ಬಿಗ್‌ಬಾಸ್ ಮಾತು ಕೇಳಿ ಗಢಗಢ ನಡುಗಿದ ಸ್ಪರ್ಧಿಗಳು: 2ನೇ ದಿನವೇ ಹಿಂಗಾದ್ರೆ ಹೆಂಗೆ?
Bigg Boss Kannada two finales twist: ಈ ಅನಿರೀಕ್ಷಿತ ಟ್ವಿಸ್ಟ್‌ನಿಂದ ಸ್ಪರ್ಧಿಗಳು ಆಘಾತಕ್ಕೊಳಗಾಗಿದ್ದು, ಯಾವಾಗ ಯಾರು ಎಲಿಮಿನೇಟ್ ಆಗುತ್ತಾರೆಂಬ ಭಯದಲ್ಲಿದ್ದಾರೆ. ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್‌ನಲ್ಲಿರುವ ಸಾಧ್ಯತೆಯೂ ಇದೆ.

ಬಿಗ್‌ಬಾಸ್‌ನಲ್ಲಿ ಎರಡು ಫಿನಾಲೆ
ಈ ಬಾರಿಯ ಬಿಗ್‌ಬಾಸ್‌ನಲ್ಲಿ ಎರಡು ಫಿನಾಲೆಗಳಿರಲಿದ್ದು, ಮೂರನೇ ವಾರಕ್ಕೆ ಯಾರು ಅಂತಿಮ ಹಂತಕ್ಕೆ ಬರುತ್ತಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಮೂರನೇ ವಾರಕ್ಕೂ ಮುಂಚೆ ಅಥವಾ ಆವತ್ತೆ ಬಿಗ್ ಎಲಿಮಿನೇಷನ್ ನಡೆಯೋದು ಖಚಿತವಾಗಿದೆ. ಈ ವಿಷಯ ಕೇಳಿ ಅಭ್ಯರ್ಥಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸೀಕ್ರೆಟ್ ರೂಮ್
ಮೊದಲ ದಿನವೇ ಎಲಿಮೇಷನ್ ನಡೆದ ಕಾರಣ, ತುಳು ನಾಡಿನ ರಕ್ಷಿತಾ ಶೆಟ್ಟಿ ಮನೆಯಿಂದ ಹೊರಗೆ ಬಂದಿದ್ದಾರೆ. ಆದ್ರೆ ರಕ್ಷಿತಾ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಿರಬಹುದು ಎಂಬ ಗುಮಾನಿಯೂ ಇದೆ. ಮೊದಲ ದಿನ ಎಲಿಮಿನೇಷನ್ ಮಾಡಿದ್ದು ತಪ್ಪು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
100 ದಿನ
ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿರುವ ಎಲ್ಲಾ ಸ್ಪರ್ಧಿಗಳು, ಬಿಗ್‌ಬಾಸ್ ಮಾತುಗಳನ್ನು ಕೇಳಿ ಶಾಕ್ ಆಗಿದ್ದಾರೆ. ಈ ಸೀಸನ್ ಯಾರು ಗೆಲ್ತಾರೆ ಅಂತ ನೋಡಲು 100 ದಿನಗಳು ಕಾಯಬೇಕಿಲ್ಲ. ಮೂರನೇ ವಾರದಲ್ಲಿಯೇ ಒಂದು ಫಿನಾಲೆ ನಡೆಯಲಿದೆ ಎಂದು ಬಿಗ್‌ಬಾಸ್ ಶಾಕಿಂಗ್ ನ್ಯೂಸ್ ಹೇಳಿದ್ದಾರೆ.
ಎಲಿಮೇಷನ್ ಭಯ
ನಿಮ್ಮಲ್ಲಿ ಯಾರು? ಯಾವಾಗ? ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು ಅಥವಾ ಗುಂಪು ಗುಂಪಾಗಿ ಹೋಗಬಹುದು. ಎಲಿಮೇಷನ್ ಭಯದಿಂದ ಮುಕ್ತರಾಗಬೇಕಾದ್ರೆ ಸ್ಪರ್ಧಿಗಳಿರೋದು ಒಂದೇ ದಾರಿ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಆದ್ರೆ ಸೇಫ್ ಆಗುವ ಆ ದಾರಿ ಯಾವುದು ಎಂಬುದನ್ನು ಪ್ರೋಮೋದಲ್ಲಿ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಎಲಿಮಿನೇಷನ್ ಶಾಕ್! ಬಿಗ್‌ಬಾಸ್ ಮನೆಯ ಮುಖ್ಯದ್ವಾರಕ್ಕೆ ಬಂದು ನಿಂತ ಮೂವರು ಸ್ಪರ್ಧಿಗಳು!
ಹೊಸ ಟಾಸ್ಕ್?
ಇಂದಿನ ಸಂಚಿಕೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡುವ ಸಾಧ್ಯತೆಗಳಿವೆ. ಬಹುಶಃ ಈ ಟಾಸ್ಟ್ ಜಂಟಿಗಳು ಮತ್ತು ಒಂಟಿಗಳ ನಡುವೆ ನಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಆದ್ರೆ ಈ ಬಾರಿಯ ಬಿಗ್‌ಬಾಸ್ ಎಲ್ಲಾ ಊಹೆಗಳಿಗೂ ಮೀರಿದ್ದು ಆಗಿರಲಿದೆ ಎಂದು ಆರಂಭದಲ್ಲಿಯೇ ಸುದೀಪ್ ಹೇಳಿದ್ದರು.
ಇದನ್ನೂ ಓದಿ: BBK12: ಮಲ್ಲಮ್ಮಗೆ ಮಕ್ಕರ್ ಮಾಡೋಕೆ ಹೋಗಿ ಬಕ್ರಾ ಆದ ಗಿಲ್ಲಿ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

