ಅನಾರೋಗ್ಯಕರ ಡಯೆಟ್‌ಗಳ ಬದಲು, ಡಯೆಟಿಷಿಯನ್ ಸೂಚಿಸಿದ ಈ ಸರಳ ಬೇಳೆ ಮತ್ತು ಸಲಾಡ್ ಊಟವನ್ನು ಸೇವಿಸಿ. ಈ ಆರೋಗ್ಯಕರ ಆಹಾರವು ಹೊಟ್ಟೆಯನ್ನು ತುಂಬಿಸುವುದಲ್ಲದೆ, ಒಂದು ತಿಂಗಳಲ್ಲಿ 10 ಕೆಜಿಯಷ್ಟು ತೂಕವನ್ನು ನೈಸರ್ಗಿಕವಾಗಿ ಇಳಿಸಲು ಸಹಾಯ ಮಾಡುತ್ತದೆ.
ಬೇಡದ್ದೆಲ್ಲಾ ತಿನ್ನುವುದು, ಆ ಬಳಿಕ ವೇಟ್ ಲಾಸ್ ಆಗಿಲ್ಲ ಎಂದು ಅಳುವುದು... ಇದು ಸರ್ವೇ ಸಾಮಾನ್ಯವಾಗಿದೆ. ತೂಕವನ್ನು ಇಳಿಸಿಕೊಳ್ಳುವ ಸಲುವಾಗಿ ಇಲ್ಲಸಲ್ಲದ ಡಯೆಟ್ ಫಾಲೋ ಮಾಡಿ ಜೀವ ಕಳೆದುಕೊಂಡವರೂ ಇದ್ದಾರೆ, ಇಲ್ಲದೇ ಹೋದರೆ ತೂಕ ನಷ್ಟ ಮಾಡುವುದಾಗಿ ಹೇಳಿ ಹರ್ಬಲ್ ಹೆಸರಿನಲ್ಲಿ ನೀಡುವ ಜ್ಯೂಸ್ ಮತ್ತು ಆಹಾರ ಪದಾರ್ಥ ಸೇವನೆಯಲ್ಲಿ ಮಾರಣಾಂತಿಕ ಕಾಯಿಲೆಗಳೂ ಒಳಗಾಗುತ್ತಿದ್ದಾರೆ. ಆ ಕ್ಷಣದಲ್ಲಿ ತೂಕ ನಷ್ಟವಾಗುವುದು ಸೇರಿದಂತೆ, ಮುಖದಲ್ಲಿ ಹೊಳಪು ಬರುವುದು ಎಲ್ಲವೂ ಆಗುವುದು ನಿಜವಾದರೂ ಅದು ಆ ಕ್ಷಣದಲ್ಲಿ ಸ್ಟೆರಾಯ್ಡ್ ಮಾಡುವ ತಂತ್ರ ಎನ್ನುವುದನ್ನು ತಿಳಿಯದೇ ಇವುಗಳ ಸೇವನೆ ಮಾಡಿ ಭಯಾನಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಇದನ್ನೂ ಓದಿ: ಬಿಳಿ ಮತ್ತು ಗುಲಾಬಿ ಸೀಬೆ ಹಣ್ಣು- ಎರಡಲ್ಲಿ ಯಾವುದು ಬೆಸ್ಟ್? ಯಾವುದು ಆರೋಗ್ಯಕರ? ಇಲ್ಲಿದೆ ಫುಲ್ ಡಿಟೇಲ್ಸ್...
ಒಂದು ತಿಂಗಳು ಸೇವಿಸಿ ನೋಡಿ
ಹಾಗಿದ್ದರೆ ಹೊಟ್ಟೆ ತುಂಬ ಆಹಾರ ಸೇವನೆ ಮಾಡಿಯೂ ತೂಕವನ್ನು ನಷ್ಟ ಮಾಡಿಕೊಳ್ಳಬಹುದು ಎಂದಿದ್ದಾರೆ ಈ ಡಯೆಟಿಷಿಯನ್. ಅವರು ಹೇಳಿರುವ ಆಹಾರವನ್ನು ಒಂದೇ ತಿಂಗಳು ಸೇವನೆ ಮಾಡಿದರೆ 10 ಕೆಜಿಯಷ್ಟು ತೂಕವನ್ನು ಕಳೆದುಕೊಳ್ಳಬಹುದು ಎನ್ನುವುದು ಅವರ ಮಾತು. ಮಧ್ಯಾಹ್ನ ಊಟಕ್ಕೆ ಇದನ್ನು ಸೇವಿಸಿ ನೋಡುವಂತೆ ಅವರು ಹೇಳಿದ್ದಾರೆ. ಇದರ ಅರ್ಥ ಊಟದ ಬದಲು ಒಂದು ತಿಂಗಳು ಇಷ್ಟನ್ನೇ ಸೇವಿಸಬೇಕು. ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳೂ ಇರುವುದರಿಂದ ಹೊಟ್ಟೆಯಂತೂ ಫುಲ್ ಆಗುತ್ತದೆ ಎನ್ನುವುದು ಅವರ ಮಾತು. ತಮ್ಮ ಬಳಿ ಬಂದಿರುವ ಪೇಷಂಟ್ನ ಮಾಹಿತಿಯನ್ನೂ ಅವರು ನೀಡಿದ್ದಾರೆ.
ಹಾಗಿದ್ದರೆ ಅವರು ಹೇಳಿದ್ದೇನು ನೋಡಿ.
ಇದಕ್ಕೆ ಬೇಕಾಗಿರುವುದು
½ ಕಪ್ ತೊಗರಿ ಬೇಳೆ (ಅಥವಾ ಯಾವುದೇ ಬೇಳೆ)
* ನೀರು - ಅಗತ್ಯವಿರುವಂತೆ
* ಉಪ್ಪು, ಅರಿಶಿನ - ರುಚಿಗೆ
ಹಸಿ ಸಲಾಡ್‌ಗಾಗಿ
* ಸೌತೆಕಾಯಿ
* ಈರುಳ್ಳಿ
* ಕ್ಯಾರೆಟ್
* ಕೊತ್ತಂಬರಿ ಸೊಪ್ಪು
* ನಿಂಬೆ ರಸ - 1 ಚಮಚ
* ಬೇಕಿದ್ದರೆ: ಟೊಮೆಟೊ, ಕಪ್ಪು ಉಪ್ಪು, ಮೆಣಸು
ಮಾಡುವ ವಿಧಾನ ಹೀಗಿದೆ:
1. ಬೇಳೆಯನ್ನು ತೊಳೆದು ನೀರು, ಅರಿಶಿನ ಮತ್ತು ಉಪ್ಪಿನೊಂದಿಗೆ ಮೃದುವಾಗುವವರೆಗೆ ಬೇಯಿಸಿ.
2. ಒಂದು ಬಟ್ಟಲಿನಲ್ಲಿ, ಎಲ್ಲಾ ಹಸಿ ಸಲಾಡ್ ಪದಾರ್ಥಗಳನ್ನು ಮಿಶ್ರಣ ಮಾಡಿ.
3. ಬೆಚ್ಚಗಿನ ಬೇಳೆಯನ್ನು ಸಲಾಡ್‌ನೊಂದಿಗೆ ಅಥವಾ ಪಕ್ಕದಲ್ಲಿ ಮೇಲಕ್ಕೆತ್ತಿ ಬಡಿಸಿ.
4. ಈ ಆರೋಗ್ಯಕರ, ಹೊಟ್ಟೆ ತುಂಬಿಸುವ ಊಟವನ್ನು ಆನಂದಿಸಿ ಎಂದು ಅವರು ಹೇಳಿದ್ದಾರೆ.
ಇಲ್ಲಿದೆ ನೋಡಿ ಡಯೆಟೀಷಿಯನ್ ಹೇಳಿರುವ ಟಿಪ್ಸ್
ಇದನ್ನೂ ಓದಿ: ಕಳೆ ಎಂದು ಕಿತ್ತೆಸೆಯೋ 'ಮುಟ್ಟಿದರೆ ಮುನಿ' ಕಿತ್ತು ತನ್ನಿ... ಹಲವು ಮಾತ್ರೆಗಳಿಗೆ ಹೇಳಿ ಬೈಬೈ


