- Home
- Entertainment
- TV Talk
- BBK 12: ಸೋಶಿಯಲ್ ಮೀಡಿಯಾಗೆ ಜೂನಿಯರ್ ರಕ್ಷಿತಾ ಶೆಟ್ಟಿ ಎಂಟ್ರಿ; ಪಡಿಯಚ್ಚು ಅಂದ್ರು ನೆಟ್ಟಿಗರು
BBK 12: ಸೋಶಿಯಲ್ ಮೀಡಿಯಾಗೆ ಜೂನಿಯರ್ ರಕ್ಷಿತಾ ಶೆಟ್ಟಿ ಎಂಟ್ರಿ; ಪಡಿಯಚ್ಚು ಅಂದ್ರು ನೆಟ್ಟಿಗರು
Junior Rakshitha Shetty: ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಯವರಂತೆ ಕಾಣುವ ಪ್ರಗತಿ ಎಂಬ ಯುವತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ರಕ್ಷಿತಾ ಅವರ ಸಂಭಾಷಣೆಗಳಿಗೆ ರೀಲ್ಸ್ ಮಾಡುವ ಇವರನ್ನು ನೆಟ್ಟಿಗರು 'ಜೂನಿಯರ್ ರಕ್ಷಿತಾ ಶೆಟ್ಟಿ' ಎಂದು ಕರೆಯುತ್ತಿದ್ದಾರೆ.

ಕರಾವಳಿ ಮೂಲದ ರಕ್ಷಿತಾ ಶೆಟ್ಟಿ
ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಎಂಟ್ರಿ ಕೊಟ್ಟಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ಈ ಹಿಂದೆ ರಕ್ಷಿತಾ ಅವರ ವಿಡಿಯೋಗಳನ್ನು ಕೆಟ್ಟದಾಗಿಟ ಟ್ರೋಲ್ ಮಾಡುತ್ತಿದ್ದವರೇ ಇಂದು ಆಟಕ್ಕೆ ಮೆಚ್ಚುಗೆ ಸೂಚಿಸಿ ಪೋಸ್ಟ್ ಮಾಡುತ್ತಿದ್ದಾರೆ.
RAP ಹಾಡು
ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಆಡುವ ಮಾತುಗಳು RAP ಹಾಡುಗಳಾಗಿ ಬದಲಾಗುತ್ತವೆ. ಈ ಹಾಡುಗಳಿಗೆ ಜನರು ಸಹ ರೀಲ್ಸ್ ಮಾಡುತ್ತಿದ್ದಾರೆ. ಈ ರೀಲ್ಸ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೀಗ ಸೋಶಿಯಲ್ ಮೀಡಿಯಾಗೆ ಜೂನಿಯರ್ ರಕ್ಷಿತಾ ಶೆಟ್ಟಿಯ ಎಂಟ್ರಿಯಾಗಿದೆ. ಜೂನಿಯರ್ ಹುಡುಗಿಯನ್ನು ನೋಡಿ ವೀಕ್ಷಕರು ಸಹ ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಯಾರು ಈ ಜೂನಿಯರ್ ರಕ್ಷಿತಾ ಶೆಟ್ಟಿ?
ಜೂನಿಯರ್ ರಕ್ಷಿತಾ ಶೆಟ್ಟಿ ಎಂದು ವೈರಲ್ ಆಗುತ್ತಿರುವ ಯುವತಿಯನ ಹೆಸರು ಪ್ರಗತಿ (pragati_25_2024). ಸದ್ಯ ಇನ್‌ಸ್ಟಾಗ್ರಾಂನಲ್ಲಿ 1 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿರುವ ಪ್ರಗತಿ ತಮ್ಮನ್ನು ಮರಾಠಿ ಹುಡುಗಿ ಮತ್ತು ಕನ್ನಡ ವ್ಲಾಗರ್ ಎಂದು ಬರೆದುಕೊಂಡಿದ್ದಾರೆ. ಪ್ರಗತಿ ತಮ್ಮನ್ನು ರಕ್ಷಿತಾ ಅಭಿಮಾನಿ ಅಂತಾನೂ ಕರೆದುಕೊಂಡಿದ್ದಾರೆ.
ಪ್ರಗತಿ ರೀಲ್ಸ್ ವೈರಲ್
ರಕ್ಷಿತಾ ಶೆಟ್ಟಿ ಅಂತೆ ಹೋಲಿಕೆ ಹೊಂದಿರುವ ಕಾರಣ ಪ್ರಗತಿಯವರನ್ನು ಜೂನಿಯರ್ ಎಂದು ಕರೆಯುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ ನಡುವಿನ ಸಂಭಾಷಣೆಯ ಮಾತಿನ ಪ್ರಗತಿ ರೀಲ್ಸ್ 75 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ರಸಗುಲ್ಲಾ ರೀಲ್ಸ್‌ನಲ್ಲಂತೂ ಥೇಟ್ ರಕ್ಷಿತಾ ಶೆಟ್ಟಿಯಂತೆ ಪ್ರಗತಿ ಕಾಣಿಸುತ್ತಿದ್ದಾರೆ.
ಇದನ್ನೂ ಓದಿ: ಕ್ಷಮಾ ಗುಣವಿದೆ ಸರಳ ಸಹಜ ಬುದ್ಧಿವಂತ ಹುಡುಗಿ: ಬಿಗ್‌ಬಾಸ್ ಸ್ಪರ್ಧಿ ಬಗ್ಗೆ ನೆಟ್ಟಿಗರ ಮಾತು
ನೆಟ್ಟಿಗರಿಂದ ಮೆಚ್ಚುಗೆಯ ಕಮೆಂಟ್
ಪ್ರಗತಿ ರೀಲ್ಸ್‌ಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪ್ರಗತಿ ಡ್ಯಾನ್ಸರ್ ಕೂಡ ಆಗಿದ್ದು, ನೃತ್ಯ ಮಾಡಿರುವ ರೀಲ್ಸ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಏನ್ ಗುರು ಇವಳು ಸೇಮ್ ರಕ್ಷಿತ ತರಾನೇ ಅವಳೇ. ಈ ರೀಲ್ಸ್‌ನ್ನು ಸುದೀಪ್ ಸರ್ ಮನೆಮಂದಿಗೆ ತೋರಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ಒಂದು ಡೈಲಾಗ್ ಹೊಡೆದು ಅಶ್ವಿನಿ ಗೌಡ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ; ರಾಜಮಾತೆ ಫುಲ್ ಸೈಲೆಂಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

