- Home
- Entertainment
- TV Talk
- BBK 12: ರಕ್ಷಿತಾರನ್ನ ಮನೆ ಕೆಲಸದವ್ರು ಎಂದ್ಕೊಂಡ್ರು; ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ ಅಶ್ವಿನಿ ಅವ್ರೇ!
BBK 12: ರಕ್ಷಿತಾರನ್ನ ಮನೆ ಕೆಲಸದವ್ರು ಎಂದ್ಕೊಂಡ್ರು; ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ ಅಶ್ವಿನಿ ಅವ್ರೇ!
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ರಕ್ಷಿತಾ ಮೇಲೆ ಅಶ್ವಿನಿ ವಾಗ್ದಾಳಿ ಮಾಡಿದ್ದರು. ಈಗ ಮತ್ತೆ ಅಶ್ವಿನಿ, ರಿಷಾ ಗೌಡ, ರಾಶಿಕಾ ಸೇರಿಕೊಂಡು ರಕ್ಷಿತಾ ಮೇಲೆ ಹರಿಹಾಯ್ದಿದ್ದಾರೆ. ಅಡುಗೆ ವಿಚಾರಕ್ಕೆ ಜಗಳ ಶುರುವಾಗಿದೆ. ಆ ವೇಳೆ ಅಶ್ವಿನಿ ಏನು ಹೇಳಿದ್ರು?

ಮನೆ ಕೆಲಸದವ್ರು ಎಂದುಕೊಂಡ್ರು
ನನಗೆ ರಕ್ಷಿತಾ ಬಗ್ಗೆ ಯಾವುದೇ ಕಂಪ್ಲೇಂಟ್ ಇಲ್ಲ, ಅವಳು ಒಬ್ಬಳೇ ಆದರೂ ಕೂಡ ಅಡುಗೆ ಮಾಡ್ತಾಳೆ. ಮನೆ ಕೆಲಸದವರು ಅಂತ ಅಂದುಕೊಂಡಿದ್ದಾರೆ” ಎಂದು ಈ ವಾರದ ಕ್ಯಾಪ್ಟನ್ ರಘು ಹೇಳಿದ್ದರು. ಗಾರ್ಡನ್ ಏರಿಯಾದಲ್ಲಿ ಹೀಹೊಂದು ಚರ್ಚೆ ನಡೆದಿದೆ. ರಕ್ಷಿತಾ ಅವರು ಪಾತ್ರೆ ತೊಳೆದಿರುವ ಪ್ರೋಮೋ ಕೂಡ ರಿಲೀಸ್ ಆಗಿದೆ.
ಅಡುಗೆ ಮಾಡೋದಿಲ್ಲ ಎಂದ ರಾಶಿಕಾ
ಅಂದಹಾಗೆ ರಕ್ಷಿತಾ ಅವರು ರಾಶಿಕಾ ಶೆಟ್ಟಿ ಬಳಿ, “ಅಡುಗೆ ಮಾಡಬೇಕು” ಎಂದು ಹೇಳಿದ್ದಾರೆ. ಅಶ್ವಿನಿ ಗೌಡ, ರಾಶಿಕಾ ಒಂದು ಟೀಂನಲ್ಲಿದ್ದರು. ಆಗ ರಾಶಿಕಾ ನಾನು ಅಡುಗೆ ಮಾಡೋದಿಲ್ಲ ಎಂದು ಹೇಳ್ತೀನಿ ಎಂದಿದ್ದರು.
ರಾಶಿಕಾ ಶೆಟ್ಟಿ ಅವರು ಆರಂಭದ ಕೆಲ ವಾರ ಅಡುಗೆ ಮಾಡಿದ್ದರು. ಈ ವಾರ ಕೂಡ ಅವರಿಗೆ ಅಡುಗೆ ಮಾಡುವ ಕೆಲಸ ವಹಿಸಲಾಗಿತ್ತು. ಆದರೆ ಈ ಬಾರಿ ಸುಮ್ಮನೆ ಅಡುಗೆ ಮಾಡಲ್ಲ ಎಂದಿದ್ದಾರೆ. ಇಲ್ಲಿಂದಲೇ ಜಗಳ ಶುರುವಾಗಿದೆ.
ರಿಷಾ ಗೌಡ ಏನಂದ್ರು?
ರಿಷಾ ಅವರು “ತುಂಬ ಅತಿಯಾಗಿ ಆಡಬೇಡ” ಎಂದು ಹೇಳಿದ್ದರು. ಆಗ ಅಶ್ವಿನಿ ಗೌಡ ಅವರು, “ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇರಬೇಕು. ಎಲ್ಲದಕ್ಕೂ ಮಾತನಾಡ್ತೀಯಾ, ಎಲ್ಲದಕ್ಕೂ ಮಧ್ಯೆ ಬಂದರೆ…” ಎಂದು ಹೇಳಿದ್ದಾರೆ.
ರಿಷಾ ಗೌಡ ಅವರಿಗೆ ರಕ್ಷಿತಾ ಕಂಡರೆ ಆಗೋದಿಲ್ಲ. ರಕ್ಷಿತಾಗೆ ಕನ್ನಡ ಬರತ್ತೆ, ಇದೆಲ್ಲ ನಾಟಕ ಎಂದು ರಿಷಾ ಅವರು ಹೇಳಿದ್ದರು.
ರಕ್ಷಿತಾ ಪರ ರಘು ಬ್ಯಾಟಿಂಗ್
“ಈಗ ರಾಶಿಕಾ ಅಡುಗೆ ಮಾಡೋದಿಲ್ಲ ಎಂದಿದ್ದರು. ನಾನು ಕೂಡ ಅಡುಗೆ ಮಾಡೋದಿಲ್ಲ” ಎಂದು ರಕ್ಷಿತಾ ಹೇಳಿದ್ದರು. ರಕ್ಷಿತಾ ಅವರ ಮೇಲೆ ಕೂಗಾಡಿದ್ದಕ್ಕೆ, “ನೀವ್ಯಾಕೆ ರಕ್ಷಿತಾ ಮೇಲೆ ಕೂಗಾಡ್ತಿದ್ದೀರಾ ಎಂದು ದನಿ ಎತ್ತಿದ್ದರು.
ಈ ಹಿಂದೆ ಅಶ್ವಿನಿ ಗೌಡ ಅವರು ಜಗಳ ಮಾಡಿದಾಗ, ಗಿಲ್ಲಿ ನಟ ಮಾತನಾಡಿದ್ದರು. ಆದರೆ ಈ ಬಾರಿ ರಘು ಮಾತನಾಡಿದ್ದಾರೆ.
ಅಶ್ವಿನಿ ಗ್ಯಾಂಗ್ ಸೇರಿದ ರಾಶಿಕಾ
ಮಂಜುಭಾಷಿಣಿ, ಸ್ಪಂದನಾ ಸೋಮಣ್ಣ, ಅಶ್ವಿನಿ, ಆ ಬಳಿಕ ಸೂರಜ್ ಜೊತೆ ಸಮಯ ಕಳೆದ ರಾಶಿಕಾ ಈ ವಾರ ಅಶ್ವಿನಿ ಗೌಡ ಗ್ಯಾಂಗ್ ಸೇರಿದ್ದಾರೆ. ಸೂರಜ್ ಜೊತೆ ಅವರು ಮಾತುಬಿಟ್ಟಿದ್ದರು. ಈಗ ರಕ್ಷಿತಾ ವಿರುದ್ಧ ಫೈಟ್ ಮಾಡಿದ್ದಾರೆ.
ಅಂದಹಾಗೆ ಈ ಹಿಂದೆ ರಕ್ಷಿತಾ ವಿರುದ್ಧ ಅಶ್ವಿನಿ ಗೌಡ ಮಾತನಾಡಿ, ಜನರ ಟೀಕೆಗೆ ಗುರಿಯಾಗಿದ್ದರು. ಬೇಡದ ಅನಗತ್ಯ ಮಾತುಗಳನ್ನು ಆಡಿದ್ದ ಅಶ್ವಿನಿ, ಆಮೇಲೆ ಕ್ಷಮೆ ಕೂಡ ಕೇಳಿದ್ದರು. ಈಗ ಮತ್ತೆ ರಕ್ಷಿತಾ ಮೇಲೆ ದಾಳಿ ಮಾಡಿದ್ದಾರೆ. ಈ ಪ್ರೋಮೋ ನೋಡಿ ಅನೇಕರು ಬೇಸರ ಹೊರಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

