DIY storage bags: ಬಟ್ಟೆ ಇಡಲು ಜಾಗ ಸಾಕಾಗದಿದ್ರೆ ಖಾಲಿ ಅಕ್ಕಿ ಚೀಲವನ್ನ ಹೀಗೆ ಬಳಸಿ
DIY storage bags: ಪ್ರತಿ ತಿಂಗಳು ನಾವು ಅಕ್ಕಿ ತರುತ್ತೇವೆ. ಹಾಗಾಗಿ ಪ್ರತಿಯೊಬ್ಬರ ಮನೇಲೂ ಖಾಲಿ ಅಕ್ಕಿ ಚೀಲಗಳು ಇದ್ದೇ ಇರುತ್ತವೆ. ಖಾಲಿಯಾದ ಮೇಲೆ ಅದನ್ನು ಬಿಸಾಡುತ್ತೇವೆ. ಆದರೆ ಸ್ವಲ್ಪ ಯೋಚಿಸಿದ್ರೆ ಈ ಚೀಲದಿಂದ ಸುಂದರವಾದ ಬ್ಯಾಗ್ ರೆಡಿ ಮಾಡಬಹುದು. ಅದು ಹೇಗೆ ಅಂತೀರಾ? ಇಲ್ಲಿ ನೋಡಿ.

ಫ್ಯಾಬ್ರಿಕ್ ಸ್ಟೋರೇಜ್ ಬ್ಯಾಗ್ ರೆಡಿ
ಮನೆಯಲ್ಲಿ ರಾಶಿ ಬೀಳುವ ಹಳೆಯ ಅಕ್ಕಿ ಚೀಲಗಳು ಸಾಮಾನ್ಯವಾಗಿ ಕಸದ ಬುಟ್ಟಿ ಸೇರುತ್ತವೆ. ಆದರೆ, ಅವನ್ನೇ ನಮಗೆ ತುಂಬಾ ಉಪಯುಕ್ತವಾದ ವಸ್ತುಗಳನ್ನಾಗಿ ಬದಲಾಯಿಸಬಹುದು. ಸ್ವಲ್ಪ ಯೋಚನೆ ಮತ್ತು ಸಮಯ ಕೊಟ್ಟರೆ, ಈ ಅಕ್ಕಿ ಚೀಲಗಳಿಂದ ಸುಂದರವಾದ ಫ್ಯಾಬ್ರಿಕ್ ಸ್ಟೋರೇಜ್ ಬ್ಯಾಗ್‌ಗಳನ್ನು ತಯಾರಿಸಬಹುದು. ಈ ವಿಡಿಯೋದಲ್ಲಿ ಅವರು ಇದನ್ನೇ ಸುಲಭವಾಗಿ ತೋರಿಸಿದ್ದಾರೆ.
ಬ್ಯಾಗ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಈ ಸ್ಟೋರೇಜ್ ಬ್ಯಾಗ್ ಮಾಡಲು ಹೆಚ್ಚು ಖರ್ಚು ಮಾಡಬೇಕಿಲ್ಲ. ಮನೆಯಲ್ಲಿರುವ ವಸ್ತುಗಳೇ ಸಾಕು.
* 16x22 ಇಂಚು ಅಳತೆಯ ಒಂದು ಬಟ್ಟೆ.
* ಅದೇ ಅಳತೆಯಲ್ಲಿ ಕತ್ತರಿಸಿದ ಅಕ್ಕಿ ಚೀಲದ ತುಂಡು.
* ಒಳಭಾಗಕ್ಕೆ ಹಾಕಲು ಲೈನಿಂಗ್ ಬಟ್ಟೆ.
* ಕತ್ತರಿ, ಸೂಜಿ-ದಾರ ಅಥವಾ ಹೊಲಿಗೆ ಯಂತ್ರ (ಎರಡರಲ್ಲಿ ಒಂದು)
ಈ ಮೂರು ಲೇಯರ್‌ಗಳನ್ನು ಸೇರಿಸಿ ಹೊಲಿದರೆ ಬ್ಯಾಗ್ ಗಟ್ಟಿಯಾಗಿರುತ್ತದೆ.
ಹೊಲಿಗೆ ಪ್ರಕ್ರಿಯೆ ಶುರು ಮಾಡುವುದು ಹೇಗೆ?
ಮೊದಲು, ಅಕ್ಕಿ ಚೀಲದ ತುಂಡನ್ನು ಮುಖ್ಯ ಬಟ್ಟೆಯ ಮೇಲೆ ಸರಿಯಾಗಿ ಇಟ್ಟು ಸುತ್ತಲೂ ಹೊಲಿಯಿರಿ. ನಂತರ, ಒಳಭಾಗದಲ್ಲಿ ಲೈನಿಂಗ್ ಬಟ್ಟೆಯನ್ನು ಜೋಡಿಸಿ. ಬ್ಯಾಗ್‌ಗೆ ಸರಿಯಾದ ಆಕಾರ ಬರಲು, ಕೆಳಭಾಗದಲ್ಲಿ 4.5 ಇಂಚು ಉದ್ದ ಮತ್ತು 4.5 ಇಂಚು ಅಗಲದ ಬಾಕ್ಸ್ ಆಕಾರದಲ್ಲಿ ಗುರುತು ಮಾಡಿ ಕತ್ತರಿಸಿ. ಇದೇ ರೀತಿ ಎರಡೂ ಬದಿ ಮಾಡಿದರೆ ಬ್ಯಾಗ್‌ನ ಆಕಾರ ಚೆನ್ನಾಗಿ ಬರುತ್ತದೆ.
ಮೂಲೆಗಳು ಮತ್ತು ಹ್ಯಾಂಡಲ್‌ಗಳನ್ನು ಜೋಡಿಸುವ ವಿಧಾನ
ಕೆಳಭಾಗದಲ್ಲಿ ಕತ್ತರಿಸಿದ ನಂತರ, ಮೂಲೆಗಳನ್ನು ಒಂದಕ್ಕೊಂದು ಸೇರಿಸಿ ಹೊಲಿಯಿರಿ. ಹೀಗೆ ಮಾಡಿದರೆ ಬ್ಯಾಗ್ ನೇರವಾಗಿ ನಿಲ್ಲುತ್ತದೆ. ನಂತರ ವಿಡಿಯೋದಲ್ಲಿ ತೋರಿಸಿರುವಂತೆ ಬ್ಯಾಗ್ ಹ್ಯಾಂಡಲ್‌ಗಳನ್ನು ಎರಡೂ ಬದಿಗಳಲ್ಲಿ ಗಟ್ಟಿಯಾಗಿ ಹೊಲಿಯಿರಿ. ಇವು ಬ್ಯಾಗನ್ನು ಸುಲಭವಾಗಿ ಹಿಡಿಯಲು ಸಹಾಯ ಮಾಡುತ್ತವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಹ್ಯಾಂಡಲ್‌ಗಳ ಉದ್ದವನ್ನು ಇಟ್ಟುಕೊಳ್ಳಬಹುದು.
ಬಳಕೆ ಮತ್ತು ಪ್ರಯೋಜನಗಳು
ಕೊನೆಯದಾಗಿ, ಬ್ಯಾಗನ್ನು ಉಲ್ಟಾ ತಿರುಗಿಸಿದರೆ, ನೀಟ್ ಫಿನಿಶಿಂಗ್ ಇರುವ ಸ್ಟೋರೇಜ್ ಬ್ಯಾಗ್ ಸಿದ್ಧವಾಗುತ್ತದೆ. ಇದರಲ್ಲಿ ಹಳೆಯ ಬಟ್ಟೆಗಳು, ಸೀರೆಗಳು, ಮಕ್ಕಳ ಬಟ್ಟೆಗಳನ್ನು ಜೋಡಿಸಿಡಬಹುದು. ಕಸ ಎಂದು ಭಾವಿಸುವ ಅಕ್ಕಿ ಚೀಲಗಳು ಹೀಗೆ ಸುಂದರ ಹಾಗೂ ಉಪಯುಕ್ತ ವಸ್ತುಗಳಾಗಿ ಬದಲಾಗುವುದರಿಂದ ಹಣವೂ ಉಳಿತಾಯವಾಗುತ್ತದೆ. ಪರಿಸರಕ್ಕೂ ಒಳ್ಳೆಯದು. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ಐಡಿಯಾ ಎಲ್ಲರಿಗೂ ಉಪಯುಕ್ತವಾಗಿದೆ. ಇಂತಹ ಬ್ಯಾಗ್‌ಗಳ ತಯಾರಿಕೆಗೆ ಸಂಬಂಧಿಸಿದಂತೆ ಯೂಟ್ಯೂಬ್‌ನಲ್ಲಿ ಅನೇಕ ವಿಡಿಯೋಗಳಿವೆ. ಅಂತಹ ಒಂದು ವಿಡಿಯೋವನ್ನು ಇಲ್ಲಿ ನೋಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
