- Home
- Entertainment
- TV Talk
- ಜ್ಯೋತಿ ರೈ ಫೋಟೊ ನೋಡಿ ಎಲ್ಲಾ ದೇವಕನ್ಯೆಯರು ಸ್ವರ್ಗದಲ್ಲಿರೋದಿಲ್ಲ… ಈ ದೇವತೆ ನನ್ನ ಮನೆಯಲ್ಲಿಯೇ ಇದ್ದಾಳೆ ಎಂದ ಪತಿ!
ಜ್ಯೋತಿ ರೈ ಫೋಟೊ ನೋಡಿ ಎಲ್ಲಾ ದೇವಕನ್ಯೆಯರು ಸ್ವರ್ಗದಲ್ಲಿರೋದಿಲ್ಲ… ಈ ದೇವತೆ ನನ್ನ ಮನೆಯಲ್ಲಿಯೇ ಇದ್ದಾಳೆ ಎಂದ ಪತಿ!
ಜ್ಯೋತಿ ರೈ ಎಂದ ಕೂಡಲೇ ನೆನಪಾಗೋದು ತಮ್ಮ ಬೋಲ್ಡ್ ಫೋಟೊಗಳ ಮೂಲಕ ಇಂಟರ್ನೆಟ್ ನಲ್ಲಿ ಧೂಳೆಬ್ಬಿಸುತ್ತಿರುವ ನಟಿ. ಇದೀಗ ನಟಿ ಶೇರ್ ಮಾಡಿರೋ ಫೋಟೊ ಒಂದಕ್ಕೆ ಪತಿ ಪೂರ್ವಜ್ ಮುದ್ದಾಗಿ ಕಾಮೆಂಟ್ ಮಾಡಿದ್ದಾರೆ.

ಕನ್ನಡ ಕಿರುತೆರೆಯ ಮೂಲಕ ಮೋಡಿ ಮಾಡಿದ ನಟಿ ಜ್ಯೋತಿ ರೈ (Jyothi Rai). ತಮ್ಮ ಮುಗ್ಧ ಪಾತ್ರಗಳ ಮೂಲಕ ಜನಮನ ಗೆದ್ದಿದ್ದರು. ಈ ನಟಿ ಈವಾಗ ಎಷ್ಟು ಬದಲಾಗಿದ್ದಾರೆ. ಯಾವ ರೀತಿಯಲ್ಲಿ ಅವರು ಬದಲಾಗಿದ್ದಾರೆ ಅನ್ನೋದನ್ನ ನೀವೂ ನೋಡಿರಬಹುದು.
ಕನ್ನಡ ಕಿರುತೆರೆ ಬಳಿ, ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ನಟಿ, ನಂತರ ಕನ್ನಡ ಸಿನಿಮಾ, ತೆಲುಗು ವೆಬ್ ಸೀರೀಸ್ (Telugu Webseries) ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಅದರ ಜೊತೆಗೆ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಎರಡನೇ ಬಾರಿ ಮದುವೆಯಾಗುವ ಮೂಲಕ ಭಾರಿ ಸುದ್ದಿಯಾಗಿದ್ದರು.
ನಟಿ ವೆಬ್ ಸೀರೀಜ್ ಪಾತ್ರಗಳು ಹಾಗೂ ಸೋಶಿಯಲ್ ಮೀಡೀಯಾದಲ್ಲಿ ಸಖತ್ ಬೋಲ್ಡ್ ಎನಿಸುವಂತಹ ಫೋಟೊಗಳನ್ನು ಶೇರ್ ಮಾಡುತ್ತಿರುವ ನಟಿಯದ್ದು ಎನ್ನಲಾದ ವಿಡಿಯೋ ಒಂದು ಸಹ ವೈರಲ್ ಆಗಿ ಸದ್ದು ಮಾಡಿತ್ತು, ಬಳಿಕ ನಟಿ ದೂರು ಕೂಡ ದಾಖಲಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇದೀಗ ತಮ್ಮ ಒಂದು ಫೋಟೊ ಹಾಗೂ ಕೆಲವೊಂದು ಕೋಟ್ಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಟ್ರೋಲ್ ಮಾಡೋರಿಗೆ ಬಿಸಿ ಮುಟ್ಟಿಸಿದ್ದಾರೆ ಜ್ಯೋತಿ ರೈ.
Jyothi Rai
ಜ್ಯೋತಿ ರೈ ಗ್ಲಾಮರಸ್ ಆಗಿರುವ ಫೋಟೊ ಶೇರ್ ಮಾಡಿದ್ದು, ಇದನ್ನ ನೋಡಿ ಅವರ ಪತಿ ಪೂರ್ವಜ್ ಕಾಮೆಂಟ್ ಮಾಡಿದ್ದು, ಎಲ್ಲಾ ದೇವಕನ್ಯೆಯರು ಸ್ವರ್ಗದಲ್ಲಿ ಇರೋದಿಲ್ಲ, ಈ ದೇವತೆ ನನ್ನ ಮನೆಯಲ್ಲಿಯೇ ಇದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಂದಿಷ್ಟು ಕೋಟ್ಸ್ ಶೇರ್ ಮಾಡಿರುವ ಜ್ಯೋತಿ ರೈ ಕೆಲವೊಮ್ಮೆ ಜೀವನವನ್ನು ಬದಲಾಯಿಸುವ ಆ ಒಂದು ವರ್ಷವನ್ನು ಪಡೆಯೋದಕ್ಕೆ 10 ವರ್ಷಗಳೇ ಬೇಕಾಗುತ್ತೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಇಂಟರ್ನೆಟ್ ನೋಡಿ ಮೋಸ ಹೋಗಬೇಡಿ, ಯಾರೂ ಕೂಡ ಅವರ ಸೋಲನ್ನು ಪೋಸ್ಟ್ ಮಾಡೋದಕ್ಕೆ ಇಷ್ಟ ಪಡೋದಿಲ್ಲ ಎಂದಿದ್ದಾರೆ.
ಮತ್ತೊಂದು ಪೋಸ್ಟ್ ಮಾಡಿ ನೀವು ಯಾವಾಗಲೂ ತಮ್ಮ ಗುರಿಗಳ ಬಗ್ಗೆ, ವಿಶನ್, ಐಡಿಯಾಗಳ ಬಗ್ಗೆ ಮಾತನಾಡುವವರ ಜೊತೆಗೆ ಇರಿ, ಬೇರೆ ಜನ ಬೇಕಾಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ನೆಕ್ಸ್ಟ್ ಟೈಮ್ ಯಾರಾದರು ನಿಮ್ಮನ್ನ ಕೆಳಗೆ ಇಳಿಸೋಕೆ ಟ್ರೈ ಮಾಡಿದ್ರೆ,ಆತ್ಮವಿಶ್ವಾಸ ಮೌನವಾಗಿರುತ್ತೆ, ಅಭದ್ರತೆ ಜೋರಾಗಿ ಸೌಂಡ್ ಮಾಡುತ್ತೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.