- Home
- Life
- Women
- Women Health :ಬಾಯ್ ಫ್ರೆಂಡ್ ಜೊತೆ ಒಂದು ಪೆಗ್ ಹಾಕಿದ್ರೂ ನಶೆಯಲ್ಲಿ ತೇಲಾಡ್ತಾಳೆ ಹುಡುಗಿ, ಹುಡುಗ್ರು ಮಾತ್ರ ಸ್ಟಡಿಯಾಗಿರೋದು ಹೇಗೆ?
Women Health :ಬಾಯ್ ಫ್ರೆಂಡ್ ಜೊತೆ ಒಂದು ಪೆಗ್ ಹಾಕಿದ್ರೂ ನಶೆಯಲ್ಲಿ ತೇಲಾಡ್ತಾಳೆ ಹುಡುಗಿ, ಹುಡುಗ್ರು ಮಾತ್ರ ಸ್ಟಡಿಯಾಗಿರೋದು ಹೇಗೆ?
Effects of Alcohol on Women : ಹುಡುಗಿಯರಿಗೆ ಆಲ್ಕೋಹಾಲ್ ಕಿಕ್ ಬೇಗ ಏರುತ್ತೆ. ಬರಿ ನಶೆ ಏರೋದು ಮಾತ್ರವಲ್ಲ ಅವರನ್ನು ನಿಯಂತ್ರಿಸೋದು ಕಷ್ಟ. ಅಷ್ಟಕ್ಕೂ ಈ ನಶೆ ಬೇಗ ಏರಲು ಕಾರಣ ಏನು ಗೊತ್ತಾ?

ನಶೆ ಏರಿದ ಹುಡುಗಿ
ನ್ಯೂ ಇಯರ್ ಪಾರ್ಟಿಗಳಲ್ಲಿ ಹುಡುಗಿಯರೇ ಹೈಲೈಟ್. ನಶೆಯಲ್ಲಿ ತೇಲೋ ಹುಡುಗಿಯರನ್ನು ಸಂಭಾಳಿಸೋದು ಕಷ್ಟ. ಆಕೆ ಬಾಯ್ ಫ್ರೆಂಡ್ ಕೂಡ ಅವಳು ಕುಡಿದಷ್ಟೆ ಆಲ್ಕೋಹಾಲ್ ಸೇವನೆ ಮಾಡಿರ್ತಾನೆ. ಆತ ಸ್ಟಡಿಯಾಗಿದ್ರೂ ಆಕೆ ಮಾತ್ರ ಓಲಾಡ್ತಾ, ತೋರಾಡ್ತಿರ್ತಾಳೆ. ಬರೀ ನ್ಯೂ ಇಯರ್ ಅಂತಲ್ಲ, ಪ್ರತಿ ಬಾರಿಯೂ ಹುಡುಗಿಯರಿಗೆ ಕಿಕ್ಕೇರೋದು ಜಾಸ್ತಿ. ಸ್ವಲ್ಪ ಕುಡಿದ್ರೂ ಅವರನ್ನು ಕಂಟ್ರೋಲ್ ಮಾಡೋದು ಕಷ್ಟ. ಕುಡಿದ ಕೆಲವೇ ಕ್ಷಣಗಳಲ್ಲಿ ಮಹಿಳೆಯರಿಗೆ ನಶೆ ಏರಿರುತ್ತೆ, ಇದ್ರಿಂದ ಸಾಕಷ್ಟು ಅಪಾಯ ಕೂಡ ಇದೆ. ಅತಿ ಬೇಗ ನಶೆ ಏರಲು ವೈಜ್ಞಾನಿಕ ಕಾರಣ ಇದೆ.
ಶರೀರದ ರಚನೆಯೇ ಇದಕ್ಕೆ ಕಾರಣ
ವಿಜ್ಞಾನಿಗಳ ಪ್ರಕಾರ, ಪುರುಷರು ಮತ್ತು ಮಹಿಳೆಯರ ದೇಹ ರಚನೆಯಲ್ಲಿ ವ್ಯತ್ಯಾಸಗಳಿವೆ. ಮಹಿಳೆಯರು ಸಾಮಾನ್ಯವಾಗಿ ಚಿಕ್ಕ ದೇಹಗಳನ್ನು ಹೊಂದಿರ್ತಾರೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇರುತ್ತೆ. ಗ್ಲಾಸ್ ನಲ್ಲಿ ಮಾತ್ರ ಅಲ್ಲ ದೇಹದಲ್ಲಿ ಕೂಡ, ಆಲ್ಕೋಹಾಲ್ ನೀರಿನ ಜೊತೆ ಸೇರಿ ಇಡೀ ಶರೀರಕ್ಕೆ ಹರಡುತ್ತೆ. ಮಹಿಳೆಯರಲ್ಲಿ ನೀರಿನ ಅಂಶ ಕಡಿಮೆ ಇರೋದ್ರಿಂದ, ಆಲ್ಕೋಹಾಲ್ ಸಾಂದ್ರತೆಯು ವೇಗವಾಗಿ ಹೆಚ್ಚಾಗುತ್ತದೆ. ಒಂದೇ ಪ್ರಮಾಣದಲ್ಲಿ ಹುಡುಗ, ಹುಡುಗಿ ಇಬ್ಬರೂ ಆಲ್ಕೋಹಾಲ್ ಸೇವನೆ ಮಾಡಿದ್ರೂ ಮಹಿಳೆಯರ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಾಗಿರುತ್ತೆ. ಬೇಗ ನಶೆ ಏರಲೂ ಇದೇ ಕಾರಣ.
ಡಿಹೈಡ್ರೋಜಿನೇಸ್ ಕಿಣ್ವ
ಮಹಿಳೆಯರ ದೇಹದಲ್ಲಿ ಆಲ್ಕೋಹಾಲ್ ಡಿಹೈಡ್ರೋಜಿನೇಸ್ (ADH) ಕಿಣ್ವ ಕಡಿಮೆ ಪ್ರಮಾಣದಲ್ಲಿ ಸಕ್ರಿಯವಾಗಿರುತ್ತೆ ಅಂತ ಸಂಶೋಧಕರು ಹೇಳ್ತಾರೆ. ಈ ಕಿಣ್ವ ಆಲ್ಕೋಹಾಲ್ ಒಡೆಯೋದಲ್ದೆ ಬೇಗ ಜೀರ್ಣಿಸಿಕೊಳ್ಳುತ್ತದೆ. ಪುರುಷರಲ್ಲಿ, ಈ ಕಿಣ್ವವು ಹೆಚ್ಚು ಸಕ್ರಿಯವಾಗಿರೋದ್ರಿಂದ, ಆಲ್ಕೋಹಾಲ್ ಬೇಗ ಒಡೆಯುತ್ತೆ. ಮಹಿಳೆಯರಲ್ಲಿ ಈ ಪ್ರಕ್ರಿಯೆ ನಿಧಾನವಾಗಿರೋದ್ರಿಂದ ಆಲ್ಕೋಹಾಲ್ ನೇರವಾಗಿ ಬ್ಲಡ್ ಪ್ರವೇಶಿಸಲು ಕಾರಣವಾಗುತ್ತೆ. ಹಾಗಾಗಿ ಆಲ್ಕೋಹಾಲ್ ಮಹಿಳೆಯರ ಮೆದುಳನ್ನು ವೇಗವಾಗಿ ತಲುಪುತ್ತೆ.
ದೇಹದ ತೂಕವೂ ಮುಖ್ಯ
ದೇಹದ ತೂಕ ನಶೆ ಮೇಲೆ ವೇಗವಾಗಿ ಪರಿಣಾಮ ಬೀರುತ್ತೆ. ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಕಡಿಮೆ ತೂಕ ಹೊಂದಿರ್ತಾರೆ. ಆಲ್ಕೋಹಾಲ್ ತೂಕ ಕಡಿಮೆ ಇರುವ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಚಯಾಪಚಯ
ಮಹಿಳೆಯರ ಚಯಾಪಚಯ ಕ್ರಿಯೆಯು ಆಲ್ಕೋಹಾಲ್ ಅನ್ನು ವಿಭಿನ್ನವಾಗಿ ಸಂಸ್ಕರಿಸುತ್ತದೆ. ಇದು ನಶೆಯ ವೇಗ ಹೆಚ್ಚಾಗಲು ಕಾರಣವಾಗುತ್ತದೆ. ಮಹಿಳೆಯರ ಮೆದುಳು ಆಲ್ಕೋಹಾಲ್ಗೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಆಲ್ಕೋಹಾಲ್ ರಕ್ತಪ್ರವಾಹದ ಮೂಲಕ ಮೆದುಳನ್ನು ತಲುಪಿದಾಗ, ಮಹಿಳೆಯರ ನರಮಂಡಲಗಳು ಅದನ್ನು ಹೆಚ್ಚು ವೇಗವಾಗಿ ಗ್ರಹಿಸುತ್ತವೆ. ಇದು ಮನಸ್ಥಿತಿ, ನಡವಳಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ.
ಆಲ್ಕೋಹಾಲ್ ನಿಂದ ಮಹಿಳೆಯರಿಗಾಗುವ ಅಪಾಯ
ಆಲ್ಕೋಹಾಲ್, ಮಹಿಳೆಯರ ಲಿವರ್ ಹಾನಿಗೆ ಕಾರಣವಾಗುತ್ತದೆ. ಹಾರ್ಮೋನುಗಳ ಅಸಮತೋಲನ, ಹೃದ್ರೋಗ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆಲ್ಕೋಹಾಲ್ ಸೇವನೆ ಮಾಡೋದ್ರಿಂದ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕು. ಅವರ ಶರೀರ ರಚನೆಯೇ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಆಲ್ಕೋಹಾಲ್ ಬಗ್ಗೆ ಮಹಿಳೆಯರು ಹೆಚ್ಚು ಎಚ್ಚರಿಕೆಯಿಂದರಬೇಕು ಅಂತ ತಜ್ಞರು ಸಲಹೆ ನೀಡ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

