- Home
- Entertainment
- TV Talk
- ಹೆರಿಗೆಯಾದ್ಮೇಲೆ ಅದೊಂದು ಟಿಪ್ಸ್ ಫಾಲೋ ಮಾಡಿ ಸಣ್ಣಗಾದ ಮನೆದೇವ್ರು ಸೀರಿಯಲ್ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ!
ಹೆರಿಗೆಯಾದ್ಮೇಲೆ ಅದೊಂದು ಟಿಪ್ಸ್ ಫಾಲೋ ಮಾಡಿ ಸಣ್ಣಗಾದ ಮನೆದೇವ್ರು ಸೀರಿಯಲ್ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ!
ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಈಗ ವಿಯಾರಾ ಶರ್ಮ ಎಂಬ ಮುದ್ದಾದ ಮಗುವಿನ ತಾಯಿ ಕೂಡ ಹೌದು. ಸದ್ಯ ವಿದೇಶದಲ್ಲಿರುವ ಅವರು ಮಗುವಿಗೆ ಜನ್ಮ ನೀಡಿದ ಬಳಿಕ ತೂಕ ಇಳಿಸಿಕೊಂಡು, ಫಿಟ್ ಆಗಿದ್ದಾರೆ. ಇದರ ಹಿಂದಿನ ಸೀಕ್ರೇಟ್ ಕೂಡ ಹೇಳಿದ್ದಾರೆ.

ದಪ್ಪ ಆಗೋದು ಸಹಜ
ಪ್ರಗ್ನೆಂಟ್ ಆಗಿ, ಮಗು ಆದಮೇಲೆ ಮಹಿಳೆಯ ದೇಹ ಬದಲಾಗುತ್ತದೆ, ಮಗು ಬೆಳವಣಿಗೆಯಾಗುತ್ತ, ಜವಾಬ್ದಾರಿ ಬಂದಾಗ ತೂಕ ಇಳಿಕೆಯಾಗುತ್ತದೆ. ನಾನು ಮೊದಲೂ ವರ್ಕೌಟ್ ಮಾಡುತ್ತಿದ್ದೆ. ಮಗು ಹುಟ್ಟಿ ಆರು ತಿಂಗಳು ಬಳಿಕ ಡಾಕ್ಟರ್ ಸಲಹೆ ಮೇರೆಗೆ ವರ್ಕೌಟ್ ಮಾಡುತ್ತೇನೆ. ನನ್ನ ತಾಯಿ ಇದ್ದಿದ್ದರಿಂದ ಆರಾಮಾಗಿ ವರ್ಕೌಟ್ ಮಾಡಿಕೊಂಡೆ.
ಮಗಳಿಗೆ ಎದೆಹಾಲು ಕುಡಿಸಿದ್ದೇನೆ
ನಾನು ಅಷ್ಟಾಗಿ ಡಯೆಟ್ ಮಾಡೋದಿಲ್ಲ, ಮಗುವಿನ ಆರೋಗ್ಯಕ್ಕೋಸ್ಕರ ನಾನು ಕೂಡ ಚೆನ್ನಾಗಿ ತಿನ್ನಬೇಕಿತ್ತು. ಮಗುವಿಗೆ ಎರಡು ವರ್ಷ ಆಗುವವರೆಗೂ ನಾನು ಎದೆ ಹಾಲು ಕುಡಿಸಿದ್ದೇನೆ, ಆಗ ಹಸಿವು ಕೂಡ ಆಗುತ್ತಿತ್ತು, ಹಾಗೆಯೇ ತಿನ್ನುತ್ತಿತ್ತು, ಎದೆಹಾಲು ಕುಡಿಸಿದಾಗ ಕ್ಯಾಲರಿ ಬರ್ನ್ ಆಗುತ್ತಿತ್ತು.
ಬಾಣಂತನ ಮುಖ್ಯ
ಬಾಣಂತನ ಮಾಡಿಕೊಳ್ಳಲೇಬೇಕು. ಸೋರೆಕಾಯಿ ಪಲ್ಯ, ಸೊಪ್ಪಿನ ಪಲ್ಯ, ಶುಂಠಿ ಕಷಾಯ, ಕಾಫಿ ಕೂಡ ಕುಡಿದಿದ್ದೇನೆ. ಮಗು ಹುಟ್ಟಿ ಮೂರು ತಿಂಗಳ ಕಾಲ ನೀವು ಎಷ್ಟು ನೀಟ್ ಆಗಿ ಬಾಣಂತನ ಮಾಡಿಕೊಳ್ತೀರೋ ಅಷ್ಟು ಒಳ್ಳೆಯದು, ಆಗ ತೂಕ ಇಳಿಕೆ ಆಗುವುದು.
ಚಿಂತೆ ಮಾಡಬಾರದು
ದಪ್ಪ ಆಗ್ತಿದೀನಿ ಎಂದು ಬೇಸರ ಮಾಡಿಕೊಂಡರೆ, ಮತ್ತೆ ದಪ್ಪ ಆಗುತ್ತೇವೆ. ಆ ಚಿಂತೆಯಿಂದ ಇನ್ನಷ್ಟು ದಪ್ಪ ಆಗ್ತೀವಿ. ನಾವು ಯುನಿವರ್ಸ್‌ಗೆ ಏನು ಕೊಡ್ತೀವೋ, ಯುನಿವರ್ಸ್ ಕೂಡ ನಮಗೆ ಅದನ್ನು ಕೊಡುತ್ತದೆ. ಹೈ ಪ್ರೋಟಿನ್ ಡಯೆಟ್, ವರ್ಕೌಟ್‌ನಿಂದಲೇ ಸಣ್ಣ ಆಗಬಹುದು.
ಡಯೆಟ್ ಹೇಗಿರಯತ್ತದೆ?
ಮೊದಲು ಆಪಲ್ ಸೈಡರ್ ವಿನೆಗಾರ್, ಜೇನುತುಪ್ಪ ಹಾಕಿಕೊಂಡು ಕುಡಿಯುತ್ತಿದ್ದೇನೆ. ಇದರಿಂದ ಏನೇ ತಿಂದರೂ ಬೇಗ ಜೀರ್ಣಕ್ರಿಯೆ ಆಗುತ್ತದೆ. ಗಟ್ ಹೆಲ್ತ್ ಚೆನ್ನಾಗಿ ಇಡಲು ಸಹಾಯ ಆಗುವುದು.
ಕುಟುಂಬದ ಬೆಂಬಲ ಬೇಕು
ನಿಮ್ಮ ಸಂಗಾತಿ ನಿಮಗೆ ಸಮಯ ಕೊಡಬೇಕು, ಬೆಂಬಲ ಕೊಡಬೇಕು. ಇಲ್ಲ ಅಂದ್ರೆ ಗರ್ಭಿಣಿಗೆ ಕಷ್ಟ ಆಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

