MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಬಾಂಗ್ಲಾದೇಶ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?

ಬಾಂಗ್ಲಾದೇಶ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?

2024ರ ದಂಗೆಯ ನಂತರ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ನೇತೃತ್ವದ ಬಿಎನ್‌ಪಿ ಗೆದ್ದಿದೆ. ಈ ರಾಜಕೀಯ ಬದಲಾವಣೆಯು ಭಾರತದ ಮೇಲೆ ಬೀರಬಹುದಾದ ಪರಿಣಾಮಗಳು, ವಿಶೇಷವಾಗಿ ಪಾಕಿಸ್ತಾನ-ಚೀನಾ-ಬಾಂಗ್ಲಾ ಮೈತ್ರಿಯ ಸಾಧ್ಯತೆ ಮತ್ತು ಭದ್ರತಾ ಸವಾಲುಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

3 Min read
Author : Anusha Kb
Published : Feb 13 2026, 12:48 PM IST
Share this Photo Gallery
  • FB
  • TW
  • Linkdin
  • Whatsapp
19
ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಅಭೂತಪೂರ್ವ ಗೆಲುವು
Image Credit : X

ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಅಭೂತಪೂರ್ವ ಗೆಲುವು

2024ರಲ್ಲಿ ಬಾಂಗ್ಲಾದೇಶದಲ್ಲಿ ರಾಜಕೀಯ ದಂಗೆ ನಡೆದು ಪ್ರಧಾನಿ ಶೇಕ್ ಹಸೀನಾ ಉಚ್ಛಾಟನೆಗೊಂಡ ನಂತರ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಲಿನ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಅಭೂತಪೂರ್ವ ಗೆಲುವು ದಾಖಲಿಸಿರುವುದು ಗೊತ್ತೆ ಇದೆ. ಬಾಂಗ್ಲಾದೇಶದಲ್ಲಿ ತಾರೀಖ್ ರೆಹಮಾನ್ ನೇತೃತ್ವದ ಈ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಯ ಗೆಲುವಿನಿಂದ ಭಾರತದ ಮೇಲಾಗುವ ಪರಿಣಾಮ ಏನು ಎಂಬ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

29
ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ತಾರೀಖ್ ರೆಹಮಾನ್
Image Credit : X

ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ತಾರೀಖ್ ರೆಹಮಾನ್

ಈಗ ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ತಾರೀಖ್ ರೆಹಮಾನ್ ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಹಾಗೂ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ . 2017ರಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಆರೋಪಗಳ ನಂತರ ಬಂಧನಕ್ಕೊಳಗಾದ ಅವರು 2008ರಲ್ಲಿ ಚಿಕಿತ್ಸೆಯ ನೆಪದಲ್ಲಿ ದೇಶ ತೊರೆದವರು ನಂತರ ಬರೋಬ್ಬರಿ 17 ವರ್ಷಗಳ ಕಾಲ ಲಂಡನ್‌ನಲ್ಲಿಯೇ ನೆಲೆಸಿದ್ದರು. ಆದರೆ ಡಿಸೆಂಬರ್ 2025ರಲ್ಲಿ ಅವರ ತಾಯಿ ಮಾಜಿ ಪ್ರಧಾನಿ ಖಾಲೀದಾ ಜಿಯಾ ಅವರು ಸಾವನ್ನಪ್ಪಿದ ನಂತರವೇ ಅವರು ದೇಶಕ್ಕೆ ಮರಳಿದ್ದರು.

Related Articles

Related image1
ಬಾಂಗ್ಲಾದೇಶ ಅಧಿಕೃತವಾಗಿ ಟಿ20 ವಿಶ್ವಕಪ್ ಬಾಯ್ಕಾಟ್! ಭಾರತಕ್ಕೇನು ನಷ್ಟವಿಲ್ಲ
Related image2
ಐಸಿಸಿಯ ಒತ್ತಡಕ್ಕೆ ಮಣಿಯಲ್ಲ, ಭಾರತಕ್ಕೆ ಹೋಗಲ್ಲ: ಮೊಂಡುವಾದ ಮಾಡುತ್ತಿರುವ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದಲೇ ಔಟ್?
39
 17 ವರ್ಷಗಳ ನಂತರ ದೇಶಕ್ಕೆ ಮರಳಿದ ನಾಯಕನಿಗೆ ಭವ್ಯ ಸ್ವಾಗತ
Image Credit : X

17 ವರ್ಷಗಳ ನಂತರ ದೇಶಕ್ಕೆ ಮರಳಿದ ನಾಯಕನಿಗೆ ಭವ್ಯ ಸ್ವಾಗತ

ಹೀಗೆ 17 ವರ್ಷಗಳ ನಂತರ ದೇಶಕ್ಕೆ ಮರಳಿದ 60 ವರ್ಷದ ತಾರೀಖ್ ರೆಹಮಾನ್ ಅವರಿಗೆ ಈಗ ಬಾಂಗ್ಲಾದೇಶದ ಜನ ಅದ್ಭುತ ಗೆಲುವು ನೀಡಿ ಭಾವುಕ ಉಡುಗೊರೆ ನೀಡಿದ್ದಾರೆ. ಬಾಂಗ್ಲಾದೇಶಕ್ಕಾಗಿ ನನ್ನ ಬಳಿ ಯೋಜನೆ ಇದೆ ಎಂದು ಪ್ರಚಾರ ಆರಂಭಿಸಿದ ಅವರ ಗೆಲುವಿನ ನಂತರ ಈಗ ಭಾರತ, ಮತ್ತು ದಕ್ಷಿಣ ಏಷ್ಯಾದ ಉಳಿದ ಭಾಗಗಳು ಮತ್ತು ಅಮೆರಿಕ, ಆ ಯೋಜನೆ ಕಾರ್ಯರೂಪಕ್ಕೆ ಬರಲು ಕಾಯುತ್ತಿವೆ. ಇಂದು ಮುಂಜಾನೆ ಅವರು ಅದ್ಭುತವಾದ ಗೆಲುವು ದಾಖಲಿಸುತ್ತಿದ್ದಂತೆ ಚೀನಾ ಪಾಕಿಸ್ತಾನಕ್ಕೂ ಮೊದಲೇ ಬಾಂಗ್ಲಾದೇಶದ ಹೊಸ ನಾಯಕನಿಗೆ ಅಭಿನಂದನೆ ಸಲ್ಲಿಸಿ ಸ್ವಾಗತಿಸಿತು. ಈ ಬೆಳವಣಿಗೆ ಮುಂದೆ ಢಾಕಾಗೆ ಸಂಬಂಧಿಸಿದ ಯಾವುದೇ ವಾದ ಅಥವಾ ಜಗಳದಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

49
ಪ್ರಧಾನಿ ಮೋದಿ ಅಭಿನಂದನೆ
Image Credit : Google

ಪ್ರಧಾನಿ ಮೋದಿ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ, ರೆಹಮಾನ್ ಮತ್ತು ಅವರ ಬಿಎನ್‌ಪಿಗೆ ಅಭಿನಂದನೆ ಸಲ್ಲಿಸಿ ನಿಮ್ಮ ನಾಯಕತ್ವದ ಮೇಲೆ ಬಾಂಗ್ಲಾದೇಶದ ಜನರು ಇಟ್ಟಿರುವ ನಂಬಿಕೆಯನ್ನು ಈ ಗೆಲುವು ತೋರಿಸುತ್ತದೆ. ಭಾರತವು ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಬೆಂಬಲಿಸುತ್ತದೆ ಎಂದು ಅವರು ರೆಹಮಾನ್ ಮತ್ತು ಅವರ ಆಡಳಿತಕ್ಕೆ ಭರವಸೆ ನೀಡಿದರು. ಪ್ರಧಾನಿ ಅವರ ಈ ಸಂದೇಶದಲ್ಲಿ ಒಂದು ಒಳಾರ್ಥವಿದೆ. ಬಾಂಗ್ಲಾದೇಶವೂ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಚೆಲ್ಲಾಟವಾಡುತ್ತಿರುವುದರಿಂದ ಅಲ್ಲಿ ಉಂಟಾದ ಅನಿಶ್ಚಿತತೆ ಮತ್ತು ಹಿಂದೂ ಅಲ್ಪಸಂಖ್ಯಾತರ ಹತ್ಯೆ ಸೇರಿದಂತೆ ಕಳೆದ 18 ತಿಂಗಳ ಕ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ಈ ಅಭಿನಂದನೆ ಸಲ್ಲಿಸಲಾಗಿದ್ದು, ದಶಕಗಳಷ್ಟು ಹಳೆಯದಾದ ಮಿತ್ರ ರಾಷ್ಟ್ರವು ತನ್ನ ಪಕ್ಕದಲ್ಲಿ ಉಳಿಯುವುದನ್ನು ಖಾತ್ರಿಪಡಿಸುವ ಸ್ಥಿರವಾದ ಸಂಬಂಧವನ್ನು ಸ್ಥಾಪಿಸಲು ಭಾರತ ಬಯಸುತ್ತದೆ ಎಂಬಾರ್ಥವನ್ನು ಪ್ರಧಾನಿಯವರ ಸಂದೇಶ ನೀಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

59
ಭಾರತಕ್ಕೇನು ಸಮಸ್ಯೆ?
Image Credit : our own

ಭಾರತಕ್ಕೇನು ಸಮಸ್ಯೆ?

ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರದ ಈ ಬದಲಾವಣೆಯು ದಕ್ಷಿಣ ಏಷ್ಯಾ ಮತ್ತು ಅದರಾಚೆಗಿನ ಪ್ರಾದೇಶಿಕ ಭೌಗೋಳಿಕ ರಾಜಕೀಯವನ್ನು ಬದಲಾಯಿಸಬಹುದು ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣದಿಂದಾಗಿ ಭಾರತವು ಈ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಭಾರತದ ದೃಷ್ಟಿಕೋನದಲ್ಲಿ ಮೂರು ಅಂತರ್-ಸಂಪರ್ಕಿತ ಸಮಸ್ಯೆಗಳಿವೆ, ಅವುಗಳಲ್ಲಿ ದೊಡ್ಡದು ಸಂಭಾವ್ಯ ಪಾಕಿಸ್ತಾನ-ಚೀನಾ-ಬಾಂಗ್ಲಾದೇಶ ಅಕ್ಸಿಸ್(ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಭಾವವನ್ನು ಎದುರಿಸಲು ವಿನ್ಯಾಸಗೊಳಿಸಲಾದ ಮೂರು ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರ, ಆರ್ಥಿಕ ಮತ್ತು ಮಿಲಿಟರಿ ಹೊಂದಾಣಿಕೆ) ರೆಹಮಾನ್ ಅವರ ಮುಂಬರುವ ಆಡಳಿತವು ಹಸೀನಾ ನೇತೃತ್ವದ ಸರ್ಕಾರಕ್ಕಿಂತ ವ್ಯತಿರಿಕ್ತವಾದ ದೆಹಲಿಯನ್ನು ವಿರೋಧಿಸುವ ವಿದೇಶಾಂಗ ನೀತಿಯನ್ನು ಹೊಂದಿದ್ದರೆ ಭಾರತಕ್ಕೆ ಈ ಸಮಸ್ಯೆ ಎದುರಾಗುವ ಸಾಧ್ಯತೆಯಾಗಿದೆ. ಪಾಕ್-ಚೀನಾ-ಬಾಂಗ್ಲಾದೇಶದ ಮೈತ್ರಿ ದಕ್ಷಿಣ ಏಷ್ಯಾದ ಮೇಲಿನ ಭಾರತದ ಹಿಡಿತವನ್ನು ದುರ್ಬಲಗೊಳಿಸಬಹುದು.

69
ಭಾರತಕ್ಕೇನು ಸಮಸ್ಯೆ?
Image Credit : X

ಭಾರತಕ್ಕೇನು ಸಮಸ್ಯೆ?

ಬಾಂಗ್ಲಾದೇಶಿಗರ ಅಕ್ರಮ ವಲಸೆ (ಮತ್ತು ದೇಶೀಯ ರಾಜಕೀಯದ ಮೇಲಿನ ಪರಿಣಾಮ, ವಿಶೇಷವಾಗಿ ಬಂಗಾಳ ಮತ್ತು ಅಸ್ಸಾಂ ಚುನಾವಣೆಗಳಿಗೆ ಮೊದಲು), ಮತ್ತು ಶೇಖ್ ಹಸೀನಾ ಅವರ ಪತನದ ನಂತರ ಭುಗಿಲೆದ್ದ ಹಿಂದೂ ವಿರೋಧಿ ಭಾವನೆಗಳಂತಹ ಕಳವಳಗಳಿಂದ ಉದ್ಭವಿಸುವ ಗಡಿ ಮತ್ತು ಆಂತರಿಕ ಭದ್ರತಾ ಪರಿಣಾಮಗಳು ಸಹ ಇದರಲ್ಲಿ ಸೇರಿವೆ. ಹಾಗೆಯೇ ವ್ಯಾಪಾರವು ಪ್ರಮುಖ ಪಾತ್ರ ವಹಿಸುತ್ತದೆ. ಬಾಂಗ್ಲಾದೇಶದ ಸಿದ್ಧ ಉಡುಪು ಉದ್ಯಮಕ್ಕೆ 80 ಪ್ರತಿಶತಕ್ಕಿಂತ ಹೆಚ್ಚಿನ ಕಚ್ಚಾ ಹತ್ತಿಯನ್ನು ಭಾರತ ಪೂರೈಸುತ್ತಿದೆ, ಇದು ಅದರ ರಾಷ್ಟ್ರೀಯ ಆರ್ಥಿಕತೆಯ ಪ್ರಮುಖ ಚಾಲಕವಾಗಿದೆ, ಆದರೂ ಮೇಲಿನ ಮೂರಕ್ಕಿಂತ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿದ್ದರೂ ವ್ಯಾಪಾರವು ಸಹ ಪರಿಗಣಿಸಬೇಕಾದ ಅಂಶವಾಗಿದೆ.

79
ಹಸೀನಾ ಅಧಿಕಾರದಲ್ಲಿದ್ದಾಗ ಹೇಗಿತ್ತು?
Image Credit : X

ಹಸೀನಾ ಅಧಿಕಾರದಲ್ಲಿದ್ದಾಗ ಹೇಗಿತ್ತು?

ಹಸೀನಾ ಅಧಿಕಾರದಲ್ಲಿದ್ದಾಗ ದೆಹಲಿ ಮತ್ತು ಢಾಕಾ ಸ್ಥಿರವಾದ ಸಂಬಂಧವನ್ನು ಹೊಂದಿದ್ದವು. ಉಚ್ಛಾಟನೆಯ ನಂತರ ಬಾಂಗ್ಲಾದೇಶದಲ್ಲಿ ದೇಶದ್ರೋಹದ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಶೇಕ್ ಹಸೀನಾ ಅವರು ತಾವು ಪ್ರಧಾನಿಯಾಗಿದ್ದಾಗ ವ್ಯಾಪಾರ, ಸಾರಿಗೆ, ಗಡಿ ಭದ್ರತೆ ಮತ್ತು ನೀರು ಹಂಚಿಕೆ ಒಪ್ಪಂದಗಳ ಮೇಲೆ ಕೇಂದ್ರೀಕರಿಸಿದ ಭಾರತ ಪರ ಸರ್ಕಾರವನ್ನು ನಡೆಸುತ್ತಿದ್ದರು. ಭಾರತ ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಅಧಿಕಾರ ಹಿಡಿಯಬೇಕು ಎಂದು ಬಯಸಿದ್ದರು. ಭೌಗೋಳಿಕ ರಾಜಕೀಯ ವಿಶ್ಲೇಷಕರು ಭಾರತ ಸರ್ಕಾರವು ಢಾಕಾದಲ್ಲಿ ಶೀಘ್ರದಲ್ಲೇ ಅಧಿಕಾರದ ಬದಲಾವಣೆಯನ್ನು ಗುರುತಿಸುತ್ತದೆ ಎಂದು ಒಪ್ಪಿಕೊಂಡಿದ್ದಾರೆ.

89
ಭಾರತ ಚಿಂತೆಪಡುವ ಅಗತ್ಯವಿಲ್ಲ.
Image Credit : X

ಭಾರತ ಚಿಂತೆಪಡುವ ಅಗತ್ಯವಿಲ್ಲ.

ಆದ್ದರಿಂದ ಈಗ ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವ ಬಿಎನ್‌ಪಿ ಭಾರತದ ಚಿಂತೆಗೆ ಕಾರಣವಾಗುವುದಿಲ್ಲ, ರೆಹಮಾನ್ ಅವರು ಭಾರತದ ಹಿತಾಸಕ್ತಿಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ, ಇದು ಅವರ ತಾಯಿಯ ಬಾಂಗ್ಲಾದೇಶ ಮೊದಲು ಎಂಬ ನೀತಿಗಿಂತ ವಿಭಿನ್ನವಾಗಿದೆ. ಆದರೆ ಇದು ಪ್ರಾಯೋಗಿಕವಾಗಿ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಭಾರತಕ್ಕೆ ಒಂದು ಒಳ್ಳೆಯ ಸುದ್ದಿ ಏನೆಂದರೆ ಬಿಎನ್‌ಪಿ ಬದಲು ಕಠಿಣ ಇಸ್ಲಾಮಿಕ್ ವಾದಿ ಸಂಘಟನೆಯಾದ ಜಮಾತೆ-ಇ-ಇಸ್ಲಾಮಿ ಸಂಘಟನೆಯು ಬಿಎನ್‌ಪಿ ಪಾಲುದಾರನಾಗಿದ್ದಾರೆ ಅದನ್ನು ನಿರ್ವಹಿಸುವುದಕ್ಕೆ ಕಷ್ಟವಾಗುತ್ತಿತ್ತು. ಆದರೆ ಬಿಎನ್‌ಪಿ ಸ್ಪಷ್ಟ ಬಹುಮತದ ಗೆಲುವಿನತ್ತ ಸಾಗುತ್ತಿರುವುದರಿಂದ ಅಂತದೊಂದು ತೊಂದರೆ ಭಾರತಕ್ಕೆ ಎದುರಾಗಿಲ್ಲ.

99
ಜಮಾತ್ ಸೋಲಿನಿಂದ ಭಾರತ ನಿರಾಳ
Image Credit : X

ಜಮಾತ್ ಸೋಲಿನಿಂದ ಭಾರತ ನಿರಾಳ

ಭಾರತಕ್ಕೆ ಸಂಬಂಧಿಸಿದಂತೆ, ಜಮಾತ್ ಒಳಗೊಂಡ ಬಾಂಗ್ಲಾದೇಶ ಸರ್ಕಾರವು ದ್ವಿಪಕ್ಷೀಯ ಸಂಬಂಧಗಳನ್ನು ಅಸ್ಥಿರಗೊಳಿಸುವ ಸಾಮರ್ಥ್ಯವನ್ನು ಹೊಂದಿತ್ತು. ಹೆಚ್ಚು ಗಮನಾರ್ಹವಾಗಿ, ಅದು ಪಾಕಿಸ್ತಾನಕ್ಕೆ ಹತ್ತಿರವಾಗಬಹುದಿತ್ತು. ಪಾಕ್ ಸಂಬಂಧಿತ ಅಥವಾ ಬೆಂಬಲಿತ ಭಯೋತ್ಪಾದಕ ಗುಂಪುಗಳು ಈಶಾನ್ಯದಲ್ಲಿ ದಾಳಿ ಮಾಡಲು ಬಾಂಗ್ಲಾದೇಶವು ಲಾಂಚ್‌ಪ್ಯಾಡ್ ಆಗುವ ಸಾಧ್ಯತೆ ಇತ್ತು. ಹೀಗಾಗಿ ಪಶ್ಚಿಮದಲ್ಲಿ ದೆಹಲಿಯ ಎರಡು ಭದ್ರತಾ ಹೊರೆಯನ್ನು ಹೆಚ್ಚಿಸಬಹುದಿತ್ತು. ಭಾರತದ ಈಶಾನ್ಯ ಭಾಗದ ಮೇಲೆ ಪಾಕಿಸ್ತಾನದ ಹಿಡಿತದ ಪರಿಣಾಮವೆಂದರೆ, ಅದರಿಂದ ಉಂಟಾಗುವ ಯಾವುದೇ ಅಸ್ಥಿರತೆಯು ಚೀನಾದ ಕೈಗೆ ಸಿಗಬಹುದು, ಏಕೆಂದರೆ ಅದು ಅರುಣಾಚಲ ಪ್ರದೇಶವನ್ನು ಅಕ್ರಮವಾಗಿ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. 

ಆದರೆ ಜಮಾಅತ್ ಇಲ್ಲದೆ, ರೆಹಮಾನ್ ನೇತೃತ್ವದ ಸರ್ಕಾರವು ಭಾರತದೊಂದಿಗೆ ಕಡಿಮೆ ವಿರೋಧದ ನಿಲುವಿನತ್ತ ಒಲವು ತೋರಬಹುದು ಎಂದು ವಿಶ್ಲೇಷಕರು ನಂಬುತ್ತಾರೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಬಾಂಗ್ಲಾದೇಶ

Latest Videos
Recommended Stories
Recommended image1
Digital Arrest Scam: ಡಿಜಿಟಲ್‌ ಅರೆಸ್ಟ್‌ಗಾಗಿ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ!
Recommended image2
India News Live ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಪಕ್ಷಕ್ಕೆ ಅಭೂತಪೂರ್ವ ಗೆಲುವು: ಬಾಂಗ್ಲಾದೇಶ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?
Recommended image3
Tarique Rahman: 17 ವರ್ಷಗಳ ವನವಾಸ ಮುಗಿಸಿ ಬಾಂಗ್ಲಾ ಪ್ರಧಾನಿ ಪಟ್ಟಕ್ಕೇರಲು ಸಜ್ಜು!
Related Stories
Recommended image1
ಬಾಂಗ್ಲಾದೇಶ ಅಧಿಕೃತವಾಗಿ ಟಿ20 ವಿಶ್ವಕಪ್ ಬಾಯ್ಕಾಟ್! ಭಾರತಕ್ಕೇನು ನಷ್ಟವಿಲ್ಲ
Recommended image2
ಐಸಿಸಿಯ ಒತ್ತಡಕ್ಕೆ ಮಣಿಯಲ್ಲ, ಭಾರತಕ್ಕೆ ಹೋಗಲ್ಲ: ಮೊಂಡುವಾದ ಮಾಡುತ್ತಿರುವ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದಲೇ ಔಟ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved