ ಸುಷ್ಮಾ ಕೆ. ರಾವ್ ಮತ್ತು ಪ್ರಿಯಾ ಜೆ. ಆಚಾರ್ ಆಗಮಿಸಿದ್ದಾರೆ. ಈ ಫೆಸ್ಟಿವಲ್ ಸಂಚಿಕೆಯಲ್ಲಿ, ಸೂರಜ್ ಸಿಂಗ್ ಕಾವ್ಯಾಳನ್ನು ಎತ್ತಿಕೊಂಡು ನೃತ್ಯ ಮಾಡಿದ್ದು ರಾಶಿಕಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಗಿಲ್ಲಿ ನಟ ಅಶ್ವಿನಿಯನ್ನು ಎತ್ತಲು ಹೋಗಿ ಬೀಳಿಸಿದ್ದಾರೆ!

ಭಾಗ್ಯಲಕ್ಷ್ಮಿ ಭಾಗ್ಯ ಎಂಟ್ರಿ
ಬಿಗ್ ಬಾಸ್ (Bigg Boss) ವೇದಿಕೆ ಇಂದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಉರ್ಫ್ ಸುಷ್ಮಾ ಕೆ. ರಾವ್ ಹಾಗೂ ನಟಿ ಪ್ರಿಯಾ ಜೆ.ಆಚಾರ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಫೆಸ್ಟಿವಲ್ ನಡೆದಿದ್ದು, ಅದಕ್ಕೆ ನಟಿಯರ ಎಂಟ್ರಿಯಾಗಿದೆ.
ಪ್ರೀತಿಯಲ್ಲಿ ಇರೋ ಸುಖ
ಈ ಸಂದರ್ಭದಲ್ಲಿ ಸೂರಜ್ ಸಿಂಗ್, ಕಾವ್ಯಾಳನ್ನು ಎತ್ತಿಕೊಂಡು ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದಾಗಲೇ ಸೂರಜ್ ಸಿಂಗ್ ಮೇಲೆ ಲವ್ ಶುರುವಿಟ್ಟುಕೊಂಡಿರೋ ರಾಶಿಕಾ ಅವರಿಗೆ ಇದನ್ನು ನೋಡಿ ಹೊಟ್ಟೆಯಲ್ಲಿ ಬೆಂಕಿ ಬಿದ್ದ ಅನುಭವವಾಗಿದೆ. ಅವರ ಮುಖವನ್ನು ನೋಡಲಾಗುತ್ತಿಲ್ಲ, ಹಾಗಾಗಿದೆ ಸ್ಥಿತಿ.
ಸೂರಜ್-ರಾಶಿಕಾ ಲವ್ಸ್ಟೋರಿ
ಅಷ್ಟಕ್ಕೂ ಸೂರಜ್ ಮತ್ತು ರಾಶಿಕಾ ಲವ್ಸ್ಟೋರಿ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ತನ್ನ ಸೌಂದರ್ಯದಿಂದಲೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಸೂರಜ್ ಅವರು ರಾಶಿಕಾ ಶೆಟ್ಟಿ ಜೊತೆ ಸೇರಿ ಆಟವನ್ನು ಹಾಳು ಮಾಡಿಕೊಂಡರು ಎಂದು ವೀಕ್ಷಕರು ಹೇಳುತ್ತಿದ್ದಾರೆ. ರಾಶಿಕಾ ಆಟದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಇದೆ.
ಅಶ್ವಿನಿಯನ್ನು ಎತ್ತಿದ ಗಿಲ್ಲಿ
ಇದೇ ವೇಳೆ ಗಿಲ್ಲಿ ನಟ, ಅಶ್ವಿನಿ ಗೌಡ (Ashwini Gwoda) ಅವರನ್ನು ಎತ್ತಿಕೊಳ್ಳಲು ಹೋಗಿ ಎತ್ತಲಾಗದೇ ಬಿದ್ದಿದ್ದಾರೆ. ಇದನ್ನು ನೋಡಿದ ಸುಷ್ಮಾ ಅವರು ಹೂವಿನ ವೇಟ್ ಇರೋ ಹುಡುಗಿಯನ್ನು ಹೀಗೇ ಎತ್ತೋದಾ ಎಂದು ತಮಾಷೆ ಮಾಡಿದ್ದಾರೆ.
ಉಪೇಂದ್ರ ಡಾನ್ಸ್
ಇದೇ ವೇದಿಕೆಯಲ್ಲಿ ಉಪೇಂದ್ರನ ಸ್ಟೈಲ್ನಲ್ಲಿ ಡಾನ್ಸ್ ಮಾಡಲಾಗಿದೆ. ಒಟ್ಟಿನಲ್ಲಿ ಬಿಗ್ಬಾಸ್ ಮನೆಯೊಳಕ್ಕೆ ಭರ್ಜರಿ ಕಾರ್ಯಕ್ರಮ ನಡೆದಿದ್ದು, ಇದರ ಪ್ರೊಮೋ ಬಿಡುಗಡೆಯಾಗಿದೆ.
ರಂಗುರಂಗಿನ ವಾತಾವರಣ
ಈ ಫೆಸ್ಟಿವಲ್ನಲ್ಲಿ ಗೆಲ್ಲೋರು ಯಾರು ಎನ್ನುವುದನ್ನು ಸುಷ್ಮಾ ಮತ್ತು ಪ್ರಿಯಾ ಆಚಾರ್ ನಿರ್ಧಾರ ಮಾಡಲಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ರಂಗುರಂಗಿನ ವಾತಾವರಣ ನಿರ್ಮಾಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

