- Home
- Entertainment
- TV Talk
- BBK 12: ಬಿಗ್‌ಬಾಸ್ ಮಲ್ಲಮ್ಮಗೆ ಸಿಕ್ತು ಅದ್ಧೂರಿ ಸ್ವಾಗತ; ಗಟ್ಟಿಗಿತ್ತಿ ಭೇಟಿಗೆ ಓಡೋಡಿ ಬಂದ ನಟ
BBK 12: ಬಿಗ್‌ಬಾಸ್ ಮಲ್ಲಮ್ಮಗೆ ಸಿಕ್ತು ಅದ್ಧೂರಿ ಸ್ವಾಗತ; ಗಟ್ಟಿಗಿತ್ತಿ ಭೇಟಿಗೆ ಓಡೋಡಿ ಬಂದ ನಟ
Mallamma Bigg Boss eviction ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಸ್ಪರ್ಧಿ ಮಲ್ಲಮ್ಮ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ನಟ ಮನೋಜ್ ಕುಮಾರ್ ಮತ್ತು ಪ್ರಿಯಾಂಕ ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು, ಅವರ ನಿರ್ಗಮನಕ್ಕೆ ಸಹ ಸ್ಪರ್ಧಿಗಳಾದ ರಕ್ಷಿತಾ, ಧ್ರುವಂತ್ ಭಾವುಕರಾಗಿದ್ದಾರೆ.

ಅದ್ಧೂರಿಯಾಗಿ ಸ್ವಾಗತ
ಈ ಬಾರಿಯ ಬಿಗ್‌ಬಾಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದ ಮಲ್ಲಮ್ಮ ಮನೆಯಿಂದ ಹೊರಗೆ ಬಂದಿದ್ದಾರೆ. ಎಲ್ಲಾ ಎಲ್ಲೆಗಳನ್ನು ಮೀರಿ ರಿಯಾಲಿಟಿ ಶೋಗೆ ಆಗಮಿಸಿದ್ದ ಮಲ್ಲಮ್ಮ ಅವರನ್ನು ಬಿಗ್‌ಬಾಸ್ ಗೌರವದಿಂದ ಬೀಳ್ಕೊಟ್ಟಿದ್ದಾರೆ. ಇತ್ತ ಹೊರಗಡೆಯೂ ಮಲ್ಲಮ್ಮ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಗಿದೆ.
ಬ್ಯುಟಿಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಮಲ್ಲಮ್ಮ
ಬೆಂಗಳೂರಿನಲ್ಲಿ ಪ್ರಿಯಾಂಕಾ ಎಂಬವರ ಬ್ಯುಟಿಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಮಲ್ಲಮ್ಮ ಇಂದು ಕರುನಾಡಿಗೆ ಚಿರಪರಿಚಿತರಾಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದಿರುವ ಮಲ್ಲಮ್ಮ ಅವರನ್ನು ಬರಮಾಡಿಕೊಳ್ಳಲು ಸ್ವತಃ ಪ್ರಿಯಾಂಕ ಅವರೇ ಆಗಮಿಸಿದ್ದರು. ಮಲ್ಲಮ್ಮ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ನಟ ಮನೋಜ್ ಸಹ ಭೇಟಿಗೆ ಬಂದಿದ್ದಾರೆ.
ಕೇಕ್ ಕತ್ತರಿಸಿ ಸಂಭ್ರಮ
ಕಿರುತೆರೆ ನಟ ಮನೋಜ್ ಅವರು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭಾರ್ಗವಿ ಎಲ್ಎಲ್‌ಬಿಯಲ್ಲಿ ನಟಿಸುತ್ತಿದ್ದಾರೆ. ಮನೆಗೆ ಬರುತ್ತಿದ್ದಂತೆ ಮಲ್ಲಮ್ಮ ಅವರನ್ನು ಮಗುವಿನಂತೆ ಎತ್ತಿಕೊಂಡು ಮನೋಜ್ ಕುಮಾರ್ ಸಂಭ್ರಮಿಸಿದ್ದಾರೆ. ಮಲ್ಲಮ್ಮ ಅವರು ಮನೋಜ್ ಕುಮಾರ್ ಮತ್ತು ಪ್ರಿಯಾಂಕಾ ಸಮ್ಮುಖದಲ್ಲಿ ಕೇಕ್ ಕತ್ತರಿಸಿದ್ದಾರೆ.
ಈ ಭಾಂದವ್ಯ ಕೊನೆವರೆಗೂ ಹೀಗೆ ಇರಲಿ
ಮನೋಜ್ ಕುಮಾರ್ ಹಂಚಿಕೊಂಡಿರುವ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ನೀವು ಎಷ್ಟು, ಪ್ರೀತಿ, ಕಾಳಜಿಯಿಂದ ಮಲ್ಲಮ್ಮನ ನೋಡಿಕೊಳ್ಳುತ್ತೀರಿ. ಬಿಗ್ ಬಾಸ್ ವೇದಿಕೆ ಮೇಲೆ ಮಲ್ಲಮ್ಮ ನಿಮ್ಮನ್ನ ಕೇಳಿದ್ರು. ಆಗ ನನಗನಿಸಿದ್ದು ಅನ್ನಿಸಿದ್ದು ಇಷ್ಟೇ ನೀವು ಅವರನ್ನ ಎಷ್ಟು ಚೆನ್ನಾಗಿ ನೋಡಿಕುತ್ತೀರ ಅಂತ ನಿಮ್ಮಂತ ಒಬ್ಬ ಒಳ್ಳೆಯ ವ್ಯಕ್ತಿ ಮಲ್ಲಮ್ಮನ ನೋಡಿಕೊಳ್ಳುತ್ತಿರೋದು ಒಳ್ಳೆಯ ವಿಚಾರ ಮನೋಜ್ ಅವರೇ. ನಿಮ್ಮ ಈ ಭಾಂದವ್ಯ ಕೊನೆವರೆಗೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: ನೂರೆಂಟು ಕ್ಯಾಮೆರಾಗಳಿದ್ರೂ ರಹಸ್ಯವಾಗಿ ಹೊರಗಿನಿಂದ ಮೆಸೇಜ್ ಪಡೆಯುತ್ತಿದ್ದ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್
ಕಣ್ಣೀರಿಟ್ಟು ಭಾವುಕಾರದ ರಕ್ಷಿತಾ ಮತ್ತು ಧ್ರುವಂತ್
ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಜೊತೆಯಲ್ಲಿಯೇ ಮಲ್ಲಮ್ಮ ಅವರು ಹೆಚ್ಚು ಸಮಯ ಕಳೆದಿದ್ದರು. ಮಲ್ಲಮ್ಮ ಔಟ್ ಎಂದು ಹೇಳುತ್ತಲೇ ಇಬ್ಬರು ಸ್ಪರ್ಧಿಗಳು ಕಣ್ಣೀರು ಹಾಕಲು ಆರಂಭಿಸಿದರು. ಮಲ್ಲಮ್ಮ ಹೋಗುತ್ತಿದ್ದಂತೆ ಬೆಡ್‌ರೂಮ್‌ಗೆ ಬಂದ ರಕ್ಷಿತಾ ಶೆಟ್ಟಿ ಹೊದಿಕೆ ಹೊದ್ದುಕೊಂಡು ಅಳುತ್ತಿದ್ದರು.
ಇದನ್ನೂ ಓದಿ: ಬಕೆಟ್‌ಗಾಗಿ ಜಗಳ, ಗಿಲ್ಲಿ ಮೇಲಾಯ್ತು ಹಲ್ಲೆ; ಮನೆಯಿಂದ ಹೊರಗೆ ಬರ್ತಾರಾ ಮಹಿಳಾ ಸ್ಪರ್ಧಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

