- Home
- Entertainment
- TV Talk
- BBK 12: ಬನಿಯನ್ ಹಾಕಿ ಗಿಲ್ಲಿ ನಟ ಬಡವನಂತೆ ನಾಟಕ; MG ಹೆಕ್ಟೇರ್‌ನಲ್ಲಿ ಓಡಾಟ: ವಿಷ ಕಾರಿದ ಧ್ರುವಂತ್
BBK 12: ಬನಿಯನ್ ಹಾಕಿ ಗಿಲ್ಲಿ ನಟ ಬಡವನಂತೆ ನಾಟಕ; MG ಹೆಕ್ಟೇರ್‌ನಲ್ಲಿ ಓಡಾಟ: ವಿಷ ಕಾರಿದ ಧ್ರುವಂತ್
Bigg Boss Kannada Season 12 Updates: ಬಿಗ್ ಬಾಸ್ ಮನೆಯಲ್ಲಿ ಯಾವ ಸ್ಪರ್ಧಿ ವಿಷಕಾರಿ ಎಂದು ಹೇಳಿ ಮೆಣಸಿನಕಾಯಿ ತಿನ್ನಲು ಕೊಡಬೇಕಿತ್ತು. ಆಗ ಧ್ರುವಂತ್ ಅವರು ಗಿಲ್ಲಿ ನಟನಿಗೆ, ಗಿಲ್ಲಿ ನಟ ಅವರು ಧ್ರುವಂತ್ ವಿರುದ್ಧ ಆರೋಪ ಮಾಡಿದ್ದಾರೆ. ಹಾಗಾದರೆ ಏನಾಯ್ತು?

ಮನಸ್ಸಿಗೆ ನೋವಾಗುವಂತೆ ಮಾತು
ಧ್ರುವಂತ್ ಮಾತನಾಡಿ, “ತಮಾಷೆಯ ಬರದಲ್ಲಿ ಬೇರೆಯವರಿಗೆ ಮನಸ್ಸಿಗೆ ನೋವಾಗುವ ರೀತಿ, ಕಾಮಿಡಿ ಮಾಡಿ ಹೀರೋ ಆಗಬೇಕು ಎಂದು ಬೇರೆಯವರನ್ನು ಅಗೌರವಿಸುತ್ತಾರೆ, ಬೇರೆಯವರ ಸ್ವಗೌರವ ಹಾಳಾಗುವಂತೆ ಮಾಡುತ್ತಾರೆ” ಎಂದು ಧ್ರುವಂತ್ ಆರೋಪ ಮಾಡಿದ್ದಾರೆ.
ಅವರ ಕಾವ್ಯ ಯಾಕಂದ್ರಿ?
"ಕಳಪೆ ಟಾಸ್ಕ್‌ನಲ್ಲಿ ಅವರ ಕಾವ್ಯ ಎಂದು ಹೇಳುತ್ತೀರಿ. ಇದರಿಂದ ಬೇರೆಯವರಿಗೆ ಬೇಸರ ಆಗುತ್ತದೆ. ನನ್ನ ವಿಷಯ ಬಂದಾಗ ನನ್ನ ಬಗ್ಗೆ ಮಾತನಾಡಿ, ಬೇರೆಯವರ ಬಗ್ಗೆ ಯಾಕೆ ಮಾತಾಡ್ತೀರಿ, ಯಾಕೆ ವಿಷ ಕಾರ್ತೀರಿ? ಎಂದು ಗಿಲ್ಲಿ ಅವರು ಧ್ರುವಂತ್ ಆರೋಪಕ್ಕೆ ಉತ್ತರ ನೀಡಿದ್ದಾರೆ.
ಎರಡು ಗಂಟೆ ವಿಷ ಕಾರ್ತೀರಿ
ಬೇರೆಯವರು ಎರಡು ನಿಮಿಷ ಕಾರಿದರೆ, ಇವರು ಎರಡು ಗಂಟೆ ವಿಷ ಕಾರುತ್ತಾರೆ. ಈ ಮನೆಯವರು ಜಗಳ ಆಡಿ, ಚಚ್ಚಾಡಿ ಆಮೇಲೆ ಐದು ನಿಮಿಷಕ್ಕೆ ಮಾತನಾಡಿಕೊಳ್ತಾರೆ. ಎಲ್ಲ ಫುಟೇಜ್‌ಗೋಸ್ಕರ ಮಾಡ್ತಾರೆ, ಗುಂಪುಗಾರಿಕೆ ಮಾಡ್ತಾರೆ ಎಂದು ಹೇಳಿದ್ರಿ. ನೀವು ಒಬ್ಬೊಬ್ಬರ ಜೊತೆ ಹೋಗಿ ಗುಂಪುಗಾರಿಕೆ ಮಾಡ್ತೀರಿ. ಒಬ್ಬೊಬ್ಬರನ್ನು ಕರೆದುಕೊಂಡು ಭೇಟೆ ಆಡ್ತೀಯಾ, ಇಂದು ಬೆಳಗ್ಗೆ ಅಭಿ ಅವರು ಸಿಕ್ಕ ಹಾಗೆ ಎಂದು ಗಿಲ್ಲಿ ನಟ ಅವರು ಧ್ರುವಂತ್‌ಗೆ ಹೇಳಿದ್ದಾರೆ.
ಕ್ಯಾರೆಕ್ಟರ್ ವಿಮರ್ಶೆ ಮಾಡಲ್ಲ
“ಬೇರೆಯವರನ್ನು ಕೆಳಗಡೆ ಇಳಿಸಿ, ಬೇರೆಯವರ ಕ್ಯಾರೆಕ್ಟರ್ ವಿಮರ್ಶೆ ಮಾಡಿ ನಾನು ಯಾರಿಗೂ ಕಾಮಿಡಿ ಮಾಡೋದಿಲ್ಲ. ಬನಿಯನ್ ಹಾಕಿಕೊಂಡು, ಅಮಾಯಕ ಬಡವ ಎಂದು ಮುಖವಾಡ ಹಾಕಿಕೊಂಡು ಓಡಾಡುತ್ತಾನೆ. ಚಂದ್ರಣ್ಣ ಹಾಗೂ ಬೇರೆಯವರಿಂದ ನನಗೆ ಇವರು ಎಂಜಿ ಹೆಕ್ಟೇರ್ ಕಾರ್‌ನಲ್ಲಿ ಓಡಾಡ್ತೀರಿ, ಅಣ್ಣನ ಹತ್ರ ನೂರು ಕುರಿ ಇದೆ ಎಂದು ಗೊತ್ತಾಗುತ್ತದೆ. ಬಟ್ಟೆ ಹಾಕದೆ, ವಾಶ್ ಮಾಡದೆ, ಕೆರದುಕೊಂಡು ಇರಲು ಏನು ಕಾರಣ ಎಂದು ಗೊತ್ತಾಗುತ್ತದೆ” ಎಂದು ಧ್ರುವಂತ್ ಹೇಳಿದ್ದಾರೆ.
ನಾನು ಕೊಟ್ಟ ಶರ್ಟ್ ಬಿಸಾಕಿದರು
ಫ್ಲವರ್ ಪ್ರಿಂಟೆಡ್ ಶರ್ಟ್ ಕೊಟ್ಟೆ. ಅದನ್ನು ಕಿಚ್ಚ ಸುದೀಪ್ ಅವರು ಕೂಡ ಶರ್ಟ್ ನೋಡಿ ಚೆನ್ನಾಗಿದೆ ಎಂದರು. ಆದರೆ ನೀವು ಆ ಶರ್ಟ್‌ನ್ನು ಎಸೆಯುತ್ತೀರಿ, ಅದು ಕೊಚ್ಚೆಯಲ್ಲಿ ಬಿದ್ದಿದೆ. ಆ ಶರ್ಟ್‌ನ್ನು ನಾನು ಸ್ವಂತ ದುಡಿಮೆಯಿಂದ ದುಡ್ಡು ಕೊಟ್ಟು ತಗೊಂಡಿದ್ದೆ. ಆಗ ನನ್ನ ಹೊಟ್ಟೆ ತುಂಬಿತು. ಎಲ್ಲಿ ಯಾರಾದರೂ ಸ್ಟ್ರಾಂಗ್ ಅಂತ ಗೊತ್ತಾದಾಗ ಅವರ ಚರಿತ್ರೆಹರಣ ಮಾಡ್ತೀರಾ. ನಿನ್ನ ವಿಷಯಕ್ಕೆ ಬಂದರೆ ಪರ್ಸನಲ್ ಅಂತ ಹೇಳ್ತೀಯಾ, ಆದರೆ ನಮ್ಮ ಬಗ್ಗೆ ಹೇಳುತ್ತೀರಾ ಎಂದು ಧ್ರುವಂತ್ ಹೇಳಿದ್ದಾರೆ.
ಸ್ಪಷ್ಟನೆ ನೀಡಿದ ಗಿಲ್ಲಿ ನಟ
ಎಂಜಿ ಹೆಕ್ಟೇರ್ ಅದು ಸೆಕೆಂಡ್ ಹ್ಯಾಂಡ್. ನಾನು ಬಡವ ಎಂದು ಎಲ್ಲಿಯೂ ಹೇಳಿಲ್ಲ. ನಾನು ನೂರು ಕುರಿ ತಗೊಂಡು ಫಾರಂ ಮಾಡಬೇಕು ಎಂದುಕೊಂಡಿದ್ದೀನಿ. ಇನ್ನೂ ಕುರಿ ತಂದಿಲ್ಲ. ನಿನ್ನ ಇಷ್ಟದ ಪ್ರಕಾರ ಎಲ್ಲವೂ ನಡೆಯುತ್ತಿದೆ. ನೀವು ಇಷ್ಟಪಟ್ಟು ಮಲ್ಲಮ್ಮ ಅವರನ್ನು ಕಳಿಸಿದ್ರಿ, ಚಂದ್ರಣ್ಣನ ಜೊತೆಗಿದ್ದು ಅವರನ್ನು ಕಳಿಸಿದ್ರಿ, ಈಗ ಅವರು ಹೋಗ್ತಾರೆ ಎಂದು ಕಾಣಿಸ್ತಿದೆ, ಹುಷಾರಾಗಿರಿ ಎಂದು ಗಿಲ್ಲಿ ನಟ ಅವರು ಉತ್ತರ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

