- Home
- Entertainment
- TV Talk
- Bigg Boss ಗಿಲ್ಲಿ ನಟನಿಗೆ ಶಾಕ್: ಒಂದ್ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್ ಭಾಷೆ ಬರತ್ತೆ!
Bigg Boss ಗಿಲ್ಲಿ ನಟನಿಗೆ ಶಾಕ್: ಒಂದ್ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್ ಭಾಷೆ ಬರತ್ತೆ!
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನನ್ನು ಇತರ ಸ್ಪರ್ಧಿಗಳು ಟಾರ್ಗೆಟ್ ಮಾಡುತ್ತಿದ್ದು, ಈ ವಾರ ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ. ಚೈತ್ರಾ ಕುಂದಾಪುರರಂತಹ ಸ್ಪರ್ಧಿಗಳು ತೀವ್ರವಾಗಿ ಎಚ್ಚರಿಕೆ ನೀಡಿದ್ದರೂ, ಮನೆಯ ಹೊರಗೆ ಗಿಲ್ಲಿ ನಟನೇ ವಿನ್ನರ್ ಎಂಬ ಮಾತುಗಳು ಕೇಳಿಬರುತ್ತಿವೆ.

ಗಿಲ್ಲಿ ಹವಾ
ಬಿಗ್ಬಾಸ್ (Bigg Boss 12) ಸದ್ಯ ಗಿಲ್ಲಿ ನಟನ ಹವಾ ಜೋರಾಗಿಯೇ ನಡೆಯುತ್ತಿದೆ. ಆದರೆ ದೊಡ್ಮನೆಯಲ್ಲಿ ಗಿಲ್ಲಿ ನಟ ಆಗಾಗ್ಗೆ ಟಾರ್ಗೆಟ್ ಆಗುತ್ತಲೇ ಇದ್ದಾರೆ.
ಕಳಪೆ ಪಟ್ಟ
ಇದೀಗ ಈ ವಾರದ ಕಳಪೆ ಪಟ್ಟನ್ನು ಗಿಲ್ಲಿ ನಟನಿಗೆ ನೀಡಲಾಗಿದೆ. ಕೆಲವು ಸ್ಪರ್ಧಿಗಳು ಗಿಲ್ಲಿ ನಟನಿಗೆ (Bigg Boss Gilli Nata) ಕಳಪೆ ಪಟ್ಟ ಕೊಟ್ಟಿದ್ದಾರೆ.
ಅಶ್ವಿನಿ ಗೌಡ ಹೇಳಿದ್ದೇನು?
ಅದರಲ್ಲಿ ಮೊದಲಿಗರು ಅಶ್ವಿನಿ ಗೌಡ. ನಮ್ಮ ವಿಚಾರ, ನಿಮ್ಮ ಪ್ರಚಾರ ಆಗ್ತಿದೆ ಎನ್ನುತ್ತಲೇ ಅಶ್ವಿನಿ, ಕಳಪೆ ಪಟ್ಟ ಗಿಲ್ಲಿಗೆ ಕೊಡುವುದಾಗಿ ಹೇಳಿದ್ದಾರೆ.
ಕಾಮಿಡಿ ಮತ್ತು ಪರ್ಸನಲ್ ವಿಚಾರ
ಮ್ಯೂಟಂಟ್ ರಘು ಅವರು ಕೂಡ ಕಳಪೆ ಪಟ್ಟವನ್ನು ಗಿಲ್ಲಿ ಅವರಿಗೆ ಕೊಡ್ತೇನೆ ಎಂದಿದ್ದಾರೆ. ಕಾಮಿಡಿ ಮತ್ತು ಪರ್ಸನಲ್ ವಿಚಾರದ ಮಧ್ಯೆ ಒಂದು ಲೈನ್ ಇರುತ್ತದೆ. ಅದನ್ನು ದಾಟುತ್ತಾರೆ, ಅದಕ್ಕಾಗಿ ಕಳಪೆ ಪಟ್ಟ ಎಂದಿದ್ದಾರೆ.
ಚೈತ್ರಾ ಎಚ್ಚರಿಕೆ
ಕೊನೆಗೆ ಚೈತ್ರಾ ಕುಂದಾಪುರ ಅವರು, ವಯಸ್ಸಿನ ವಿಷಯದಲ್ಲಿ ನಮ್ಮ ಫ್ಯಾಮಿಲಿನೂ ನೋಡ್ತಾ ಇರತ್ತೆ, ಎಚ್ಚರಿಕೆಯಿಂದ ಇರಬೇಕು ಎಂದು ಗಿಲ್ಲಿಗೆ ವಾರ್ನ್ ಮಾಡಿದ್ದಾರೆ. ನಾನು 1 ಸಲ, 2 ಸಲ ಹೇಳ್ತೇನೆ. 3ನೇ ಸಲನೂ ತಿದ್ದಿಕೊಳ್ಳಲಿಲ್ಲ ಅಂದ್ರೆ ನನಗೊಂದು ಭಾಷೆ ಇದೆ ಅದರಿಂದ ಹೇಳ್ತೇನೆ ಎಂದು ಗರಂ ಆಗಿದ್ದಾರೆ.
ಯಾವ ಭಾಷೆ?
ಅದಕ್ಕೆ ಗಿಲ್ಲಿ, ನಿಮ್ಮದು ಯಾವ ಭಾಷೆ ಎಂದು ಕೇಳಿದ್ದಾರೆ. ಇದರಿಂದ ಚೈತ್ರಾ ಅವರಿಗೆ ಕೋಪ ಏರಿದೆ. ಅದು ಯಾವ ಭಾಷೆ ಎಂದು ಆಮೇಲೆ ತೋರಿಸುತ್ತೇನೆ ನಿಮಗೆ ಗೊತ್ತಿಲ್ಲ ಎಂದಿದ್ದಾರೆ.
ವಿನ್ನರ್ ಅವರೇ
ಒಟ್ಟಿನಲ್ಲಿ ಈಗ ಎಲ್ಲರೂ ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ ಇದಾಗಲೇ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದಿರೋ ಸ್ಪರ್ಧಿಗಳೂ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿಯೂ ಗಿಲ್ಲಿ ನಟನೇ ಬಿಗ್ಬಾಸ್ ವಿನ್ (Bigg Boss winner Gilli Nata) ಎಂದೇ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

