- Home
- Entertainment
- TV Talk
- Bigg Boss: ದೇವರ ದಯೆಯಿಂದ ನಿನ್ನ ಮೈಕೈ ಮೂಳೆ ಮುರಿಯೋ ಟಾಸ್ಕ್ ಸಿಗಲಿ-ಗಿಲ್ಲಿ ನಟನಿಗೆ ಒಪನ್ ಆಗಿ ಹೇಳಿದ ರಜತ್!
Bigg Boss: ದೇವರ ದಯೆಯಿಂದ ನಿನ್ನ ಮೈಕೈ ಮೂಳೆ ಮುರಿಯೋ ಟಾಸ್ಕ್ ಸಿಗಲಿ-ಗಿಲ್ಲಿ ನಟನಿಗೆ ಒಪನ್ ಆಗಿ ಹೇಳಿದ ರಜತ್!
Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಬರೀ ಮಾತನಾಡಿಕೊಂಡು ಇಲ್ಲಿಯವರೆಗೆ ಬಂದರು. ಟಾಸ್ಕ್‌ಗಳನ್ನು ಆಡೋದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಅವರು ಅಶ್ವಿನಿ ಗೌಡ ಜೊತೆಗಿದ್ದ ಟಾಸ್ಕ್‌ನಲ್ಲಿ ಗೆದ್ದಿದ್ದರು. ಈಗ ಟಾಸ್ಕ್ ವಿಚಾರವಾಗಿ ಚರ್ಚೆ ನಡೆದಿದೆ.

ಬಿಗ್ ಬಾಸ್ ಏನಾದರೂ ನ್ಯಾಯ ಒದಗಿಸುತ್ತಾರೆ ಅಂದ್ರೆ
ಬಿಗ್ ಬಾಸ್ ನಿನ್ನ ಆಟವನ್ನು ನೋಡುತ್ತಿರುತ್ತಾರೆ. ದೇವರ ದಯೆಯಿಂದ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಏನಾದರೂ ನ್ಯಾಯ ಒದಗಿಸುತ್ತಾರೆ ಅಂದ್ರೆ ನಿನ್ನ ಮೈ ಕೈ ಮೂಳೆ ಮುರಿಯಬೇಕು ಅಂತ ಟಾಸ್ಕ್ ಕೊಡಬೇಕು ಎಂದು ರಜತ್ ಅವರು ಹೇಳಿದ್ದಾರೆ.
ಧನುಷ್ ಜೊತೆ ಫೈಟ್ ಮಾಡು
ನೀನು ರಘು ಅಣ್ಣನ ಜೊತೆ ಫೈಟ್ ಮಾಡೋದು ಬೇಡ, ಧನುಷ್ ನಿನ್ನ ಸೈಜ್ ಇದ್ದಾನೆ. ಧನುಷ್ ಜೊತೆ ಫೈಟ್ ಮಾಡು ಎಂದು ರಜತ್ ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ಏನೂ ಬೇಡ ಧನುಷ್ ನನ್ನ ಜೊತೆ ಫೈಟ್ ಮಾಡೋಕೆ ರೆಡಿ ಇಲ್ಲ, ಕಷ್ಟಪಟ್ಟು ಹನ್ನೆರಡನೇ ವಾರಕ್ಕೆ ಬಂದಿದ್ಯಾ, ಸುಮ್ನಿರು” ಎಂದಿದ್ದಾರೆ. ಆಗ ರಜತ್ ಅವರು, “ಧನುಷ್ ಏನು ಬೇಕಿದ್ರೂ ಆಗಲಿ, ನೀನು ಆಟ ಆಡು” ಎಂದು ಹೇಳಿದ್ದಾರೆ.
ಟ್ರೈ ಮಾಡು ಧನುಷ್
ರಜತ್ ಅವರು, “ಗಿಲ್ಲಿ ನಟ ಸ್ಟ್ರಾಂಗ್ ಇರಬಹುದು, ಫೈಟ್ ಕೊಡಬಹುದು. ನೀನು ಫೈಟ್ ಮಾಡು, ಸೋತರೂ ಪರವಾಗಿಲ್ಲ. ಕೊನೇಪಕ್ಷ ಟ್ರೈ ಮಾಡು” ಎಂದು ಧನುಷ್ ಗೌಡಗೆ ಹೇಳಿದ್ದಾರೆ. ಸ್ಪಂದನಾ ಸೋಮಣ್ಣ ಅವರು ಧನುಷ್‌ಗೆ ಟ್ರೈ ಮಾಡು ಎಂದಿದ್ದಾರೆ.
ಈಗ ಟಾಸ್ಕ್ ಆಡಲೇಬೇಕು
ಧನುಷ್ ಅವರು “ಹನ್ನೆರಡು ವಾರದಿಂದ ಟಾಸ್ಕ್ ಆಡದೆ ಇಲ್ಲಿಯವರೆಗೆ ಬಂದೆ. ಈ ವಾರ ತಪ್ಪಿಸಿಕೊಳ್ಳೋಕೆ ಆಗೋದಿಲ್ಲ. ಎರಡು ಟಾಸ್ಕ್ ಆಡಬೇಕು” ಎಂದು ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ನೀನು ಯೋಚನೆ ಮಾಡಬೇಡ. ಫೀನಿಕ್ಸ್ ಥರ ಎದ್ದು ಬರ್ತೀನಿ” ಎಂದಿದ್ದಾರೆ.
ಫೀನಿಕ್ಸ್ ಥರ ಎದ್ದು ಬರ್ತೀನಿ
ಗಿಲ್ಲಿ ನಟ ಅವರು ಫೀನಿಕ್ಸ್ ಥರ ಎದ್ದು ಬರ್ತೀನಿ ಎಂದಿರೋದನ್ನು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೊಂದು ಕಡೆ ಗಿಲ್ಲಿ ನಟನ ಮೂಳೆ ಮುರಿಬೇಕು ಎಂದಿರೋದಕ್ಕೆ ಅನೇಕರು ಬೇಸರ ಹೊರಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

