ಭಾರತದ ವಿರೋಧ ನಡುವೆಯೂ ಪಾಕಿಸ್ತಾನದ ಖಾತೆಗೆ ಸೇರಿದ ₹8400 ಕೋಟಿ
International Monetary Fund: ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಐಎಂಎಫ್ ಎರಡನೇ ಕಂತಿನ ರೂ.8,400 ಕೋಟಿ ಹಣ ಬಿಡುಗಡೆ ಮಾಡಿದೆ. ಈ ಹಣವನ್ನು ಗಡಿಯಾಚೆಗಿನ ಭಯೋತ್ಪಾದನೆಗೆ ಬಳಸಬಹುದೆಂಬ ಆತಂಕ ಭಾರತ ವ್ಯಕ್ತಪಡಿಸಿತ್ತು.

ಭಾರತದ ತೀವ್ರ ವಿರೋಧದ ನಡುವೆಯೂ ಪಾಕಿಸ್ತಾನದ ಖಾತೆಗೆ 8,400 ಕೋಟಿ ರೂಪಾಯಿ ಸೇರಿದೆ. ಪಾಕಿಸ್ತಾನಕ್ಕೆ ಐಎಂಎಫ್ (International Monetary Fund -IMF) ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ.
ಕಳೆದ ವಾರವಷ್ಟೇ ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನ 1 ಬಿಲಿಯನ್ ಡಾಲರ್ ಹಣವನ್ನು ಸಾಲವಾಗಿ ಪಡೆದುಕೊಂಡಿತ್ತು. ಇದೀಗ ಪಾಕಿಸ್ತಾನಕ್ಕೆ ವಿಸ್ತೃತ ನಿಧಿ ಸೌಲಭ್ಯ ಕಾರ್ಯಕ್ರಮದಡಿ ಎರಡನೇ ಕಂತಿನ ರೂಪದಲ್ಲಿ 1.02 ಬಿಲಿಯನ್ ಡಾಲರ್ (ಸುಮಾರು ರೂ. 8,400 ಕೋಟಿ) ಮೊತ್ತವನ್ನು ನೀಡಲಾಗಿದೆ.
ರಾಯಿಟರ್ಸ್ ವರದಿ ಪ್ರಕಾರ, ಮೇ 16ರ ವಾರದ ಅಂತ್ಯಕ್ಕೆ ಈ ಮೊತ್ತ ವಿದೇಶಿ ವಿನಿಮಯ ಸಂಗ್ರಹದಲ್ಲಿ ಸೇರಿಸಲಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹೇಳಿದೆ. ಪಾಕಿಸ್ತಾನಕ್ಕೆ ನೀಡಲಾಗುವ ನಿಧಿಯ ಮತದಾನದಿಂದ ದೂರ ಉಳಿಯುವ ಮೂಲಕ ಭಾರತ ವಿರೋಧಿಸಿತ್ತು.
ವಿಶ್ವಸಂಸ್ಥೆಯಲ್ಲಿ ಯಾವುದೇ ದೇಶಕ್ಕೆ 'NO' ಎಂದು ಮತ ಚಲಾಯಿಸುವ ಅಧಿಕಾರವನ್ನು ನೀಡಲಾಗಿರುತ್ತದೆ. ಆದರೆ ಐಎಂಎಫ್‌ನಲ್ಲಿ ಪರವಾಗಿ ಮತ ಚಲಾವಣೆ ಮಾಡಬೇಕು ಇಲ್ಲವೇ ಮತದಾನದಿಂದ ದೂರ ಉಳಿಯಬೇಕಾಗುತ್ತದೆ. ಹಾಗಾಗಿ ಪಾಕಿಸ್ತಾನಕ್ಕೆ ಸಾಲ ನೀಡುವ ಮತದಾನದಿಂದ ಭಾರತ ದೂರ ಉಳಿದಿತ್ತು.
ಮತದಾನದಿಂದ ದೂರ ಉಳಿದಿದ್ದ ಭಾರತ, ಪಾಕಿಸ್ತಾನ ಈ ಹಣವನ್ನು ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸಲು ಬಳಸಬಹುದು ಎಂದು ಹೇಳಿ ಕಳವಳ ವ್ಯಕ್ತಪಡಿಸಿತ್ತು. ಐಎಂಎಫ್ ನೀಡಿದ ಆರ್ಥಿಕ ನೆರವಿನಿಂದಾಗಿ ಪಾಕಿಸ್ತಾನ ಭಾರಿ ಸಾಲಕ್ಕೆ ಸಿಲುಕಿದೆ. ಈ ಸಾಲ ಪಡೆಯುವ ಮೂಲಕ ಪಾಕಿಸ್ತಾನ ಐಎಂಎಫ್‌ನ ದೊಡ್ಡ ಸಾಲಗಾರನಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
