ಮನೆಗೆ ದುರದೃಷ್ಟಕರ ಸಸ್ಯಗಳು: ಇವುಗಳಿದ್ರೆ ಬಡತನ, ಅಶುಭ ಉಂಟಾಗುತ್ತೆ
ವಾಸ್ತುಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳನ್ನು ಮನೆಯಲ್ಲಿಡುವುದು ಅಶುಭವೆಂದು ಪರಿಗಣಿಸಲಾಗಿದೆ. ನಾಲ್ಕು ಬಗೆಯ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿ, ಕಲಹ ಮತ್ತು ಬಡತನವನ್ನು ಉಂಟುಮಾಡಬಹುದು ಎಂದು ಈ ಲೇಖನ ವಿವರಿಸುತ್ತದೆ.

ವಾಸ್ತುಶಾಸ್ತ್ರ
ಇಂದು ಮನೆಯಲ್ಲಿ ಅಲಂಕಾರಿಕ ಸಸ್ಯಗಳನ್ನು ಎಲ್ಲರೂ ನಡೆಸುತ್ತಾರೆ. ಯಾವ ಸಸ್ಯಗಳನ್ನು ಮನೆಯಲ್ಲಿರಿಸಬೇಕು ಎಂಬುದರ ಬಗ್ಗೆ ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತುಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಸಸ್ಯಗಳು ಮನೆಯಲ್ಲಿದ್ರೆ ಬಡತನವನ್ನುಂಟು ಮಾಡುತ್ತವೆ. ಆ ಸಸ್ಯಗಳು ಯಾವವು ಎಂದು ನೋಡೋಣ ಬನ್ನಿ.
1.ಹುಣಸೆ ಗಿಡ
ಎಂದಿಗೂ ಮನೆಯಲ್ಲಿ ಹುಣಸೆ ಗಿಡಗಳನ್ನುಇರಿಸಬಾರದು. ಮನೆ ಕಟ್ಟಲು ನಿವೇಶನ ಖರೀದಿಸುವಾಗ ಅಲ್ಲಿ ದೊಡ್ಡದಾದ ಹುಣಸೆ ಮರಗಳಿದ್ರೆ ಅದನ್ನು ಖರೀದಿಸಬಾರದು. ಮನೆಯ ಪರಿಸರದಲ್ಲಿಯೂ ಹುಣಸೆ ಗಿಡಗಳನ್ನು ನೆಡಬಾರದು. ಉಡುಗೊರೆಯಾಗಿಯೂ ಹುಣಸೆ ಸಸಿಗಳನ್ನು ನೀಡಬಾರದು.
2.ವಾಚೆಲಿಯಾ ನಿಲೋಟಿಕಾ
ಈ ಸಸ್ಯವನನ್ನು ಅಕೇಶಿಯಾ ಅಂತಾನೂ ಕರೆಯಲಾಗುತ್ತದೆ. ಈ ಸಸ್ಯ ಒಳಾಂಗಣಕ್ಕೆ ಯಾವುದೇ ಕಾರಣಕ್ಕೂ ಸೂಕ್ತವಲ್ಲ. ಮನೆಯಲ್ಲಿ ಅಕೇಶಿಯಯಾ ಇದ್ರೆ ಕುಟುಂಬ ಸದಸ್ಯರ ನಡುವೆ ಮನಸ್ತಾಪ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾದ-ವಿವಾದಗಳಿಂದ ಮನೆಯಲ್ಲಿದ್ದವರು ಮಾನಸಿಕ ಕಾಯಿಲೆಗಳಿಂದ ತುತ್ತಾಗುವ ಸಾಧ್ಯತೆಗಳಿರುತ್ತವೆ.
3.ಹೆನ್ನಾ
ಈ ಹೆನ್ನಾ ಸಸಿಗಳಲ್ಲಿ ದುಷ್ಟಶಕ್ತಿ ವಾಸವಾಗಿರುತ್ತವೆ ಎಂದು ನಂಬಲಾಗಿದೆ. ಮನೆಯ ಸುತ್ತ ಎಲ್ಲೇ ಹೆನ್ನಾ ಸಸ್ಯಗಳಿದ್ದರೆ ಇಂದೇ ತೆಗೆದು ಹಾಕಿ. ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಹೆನ್ನಾ ಸಸಿಗಳಿಂದ ಬಡತನ ಉಂಟಾಗುತ್ತದ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: 4 ರಾಶಿಯ ಹೆಣ್ಮಕ್ಕಳೇ ನಿಜವಾದ ಸಿಂಹಿಣಿಯರು; ಇವರ ಕೈಗೆ ತಗ್ಲಾಕೊಂಡ್ರೆ ಏಕ್ ಮಾರ್ ದೋ ತುಕಡಾ ಅಷ್ಟೇ!
4.ಒಣಗಿರುವ ಸಸ್ಯಗಳು
ವಾಸ್ತು ಪ್ರಕಾರ, ಮನೆಯಲ್ಲಿ ಒಣಗಿರುವ ಪ್ಲಾಂಟ್‌ಗಳನ್ನು ಇರಿಸಬಾರದು. ಇಂತಹ ಸಸ್ಯಗಳನ್ನ ಕೂಡಲೇ ತೆಗೆದು ಹಾಕಬೇಕು. ಈ ಸಸ್ಯಗಳು ಮನೆಯೊಳಗೆ ಸಕಾರಾತ್ಮಕ ಶಕ್ತಿ ಬರೋದನ್ನು ನಿರ್ಬಂಧಿಸುತ್ತವೆ. ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಕಳುಹಿಸಿ ಆರ್ಥಿಕವಾಗಿ ನಿಮ್ಮನ್ನು ಕುಸಿಯುವಂತೆ ಮಾಡುತ್ತವೆ.
ಇದನ್ನೂ ಓದಿ: ಬಾಗಿಲನ ಮೇಲೆ ಒಂದು ವಸ್ತು ಇರಿಸಿದ್ರೆ ಲಕ್ಷ್ಮೀದೇವಿಯ ಆಗಮನ ಆಗುತ್ತೆ!

