MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಅಮೆರಿಕಾ: ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

ಅಮೆರಿಕಾ: ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

ಸಿಯಾಟಲ್‌ನಲ್ಲಿ ಪೊಲೀಸ್ ಅಧಿಕಾರಿಯ ವಾಹನಕ್ಕೆ ಬಲಿಯಾದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ 260 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. 2023ರಲ್ಲಿ ನಡೆದ ಈ ಅಪಘಾತ ಮತ್ತು ನಂತರ ಅಧಿಕಾರಿಯೊಬ್ಬರ ಅಮಾನವೀಯ ಹೇಳಿಕೆಗಳು ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದ್ದವು.

2 Min read
Author : Anusha Kb
Published : Feb 12 2026, 04:00 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ ಭರ್ಜರಿ ಪರಿಹಾರ
Image Credit : google

ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ ಭರ್ಜರಿ ಪರಿಹಾರ

ಸಿಯಾಟಲ್: 2023ರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಚಲಾಯಿಸುತ್ತಿದ್ದ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ 23 ವರ್ಷದ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 260 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಅಮೆರಿಕಾದ ಸಿಯಾಟಲ್‌ನಲ್ಲಿ ಈ ಅಪಘಾತ ಘಟನೆ ನಡೆದಿತ್ತು. ಅಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವೇಗವಾಗಿ ವಾಹನ ಚಲಾಯಿಸಿ ಡಿಕ್ಕಿ ಹೊಡೆದಿದ್ದರಿಂದ ಭಾರತೀಯ ಮೂಲದ 23 ವರ್ಷದ ಪದವಿ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಈಗ ಅವರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ಸಿಕ್ಕಿದೆ ಎಂದು ವರದಿಯಾಗಿದೆ.

26
ಪೊಲೀಸ್ ಅಧಿಕಾರಿಯ ವಾಹನ ಡಿಕ್ಕಿಯಾಗಿ ಸಂಭವಿಸಿದ್ದ ಸಾವು
Image Credit : google

ಪೊಲೀಸ್ ಅಧಿಕಾರಿಯ ವಾಹನ ಡಿಕ್ಕಿಯಾಗಿ ಸಂಭವಿಸಿದ್ದ ಸಾವು

ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ 29 ಮಿಲಿಯನ್ ಡಾಲರ್ ಅಂದರೆ ಸುಮಾರು 260 ಕೋಟಿ ಭಾರತೀಯ ರೂಪಾಯಿ ಪರಿಹಾರ ಸಿಕ್ಕಿದೆ ಎಂದು ವರದಿಯಾಗಿದೆ. ಜಾಹ್ನವಿ ಕಂದುಲಾ ಅವರ ಸಾವು ಆಘಾತ ಹಾಗೂ ನೋವಿನಿಂದ ಕೂಡಿತ್ತು. ಈ ಆರ್ಥಿಕ ಪರಿಹಾರವು ಕಂದುಲಾ ಅವರ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ತರುತ್ತದೆ ಎಂದು ನಗರವು ಆಶಿಸುತ್ತದೆ ಎಂದು ನಗರದ ವಕೀಲೆ ಎರಿಕಾ ಇವಾನ್ಸ್ ಹೇಳಿದ್ದಾಗಿ ವರದಿಯಾಗಿದೆ.

ಇದನ್ನೂ ಓದಿ: ಕೆನರಾ ಬ್ಯಾಂಕ್ ಅವಾಂತರ: 90 ವರ್ಷದ ವೃದ್ಧರಿಗೆ 100 ವರ್ಷಗಳ ನಂತರ ಮೆಚುರ್ ಆಗುವ ಇನ್ಶುರೆನ್ಸ್ ಮಾರಾಟ ಮಾಡಿ ಮೋಸ

Related Articles

Related image1
ಅಮೆರಿಕಾದಲ್ಲಿ ಉದ್ಯೋಗ ಅರಸುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸಾವು
Related image2
ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು: ಶೈಕ್ಷಣಿಕ ಸಾಲ ಮುಗಿಸಲು ಸ್ನೇಹಿತರಿಂದ ಗೋಫಂಡ್ ಅಭಿಯಾನ
36
2023 ರಲ್ಲಿ ರಸ್ತೆ ದಾಟುತ್ತಿದ್ದಾಗ ಸಾವಿಗೀಡಾಗಿದ್ದ ಜಾಹ್ನವಿ ಕಂದುಲಾ
Image Credit : google

2023 ರಲ್ಲಿ ರಸ್ತೆ ದಾಟುತ್ತಿದ್ದಾಗ ಸಾವಿಗೀಡಾಗಿದ್ದ ಜಾಹ್ನವಿ ಕಂದುಲಾ

2023 ರಲ್ಲಿ ರಸ್ತೆ ದಾಟುತ್ತಿದ್ದಾಗ ಜಾಹ್ನವಿ ಕಂದುಲಾ ಅವರಿಗೆ ಅಧಿಕಾರಿ ಕೆವಿನ್ ಡೇವ್ ಅವರು ಚಲಾಯಿಸುತ್ತಿದ್ದ ವಾಹನ ಡಿಕ್ಕಿ ಹೊಡೆದಿತ್ತು. ಘಟನೆ ನಡೆಯುವ ವೇಳೆ ಅವರು 119 kph ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಕಂದುಲಾ 100 ಅಡಿಗಳಷ್ಟು ದೂರ ಹೋಗಿ ಬಿದ್ದಿದ್ದರು ಪರಿಣಾಮ ಗಂಭೀರ ಗಾಯಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಜಾಹ್ನವಿ ಕಂದುಲಾ ಅವರು ಸಿಯಾಟಲ್‌ನ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮಾಹಿತಿ ವ್ಯವಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು.

ಇದನ್ನೂ ಓದಿ:  ಒಂದೇ ತಿಂಗಳಲ್ಲಿ ಹಸಿರು ನೆಲ ಬರಡು ಭೂಮಿ ಆಯ್ತು: ಬೆಂಗಳೂರು ಜೆಪಿ ನಗರದ ಮೊದಲ ನಂತರದ ಫೋಟೋ ವೈರಲ್

46
ಅಪಘಾತದ ನಂತರ ವೈರಲ್ ಆಗಿತ್ತು ಡ್ಯಾಶ್‌ಕ್ಯಾಮ್ ವೀಡಿಯೋ
Image Credit : google

ಅಪಘಾತದ ನಂತರ ವೈರಲ್ ಆಗಿತ್ತು ಡ್ಯಾಶ್‌ಕ್ಯಾಮ್ ವೀಡಿಯೋ

ಅಪಘಾತದ ನಂತರ ಮತ್ತೊಬ್ಬ ಅಧಿಕಾರಿ ಡೇನಿಯಲ್ ಆಡೆರರ್ ಮಾಡಿದ ಕಾಮೆಂಟ್‌ಗಳನ್ನು ತೋರಿಸುವ ಬಾಡಿ ಕ್ಯಾಮೆರಾ ವೀಡಿಯೋ ಹೊರಬಂದ ನಂತರ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅವಳು ಸತ್ತಿದ್ದಾಳೆ ಎಂದು ಅವರು ನಗುತ್ತಾ ಹೇಳಿದ್ದರು. ಕಂದುಲಾ ಅವರ ಜೀವನವು ಲಿಮಿಟೆಡ್ ಮೌಲ್ಯ ಹೊಂದಿದೆ ಮತ್ತು ನಗರವು ಕೇವಲ ಒಂದು ಚೆಕ್ ಬರೆಯಬೇಕು ಎಂದು ಅವರು ಹೇಳಿದ್ದರು. ಹಲವಾರು ಸೆಕೆಂಡ್‌ಗಳ ಕಾಲ ನಡೆದ ಅವರ ಸಂಭಾಷಣೆ ಪೊಲೀಸ್ ಇಲಾಖೆಯಲ್ಲೇ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಆ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಇದನ್ನೂ ಓದಿ:  2 ಲಕ್ಷ ಹಣದ ಬದಲು ವರ್ತೂರ್ ಸಂತೋಷ್ ಬಳಿ ಹಸು ನೀಡುವಂತೆ ಕೇಳಿದ್ರಾ ರಕ್ಷಿತಾ ಶೆಟ್ಟಿ

56
ಪ್ರಕರಣದ ತನಿಖೆಗೆ ಆದೇಶಿಸಿದ್ದ ಭಾರತೀಯ ರಾಯಭಾರ ಕಚೇರಿ
Image Credit : google

ಪ್ರಕರಣದ ತನಿಖೆಗೆ ಆದೇಶಿಸಿದ್ದ ಭಾರತೀಯ ರಾಯಭಾರ ಕಚೇರಿ

ಬಾಡಿ ಕ್ಯಾಮ್ ದೃಶ್ಯಾವಳಿ ವೈರಲ್ ಆಗಿದ್ದರಿಂದ ಭಾರತದ ರಾಜತಾಂತ್ರಿಕರು ಪ್ರಕರಣದ ತನಿಖೆ ಕೋರಿದರು. ನಂತರ ನಗರದ ನಾಗರಿಕ ಕಾವಲು ಸಂಸ್ಥೆಯು ಯೂನಿಯನ್ ನಾಯಕರಾಗಿದ್ದ ಅಧಿಕಾರಿ ಡೇನಿಯಲ್ ಆಡೆರರ್ ಅವರ ಹೇಳಿಕೆಗಳು ಇಲಾಖೆಯ ಖ್ಯಾತಿಗೆ ಧಕ್ಕೆ ತಂದಿವೆ ಮತ್ತು ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಿವೆ ಎಂದು ಕಂಡುಕೊಂಡಿತ್ತು ನಂತರ ಆಡೆರರ್ ಅವರನ್ನು ವಜಾಗೊಳಿಸಲಾಯಿತು.

ಇದನ್ನೂ ಓದಿ: ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು

66
ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿದ್ದ ಪೊಲೀಸ್ ಇಲಾಖೆ
Image Credit : google

ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿದ್ದ ಪೊಲೀಸ್ ಇಲಾಖೆ

ಅಲ್ಲದೇ ಆರೋಪಿ ಅಧಿಕಾರಿ ಕೆವಿನ್ ಡೇವ್ ಅವರನ್ನು ಪೊಲೀಸ್ ಇಲಾಖೆ ವಜಾಗೊಳಿ $5,000 ಡಾಲರ್ ದಂಡ ವಿಧಿಸಿತು. ಆದರೆ ಕಿಂಗ್ ಕೌಂಟಿ ಪ್ರಾಸಿಕ್ಯೂಟರ್‌ಗಳು ಅವರ ವಿರುದ್ಧದ ಅಪರಾಧ ಆರೋಪಗಳನ್ನು ದಾಖಲಿಸಲು ನಿರಾಕರಿಸಿದರು , ಅವರು ಕಂದುಲಾಗೆ ಡಿಕ್ಕಿ ಹೊಡೆದಾಗ ಅವರು ಉದ್ದೇಶಪೂರ್ವಕವಾಗಿ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದಾರೆಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಹೇಳಿದ್ದಕ್ಕಿಂತ ಜಾಸ್ತಿ ಕೂದಲು ಕತ್ತರಿಸಿದ ಸಲೂನ್ :ಕೋರ್ಟ್ ಮೆಟ್ಟಿಲೇರಿ 25 ಲಕ್ಷ ಪರಿಹಾರ ಪಡೆದ ಯುವತಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಯುಎಸ್ ಸುದ್ದಿ
ಭಾರತೀಯ ಮಹಿಳೆ

Latest Videos
Recommended Stories
Recommended image1
ಇಲ್ಲಿನ ಪೂಲ್‌ಗಳಲ್ಲಿ ಮಹಿಳೆಯರು ಟಾಪ್‌ಲೆಸ್ ಆಗಿ ಈಜಾಡಬಹುದು,ಈ ಸಮಾನತೆ ಬೇಕು ಎಂದ ಜನ
Recommended image2
Fertility Awareness Campaign: 29 ವರ್ಷ ಆಗ್ತಿದ್ದಂತೆ ಸರ್ಕಾರದಿಂದ ಬರಲಿದೆ ಫರ್ಟಿಲಿಟಿ ಲೆಟರ್
Recommended image3
ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್ ಹಂಚಿದ್ದು ನಿಜವೇ? ಗೋಲ್ಡ್ ಕಹಾನಿಯ ಅಸಲಿಯತ್ತು ರಿವೀಲ್
Related Stories
Recommended image1
ಅಮೆರಿಕಾದಲ್ಲಿ ಉದ್ಯೋಗ ಅರಸುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸಾವು
Recommended image2
ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು: ಶೈಕ್ಷಣಿಕ ಸಾಲ ಮುಗಿಸಲು ಸ್ನೇಹಿತರಿಂದ ಗೋಫಂಡ್ ಅಭಿಯಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved