- Home
- Life
- Women
- ಈ ಒಂದು ಈಸಿ ಟ್ರಿಕ್ಸ್‌ನಿಂದ ಚಿನ್ನ, ಬೆಳ್ಳಿ ಆಭರಣಗಳನ್ನ ಮನೆಯಲ್ಲೇ ಪಾಲಿಶ್ ಮಾಡ್ಬೋದು, ಫಳ ಫಳ ಹೊಳೆಯುತ್ತೆ
ಈ ಒಂದು ಈಸಿ ಟ್ರಿಕ್ಸ್‌ನಿಂದ ಚಿನ್ನ, ಬೆಳ್ಳಿ ಆಭರಣಗಳನ್ನ ಮನೆಯಲ್ಲೇ ಪಾಲಿಶ್ ಮಾಡ್ಬೋದು, ಫಳ ಫಳ ಹೊಳೆಯುತ್ತೆ
Jewellery cleaning hacks: ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪಾಲಿಶ್ ಮಾಡಿಸುವುದು ಸ್ವಲ್ಪ ದುಬಾರಿ ಕೆಲಸ. ಆದ್ದರಿಂದ ನೀವು ನಿಮ್ಮ ಆಭರಣಗಳನ್ನು ಮನೆಯಲ್ಲಿಯೇ ಪಾಲಿಶ್ ಮಾಡಬಹುದು. ಇಲ್ಲಿ ಕೆಲವು ಸರಳ ಸಲಹೆಗಳಿವೆ. ಅವು ಯಾವುವು ಎಂದು ನೋಡೋಣ.

ಮನೆಯಲ್ಲೇ ಮಾಡಿ
ನವೆಂಬರ್ ಆರಂಭದಿಂದಲೇ ಮದುವೆ ಸೀಸನ್ ಆರಂಭವಾಗಿದೆ. ಈ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ತಮ್ಮ ಸೀರೆ, ಆಭರಣ ಮತ್ತು ಮೇಕಪ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅಷ್ಟೇ ಅಲ್ಲ, ಮದುವೆಯ ಸಿದ್ಧತೆಗಳನ್ನು ಕೆಲವು ತಿಂಗಳು ಮುಂಚಿತವಾಗಿಯೇ ಪ್ರಾರಂಭಿಸಲಾಗುತ್ತೆ. ಅನೇಕ ಮಹಿಳೆಯರು ಮದುವೆ ಸಮಾರಂಭದಲ್ಲಿ ಸುಂದರವಾಗಿ ಕಾಣಲು ಉತ್ಸುಕರಾಗಿರುತ್ತಾರೆ. ಹೊಸ ಬಟ್ಟೆ ಮತ್ತು ಹೊಸ ಆಭರಣಗಳನ್ನು ಖರೀದಿಸಲು ಆಸಕ್ತಿ ಹೊಂದಿರುತ್ತಾರೆ. ಆದರೆ ಪ್ರಸ್ತುತ ಚಿನ್ನದ ಬೆಲೆಯಲ್ಲಿನ ಏರಿಕೆಯಿಂದಾಗಿ ಹೊಸ ಆಭರಣಗಳನ್ನು ಖರೀದಿಸುವುದು ಕಷ್ಟಕರವಾಗಿದೆ. ಅದಕ್ಕಾಗಿಯೇ ಹೆಚ್ಚಿನ ಜನರು ತಮ್ಮ ಹಳೆಯ ಆಭರಣಗಳನ್ನು ಪಾಲಿಶ್ ಮಾಡುತ್ತಾರೆ. ನಿಮ್ಮ ಹಳೆಯ ಆಭರಣಗಳನ್ನೂ ಮನೆಯಲ್ಲಿಯೇ ಹೊಳೆಯುವಂತೆ ಮಾಡಲು ನಿಮಗಾಗಿ ಕೆಲವು ಅದ್ಭುತ ಸಲಹೆಗಳಿವೆ. ಅವು ಯಾವುವು ಎಂದು ಇಲ್ಲಿ ನೋಡೋಣ..
ಸರಳ ಸಲಹೆ
ಸ್ವಲ್ಪ ಸಮಯದ ನಂತರ ಯಾವುದೇ ಚಿನ್ನ ಮತ್ತು ಬೆಳ್ಳಿ ಆಭರಣಗಳು ತಮ್ಮ ಮೂಲ ಹೊಳಪನ್ನು ಕಳೆದುಕೊಳ್ಳುತ್ತವೆ. ಅವು ಮಂದವಾಗುತ್ತವೆ. ಅನೇಕ ಜನರು ಅವುಗಳನ್ನು ಸ್ವಚ್ಛಗೊಳಿಸಲು ಆಭರಣದ ಅಂಗಡಿಗಳಿಗೆ ಹೋಗುತ್ತಾರೆ. ಆದರೆ ಅಲ್ಲಿಗೆ ಹೋದರೆ ಸುಮ್ಮನೆ ದುಬಾರಿ. ಆದ್ದರಿಂದ ನೀವು ಸುಲಭವಾದ, ಅಗ್ಗದ ಪರಿಹಾರವನ್ನು ಹುಡುಕುತ್ತಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ನಿಮ್ಮ ಹಳೆಯ ಆಭರಣಗಳನ್ನು ಹೊಸದರಂತೆ ಹೊಳೆಯುವಂತೆ ಮಾಡಲು ಸಹಾಯ ಮಾಡುವ ಕೆಲವು ಸರಳ ಸಲಹೆಗಳನ್ನು ಹೇಳಲಿದ್ದು, ಅವು ಯಾವುವು ಎಂದು ನೋಡೋಣ..
ಬೆಚ್ಚಗಿನ ನೀರು ಮತ್ತು ಸೋಪು
ಮನೆಯಲ್ಲಿಯೇ ನಿಮ್ಮ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪಾಲಿಶ್ ಮಾಡುವುದು ಈಗ ಸುಲಭ. ನೀವು ಈ ಸಲಹೆಗಳನ್ನು ಅನುಸರಿಸಿದರೆ, ನಿಮ್ಮ ಹಳೆಯ ಚಿನ್ನ, ಬೆಳ್ಳಿ ಆಭರಣಗಳು ಮತ್ತೆ ಹೊಸದರಂತೆ ಹೊಳೆಯುತ್ತವೆ. ಮೊದಲಿಗೆ ಸೋಪು ಮತ್ತು ಶಾಂಪೂವನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ. ನಿಮ್ಮ ಆಭರಣಗಳನ್ನು ಈ ದ್ರಾವಣದಲ್ಲಿ 10 ರಿಂದ 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಅದನ್ನು ಮೃದುವಾದ ಬಟ್ಟೆ ಅಥವಾ ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ಅದನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಮೊದಲಿನ ಹಾಗೆ ಹೊಳೆಯುವಂತೆ ಮಾಡುತ್ತದೆ.
ಅರಿಶಿನ, ಟೂತ್‌ಪೇಸ್ಟ್
ನಿಮ್ಮ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊಳೆಯುವಂತೆ ಮಾಡಲು ನೀವು ಅರಿಶಿನ ಮತ್ತು ಟೂತ್‌ಪೇಸ್ಟ್ ಅನ್ನು ಬಳಸಬಹುದು. ಮೊದಲಿಗೆ ಟೂತ್‌ಪೇಸ್ಟ್‌ನೊಂದಿಗೆ ಸ್ವಲ್ಪ ಅರಿಶಿನವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬ್ರಷ್‌ಗೆ ಹಚ್ಚಿ ಆಭರಣಗಳನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ಸ್ವಲ್ಪ ಸಮಯದ ನಂತರಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಆಭರಣದ ಹೊಳಪನ್ನು ಮರಳಿ ತರುತ್ತದೆ.
ವಿನೆಗರ್, ನೀರು
ಚಿನ್ನ ಮತ್ತು ಬೆಳ್ಳಿ ಆಭರಣಗಳ ಹೊಳಪನ್ನು ಹೊರತರಲು ನೀವು ವಿನೆಗರ್ ಬಳಸಬಹುದು. ಅರ್ಧ ಕಪ್ ವಿನೆಗರ್ ಅನ್ನು ಅರ್ಧ ಕಪ್ ನೀರಿನೊಂದಿಗೆ ಬೆರೆಸಿ. ನಿಮ್ಮ ಆಭರಣಗಳನ್ನು ಈ ದ್ರಾವಣದಲ್ಲಿ 10 ರಿಂದ 15 ನಿಮಿಷಗಳ ಕಾಲ ನೆನೆಸಿಡಿ. ಮೃದುವಾದ ಬ್ರಷ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಇದು ನಿಮ್ಮ ಆಭರಣಗಳನ್ನು ಹೊಳೆಯುವಂತೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

