ಪ್ರಿಯಕರನ ಜೊತೆ ಮಲಗಿದ್ದ ವೇಳೆ ಆತ ಬಿಟ್ಟ ಹೂಸಿನಿಂದ ಸೋಂಕು ಉಂಟಾಗಿ ಏಳು ವರ್ಷ ನರಳಾಡಿದ ಪ್ರೇಯಸಿಯ ಕರುಣಾಜನಕ ಕಥೆ ಇದು!

ಮನುಷ್ಯನಿಗೆ ಹೊಟ್ಟೆಯಲ್ಲಿ ಸಮಸ್ಯೆಯಾದಾಗ, ಹೊಟ್ಟೆ ಉಬ್ಬರಿಸಿದಾಗ, ತಿಂದದ್ದು ಹೆಚ್ಚಾದಾಗ ಇಲ್ಲವೇ ಇನ್ನು ಏನೇನೋ ಕಾರಣಗಳಿಗೆ ಹೂಸು ಬರುವುದು ಸಾಮಾನ್ಯ. ಕೆಲವೊಮ್ಮೆ ಅದು ಅತಿಯಾದ ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಇದರಿಂದ ಒಂದಷ್ಟು ಹೊತ್ತು ಆ ಜಾಗದಲ್ಲಿ ಇರಲಿಕ್ಕೇ ಆಗಷ್ಟು ಅಸಹನೀಯ ಆಗುವುದು ಉಂಟು, ಮತ್ತೆ ಕೆಲವೊಮ್ಮೆ ಅದರ ವಾಸನೆಯಿಂದ ವಾಕರಿಕೆಯೂ ಬರುವುದು ಉಂಟು. ಆದರೆ ಇಲ್ಲೊಂದು ಪ್ರಕರಣದಲ್ಲಿ ವೈದ್ಯಲೋಕಕ್ಕೇ ಸವಾಲು ಎನ್ನಿಸುವ ರೀತಿಯಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರ ಬಿಟ್ಟ ಹೂಂಸಿನಿಂದಾಗಿ ಏಳು ವರ್ಷ ಸೋಂಕಿನಿಂದ ನರಳಾಡಿರುವ ಘಟನೆ ನಡೆದಿದೆ. ಇದರ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಮೆರಿಕದಲ್ಲಿ ಈ ಘಟನೆ ನಡೆದಿದೆ. ಕ್ರಿಸ್ಟೀನ್ ಕೊನೆಲ್ ಎಂಬಾಕೆ ಏಳು ವರ್ಷಗಳಿಂದ ನಿರಂತರ ಸೈನಸ್ ಸೋಂಕಿನಿಂದ ಬಳಲುತ್ತಿದ್ದು, ಅದಕ್ಕೆ ಏಳು ವರ್ಷಗಳ ಬಳಿಕ ಕಾರಣ ಕಂಡುಹಿಡಿದ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟಿಕ್‌ಟಾಕ್‌ನಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾಳೆ ಕ್ರಿಸ್ಟೀನ್ ಕೊನೆಲ್, 2016 ರಲ್ಲಿ ನಡೆದ ವಿಚಿತ್ರ ಘಟನೆಯ ನಂತರ ಸೋಂಕು ಪ್ರಾರಂಭವಾಯಿತು ಎಂದು ಆಕೆ ಹೇಳಿದ್ದಾಳೆ. ನನ್ನ ಗೆಳೆಯನ ಜೊತೆ ಮಲಗಿದ್ದ ವೇಳೆ ಈ ಸಮಸ್ಯೆ ಶುರುವಾಯಿತು ಎಂದಿದ್ದಾಳೆ. ಆಗ ನನಗೆ ಪಾದದ ಶಸ್ತ್ರಚಿಕಿತ್ಸೆ ಆಗಿತ್ತು. ಗೆಳೆಯನ ಜೊತೆ ಹೋಟೆಲ್​ ಒಂದರಲ್ಲಿ ವಿಶ್ರಮಿಸುತ್ತಿದ್ದೆ. ಆಗ ನನ್ನ ಲವರ್​ ಹಾಸಿಗೆ ಮೇಲೆ ಬೆತ್ತಲೆಯಾಗಿ ನಿಂತು ನನ್ನ ಮುಖದ ಬಳಿ ಜೋರಾಗಿ ಹೂಸು ಬಿಟ್ಟ. ಆಗ ನಾನು ಮಲಗಿದ್ದೆ. ನನಗೆ ಆ ಕ್ಷಣದಲ್ಲಿ ಉಸಿರಾಡಲು ಸಾಧ್ಯವಾಗಲಿಲ್ಲ ಕ್ರಿಸ್ಟೀನ್ ಕೊನೆಲ್ ಹೇಳಿಕೊಂಡಿದ್ದಾಳೆ.

ಅದಾದ ಸ್ವಲ್ಪ ಹೊತ್ತಿನ ಬಳಿಕ, ನನಗೆ ಉಸಿರಾಡಲು ತುಂಬಾ ಸಮಸ್ಯೆಯಾಯಿತು. ಆ ಕ್ಷಣದಿಂದ ಪ್ರತಿನಿತ್ಯವೂ ಮೂಗಿನ ಮೂಲಕ ಉಸಿರಾಡಲು ಆಗಲೇ ಇಲ್ಲ, ನಿರಂತರ ತಲೆನೋವು ಬರುತ್ತಿತ್ತು. ಮುಖವೆಲ್ಲ ಊದಿಕೊಂಡಂತೆ ಆಯಿತು. ಇಡೀ ದೇಹದಲ್ಲಿ ಸಮಸ್ಯೆ ಶುರುವಾಯಿತು. ಆದರೆ ಇದು ಆ ಹೂಂಸಿನ ಪ್ರಭಾವ ಎಂದು ನನಗೆ ತಿಳಿಯಲೇ ಇಲ್ಲ. ಎಲ್ಲಾ ವೈದ್ಯರ ಬಳಿ ತೋರಿಸಿದರೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಏಕೆಂದರೆ, ಹೂಂಸಿನ ಬಗ್ಗೆ ನಾನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆ ಬಗ್ಗೆ ವೈದ್ಯರಲ್ಲಿ ಹೇಳಿರಲಿಲ್ಲ ಎಂದಿದ್ದಾಳೆ ಕ್ರಿಸ್ಟೀನ್ ಕೊನೆಲ್.

ಹೀಗೆ ಒಂದೆರಡು ವರ್ಷ ಚಿಕಿತ್ಸೆ ಮುಂದುವರೆದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ವೈದ್ಯರೊಬ್ಬರು ಈ ಸಮಸ್ಯೆ ಶುರುವಾದ ದಿನದಿಂದ ಹಿಡಿದು ಇಲ್ಲಿಯವರೆಗೆ ನಡೆದ ಘಟನೆ ಹೇಳುವಂತೆ ಹೇಳಿದಾಗ, ಹೂಂಸಿನ ವಿಷಯ ಹೇಳಿದೆ. ನಂತರ ಅವರು ನನ್ನನ್ನು ತಪಾಸಣೆ ಮಾಡಿದಾಗ ಸೈನಸ್‌ಗಳಲ್ಲಿ ಇ- ಕೋಲಿ ಎನ್ನುವ ಬ್ಯಾಕ್ಟೀರಿ ಹೊಂದಿರುವುದು ತಿಳಿಯಿತು. ಇದು ಸಾಮಾನ್ಯವಾಗಿ ಕರುಳಿನಲ್ಲಿ ಕಂಡುಬರುವ ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು, ಇದು ಮುಖ್ಯವಾಗಿ ಆಹಾರ ವಿಷ ಅಥವಾ ಮೂತ್ರನಾಳದ ಸೋಂಕನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳಿದರು. ಹೂಂಸಿನ ವಿಷಯ ತಿಳಿಯುತ್ತಲೇ ಬ್ಯಾಕ್ಟೀರಿಯಾ ತನ್ನ ದೇಹವನ್ನು ಪ್ರವೇಶಿಸಿರಬಹುದು ಎಂದು ವೈದ್ಯರು ಅಂದುಕೊಂಡರು. ಆದರೆ ಇದು ಬಹಳ ಅಪರೂಪದಲ್ಲಿ ಅಪರೂಪ ಪ್ರಕರಣ ಎಂದು ಅವರು ಹೇಳುತ್ತಾರೆ ಎಂದಿರುವ ಯುವತಿ, ಏಳು ವರ್ಷಗಳಿಂದ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾದಗಳ ಶಸ್ತ್ರಚಿಕಿತ್ಸೆಯಿಂದಾಗಿ ರೋಗನಿರೋಧಕ ಶಕ್ತಿ ದುರ್ಬಲಗೊಂಡ ಕಾರಣ ಈ ಹೂಸು ಇಷ್ಟೆಲ್ಲಾ ಪ್ರಭಾವ ಬೀರಿದೆ ಎಂದು ವೈದ್ಯರು ಹೇಳಿರುವುದಾಗಿ ಆಕೆ ಹೇಳಿದ್ದಾರೆ. ಆದರೆ ಒಂದು ಹೂಸು ಇಷ್ಟೆಲ್ಲಾ ಸಮಸ್ಯೆ ತಂದೊಡ್ಡಬಹುದು ಎಂದು ಈ ಪ್ರಕರಣ ತಿಳಿಸಿಕೊಟ್ಟಿದೆ. ಇದಾದ ಬಳಿಕ ಆತನ ಜೊತೆ ಬ್ರೇಕಪ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾಳೆ.