- Home
- Entertainment
- TV Talk
- ನಾನು Too hot to handle ಎಂದ ಪ್ರೇಮಕಾವ್ಯ ಧಾರಾವಾಹಿ ನಟಿ ವೈಷ್ಣವಿ ಕೌಂಡಿನ್ಯ Photos; ಗುರುತು ಸಿಗ್ತಾ?
ನಾನು Too hot to handle ಎಂದ ಪ್ರೇಮಕಾವ್ಯ ಧಾರಾವಾಹಿ ನಟಿ ವೈಷ್ಣವಿ ಕೌಂಡಿನ್ಯ Photos; ಗುರುತು ಸಿಗ್ತಾ?
Actress Vaishnavi Koundinya Photos: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪ್ರೇಮಕಾವ್ಯ ಧಾರಾವಾಹಿಯಲ್ಲಿ ಕಾವ್ಯ ಪಾತ್ರದಲ್ಲಿ ವೈಷ್ಣವಿ ಕೌಂಡಿನ್ಯ ಅವರು ನಟಿಸುತ್ತಿದ್ದಾರೆ. ಕೆಲ ಸಮಯಗಳ ಕಾಲ ಅವರು ಬೇರೆ ಭಾಷೆಯಲ್ಲಿ ನಟಿಸುತ್ತಿದ್ದು, ಈಗ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಫೋಟೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ
ವೈಷ್ಣವಿ ಕೌಂಡಿನ್ಯ ಅವರು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದು, ‘Too Hot to Handle’ ಎಂದು ಅವರೇ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಗುತ್ತಿದೆ. ಕೆಲವರು ಸೂಪರ್ ಎಂದೆಲ್ಲ ಹೇಳುತ್ತಿದ್ದಾರೆ.
ಸೀರಿಯಲ್‌ನಲ್ಲಿ ಸೀರೆ
ಅಂದಹಾಗೆ ಧಾರಾವಾಹಿಯಲ್ಲಿ ಕಾವ್ಯಾಗೆ ಓದುವ, ಸಾಧನೆ ಮಾಡುವ ಹುಚ್ಚು. ನಿತ್ಯವೂ ಸೀರೆ ಧರಿಸುವ ಕಾವ್ಯ, ಇಲ್ಲಿ ವೈಷ್ಣವಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
‘ಮಿಥುನರಾಶಿ’ ನಟಿ
ಅಂದಹಾಗೆ ‘ಮಿಥುನರಾಶಿ’ ಧಾರಾವಾಹಿಯಲ್ಲಿ ವೈಷ್ಣವಿ ಅವರು ರಾಶಿ ಪಾತ್ರ ನಿಭಾಯಿಸಿದ್ದರು. ಆಟೋ ಓಡಿಸುವ ಪಾತ್ರ ಇದಾಗಿತ್ತು. ಅಕ್ಕನಿಗೋಸ್ಕರ ಎಲ್ಲ ತ್ಯಾಗ ಮಾಡುವ ರಾಶಿ, ಆಮೇಲೆ ಅನಿರೀಕ್ಷಿತವಾಗಿ ಉದ್ಯಮಿಯನ್ನು ಮದುವೆ ಆಗುತ್ತಾಳೆ. ಹೀಗೆ ಕಥೆ ಸಾಗಿತ್ತು.
ಬಿಗ್ ಬಾಸ್ ಮಿನಿ ಸೀಸನ್
ವರ್ಷದ ಹಿಂದೆ ವೈಷ್ಣವಿ ಅವರು ಬೆಂಗಳೂರಿನಲ್ಲಿ ಸ್ವಂತ ಮನೆ ಕೂಡ ಹೊಂದಿದ್ದರು. ಅಷ್ಟೇ ಅಲ್ಲದೆ ತಾಯಿ ಪ್ರೀತಿಯಲ್ಲಿ ಬೆಳೆದಿರುವ ವೈಷ್ಣವಿ ಬಿಗ್ ಬಾಸ್ ಮಿನಿ ಸೀಸನ್‌ಗೂ ಕೂಡ ಕಾಲಿಟ್ಟಿದ್ದರು.
ಪ್ರಾಜೆಕ್ಟ್ ಮಾಡುವ ಆಸೆ
ವೈಷ್ಣವಿ ಕೌಂಡಿನ್ಯ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಜೆಕ್ಟ್ ಮಾಡುವ ಆಸೆಯನ್ನು ಹೊಂದಿದ್ದಾರೆ, ಅಷ್ಟೇ ಅಲ್ಲದೆ ವಿಭಿನ್ನವಾದ ಪಾತ್ರಗಳನ್ನು ಮಾಡುವ ಆಸೆಯನ್ನು ಕೂಡ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

