ಒಂದೇ ಏಟಿಗೆ ಆಪ್ ಗಲಿಬಿಲಿ, ಪಕ್ಷ ತೊರೆದು 7 ಸಂಸದರು ಬಿಜೆಪಿಗೆ, ಉಳಿದಿರೋ ಮೂವರು ಯಾರು? ರಾಘವ್ ಚಡ್ಡಾಗೆ ಪಾಠ ಕಲಿಸಲು ಹೋದ ಆಮ್ ಆದ್ಮಿ ಪಾರ್ಟಿ ಕಂಗಾಲಾಗಿದೆ. 7 ಸಂಸದರು ಪಕ್ಷ ತೊರೆದು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ.
ನವದೆಹಲಿ (ಏ.24) ಆಮ್ ಆದ್ಮಿ ಪಾರ್ಟಿ ಕಂಗಾಲಾಗಿದೆ. ರಾಘವ್ ಚಡ್ಡಾಗೆ ಪಾಠ ಕಲಿಸಲು ಹೋದ ಆಮ್ ಆದ್ಮಿ ಪಾರ್ಟಿ ಹಾಗೂ ಅರವಿಂದ್ ಕೇಜ್ರಿವಾಲ್ ಇದೀಗ ದಿಕ್ಕೇ ತೋಚದೆ ಪರದಾಡುವ ಸ್ಥಿತಿ ಎದುರಾಗಿದೆ. ರಾಘವ್ ಚಡ್ಡಾ ಜೊತೆ 7 ರಾಜ್ಯಸಭಾ ಸಂದರು ಆಮ್ ಆದ್ಮಿ ಪಾರ್ಟಿ ತೊರೆದಿದ್ದಾರೆ. ಈ ಪೈಕಿ ಮೂವರು ಈಗಾಗಲೇ ಬಿಜೆಪಿ ಸೇರಿಕೊಂಡಿದ್ದಾರೆ. ಇನ್ನುಳಿದ ಸಂಸದರು ಶೀಘ್ರದಲ್ಲೇ ಅಧಿಕೃತವಾಗಿ ಬಿಜೆಪಿ ಸೇರಿಕೊಳ್ಳಲಿದ್ದಾರೆ. ರಾಜ್ಯಸಭೆಯಲ್ಲ 10 ಸಂಸದರನ್ನು ಹೊಂದಿದ ಆಮ್ ಆದ್ಮಿ ಪಾರ್ಟಿಯಲ್ಲಿ ಈಗ ಉಳಿದಿರೋದು ಕೇವಲ ಮೂವರು ಮಾತ್ರ.
ಆಮ್ ಆದ್ಮಿ ಪಾರ್ಟಿಗೆ ರಾಜೀನಾಮೆ ನೀಡಿದ 7 ಸಂದರು
- ರಾಘವ್ ಚಡ್ಡಾ
- ಸಂದೀಪ್ ಪಾಠಕ್
- ಅಶೋಕ್ ಮಿತ್ತಲ್
- ಸ್ವಾತಿ ಮಲಿವಾಲ್
- ಹರ್ಭಜನ್ ಸಿಂಗ್
- ರಾಜಿಂದರ್ ಗುಪ್ತ
- ವಿಕ್ರಮ ಸಹ್ನಿ
ಆಪ್ ರಾಜ್ಯಸಭೆ ಸಂಖ್ಯಾಬಲದಲ್ಲಿ ಬರೋಬ್ಬರಿ 7 ಮಂದಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಇದೀಗ ಆರವಿಂದ್ ಕೇಜ್ರಿವಾಲ್ ಬಲೈಗೆ, ಎಡಗೈಗಳಾಗಿ ಗುರುತಿಸಿಕೊಂಡಿದ್ದ ಕೇವಲ ಮೂವರು ಸಂಸದರು ಮಾತ್ರ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ. ಆಪ್ ಪ್ರಮುಖ ನಾಯಕ ಸಂಜಯ್ ಸಿಂಗ್, ಬಲ್ಬೀರ್ ಸಿಂಗ್ ಸೀಚೆವಾಲ್ ಹಾಗೂ ಎನ್‌ಡಿ ಗುಪ್ತಾ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ.
ಆಪರೇಷನ್ ಕಮಲ ಎಂದ ಆಪ್
ರಾಘವ್ ಚಡ್ಡಾ ಸೇರಿ ಆಪ್ ರಾಜ್ಯಸಭಾ ಸಂಸದರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆ ಕುರಿತು ಆಪ್ ಪಕ್ಷ ಪ್ರತಿಕ್ರಿಯಿಸಿದೆ. ಇದು ಆಪರೇಷನ್ ಲೋಟಸ್ ಎಂದಿದೆ. ಈ ಕುರಿತು ಮಾತನಾಡಿದ ಸಂಜಯ್ ಸಿಂಗ್ ಪಕ್ಷ ತೊರೆದವರ ವಿರುದ್ಧ ಹರಿಹಾಯ್ದಿದ್ದಾರೆ. ಏನೂ ಅಲ್ಲದ ರಾಘವ್ ಚಡ್ಡಾ ಅವರಿಗೆ ಆಮ್ ಆದ್ಮಿ ಪಕ್ಷ ಎಲ್ಲಾ ನೀಡಿದೆ. ಶಾಸಕನಾಗಿ ಮಾಡಿತು, ಬಳಿಕ ಸಂಸದನಾಗಿ ಮಾಡಿತು. ಆದರೆ ರಾಘವ್ ಚಡ್ಡ ಕೊನೆಗೆ ಬಿಜೆಪಿ ಮಡಿಲಲ್ಲಿ ಕುಳಿತುಕೊಂಡರು ಎಂದಿದ್ದಾರೆ.


