BBK 12: ಜಾನ್ವಿ ರೀತಿಯಲ್ಲಿರೋ ಆಂಟಿಗಳಂದ್ರೆ ನನಗಿಷ್ಟ ಎಂದ ಅಭಿಷೇಕ್ ಫ್ಲರ್ಟ್
ಬಿಗ್‌ಬಾಸ್ ಮನೆಯಲ್ಲಿ ನಟ ಅಭಿಷೇಕ್ ಮತ್ತು ನಿರೂಪಕಿ ಜಾನ್ವಿ ನಡುವೆ ವಯಸ್ಸಿನ ಬಗ್ಗೆ ನಡೆದ ಸಂಭಾಷಣೆ ಗಮನ ಸೆಳೆದಿದೆ. ತಮಗಿಂತ 10 ವರ್ಷ ದೊಡ್ಡವರಾದ ಜಾನ್ವಿ ಜೊತೆ ಅಭಿಷೇಕ್ ಫ್ಲರ್ಟ್ ಮಾಡಿದ್ದು, ಇದೇ ವೇಳೆ ಜಾನ್ವಿ ತಮ್ಮ ವಿಚ್ಛೇದನ ಮತ್ತು ಮಾಜಿ ಪತಿಯ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ.

ನಟ ಅಭಿಷೇಕ್
ಬಿಗ್‌ಬಾಸ್‌ನಲ್ಲಿ ಈ ಬಾರಿ ಪ್ರಣಯ ಪಕ್ಷಿಗಳು ಯಾರು ಎಂಬುದರ ಬಗ್ಗೆ ವೀಕ್ಷಕರಿಗೆ ಸಣ್ಣ ಸುಳಿವು ಸಿಗುತ್ತಿದೆ. ಲಕ್ಷಣ ಮತ್ತು ವಧು ಸೀರಿಯಲ್ ನಟ ಅಭಿಷೇಕ್ ಬಿಗ್‌ಬಾಸ್ ಮನೆಯಲ್ಲಿನ ಮಹಿಳಾ ಸ್ಪರ್ಧಿಗಳೊಂದಿಗೆ ಸಣ್ಣದಾಗಿ ಫ್ಲರ್ಟ್ ಮಾಡುತ್ತಿರೋದು ಕಂಡು ಬರುತ್ತಿದೆ. ನಟಿ ಆಶ್ವಿನಿ ಎಸ್‌ಎನ್ ಜೊತೆ ಜಂಟಿಯಾಗಿ ಅಭಿಷೇಕ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಅಭಿಷೇಕ್ ವಯಸ್ಸು ಎಷ್ಟು?
ಇಂದಿನ ಸಂಚಿಕೆಯಲ್ಲಿ ನಿರೂಪಕಿ ಜಾನ್ವಿ ಕಿಚನ್ ಬಳಿ ಬರುತ್ತಾರೆ. ಅಲ್ಲಿಗೆ ಬಂದು ಅಭಿಷೇಕ್‌ಗೆ ನಿಮ್ಮ ವಯಸ್ಸು ಎಷ್ಟು ಎಂದು ಕೇಳುತ್ತಾರೆ. ಇದಕ್ಕೆ ಅಭಿಷೇಕ್ ಜಾಣತನದಿಂದ ಮದುವೆ ವಯಸ್ಸು ಎಂದು ಹೇಳುತ್ತಾರೆ. ಅಂದ್ರೆ 21ನಾ ಎಂದು ಜಾನ್ವಿ ಪ್ರಶ್ನೆ ಮಾಡುತ್ತಾರೆ. ಮುಂದುವರಿದು ಮಾತನಾಡುವ ಜಾನ್ವಿ, ನಿಮಗಿಂತ ದೊಡ್ಡವರು ಅಂದ್ರೆ ಇಷ್ಟನಾ ಅಂತಾ ಕೇಳ್ತಾರೆ. ಆಗ ಪಕ್ಕದಲ್ಲೇ ಇದ್ದ ಅಶ್ವಿನಿ, ಅಭಿಷೇಕ್‌ಗೆ ಬೇರೆ ಆಯ್ಕೆ ಇಲ್ಲ, ಆಂಟಿ ಲವರ್ ಇಂದು ತಮಾಷೆ ಮಾಡುತ್ತಾ
ಜಾನ್ವಿ ವಯಸ್ಸು ಎಷ್ಟು?
ನಿಮ್ಮ ವಯಸ್ಸು 28 ಅಂತ ನನಗೆ ಗೊತ್ತು. ನಾನು ನಿಮಗಿಂತ 10 ವರ್ಷ ದೊಡ್ದವಳು. ನನ್ನಂತವರು ಅಂದ್ರೆ ನಿಮಗೆ ಇಷ್ಟನಾ ಎಂದು ಅಭಿಷೇಕ್‌ಗೆ ಜಾನ್ವಿ ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಅಭಿಷೇಕ್, ನಿಮ್ಮನ್ನು ನೀವು ಆಂಟಿ ಎಂದು ಕರೆದುಕೊಳ್ತೀರಾ? ಆದ್ರೆ ನೀವು ಹಾಗೆ ಕಾಣಿಸಲ್ಲ ಎಂದು ಕ್ಯೂಟ್ ಆಗಿ ಫ್ಲರ್ಟ್ ಮಾಡ್ತಾರೆ. ಇದಕ್ಕೆ ಮುಗುಳ್ನಗುತ್ತಾ, ಆಂಟಿಯಂತೆ ಕಾಣದ ಹಾಗೆ ಮೇಂಟೈನ್ ಮಾಡಿದ್ದೇನೆ ಎಂದು ಹೇಳುತ್ತಾರೆ.
ಜಾನ್ವಿ ಖಾಸಗಿ ಬದುಕು
ಬೆಡ್‌ರೂಮ್ ಏರಿಯಾದಲ್ಲಿ ಎಲ್ಲರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಜಾನ್ವಿ ಮತ್ತೊಮ್ಮೆ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. ನಮ್ಮಲ್ಲಿ ಪದೇ ಪದೇ ಜಗಳ ಆಗುತ್ತಿತ್ತು. ಕುಟುಂಬಸ್ಥರು ಸಂಧಾನ ಮಾಡಿ ಜೊತೆಯಾಗಿರುವಂತೆ ಹೇಳುತ್ತಿದ್ದರು. ಹಾಗೆಯೇ ಅವರೊಂದಿಗೆ ನಾನು ಜೀವನ ನಡೆಸಿದ್ದೆ.
ಇದನ್ನೂ ಓದಿ: BBK 12: ಯಪ್ಪಾ.. ಮೊದಲೇ ಪ್ಲ್ಯಾನ್ ಮಾಡ್ಕೊಂಡು ಬಂದು ಹೀಗ್ ಮಾಡ್ತಿದ್ದಾರಾ? ತಲೆ ಕೆಡೋದು ಬಾಕಿ!
ಗಂಡನಿಗೆ ಮತ್ತೊಂದು ಮದುವೆ
ನಮ್ಮಿಬ್ಬರದ್ದು ಅಧಿಕೃತವಾಗಿ ಮುಂಚೆ ಅಂದ್ರೆ ಸುಮಾರು ಎರಡೂವರೆ ವರ್ಷಗಳವರೆಗೆ ಇಬ್ಬರು ಪ್ರತ್ಯೇಕವಾಗಿದ್ದೇವು. ಈ ಸಮಯದಲ್ಲಿಯೇ ಅವರು ಮತ್ತೊಂದು ಮದುವೆಯಾಗಿ, ಒಂದು ಮಗು ಸಹ ಆಗಿತ್ತು. ಈ ವಿಷಯ ಕೇಳಿ ನನಗೆ ಶಾಕ್ ಆಯ್ತು. ಇದೀಗ ನನಗೆ ಯಾವುದೇ ದ್ವೇಷವಿಲ್ಲ. ಅವರಿಬ್ಬರು ಚೆನ್ನಾಗಿರಲಿ ಎಂದು ಬಯಸುತ್ತೇನೆ ಎಂದು ಜಾನ್ವಿ ಹೇಳಿದರು.
ಇದನ್ನೂ ಓದಿ: ಯಪ್ಪಾ, ಈ ಸುಂದ್ರಿ ನಾನೇನ್ರೀ? ಮೇಲಿರೋ ಗಂಡಂಗೆ ಮಾತ್ರ ತೋರಿಸ್ಬೇಡ್ರಪ್ಪೋ- Bigg Boss ಮಲ್ಲಮ್ಮ ಮಾತು ಕೇಳಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

