ಏಕಾಏಕಿ ಸಾಲು, ಸಾಲು ಕನ್ನಡ ಧಾರಾವಾಹಿಗಳು ಅಂತ್ಯ ಆಗಲು ನಿಜವಾದ ಕಾರಣವೇನು?
Kannada Serials: ಬ್ರಹ್ಮಗಂಟು, ಶ್ರಾವಣಿ ಸುಬ್ರಹ್ಮಣ್ಯ, ಚಿಕ್ಕೆಜಮಾನಿ, ಪುಟ್ಟಕ್ಕನ ಮಕ್ಕಳು ಧಾರಾವಾಹಿಗಳು ಅಂತ್ಯ ಆಗುತ್ತಿವೆ ಎನ್ನಲಾಗಿದೆ. ಇದರ ಜೊತೆಗೆ ಕೆಲ ಸೀರಿಯಲ್ಗಳು ಕ್ಲೈಮ್ಯಾಕ್ಸ್ ಎಪಿಸೋಡ್ ಥರ ಪ್ರಸಾರ ಆಗುತ್ತವೆ. ಹಾಗಾದರೆ ಇದಕ್ಕೆಲ್ಲ ಕಾರಣ ಏನು?

ಟಿಆರ್ಪಿ ಕಡಿಮೆ
ಕೆಲ ಧಾರಾವಾಹಿಗಳು ಟಿಆರ್ಪಿ ಕಡಿಮೆ ಇರುತ್ತವೆ. ಹೀಗಾಗಿ ಧಾರಾವಾಹಿಗಳನ್ನು ಅಂತ್ಯ ಮಾಡುವುದುಂಟು. ಒಂದು ವಾಹಿನಿಯಲ್ಲಿ ಟಾಪ್ 10 ಸೀರಿಯಲ್ಗಳಲ್ಲಿ ಕೊನೆಯ ಸ್ಥಾನಗಳನ್ನು ಹೊಂದಿರುವ ಸೀರಿಯಲ್ಗಳನ್ನು ಅಂತ್ಯ ಮಾಡುತ್ತಾರೆ. ಅಷ್ಟೇ ಅಲ್ಲದೆ ಬೇರೆ ವಾಹಿನಿಗಳ ಜೊತೆ ಲೆಕ್ಕಾಚಾರ ಹಾಕಿ, ಸ್ಲಾಟ್ ಲೀಡರ್ ಯಾರು ಎನ್ನೋದನ್ನು ಕೂಡ ನೋಡಲಾಗುತ್ತದೆ.
ಕಲಾವಿದರ ಸಮಸ್ಯೆ
ಸೀರಿಯಲ್ನಲ್ಲಿ ನಟಿಸುವ ಲೀಡ್ ಕಲಾವಿದರು ವೈಯಕ್ತಿಕ ಕಾರಣಕ್ಕೆ ಅಥವಾ ಸಿನಿಮಾ ಮಾಡೋದಕ್ಕೂ ಅಥವಾ ಬೇರೆ ಸೀರಿಯಲ್ನಲ್ಲಿ ನಟಿಸಬೇಕು, ಇನ್ಯಾವುದೋ ಒಳ್ಳೆಯ ಅವಕಾಶ ಸಿಗುತ್ತದೆ ಎಂದು ಅವರು ಈ ಸೀರಿಯಲ್ನಿಂದ ಹೊರನಡೆಯಲು ಯೋಚಿಸುತ್ತಾರೆ. ಬೇರೆ ಕಲಾವಿದರನ್ನು ಹಾಕಿಕೊಂಡು ಟಿಆರ್ಪಿ ಕಡಿಮೆ ಆಗುತ್ತದೆ ಎಂದು ಅಂತ್ಯ ಮಾಡೋದುಂಟು.
ಕಥೆ ಮುಕ್ತಾಯ
ಕೆಲವೊಮ್ಮೆ ಸುಖಾ ಸುಮ್ಮನೆ ಧಾರಾವಾಹಿ ಕಥೆಗಳನ್ನು ಎಳೆಯಬೇಕಾಗಿ ಬರುವುದು. ಇದು ವೀಕ್ಷಕರಿಗೂ ಬೇಸರ, ಸೀರಿಯಲ್ ತಂಡದವರಿಗೂ ಬೇಸರ. ಹೀಗಾಗಿ ಸೀರಿಯಲ್ ಮುಗಿಸ್ತಾರೆ.
ಪ್ರೊಡಕ್ಷನ್ ಸಮಸ್ಯೆ
ಕೆಲವೊಮ್ಮೆ ಧಾರಾವಾಹಿ ಚೆನ್ನಾಗಿ ಬರಬೇಕು ಎಂದು ಜಾಸ್ತಿ ಬಂಡವಾಳ ಹಾಕಲಾಗುವುದು, ಪ್ರೊಡಕ್ಷನ್ ಕಾಸ್ಟ್ ಹೆಚ್ಚಿರುತ್ತದೆ. ಆದರೆ ಟಿಆರ್ಪಿ ಬಂದರೂ ಕೂಡ ಲಾಭ ಆಗಿರೋದಿಲ್ಲ. ಹೀಗಾಗಿ ಕೂಡ ಸೀರಿಯಲ್ ಎಂಡ್ ಆಗುವುದು. ಇನ್ನೂ ಕೆಲ ಕಾರಣಗಳು ಕೂಡ ಇರುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

