- Home
- Entertainment
- TV Talk
- ರಕ್ತದಲ್ಲೇ ಪತ್ರ ಬರೆದ Bigg Boss ಕಾಕ್ರೋಚ್ ಸುಧಿ! ಎಲಿಮಿನೇಷನ್ ಬೆನ್ನಲ್ಲೇ ಇದೆಂಥ ಸುದ್ದಿ?
ರಕ್ತದಲ್ಲೇ ಪತ್ರ ಬರೆದ Bigg Boss ಕಾಕ್ರೋಚ್ ಸುಧಿ! ಎಲಿಮಿನೇಷನ್ ಬೆನ್ನಲ್ಲೇ ಇದೆಂಥ ಸುದ್ದಿ?
ಬಿಗ್‌ಬಾಸ್ ಮನೆಯಿಂದ ಅಚ್ಚರಿಯಾಗಿ ಹೊರಬಂದಿರುವ ಸ್ಪರ್ಧಿ ಕಾಕ್ರೋಚ್ ಸುಧಿ, ಹಿಂದೆ ಜೈಲಿನಲ್ಲಿದ್ದಾಗ ತಮ್ಮ ಪತ್ನಿಗೆ ರಕ್ತದಲ್ಲಿ ಪತ್ರ ಬರೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಪ್ರೀತಿಯನ್ನು ಸಾಬೀತುಪಡಿಸಲು ತುಟಿಗೆ ಹೊಡೆಸಿಕೊಂಡು ಬಂದ ರಕ್ತದಲ್ಲಿ ಪತ್ರ ಬರೆದಿದ್ದಾಗಿ ಹೇಳಿಕೊಂಡಿದ್ದರು.

ವಿಲನ್ ಸುಧಿ ಈಗ ಬಿಗ್‌ಬಾಸ್ ಸುಧಿ
ಕೆಲವು ಸಿನಿಮಾಗಳಲ್ಲಿ ವಿಲನ್ ಪಾತ್ರದ ಮೂಲಕ ಫೇಮಸ್ ಆದವರು ಕಾಕ್ರೋಚ್ ಸುಧಿ (Cockroach Sudhi). ಬಿಗ್‌ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಿಸಿಕೊಂಡವರು. ಮಿನಿ ಫಿನಾಲೆ ಗೆದ್ದಿದ್ದ ಕಾಕ್ರೋಚ್ ಸುಧಿ ಸ್ಪೆಷಲ್ ಪವರ್ ಪಡೆದಿದ್ದರು. ಆದರೆ ಅಚ್ಚರಿಯೆನ್ನುವಂತೆ ನಿನ್ನೆ ಅವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ.
ಎಲಿಮಿನೇಟ್ ಆದ ಸುಧಿ
ಬಿಗ್ಬಾಸ್ನಲ್ಲಿ ನಾಲ್ಕು ಸ್ಪರ್ಧಿಗಳನ್ನು ಲಾಕ್ ಮಾಡಿದ್ದರು. ರಿಷಾ, ರಘು, ಜಾಹ್ನವಿ ಹಾಗೂ ಕಾಕ್ರೋಚ್ ಸುಧಿ ಅವರನ್ನು ನಾಮಿನೇಟ್ ಮಾಡಲಾಯಿತು. ಎಲ್ಲರೂ ತಮ್ಮ ಲಗೇಜ್ ಪ್ಯಾಕ್ ಮಾಡಿ ನಿಲ್ಲುವಂತೆ ಸುದೀಪ್ ಶಾಕ್ ಕೊಟ್ಟರು. ಅಂತಿಮವಾಗಿ ಕಾಕ್ರೋಚ್ ಸುಧಿ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.
ರಕ್ತದಲ್ಲಿ ಪತ್ರ
ಇದರ ಬೆನ್ನಲ್ಲೇ ಕಾಕ್ರೋಚ್ ಸುಧಿ ಅವರು ರಕ್ತದಲ್ಲಿ ಪತ್ರ ಬರೆದಿರುವ ವಿಷಯವೊಂದು ಈಗ ವೈರಲ್ ಆಗಿದೆ. ಅದು ಅವರು ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಹೇಳಿಕೊಂಡಿರುವ ವಿಷಯ. ಯಾವುದೋ ಕಾರಣಕ್ಕೆ ಜೈಲು ಸೇರಿದ್ದರಂತೆ ಸುಧಿ. ಆ ಸಮಯದಲ್ಲಿ ನಡೆದ ಘಟನೆ ಇದು!
ಪತ್ನಿಗೆ ಪತ್ರ
ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ತಮ್ಮ ಪತ್ನಿಗೆ ಪತ್ರ ಬರೆಯಬೇಕು ಎನ್ನಿಸಿತಂತೆ. ಆದರೆ ಪತ್ನಿಯನ್ನು ತಾವೆಷ್ಟು ಪ್ರೀತಿ ಮಾಡುತ್ತೇವೆ ಎಂದು ಸಾಬೀತು ಮಾಡಲು ಸಿನಿಮೀಯ ಸ್ಟೈಲ್ ಅನ್ನು ಅವರು ಅಳವಡಿಸಿಕೊಂಡಿದ್ದಾರೆ.
ತುಟಿಗೆ ಹೊಡೆತ
ಜೈಲಿನಲ್ಲಿ ಇರೋ ಮತ್ತೊಬ್ಬ ಕೈದಿಗೆ ನನ್ನ ತುಟಿಗೆ ಒಂದು ಏಟು ಹೊಡೆಯಿರಿ ಎಂದರಂತೆ. ಆ ಕೈದಿ ಇದನ್ನು ಕೇಳಿ ಶಾಕ್ ಆದರೂ ಇವರು ಹೇಳಿದಂತೆ ಮಾಡಿದ್ದಾರೆ. ಕೊನೆಗೆ ಆ ರಕ್ತದಿಂದ ಸುಧಿ ಪತ್ನಿಗೆ ಪತ್ರ ಬರೆದಿದ್ದಾರೆ! ಅಲ್ಲಿ ನಿನ್ನ ಪ್ರೀತಿಯ ಸುಧಿ ಎಂದು ಬರೆದಿದ್ದ ಬಗ್ಗೆ ನೆನಪಿಸಿಕೊಂಡಿದ್ದಾರೆ.
ಬಿಗ್ಬಾಸ್ನಲ್ಲಿ ಬಂದಿದ್ದ ಪತ್ರ
ಈ ಘಟನೆಯನ್ನು ಸುಧಿ ನೆನಪು ಮಾಡಿಕೊಂಡಿರೋದಕ್ಕೆ ಕಾರಣನೂ ಇದೆ. ಅದೇನೆಂದರೆ, ಸುಧಿ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಅದರಲ್ಲಿ ನಿನ್ನ ಪ್ರೀತಿಯ ಸುಧಿ ಅನ್ನೋದೇ ಇತ್ತು. ಆಗ ಈ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

