- Home
- Entertainment
- TV Talk
- Kannada Serial TRP: 8 ವಾರಗಳಿಂದ ಟಾಪ್‌ನಲ್ಲಿದ್ದ ಸೀರಿಯಲ್‌ನ್ನು ಹಿಂದಿಕ್ಕಿದ ಆ ಧಾರಾವಾಹಿ ಯಾವುದು?
Kannada Serial TRP: 8 ವಾರಗಳಿಂದ ಟಾಪ್‌ನಲ್ಲಿದ್ದ ಸೀರಿಯಲ್‌ನ್ನು ಹಿಂದಿಕ್ಕಿದ ಆ ಧಾರಾವಾಹಿ ಯಾವುದು?
Kannada Serial TRP 2025: ಈ ವಾರ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ? ಟಾಪ್ 10 ಧಾರಾವಾಹಿಗಳು ಯಾವುವು? ಟಾಪ್ 1 ಸ್ಥಾನದಲ್ಲಿರುವ ಸೀರಿಯಲ್ ಯಾವುದು?

ಧಾರಾವಾಹಿಗಳಲ್ಲಿ ಟಿಆರ್‌ಪಿ ಬದಲಾವಣೆ
ವಾರದಿಂದ ವಾರಕ್ಕೆ ಧಾರಾವಾಹಿಗಳ ಟಿಆರ್‌ಪಿ ಬದಲಾಗುವುದು. ಈ ವಾರ ಕೂಡ ಸೀರಿಯಲ್ ಟಿಆರ್‌ಪಿಯಲ್ಲಿ ಭಾರೀ ಬದಲಾವಣೆ ಆಗಿದೆ.
ಅಮೃತಧಾರೆ ಧಾರಾವಾಹಿ 7.6 TVR
ಛಾಯಾ ಸಿಂಗ್, ರಾಜೇಶ್ ನಟರಂಗ ಅಭಿನಯದ ಅಮೃತಧಾರೆ ಧಾರಾವಾಹಿಯಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರುತ್ತಿದೆ. ಗೌತಮ್ ಮಗಳು ನಿಜಕ್ಕೂ ಬದುಕಿದ್ದಾಳಾ ಎನ್ನೋದು ಒಂದು ಕಡೆಯಾದರೆ, ಭೂಮಿಕಾ ಹಾಗೂ ಅವಳ ಮಗನನ್ನು ಸಾಯಿಸಲು ಶಕುಂತಲಾ ನಿರಂತರ ಪ್ರಯತ್ನಪಡುತ್ತಿದ್ದಾರೆ.
ನಾ ನಿನ್ನ ಬಿಡಲಾರೆ ಧಾರಾವಾಹಿ 8.3 TVR
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಮದುವೆ ಎಪಿಸೋಡ್ ಪ್ರಸಾರ ಆಗ್ತಿದೆ. ಶರತ್ ಹಾಗೂ ದುರ್ಗಾ ಮದುವೆ ಆಗಿದೆ. ಅಂಬಿಕಾ ಮುಂದೆ ಏನ್ ಮಾಡ್ತಾಳೆ? ಮಾಯಾಳಿಂದ ಅವಳು ಶರತ್ ಖುಷಿಯನ್ನು ಕಾಪಾಡಿಕೊಳ್ತಾಳಾ ಎಂದು ಕಾದು ನೋಡಬೇಕಿದೆ.
ಅಣ್ಣಯ್ಯ ಧಾರಾವಾಹಿ 8.3 TVR
ಈ ವಾರ ಅಣ್ಣಯ್ಯ ಧಾರಾವಾಹಿಯು ಟಿಆರ್‌ಪಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ವಿಕಾಶ್ ಉತ್ತಯ್ಯ, ನಿಶಾ ರವಿಕೃಷ್ಣನ್ ನಟಿಸುತ್ತಿರುವ ಈ ಧಾರಾವಾಹಿಯಲ್ಲಿ ರಾಣಿ-ಮನು ಮದುವೆಯಾಗಿದೆ. ಇನ್ನೊಂದು ಕಡೆ ಸೀನನ ಮೇಲೆ ರಶ್ಮಿಗೆ ಲವ್ ಆಗಿದೆ. ಈ ಸೀರಿಯಲ್ ಕೆಲ ವಾರ ನಂ 1, ಇನ್ನೂ ಕೆಲ ವಾರ ನಂ 2 ಸ್ಥಾನದಲ್ಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ 8.5 TVR
ಅನೇಕ ವಾರಗಳ ಬಳಿಕ ಲಕ್ಷ್ಮೀ ನಿವಾಸ ಧಾರಾವಾಹಿಯು ಟಿಆರ್‌ಪಿಯಲ್ಲಿ ನಂ 1 ಸ್ಥಾನ ಪಡೆದಿದೆ. ದೊಡ್ಡ ತಾರಾಬಳಗ ಇರುವ ಈ ಸೀರಿಯಲ್ ಆರಂಭದಲ್ಲಿ ಒಂದು ಗಂಟೆಗಳ ಕಾಲ ಪ್ರಸಾರ ಆಗುತ್ತಿತ್ತು. ಈಗ ವಾರದಲ್ಲಿ ಐದು ದಿನಗಳ ಕಾಲ, ನಿತ್ಯವೂ ಅರ್ಧ ಗಂಟೆ ಪ್ರಸಾರ ಆಗುವುದು. ಲಕ್ಷ್ಮೀ, ಶ್ರೀನಿವಾಸ್ ಮಕ್ಕಳ ಕಥೆ ಇಲ್ಲಿದೆ. ಇವರ ಮಕ್ಕಳೆಲ್ಲರದ್ದು ಒಂದೊಂದು ಕಥೆಯಾಗಿದ್ದು, ಈ ವಯಸ್ಸಿನಲ್ಲಿ ಲಕ್ಷ್ಮೀ, ಶ್ರೀನಿವಾಸ್ ದುಡಿದು ತಿನ್ನಲು ಅವರ ಮಕ್ಕಳು ಬಿಡುತ್ತಿಲ್ಲ.
ಭಾಗ್ಯಲಕ್ಷ್ಮೀ ಧಾರಾವಾಹಿ 5.2 TVR
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮನೆಗೆ ಆದೀಶ್ವರ್ ಕಾಮತ್ ಬಂದು ಬಹಳ ಸರಳವಾಗಿ ಜೀವನ ಮಾಡುತ್ತಿದ್ದಾನೆ. ಭಾಗ್ಯಗೆ ಹಾಕಿದ ಚಾಲೆಂಜ್‌ನಲ್ಲಿ ಅವಳು ಸೋತರೆ, ಅವನು ಕೊಟ್ಟ ಹಣವನ್ನು ಅವಳು ಇಟ್ಟುಕೊಳ್ಳಬೇಕು. ಇದರ ಸುತ್ತ ಕಥೆ ಸಾಗುತ್ತಿದೆ.
ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ 4.7 TVR
ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಅರ್ಜುನ್, ಭಾರ್ಗವಿ ಮದುವೆಯಾಗಿದೆ. ಈ ವಿಷಯ ಅವಳ ಮನೆಯಲ್ಲಿಯೂ ಗೊತ್ತಾಗಿದೆ. ಜೆಪಿ ಪಾಟೀಲ್ ಮಗನನ್ನೇ ನಾನು ಮದುವೆ ಆಗಿದೀನಿ ಅಂತ ಭಾರ್ಗವಿಗೆ ಈಗ ಗೊತ್ತಾಗಿದೆ. ಈ ಕುರಿತು ಕಥೆ ಸಾಗುತ್ತಿದೆ. ರಾಧಾ ಭಗವತಿ, ಮನೋಜ್ ಕುಮಾರ್, ಚೈತ್ರಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಮುದ್ದು ಸೊಸೆ ಧಾರಾವಾಹಿ 5.1 TVR
ಮುದ್ದು ಸೊಸೆ ಧಾರಾವಾಹಿಯಲ್ಲಿ ಗಣೇಶೋತ್ಸವದ ಪ್ರಯುಕ್ತ ಒಂದಿಷ್ಟು ಕಾರ್ಯಕ್ರಮಗಳು ಪ್ರಸಾರ ಆದವು. ಈಗ ವಿದ್ಯಾಗೆ ಹಾಲ್ ಟಿಕೆಟ್ ಕೊಡಿಸಲು ಭದ್ರ ಸರ್ಕಸ್ ಮಾಡುತ್ತಿದ್ದಾನೆ. ಈ ಕುರಿತು ಎಪಿಸೋಡ್ ಪ್ರಸಾರ ಆಗ್ತಿವೆ. ತ್ರಿವಿಕ್ರಮ್ ಹಾಗೂ ಪ್ರತಿಮಾ ಠಾಕೂರ್, ಮುನಿ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ನಂದಗೋಕುಲ ಧಾರಾವಾಹಿ 4.9 TVR
ಕಾಲೇಜಿನಲ್ಲಿ ವಲ್ಲಭನಿಗೆ ಒಂದಿಷ್ಟು ಸಮಸ್ಯೆ ಆಗಿತ್ತು. ಅದನ್ನು ನಂದಕುಮಾರ್ ಸರಿಪಡಿಸಿದ್ದನು. ಇನ್ನೊಂದು ಕಡೆ ನಂದಕುಮಾರ್‌ಗೆ ಎದುರಾದ ಸಮಸ್ಯೆಗಳಿಗೆ ಅವನ ಮಕ್ಕಳೇ ಪರಿಹಾರ ಕೂಡ ಕೊಡುತ್ತಿದ್ದಾರೆ. ಇನ್ನು ಮೀನಾಳನ್ನು ಸೊಸೆ ಅಂತ ನಂದಕುಮಾರ್ ಒಪ್ಪಿಲ್ಲ. ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ 5.4 TVR
ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ 5.4 TVR ಸಿಕ್ಕಿದೆ. ಈ ಧಾರಾವಾಹಿ ಟೈಮಿಂಗ್ ಬದಲಾವಣೆ ಆಗಿದ್ದು, ಮೊದಲು ಈ ಸೀರಿಯಲ್ ಎರಡು ವರ್ಷಗಳ ಕಾಲ ನಂ 1 ಸ್ಥಾನದಲ್ಲಿತ್ತು. ನಟಿ ಉಮಾಶ್ರೀ, ಮಂಜುಭಾಷಿಣಿ, ಅಕ್ಷರಾ, ಧನುಷ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಪುಟ್ಟಕ್ಕನ ತವರೂರಿನಲ್ಲಿ ಈ ಕತೆ ಸಾಗುತ್ತಿದೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 7.9 TVR
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿಗೆ ಗಂಡು ಹುಡುಕಲಾಗುತ್ತಿದೆ. ನಾನು ಶ್ರಾವಣಿ ಅವರನ್ನು ಪ್ರೀತಿ ಮಾಡ್ತಿದೀನಿ ಎನ್ನುವ ವಿಷಯ ಸುಬ್ಬುಗೆ ಅರ್ಥ ಆಗಿದೆ. ಈಗ ಶ್ರಾವಣಿ ಹಾಗೂ ಸುಬ್ಬು ಮದುವೆ ನಡೆಯತ್ತಾ? ಶ್ರಾವಣಿ ಎದುರು ಅವನು ತನ್ನ ಪ್ರೀತಿಯ ವಿಷಯವನ್ನು ಹೇಳಿಕೊಳ್ತಾನಾ ಎಂದು ಕಾದು ನೋಡಬೇಕಿದೆ.
ಕರ್ಣ ಧಾರಾವಾಹಿ 8.3 TVR
ಕರ್ಣ ಧಾರಾವಾಹಿ ಪ್ರಸಾರ ಆದಾಗಿನಿಂದ ನಂ 1 ಸೀರಿಯಲ್ ಆಗಿತ್ತು. ಈ ವಾರ ಮೊದಲ ಬಾರಿಗೆ ಎರಡನೇ ಸ್ಥಾನ ಪಡೆದಿದೆ. ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ನಟನೆಯ ಈ ಸೀರಿಯಲ್‌ಗೆ 8.3 TVR ಸಿಕ್ಕಿದೆ. ಒಟ್ಟಿನಲ್ಲಿ ಕರ್ಣ ಹಾಗೂ ಅಣ್ಣಯ್ಯ ಧಾರಾವಾಹಿಗೆ ಒಂದೇ ಟಿಆರ್‌ಪಿ ಸಿಕ್ಕಿದಂತಾಯ್ತು. ಈ ಧಾರಾವಾಹಿಯಲ್ಲಿ ನಿತ್ಯಾ-ತೇಜಸ್ ಮದುವೆ ತಯಾರಿ ನಡೆಯುತ್ತಿದೆ, ಇನ್ನೊಂದು ಕಡೆ ನಿಧಿ ಬಳಿ ಕರ್ಣನಿಗೆ ಪ್ರೀತಿ ವಿಷಯವನ್ನು ಹೇಳಲು ಆಗುತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

