- Home
- Entertainment
- TV Talk
- ಕನ್ನಡತಿ ಭುವನೇಶ್ವರಿ v/s ಕರ್ಣ ಸೀರಿಯಲ್ ನಿಧಿ: ಕಿರಣ್ ರಾಜ್ಗೆ ಯಾರಿಷ್ಟ ಕೇಳಿದ್ದಕ್ಕೆ ನಟ ಹೇಳಿದ್ದೇನು?
ಕನ್ನಡತಿ ಭುವನೇಶ್ವರಿ v/s ಕರ್ಣ ಸೀರಿಯಲ್ ನಿಧಿ: ಕಿರಣ್ ರಾಜ್ಗೆ ಯಾರಿಷ್ಟ ಕೇಳಿದ್ದಕ್ಕೆ ನಟ ಹೇಳಿದ್ದೇನು?
'ಕರ್ಣ' ಸೀರಿಯಲ್ ಕಿರಣ್ ರಾಜ್ ಮತ್ತು ಭವ್ಯಾ ಗೌಡ ಜೋಡಿ ಜನಪ್ರಿಯವಾಗಿದೆ, ಈ ಹಿಂದೆ 'ಕನ್ನಡತಿ'ಯಲ್ಲಿ ರಂಜಿನಿ ರಾಘವನ್ ಜೊತೆಗಿನ ಕೆಮಿಸ್ಟ್ರಿ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಇಬ್ಬರು ನಾಯಕಿಯರಲ್ಲಿ ಯಾರು ಹೆಚ್ಚು ಇಷ್ಟ ಎಂಬ ಪ್ರಶ್ನೆಗೆ, ಕಿರಣ್ ರಾಜ್ ಭಾವನಾತ್ಮಕವಾಗಿ ಸಂಪರ್ಕದ ಬಗ್ಗೆ ಹೇಳಿದ್ದೇನು?

ಕರ್ಣ ಸೀರಿಯಲ್ ಮುದ್ದಾದ ಜೋಡಿ
ಸದ್ಯ ಕರ್ಣ ಸೀರಿಯಲ್ ಮೂಲಕ ಎಲ್ಲರ ಮನಸ್ಸನ್ನು ಗೆದ್ದು, ಕದ್ದವರ ಕರ್ಣ ಮತ್ತು ನಿಧಿ ಜೋಡಿ. ಕರ್ಣ ಪಾತ್ರಧಾರಿಯಾಗಿ ಕಿರಣ್ ರಾಜ್ ಹಾಗೂ ನಿಧಿಯಾಗಿ ಭವ್ಯಾ ಗೌಡ ಅಭಿನಯಿಸುತ್ತಿದ್ದಾರೆ. ಸೀರಿಯಲ್ನಲ್ಲಿ ಇದೀಗ ಅರ್ಜುನ್ (ಗಗನ್ ಚಿನ್ನಪ್ಪ) ಎಂಟ್ರಿಯಾಗಿದೆ. ಆದರೆ ಕರ್ಣ ಮತ್ತು ನಿಧಿ ಯಾವತ್ತೂ ದೂರ ಆಗಬಾರದು ಎಂದು ಸೀರಿಯಲ್ ಪ್ರೇಮಿಗಳು ಹಂಬಲಿಸುತ್ತಿದ್ದಾರೆ. ಇವರ ಕೆಮೆಸ್ಟ್ರಿಗೆ ಸೀರಿಯಲ್ ವೀಕ್ಷಕರು ಫಿದಾ ಆಗಿದ್ದಾರೆ.
ಕನ್ನಡತಿಯಲ್ಲಿ ಕಿರಣ್ ರಾಜ್
ಅಂದಹಾಗೆ ಕಿರಣ್ ರಾಜ್ ಅವರು ಇದಕ್ಕೂ ಕನ್ನಡತಿ ಸೀರಿಯಲ್ನಲ್ಲಿ ಹರ್ಷ ಪಾತ್ರ ಮಾಡಿದ್ದರು. ಇದರಲ್ಲಿ ನಾಯಕಿಯಾಗಿ ರಂಜಿನಿ ರಾಘವನ್ ಅವರು ಭುವನೇಶ್ವರಿ ಪಾತ್ರ ಮಾಡಿದ್ದರು. ಈ ಸೀರಿಯಲ್ನಲ್ಲಿ ಈ ಜೋಡಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
ಸೀರಿಯಲ್ ಪ್ರೇಮಿಗಳ ಆಸೆ
ಅಷ್ಟಕ್ಕೂ ಒಂದು ಸೀರಿಯಲ್ನಲ್ಲಿ ಅಥವಾ ಒಂದು ರಿಯಾಲಿಟಿ ಷೋನಲ್ಲಿ ಒಂದು ಜೋಡಿಯನ್ನು ವೀಕ್ಷಕರು ಇಷ್ಟಪಟ್ಟರು ಎಂದರೆ, ಅವರಿಬ್ಬರ ಮದುವೆ ರಿಯಲ್ ಲೈಫ್ನಲ್ಲಿ ಆಗಿರಲಿಲ್ಲವೆಂದರೆ, ಅವರನ್ನು ಮದುವೆಯೇ ಮಾಡಿಸಿಬಿಡುತ್ತಾರೆ. ಜೊತೆಗೆ ಈ ಎಐ ಯುಗದಲ್ಲಿ ಮದ್ವೆ ಮಾಡಿಸಿ ಮಕ್ಕಳನ್ನೂ ಮಾಡಿಸಿಬಿಡುತ್ತಾರೆ ಅಭಿಮಾನಿಗಳು.
ಭುವನೇಶ್ವರಿನೋ, ನಿಧಿನೊ?
ಆದರೆ, ನಟರಿಗೆ ಅದು ನಟನೆಯಷ್ಟೇ. ಇಂದು ಒಬ್ಬರ ಜೊತೆ, ನಾಳೆ ಇನ್ನೊಬ್ಬರ ಜೊತೆ. ಆದರೂ ಕೆಲವು ನಟರಿಗೆ ಕೆಲವರ ಜೊತೆ ಆ್ಯಕ್ಟ್ ಮಾಡುವುದು ಕಂಫರ್ಟ್ ಎನ್ನಿಸಿರುತ್ತದೆ. ಇದೀಗ ಅದೇ ಪ್ರಶ್ನೆಯನ್ನು ನಟ ಕಿರಣ್ ರಾಜ್ ಅವರಿಗೆ ಕೇಳಲಾಗಿದೆ. ಕನ್ನಡತಿಯ ಭುವನೇಶ್ವರಿ ಇಷ್ಟನೋ, ಕರ್ಣ ಸೀರಿಯಲ್ ನಿಧಿ ಇಷ್ಟನೋ ಎಂದು araginientertainment ಚಾನೆಲ್ನಲ್ಲಿ ಅವರಿಗೆ ಪ್ರಶ್ನಿಸಲಾಗಿದೆ.
ನಟ ಹೇಳಿದ್ದೇನು?
ಅದಕ್ಕೆ ನಟ ಕಿರಣ್ ರಾಜ್ ಅವರು, ಸೀರಿಯಲ್ನಲ್ಲಿ ತುಂಬಾ ದೀರ್ಘ ಅವಧಿಯವರೆಗೆ ಒಬ್ಬರ ಜೊತೆ ನಟಿಸುವಾಗ ಬಾಂಡಿಂಗ್ ಬೇಳೆಯುತ್ತದೆ. ಆ ಪಾತ್ರದ ಜೊತೆ ಸೈಕಾಲಾಜಿಕಲಿ ಆಗಿಯೂ ನಾವು ಕನೆಕ್ಟ್ ಆಗಿಬಿಡುತ್ತೇವೆ. ಆ ಸೀರಿಯಲ್ ಮುಗಿದು ಇನ್ನೊಂದು ಸೀರಿಯಲ್ ಬಂದಾಗ, ಅಲ್ಲಿರುವ ಪಾತ್ರದ ಜೊತೆಗೂ ಹೀಗೆಯೇ ಆಗುತ್ತದೆ ಎಂದಿದ್ದಾರೆ.
ಸಂಬಂಧ ಫೇಡ್ ಆಗತ್ತೆ
ಕಿರಣ್ ರಾಜ್ ಹೇಳಿದಂತೆ, ಅವರಿಷ್ಟ ಇವರಿಷ್ಟ ಅಲ್ಲ. ಯಾವುದೋ ಒಂದು ಸೀರಿಯಲ್ನಲ್ಲಿ ಪಾತ್ರ ಮಾಡಿ, ಆ ಸೀರಿಯಲ್ ಮುಗಿದಾಗ ಆ ಸೆಂಟಿಮೆಂಟ್, ಕನೆಕ್ಷನ್ ಅಲ್ಲಿಗೇ ಮುಗಿದು ಹೋಗುತ್ತದೆ. ಅದು ಫೇಡ್ ಆಗುತ್ತದೆ. ಹೊಸ ಪಾತ್ರಗಳ ಜೊತೆ ಕನೆಕ್ಷನ್ ಉಂಟಾಗುತ್ತದೆ, ಅದು ಮುಗಿದರೆ ಇನ್ನೊಂದು, ಮತ್ತೊಂದು, ಇನ್ನೊಬ್ಬರು, ಮತ್ತೊಬ್ಬರು ಅಷ್ಟೇ. ಇದರಲ್ಲಿ ಇಷ್ಟ, ಕಷ್ಟ ಬರುವುದಿಲ್ಲ ಎಂದು ಸೂಚ್ಯವಾಗಿ ಜಾಣ್ಮೆಯಿಂದ ಉತ್ತರಿಸಿದ್ದಾರೆ. ಇದು ತಮಗೊಬ್ಬರಿಗೇ ಅಲ್ಲದೇ ಎಲ್ಲರಿಗೂ ಆಗುವುದು ಹೀಗೆಯೇ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

