ಬಾಗಿಲನ ಮೇಲೆ ಒಂದು ವಸ್ತು ಇರಿಸಿದ್ರೆ ಲಕ್ಷ್ಮೀದೇವಿಯ ಆಗಮನ ಆಗುತ್ತೆ!
ಲಕ್ಷ್ಮೀದೇವಿಯ ಆಗಮನ: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲ ಮೇಲೆ ಒಂದು ವಸ್ತು ಹಾಕುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಲಕ್ಷ್ಮೀ ಆಗಮನವಾಗುತ್ತದೆ. ಇದು ಆರ್ಥಿಕ ಪರಿಸ್ಥಿತಿ ಸುಧಾರಿಸಿ, ದುಃಖ ಮತ್ತು ಬಡತನ ದೂರವಾಗಲು ಸಹಾಯ ಮಾಡುತ್ತದೆ.

ವಾಸ್ತು ಶಾಸ್ತ್ರ
ವಾಸ್ತು ಶಾಸ್ತ್ರದ ಪ್ರಕಾರ, ನಕಾರಾತ್ಮಕ ಶಕ್ತಿಗಳು ಮನೆಯ ಮುಖ್ಯದ್ವಾರದ ಮೂಲಕ ಪ್ರವೇಶಿಸುತ್ತವೆ. ಹಾಗಾಗಿ ನಕಾರಾತ್ಮಕ ಶಕ್ತಿಯ ನಿಯಂತ್ರಣಕ್ಕೆ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಬಾಗಿಲಿನ ಒಂದು ವಸ್ತು ಇರಿಸೋದನ್ನು ಶುಭಕರವೆಂದು ಪರಿಗಣಿಸಲಾಗುತ್ತದೆ.
ಕುದುರೆ ಲಾಳ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲನ ಮೇಲ ಕುದುರೆ ಲಾಳವನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಕುದುರೆ ಲಾಳ ಇರಿಸೋದರಿಂದ ನಕಾರಾತ್ಮಕ ಶಕ್ತಿಗಳು ದೂರವಿರುತ್ತವೆ. ಇಷ್ಟು ಮಾತ್ರವಲ್ಲ ಕುದುರೆ ಲಾಳದಿಂದ ಲಕ್ಷ್ಮೀ ದೇವಿಯ ಆಗಮನ ಆಗುತ್ತದೆ.
ಲಕ್ಷ್ಮೀ ದೇವಿ ಕೃಪೆ
ಬಾಗಿಲ ಮೇಲೆ ಕುದುರೆ ಲಾಳ ಹಾಕಿಸೋದರಿಂದ ಆ ಮನೆಯಲ್ಲಿ ವಾಸಿಸುವ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಲಕ್ಷ್ಮೀ ದೇವಿ ಕೃಪೆಯಿಂದ ಮನೆಯ ಜನರ ನಡುವಿನ ದುಃಖ, ಮನಸ್ತಾಪ ಮತ್ತು ಬಡತನ ದೂರವಾಗುತ್ತದೆ. ಶನಿವಾರ ಅಥವಾ ಅಮವಾಸ್ಯೆಯಂದು ಬಾಗಿಲ ಮೇಲೆ ಕಬ್ಬಿಣದ ಲಾಳವನ್ನು ಇರಿಸೋದನ್ನು ಶುಭ-ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಸೌಂದರ್ಯ, ಸಮೃದ್ಧಿಯೊಂದಿಗೆ ಐಷಾರಾಮಿ ಜೀವನ ನಡೆಸುವ 4 ರಾಶಿಚಕ್ರಗಳು
ಸಕಾರಾತ್ಮಕ ಶಕ್ತಿ
ಬಾಗಿಲ ಮೇಲೆ ಹಾಕಲಾಗುವ ಕುದುರೆ ಲಾಳವು ನಿಮ್ಮ ಮನೆಯನ್ನು ದುಷ್ಟ ಕಣ್ಣಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಮನೆಯಲ್ಲಿಯೂ ಕಬ್ಬಿಣ ಲೋಹದ ಕುದುರೆ ಲಾಳ ಇರಿಸಿಕೊಳ್ಳೋದರಿಂದ ಸಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯ ಮುಖ್ಯ ದ್ವಾರದ ಮೇಲೆ ಕುದುರೆ ಲಾಳವನ್ನು ಇಡುವಾಗ, ಅದರ ಎರಡೂ ತುದಿಗಳು ಮೇಲ್ಮುಖವಾಗಿರಬೇಕು. ಕುದುರೆ ಲಾಳವು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ.
ಇದನ್ನೂ ಓದಿ: ತಪ್ಪು ಮಾಡಿದ್ರೆ 4 ರಾಶಿಯವರು ಸುಮ್ನಿರಲ್ಲ, ಪಾತಾಳದಲ್ಲಿ ಅಡಗಿದ್ರೂ ನಿಮ್ಮನ್ನ ಇವರು ಬಿಡಲ್ಲ

