Bigg Boss ಮನೇಲಿ ಫ್ಲರ್ಟ್ ಮಾಡ್ತಿರೋ ನಟಿ ಸಂಯುಕ್ತಾ ಹೆಗಡೆ ಮಾಜಿ ಬಾಯ್‌ಫ್ರೆಂಡ್!
Actress Samyuktha Hegde boyfriend: ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಕನ್ನಡ 12 ಪ್ರಾರಂಭವಾಗಲಿದೆ. ಇನ್ನು ಹಿಂದಿ, ತೆಲುಗು, ಮಲಯಾಳಂನಲ್ಲಿ ಕೂಡ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ಸಂಯುಕ್ತಾ ಹೆಗಡೆ ಮಾಜಿ ಪ್ರಿಯತಮ, ಹಿಂದಿ ಬಿಗ್ ಬಾಸ್ ಶೋನಲ್ಲಿ ಸೌಂಡ್ ಮಾಡುತ್ತಿದ್ದಾರೆ.

ಶಿರಸಿ ಹುಡುಗಿ
ಹೌದು, ಶಿರಸಿ ಹುಡುಗಿ ನಟಿ ಸಂಯುಕ್ತಾ ಹೆಗಡೆ ಈಗಾಗಲೇ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸಿರುವ ಸಂಯುಕ್ತಾ ಹೆಗಡೆಗೆ ರಿಯಾಲಿಟಿ ಶೋ ಗೆಲುವು ತಂದುಕೊಟ್ಟಿದೆ. ಇವರು ಬಸೀರ್ ಅಲಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಸಂಯುಕ್ತಾ ಹೆಗಡೆ ಬಾಯ್‌ಫ್ರೆಂಡ್ ಯಾರು?
ಬಿಗ್ ಬಾಸ್ 19 ಸ್ಪರ್ಧಿ ಬಸೀರ್ ಅಲಿ ಈಗ ಸಲ್ಮಾನ್ ಖಾನ್ ಅವರ Bigg Boss 19 ಶೋನಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಸಹ ಸ್ಪರ್ಧಿಗಳ ಜೊತೆ ಜಗಳ ಆಡುತ್ತ, ನೇಹಲ್ ಚುಡಾಸಮಾ, ಫರ್ಹಾನಾ ಭಟ್ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ. ರೋಡೀಸ್ ರೈಸಿಂಗ್ ಶೋನಲ್ಲಿ ಅವರ ಸಹ ಸ್ಪರ್ಧಿಯಾಗಿದ್ದ ಸಂಯುಕ್ತಾ ಹೆಗಡೆ ಅವರು, ಬಸೀರ್ ಒಳ್ಳೆಯ ಗೆಳೆಯನಲ್ಲ ಎಂದು ಹೇಳಿದ್ದಾರೆ.
ಮಾಜಿ ಪ್ರಿಯತಮನನ್ನು ಹೊಗಳಿದ ನಟಿ
ವೈರಲ್ ಭಯಾನಿ ಜೊತೆಗಿನ ಮಾತುಕತೆ ವೇಳೆ, ಅವರು “ನಾನು ಬಸೀರ್ ಅಲಿ ಬಗ್ಗೆ ತುಂಬಾ ಖುಷಿ ಪಡ್ತೀನಿ. ಅವನು ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡ್ತಿದ್ದಾನೆ.. ನಾನು ರೋಡೀಸ್‌ನಲ್ಲಿ ಬಸೀರ್‌ನನ್ನು ಭೇಟಿಯಾದೆ. ಆ ಟೈಮ್‌ನಲ್ಲಿ, ಅವನು ನನ್ನೊಂದಿಗೆ ಫ್ಲರ್ಟ್ ಮಾಡಿದ್ದನು. ಅದು ತುಂಬ ಮುಗ್ಧವಾದ ಪ್ರೀತಿಯಾಗಿತ್ತು. ಅವನು ಎಲ್ಲ ರಿಯಾಲಿಟಿ ಶೋನಲ್ಲಿ ಎಲ್ಲ ಹುಡುಗಿಯರನ್ನು ಅಟ್ರ್ಯಾಕ್ಟ್ ಮಾಡ್ತಾನೆ ಅಂತ ಹೇಳ್ತಾರೆ. ಆದರೆ, ಅದು ಅವನ ಪ್ಲ್ಯಾನ್ ಅಲ್ಲ. ಬಸೀರ್ ಅಲಿ ತುಂಬ ಒಳ್ಳೆಯ ಹುಡುಗ, ಹೀಗಾಗಿ ಅಟ್ರ್ಯಾಕ್ಟ್ ಆಗ್ತಾನೆ. ಅವನ ತಾಯಿ ಒಳ್ಳೆಯ ಮೌಲ್ಯವನ್ನು ಹೇಳಿಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ.
ಫ್ಲರ್ಟ್ ಮಾಡ್ತಿರೋ ಬಸೀರ್ ಅಲಿ
ಸಂಯುಕ್ತಾ ಹೆಗಡೆ ಮಾತನಾಡಿ, “ನನಗೆ ಬಸೀರ್ ಬಗ್ಗೆ ಚೆನ್ನಾಗಿ ಗೊತ್ತು. ಅವನು ಒಳ್ಳೆಯ ಫ್ರೆಂಡ್. ಆದರೆ, ಕೆಟ್ಟ ಬಾಯ್‌ಫ್ರೆಂಡ್. ನಾನು ಅವನನ್ನು ತುಂಬ ಹುಡುಗಿಯರ ಜೊತೆ ನೋಡಿದ್ದೇನೆ. ಆ ಟೈಮ್‌ನಲ್ಲಿ ಅವನು ನನ್ನ ಫ್ರೆಂಡ್ ಆಗಿದ್ದನು. ಫರ್ಹಾನಾ ಭಟ್, ನೇಹಲ್ ಚುಡಾಸಮಾ ಅವನ ಥರ ಇಲ್ಲ. ಬಸೀರ್ ಅಲಿಗೆ ಹುಡುಗಿಯರ ಜೊತೆ ಫ್ಲರ್ಟ್ ಮಾಡೋದು ಇಷ್ಟ. ಗರ್ಲ್‌ಫ್ರೆಂಡ್ ಮುಂದೆಯೇಾವನು ಬೇರೆ ಹುಡುಗಿ ಜೊತೆ ಫ್ಲರ್ಟ್ ಮಾಡಿದ್ದಾನೆ” ಎಂದು ಹೇಳಿದ್ದಾರೆ.
ಬಸೀರ್ ಅಲಿ ಯಾರು?
ಬಸೀರ್ ಅಲಿ ಅವರು ನೈನಾ ಸಿಂಗ್ ಜೊತೆ ಸ್ಪ್ಲಿಟ್ಸ್‌ವಿಲ್ಲಾ X ಟ್ರೋಫಿ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಕುಂಡಲಿ ಭಾಗ್ಯ ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

