- Home
- Entertainment
- TV Talk
- Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
ವಿಶ್ವನ ಮನೆಯಿಂದ ಚಿನ್ನುಮರಿ ನಾಪತ್ತೆಯಾಗಿದ್ದಾಳೆ. ಅವಳನ್ನು ಹುಡುಕಲು ಬಂದ ಜಯಂತ್ ವಿಫಲನಾಗುತ್ತಾನೆ. ಇನ್ನೊಂದೆಡೆ, ಜಾಹ್ನವಿಯ ಮನೆಗೆ ಹೋದ ವಿಶ್ವನ ತಾಯಿ, ಫೋಟೋ ನೋಡಿ ಚಿನ್ನುಮರಿಯೇ ಜಾಹ್ನವಿ ಎಂಬ ಸತ್ಯ ತಿಳಿದು ಆಘಾತಕ್ಕೊಳಗಾಗುತ್ತಾಳೆ.

ವಿಶ್ವನ ಮನೆ ತೊರೆದ ಚಿನ್ನುಮರಿ
ಲಕ್ಷ್ಮೀ ನಿವಾಸ ಸೀರಿಯಲ್ (Lakshmi Nivasa Serial)ನಲ್ಲಿ ಜಾಹ್ನವಿ ಈಗ ವಿಶ್ವನ ಮನೆ ಬಿಟ್ಟು ಹೋಗಿದ್ದಾಳೆ. ಅಲ್ಲಿ ಇವಳ ಮೇಲೆ ಸಂದೇಹ ಬಂದಿರುವ ಕಾರಣದಿಂದ ಇನ್ನು ಆ ಮನೆಯಲ್ಲಿ ಇರುವುದು ಸರಿಯಲ್ಲ ಎಂದು ಜಾಹ್ನವಿ ಮನೆ ತೊರೆದಿದ್ದಾಳೆ.
ವೇಷ ಬದಲಿಸಿದ್ದ ಜಯಂತ್
ಜಾಹ್ನವಿ ಅಲ್ಲೇ ಎಲ್ಲೋ ಇರುವುದು ತಿಳಿದಿದ್ದ ಜಯಂತ್, ವೇಷ ಬದಲಿಸಿಕೊಂಡು ಕೆಲಸದವನಾಗಿ ಅವರ ಮನೆಗೆ ಹೋಗಿದ್ದ. ಕೊನೆಗೆ ಅವರ ಮನೆಯ ಒಳಗೆ ಹೋಗುವಲ್ಲಿಯೂ ಯಶಸ್ವಿಯಾಗಿದ್ದ. ಆದರೆ ಅದಾಗಲೇ ಜಾಹ್ನವಿ ಮನೆ ಬಿಟ್ಟಾಗಿತ್ತು.
ಮನೆ ಬಿಟ್ಟ ಜಾನು
ಆದರೆ, ಅಲ್ಲಿ ಇಷ್ಟು ದಿನ ಇದ್ದದ್ದು ಚಿನ್ನುಮರಿನೇ ಎನ್ನುವ ಸತ್ಯ ಆತನಿಗೆ ತಿಳಿದಿದೆ. ಆದರೆ ಅದಾಗಲೇ ಲೇಟ್ ಆಗಿಹೋಗಿದೆ. ಚಿನ್ನುಮರಿ ಮತ್ತೆ ಜಯಂತ್ನಿಂದ ತಪ್ಪಿಸಿಕೊಂಡು ಬಿಟ್ಟಿದ್ದಾಳೆ.
ಜಾಹ್ನವಿ ಫೋಟೋ
ಅದೇ ಇನ್ನೊಂದೆಡೆ, ವಿಶ್ವನ ಅಮ್ಮ, ಜಾಹ್ನವಿ ಮನೆಗೆ ಬಂದಿದ್ದಾಳೆ. ಅವಳು ಹೀಗೆ ಮಾತನಾಡುತ್ತಾ, ಜಾಹ್ನವಿಯ ಅಮ್ಮನ ಬಳಿ ಜಾಹ್ನವಿ ಫೋಟೋ ಕೇಳಿದ್ದಾಳೆ. ಮನೆಯಲ್ಲಿ ಆಕೆಯ ಫೋಟೋ ಇದ್ದರೆ ಪದೇ ಪದೇ ನೆನಪಾಗುತ್ತದೆ ಎನ್ನುವ ಕಾರಣಕ್ಕೆ ಫೋಟೋ ಅನ್ನು ತೆಗೆದು ಇಡಲಾಗಿದೆ ಎಂದು ಅಮ್ಮ ತಿಳಿಸಿದಳು.
ಬೀರುವಿನಲ್ಲಿ ಇದ್ದ ಫೋಟೋ
ಕೊನೆಗೆ ಬೀರುವಿನಲ್ಲಿ ಇದ್ದ ಫೋಟೋ ತೋರಿಸಿದಾಗ ವಿಶ್ವನ ಅಮ್ಮ ಗರ ಬಡಿದಂತಾದಳು. ಇಷ್ಟು ದಿನ ತಮ್ಮ ಮನೆಯಲ್ಲಿ ಇದ್ದುದು ಜಾಹ್ನವಿ ಎನ್ನುವ ಸತ್ಯ ಗೊತ್ತಾಗಿದೆ.
ಏನೂ ಹೇಳದ ಸ್ಥಿತಿ
ಆದರೆ, ಆಕೆ ಏನೂ ಹೇಳದ ಸ್ಥಿತಿ. ಆಕೆ ಸತ್ತೇ ಹೋಗಿದ್ದಾಳೆ ಎಂದು ಲಕ್ಷ್ಮೀ ಎಲ್ಲರೂ ನೋವಿನಿಂದ ಇರುವುದನ್ನು ಆಕೆಗೆ ನೋಡಲು ಆಗುತ್ತಿಲ್ಲ. ಆದರೆ ಇದೀಗ ಜಾಹ್ನವಿ ಬದುಕಿರುವ ವಿಷಯ ತಿಳಿದು ಅವಳಿಗೆ ಏನು, ಎತ್ತ ತಿಳಿಯದಾಗಿದೆ.
ಚಿನ್ನುಮರಿ ನಾಪತ್ತೆ
ಮುಂದೇನಾಗುತ್ತೆ ಎನ್ನುವುದು ನೋಡಬೇಕಿದೆ. ಚಿನ್ನುಮರಿ ಎಲ್ಲಿ ನಾಪತ್ತೆಯಾದಳೋ ಗೊತ್ತಿಲ್ಲ. ಜಯಂತ್ ಕೈಗೆ ಸಿಕ್ತಾಳಾ, ಏನು ಕಥೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

