- Home
- News
- World News
- 'ವಿಶ್ವ ಸುಂದರಿ' ಸ್ಪರ್ಧೆ ವೇಳೆ ಕ್ಯಾಟ್ವಾಕ್ನಲ್ಲೇ ಕುಸಿದು ಬಿದ್ದ ಬ್ಯೂಟಿ! ದಶಕಗಳ ಕನಸು ಭಗ್ನ? ವಿಡಿಯೋ ವೈರಲ್
'ವಿಶ್ವ ಸುಂದರಿ' ಸ್ಪರ್ಧೆ ವೇಳೆ ಕ್ಯಾಟ್ವಾಕ್ನಲ್ಲೇ ಕುಸಿದು ಬಿದ್ದ ಬ್ಯೂಟಿ! ದಶಕಗಳ ಕನಸು ಭಗ್ನ? ವಿಡಿಯೋ ವೈರಲ್
ಮಿಸ್ ಯೂನಿವರ್ಸ್ 2025ರ ಪ್ರಾಥಮಿಕ ಸ್ಪರ್ಧೆಯಲ್ಲಿ, ಮಿಸ್ ಯೂನಿವರ್ಸ್ ಜಮೈಕಾ ಹೆನ್ರಿ ಅವರು ಕ್ಯಾಟ್ವಾಕ್ ಮಾಡುವಾಗ ವೇದಿಕೆಯಿಂದ ಕುಸಿದುಬಿದ್ದಿದ್ದಾರೆ. ಈ ಘಟನೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫೈನಲ್ ಸ್ಪರ್ಧೆಯಲ್ಲಿ ಅವರ ಭಾಗವಹಿಸುವಿಕೆ ಅನಿಶ್ಚಿತವಾಗಿದೆ.

ಮಿಸ್ ಯೂನಿವರ್ಸ್ 2025
ವಿಶ್ವ ಸುಂದರಿಯ ಪಟ್ಟಕ್ಕೇರಲು ಅದೆಷ್ಟೋ ವರ್ಷಗಳ ಸತತ ದುಡಿಮೆ, ಕನಸು, ಪರಿಶ್ರಮ, ದೇಹದಂಡನೆ ಎಲ್ಲವೂ ನಡೆದಿರುತ್ತದೆ. ಆದರೆ, ಇನ್ನೇನು ಆ ಕನಸು ನನಸಾಗಲಿದೆ ಎನ್ನುವ ಹೊತ್ತಿನಲ್ಲಿಯೇ ಅಂತಿಮ ಕ್ಷಣದಲ್ಲಿ ಆ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವೇ ಇಲ್ಲ ಎಂದಾದರೆ ಆ ವೇದನೆ ವರ್ಣಿಸುವುದೂ ಕಷ್ಟ. ಆದರೆ ಅಂಥದ್ದೇ ಸ್ಥಿತಿ ಈ ವರ್ಷದ ಮಿಸ್ ಯೂನಿವರ್ಸ್ (Miss Universe 2025) ಸ್ಪರ್ಧೆಯಲ್ಲಿ ಎದುರಾಗಿದೆ.
ಮಿಸ್ ಯೂನಿವರ್ಸ್ ಜಮೈಕಾ
ಬ್ಯಾಂಕಾಕ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಪ್ರಾಥಮಿಕ ಸ್ಪರ್ಧೆಯ ಸಮಯದಲ್ಲಿ ಮಿಸ್ ಯೂನಿವರ್ಸ್ ಜಮೈಕಾ 2025 ಕುಸಿದುಬಿದ್ದಿದ್ದಾರೆ. ಕ್ಯಾಟ್ವಾಕ್ನಲ್ಲಿ ಹೆಜ್ಜೆ ಹಾಕುತ್ತಿದ್ದ ಸಂದರ್ಭದಲ್ಲಿ ಅವರು ಬಿದ್ದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಕ್ಯಾಟ್ ವಾಕ್ನಲ್ಲಿ ಆಘಾತ
ಥೈಲ್ಯಾಂಡ್‌ನ ಪಾಕ್ ಕ್ರೆಟ್‌ನಲ್ಲಿರುವ ಇಂಪ್ಯಾಕ್ಟ್ ಅರೆನಾದಲ್ಲಿ ಸ್ಪರ್ಧೆಗೆ ವೇದಿಕೆ ಸಜ್ಜಾಗಿತ್ತು. ಸಂಜೆಯ ನಿಲುವಂಗಿ ವಿಭಾಗದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಕಿತ್ತಳೆ ಬಣ್ಣದ ನಿಲುವಂಗಿಯನ್ನು ಧರಿಸಿದ್ದ ಹೆನ್ರಿ, ಆತ್ಮವಿಶ್ವಾಸದಿಂದ ವೇದಿಕೆಯಾದ್ಯಂತ ಸಾಗುತ್ತಿದ್ದಾಗ ಆಕಸ್ಮಿಕವಾಗಿ ವೇದಿಕೆಯ ಅಂಚಿಗೆ ಕಾಲಿಟ್ಟಿದ್ದರಿಂದ ಬಿದ್ದು ಬಿಟ್ಟಿದ್ದಾರೆ.
ಅಂಚಿನಲ್ಲಿ ಕಾಲು ಜಾರಿತು!
ಹೀಲ್ಸ್ ಧರಿಸಿ ಬಂದಿದ್ದ ಅವರು, ವೇದಿಕೆಯ ತುಂಬೆಲ್ಲಾ ಹೆಜ್ಜೆ ಹಾಕುತ್ತಿದ್ದರು. ಆಗ ಅಂಚಿನ ಬಗ್ಗೆ ಅವರು ಗಮನಿಸಲೇ ಇಲ್ಲ. ಕಾಲಿಟ್ಟಿದ್ದರಿಂದ ಬಿದ್ದಿದ್ದಾರೆ. ಹಠಾತ್ ಕುಸಿತದಿಂದಾಗಿ ಪ್ರೇಕ್ಷಕರು ಆತಂಕದಿಂದ ವೇದಿಕೆ ಮೇಲೆ ಧಾವಿಸಿದರು. ಮಿಸ್ ಯೂನಿವರ್ಸ್ ಸಂಸ್ಥೆಯ ಅಧ್ಯಕ್ಷ ರೌಲ್ ರೋಚಾ ಮತ್ತು ಮಿಸ್ ಯೂನಿವರ್ಸ್ ಥೈಲ್ಯಾಂಡ್ ನಿರ್ದೇಶಕ ನವಾತ್ ಇಟ್ಸರಾಗಗ್ರಿಸಿಲ್ ತಕ್ಷಣ ಆಕೆಯನ್ನು ಎಬ್ಬಿಸಿ ಕರೆದುಕೊಂಡು ಹೋದರು. ಹೆನ್ರಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಪರ್ಧೆಗೆ ಬರೋದು ಡೌಟ್
ದಿ ನ್ಯೂಸ್ ಇಂಟರ್‌ನ್ಯಾಷನಲ್ ಪ್ರಕಾರ, ಹೆನ್ರಿ ಅವರನ್ನು ಸ್ಟ್ರೆಚರ್‌ನಲ್ಲಿ ಕರೆದುಕೊಂಡು ಹೋಗಲಾಗಿದೆ. ಏಟು ಸ್ವಲ್ಪ ಹೆಚ್ಚಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ತೀವ್ರ ನಿಗಾ ವಹಿಸಿ ಚಿಕಿತ್ಸೆ ನಿಡಲಾಗುತ್ತಿದೆ. ಆದರೆ ನಾಳೆ ಅಂದರೆ ನವೆಂಬರ್ 21ರಂದು ನಡೆಯಲಿರುವ ಮಿಸ್ ಯೂನಿವರ್ಸ್ 2025 ಫೈನಲ್‌ನಲ್ಲಿ ಅವರ ಭಾಗವಹಿಸುವಿಕೆ ಅನಿಶ್ಚಿತವಾಗಿದೆ. ಏಕೆಂದರೆ ಇದುವರೆಗೆ ಚಿಕಿತ್ಸೆಯಲ್ಲಿ ಹೆನ್ರಿ ಇರುವ ಕಾರಣ, ನಾಳೆಯವರೆಗೆ ಸಂಪೂರ್ಣ ಗುಣವಾಗುವುದು ಕಷಟ ಎನ್ನಲಾಗುತ್ತಿದೆ.
ಯಾರೀ ಹೆನ್ರಿ?
28 ವರ್ಷದ ಹೆನ್ರಿ, ನೇತ್ರಶಾಸ್ತ್ರಜ್ಞರು ಮತ್ತು ವೆಸ್ಟ್ ಇಂಡೀಸ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ನಿವಾಸಿಯಾಗಿದ್ದಾರೆ. 2025 ರ ಮಿಸ್ ಯೂನಿವರ್ಸ್ ಜಮೈಕಾ ಕಿರೀಟವನ್ನು ಅಲಂಕರಿಸಿದ ಅವರು, ತಮ್ಮ ಸೀ ನೌ ಫೌಂಡೇಶನ್ ಮೂಲಕ ದೃಷ್ಟಿಹೀನ ಸಮುದಾಯಗಳ ಪರವಾಗಿ ವಕಾಲತ್ತು ವಹಿಸಿದ್ದಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ಅವರು ಸಂಗೀತದಲ್ಲಿಯೂ ತರಬೇತಿ ಪಡೆದಿದ್ದಾರೆ, ಹಾಡುಗಾರಿಕೆ ಮತ್ತು ಪಿಯಾನೋ ಎರಡರಲ್ಲೂ ಕೌಶಲ್ಯ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

