- Home
- Entertainment
- TV Talk
- Lakshmi Nivasa ಸೈಕೋ ಜಯಂತ್ನ ಕಟ್ಟಿ ಹಾಕಿ ಟಾರ್ಚರ್ ಕೊಡ್ತಿದ್ದಾಳೆ ಈ ಸುಂದರಿ! ಯಾರಿವಳು?
Lakshmi Nivasa ಸೈಕೋ ಜಯಂತ್ನ ಕಟ್ಟಿ ಹಾಕಿ ಟಾರ್ಚರ್ ಕೊಡ್ತಿದ್ದಾಳೆ ಈ ಸುಂದರಿ! ಯಾರಿವಳು?
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಪತ್ನಿ ಜಾಹ್ನವಿ ಬದುಕಿರುವ ಸತ್ಯ ತಿಳಿದ ಜಯಂತ್ ಪ್ರತೀಕಾರಕ್ಕೆ ಸಿದ್ಧನಾಗಿದ್ದಾನೆ. ಆದರೆ, ಅನಿರೀಕ್ಷಿತವಾಗಿ ಕಾಣಿಸಿಕೊಂಡ ಸುಂದರಿಯೊಬ್ಬಳು ಜಯಂತ್‌ನನ್ನು ಕಟ್ಟಿಹಾಕಿ ಟಾರ್ಚರ್ ನೀಡುತ್ತಾಳೆ. ಯಾರೀಕೆ?

ಸತ್ಯ ತಿಳಿದ ಜಯಂತ್
ಲಕ್ಷ್ಮೀ ನಿವಾಸ ಸೀರಿಯಲ್ (Lakshmi Nivasa Serial)ನಲ್ಲಿ ಸದ್ಯ ಜಯಂತ್ಗೆ ಜಾಹ್ನವಿ ಬದುಕಿದ್ದು, ತನ್ನನ್ನು ಆಟ ಆಡಿಸ್ತಿದ್ದಾಳೆ ಎನ್ನುವುದು ತಿಳಿದಿದೆ. ಪತ್ನಿ ಮತ್ತು ಆಕೆಗೆ ಆಶ್ರಯ ಕೊಟ್ಟಿರೋ ವಿಶ್ವನ ಮೇಲೆ ಹಗೆ ತೀರಿಸಿಕೊಳ್ಳಲು ಕಾಯ್ತಿರೋ ಜಯಂತ್, ಪತ್ನಿಯ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿ ಅದರಲ್ಲಿ ವಿಶ್ವನನ್ನು ಮಾತ್ರ ಕರೆದಿದ್ದಾನೆ.
ವಿಶ್ವನಿಗೆ ಸತ್ಯ ಗೊತ್ತಿಲ್ಲ
ಅತ್ತ, ವಿಶ್ವನಿಗಾಗಲೀ, ಜಾಹ್ನವಿಗಾಗಲೀ ಜಯಂತ್ಗೆ ಸತ್ಯ ತಿಳಿದಿರುವ ವಿಷಯ ಗೊತ್ತಿಲ್ಲ. ವಿಶ್ವ ಏನಾದ್ರೂ ಜಯಂತ್ ಮನೆಗೆ ಹೋದರೆ ಆತನ ಕಥೆ ಮುಗಿದಂತೆಯೇ. ಅದಕ್ಕಾಗಿ ಮುಂದೇನಾಗುತ್ತದೆ ಎನ್ನುವ ಆತಂಕದಲ್ಲಿದ್ದಾರೆ ವೀಕ್ಷಕರು.
ಜಯಂತ್‌ನನ್ನು ಕಟ್ಟಿಹಾಕಿದ ಸುಂದರಿ
ಈ ಸೈಕೋ ಜಯಂತ್ನ ಕಾಟ ತಳೆಯಲು ಆಗದೇ ಆತನಿಗೆ ಸರಿಯಾದ ಬುದ್ಧಿ ಕಲಿಸಬೇಕಲ್ಲ ಎಂದು ವೀಕ್ಷಕರು ಅಂದುಕೊಳ್ತಿರುವಾಗಲೇ ಒಬ್ಬಳು ಬ್ಯೂಟಿಯ ಎಂಟ್ರಿಯಾಗಿದೆ. ಜಯಂತ್‌ನನ್ನು ಕಟ್ಟಿಹಾಕಿ ಆಕೆ ಟಾರ್ಚರ್ ಕೊಡುತ್ತಿದ್ದಾಳೆ.
ಜಯಂತ್ಗೆ ಟಾರ್ಚರ್
ಜಾಹ್ನವಿಗೆ ಪ್ರೀತಿಯ ಹೆಸರಿನಲ್ಲಿ ಜಯಂತ್ ಹೇಗೆಲ್ಲಾ ಟಾರ್ಚರ್ ಕೊಟ್ಟನೋ ಅದೇ ರೀತಿಯಲ್ಲಿ, ಈ ಸುಂದರಿ ಕೂಡ ಟಾರ್ಚರ್ ಕೊಡುತ್ತಿದ್ದಾಳೆ. ಚಿನ್ನುಮರಿ ಚಿನ್ನುಮರಿ ಎಂದು ನಿದ್ದೆ ಮಾತ್ರೆ ಕೊಟ್ಟು ಆಕೆಯನ್ನು ಕರೆದುಕೊಂಡು ಹೋಗಿದ್ಯಲ್ಲಾ, ಅವಳಿಗೆ ಹೇಗೆ ಅನ್ನಿಸಿರಬೇಡ ಎಂದೆಲ್ಲಾ ಹೇಳುವ ಮೂಲಕ ಆತನಿಗೆ ತಪ್ಪಿನ ಅರಿವು ಮಾಡಿಸುತ್ತಿದ್ದಾಳೆ.
ಸುಸ್ತಾದ ಜಯಂತ್
ಅವಳು ಯಾರೆಂದು ತಿಳಿಯದೇ ಜಯಂತ್ ಸುಸ್ತಾಗಿ ಹೋಗಿದ್ದಾನೆ. ಅಸಲಿಗೆ ಇದು ಲಕ್ಷ್ಮೀ ನಿವಾಸ ಸೀರಿಯಲ್ ಸ್ಟೋರಿ ಆದರೂ, ಇದು ಸೀರಿಯಲ್ ಭಾಗವಲ್ಲ. ಬದಲಿಗೆ ಮಹಾನಟಿ (Mahanati) ರಿಯಾಲಿಟಿ ಷೋನ ಸೆಮಿಫೈನಲ್ ಸಂಚಿಕೆ.
ಮಹಾನಟಿಯ ಮಾನ್ಯ
ಇದರಲ್ಲಿ ಭಾಗವಹಿಸ್ತಿರೋ ನಟಿಯರು, ವಿಭಿನ್ನ ಸೀರಿಯಲ್ಗಳ ನಟ-ನಟಿಯರ ಜೊತೆಯಲ್ಲಿ ಅದೇ ಸೀರಿಯಲ್ ಕಥೆಯನ್ನೇ ಇಟ್ಟುಕೊಂಡು ನಟಿಸುತ್ತಿದ್ದಾರೆ. ನೋಡುಗರಿಗೆ ಇದು ಸೀರಿಯಲ್ ಭಾಗ ಎನ್ನಿಸುವುದು ಉಂಟು. ಅದೇ ರೀತಿ ಲಕ್ಷ್ಮೀ ನಿವಾಸ ಸೈಕೋ ಜಯಂತ್‌ನನ್ನು ಕಟ್ಟಿ ಹಾಕಿರುವುದು ಮಹಾನಟಿಯ ಮಾನ್ಯ ರಮೇಶ್ (Mahanati Manya Ramesh)
ನೆಟ್ಟಿಗರು ಏನಂದ್ರು?
ಸೈಕೋ ಜಯಂತ್ಗೆ ಸೀರಿಯಲ್ನಲ್ಲಿಯೂ ಇದೇ ರೀತಿ ಆಗಬೇಕು ಎಂದು ಕೆಲವರು ಹೇಳುತ್ತಿದ್ದರೆ,, ಮತ್ತೆ ಕೆಲವರು ಜಾಹ್ನವಿ ಈ ರೀತಿ ಆಟ ಆಡಿಸ್ತಾ ಇರೋದು ತಪ್ಪು ಎನ್ನುತ್ತಿದ್ದಾರೆ. ಮತ್ತೆ ಕೆಲವರು ಜಯಂತ್ ಕೈಗೆ ಜಾಹ್ನವಿ ಸಿಕ್ಕರೆ ತುಂಬಾ ಸಮಸ್ಯೆ ಎನ್ನುತ್ತಿದ್ದರೆ, ಜಯಂತ್ ಪರ ಇರೋರು ಆದಷ್ಟು ಬೇಗ ದಂಪತಿ ಒಂದಾಗಲಿ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

