ಪರೀಕ್ಷೆಗ ಓದುತ್ತಿದ್ದ ಐಆರ್ಎಸ್ ಅಧಿಕಾರಿ ಪುತ್ರಿ ಮೇಲೆ ಅತ್ಯಾ**ರ, ಕೊಲೆ, ಬೆಚ್ಚಿಬಿದ್ದ ದೆಹಲಿ, 19 ವರ್ಷದ ಆರೋಪಿ ಇದೇ ಅದಿಕಾರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಪ್ಲಾನ್ ಮಾಡಿ ಕೊಲೆ, ಅತ್ಯಾ**ರ ಹಾಗೂ ಕಳ್ಳತನ ನಡೆಸಿದ್ದಾನೆ.
ದೆಹಲಿ (ಏ.23) ಐಎಎಸ್ ಪರೀಕ್ಷೆ ಓದುತ್ತಿದ್ದ 22 ವರ್ಷದ ಐಐಟಿ ಪದವಿಧರೇ, ಐಆರ್ಎಸ್ ಅಧಿಕಾರಿಯ ಪುತ್ರಿಯ ಮೇಲೆ ಭೀಕರ ಅತ್ಯಾ**ರ ನಡೆದಿದೆ. ಮಾರಾಕಾಸ್ತ್ರಗಳಿಂದ ಆಕೆ ಮೇಲೆ ದಾಳಿ ನಡೆಸಿ ಪ್ರಜ್ಞೆ ತಪ್ಪುತ್ತಿದ್ದಂತೆ ಅತ್ಯಾ**ರ, ನಡೆಸಲಾಗಿದೆ. ಬಳಿಕ ಹತ್ಯೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ದೆಹಲಿಯ ಕೈಲಾಶ್ ನಗರದಲ್ಲಿ ನಡೆದಿದೆ. ಅಧಿಕಾರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ರಾಹುಲ್ ಮೀನಾ ಕೃತ್ಯ ಎಸಗಿ ಪರಾರಿಯಾಗಿದ್ದ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಯನ್ನು ಆರೆಸ್ಟ್ ಮಾಡಲಾಗಿದೆ.
ರಾಷ್ಟ್ರರಾಜಧಾನಿಯಲ್ಲಿ ಅತ್ಯಂತ ಭೀಕರ ಘಟನೆಗಳು ನಡೆದಿದೆ. ನಿರ್ಭಯಾ ಪ್ರಕರಣ ಸೇರಿದಂತೆ ಹಲವು ಘಟನೆಗಳು ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಈ ಪ್ರಕರಣ ಅತ್ಯಂತ ಕ್ರೂರ ಹಾಗೂ ಭೀಕರ ಘಟನೆ ಪಟ್ಟಿಗೆ ಸೇರಿಕೊಂಡಿದೆ. ಇಲ್ಲಿ ಕೇವಲ ಅತ್ಯಾ**ರ ಮಾತ್ರವಲ್ಲ, ದಾಳಿ, ದರೋಡೆ, ಕೊಲೆ ಸೇರಿದೆ. ಐಆರ್ಎಸ್ ಅಧಿಕಾರಿ ಹಾಗೂ ದಂತ ವೈದ್ಯ ಪುತ್ರಿ ಐಐಟಿ ಮುಗಿಸಿ ಐಎಎಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಘಟನೆ ನಡೆದಿದ್ದು ಹೇಗೆ?
19 ವರ್ಷದ ರಾಹುಲ್ ಮೀನಾ ಹೆಸರಿನ ಆರೋಪಿ ಇದೇ ಅಧಿಕಾರಿ ಮನೆಯಲ್ಲಿ 8 ತಿಂಗಳು ಮನೆಗೆಲಸ ಮಾಡಿದ್ದ. ಈ ವೇಳೆ ಮನೆ ಸಂಪೂರ್ಣ ವಿವರ ಕಲೆ ಹಾಕಿದ್ದ. ಇದರ ನಡುವೆ ರಾಹುಲ್ ಮೀನಾ ಕಳ್ಳತನ ಪ್ರಯತ್ನ ನಡೆಸಿದ್ದ. ಇಷ್ಟೇ ಅಲ್ಲ ಈತನ ನಡೆತೆ ಕುರಿತು ಪುತ್ರಿ ತಂದೆ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಈತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
ಅಧಿಕಾರಿ ಹಾಗೂ ಪತ್ನಿ ದಂತ ವೈದ್ಯ ಬೆಳಗ್ಗೆ 6.15ಕ್ಕೆ ಜಿಮ್ ಅಭ್ಯಾಸಕ್ಕಾಗಿ ತೆರಳಿದ್ದಾಳೆ. ಈ ವೇಳೆ ಪುತ್ರಿ ಪರೀಕ್ಷೆಗೆ ತಯಾರಿ ನಡೆಸಲು ಎದ್ದು ಓದಲು ಆರಂಭಿಸಿದ್ದಾಳೆ. ಆರೋಪಿ ರಾಹುಲ್ ಮೀನಾ 6.30ಕ್ಕೆ ಮನೆಗೆ ನುಗ್ಗಿದ್ದಾನೆ. ಟರೇಲ್ ಮೇಲೆ ತೆರಳಿ ಈಕೆಯ ಕೊಠಡಿಗೆ ತೆರಳಿದ್ದಾನೆ. ಈಕೆಯ ಹಿಂದಿನಿಂದ ತೆರಳಿ ದಾಳಿ ಮಾಡಿದ್ದಾನೆ. ಸಿಕ್ಕ ವಸ್ತುವಿನಲ್ಲಿ ದಾಳಿ ಮಾಡಾಗ ಅರೆ ಪ್ರಜ್ಞಾವಸ್ತೆಯಲ್ಲಿ ಆಕೆ ಬಿದ್ದಿದ್ದಾಳೆ. ಬಳಿಕ ಅತ್ಯಾ**ರ ಎಸಗಿದ್ದಾನೆ. ಅತ್ಯಾ**ರ, ಎಸಗಿದ ಬಳಿಕ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ಆಕೆ ಮೃತಪಟ್ಟಿದ್ದಾಳೆ.
ಟರೇಸ್ ಮೇಲಿನಿಂದ ಕೆಳಗಿ ಲಾಕರ್ ಕೊಠಡಿಗೆ ಆಕೆಯ ಶವವನ್ನು ಎಳೆದು ತಂದು ಫಿಂಗರ್ ಪ್ರಿಂಟ್ ಕೀಯನ್ನು ಆಕೆಯ ಬೆರಳಿನಿಂದ ಓಪನ್ ಮಾಡುವ ಪ್ರಯತ್ನ ಮಾಡಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಬಳಿಕ ತನ್ನಲ್ಲಿದ್ದ ಆಯುಧಗಳಿಂದ ಲಾಕರ್ ಒಡೆದು ನಗದು, ಚಿನ್ನ ಬೆಳ್ಳಿ ದೋಚಿದ್ದಾನೆ. ಸರಿಸುಮಾರು 2 ರಿಂದ 2.5 ಲಕ್ಷ ರೂಪಾಯಿ ನಗದು ಹಾಗೂ ಆಭರಣ ದೋಚಿದ್ದಾನೆ.
ಅದೇ ಮನೆಯಲ್ಲಿ ತನ್ನ ಡ್ರೆಸ್, ಶೂ ಕಳಚಿ ತಾನು ತಂದಿದ್ದ ಹೊಸ ಬಟ್ಟೆ ಧರಿಸಿ ತೆರಳಿದ್ದಾನೆ. ತೆರುವಾಗ ತನ್ನ ಮೊಬೈಲ್ ಫೋನ್ 10 ಸಾವಿರ ರೂಪಾಯಿಗೆ ಮಾರಾಟ ಮಾಡಿ ಬಳಿಕ 6500 ರೂಪಾಯಿಗೆ ಕ್ಯಾಬ್ ಬುಕ್ ಮಾಡಿದ್ದಾನೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದ್ವಾರಕ ಬಳಿ ಆರೋಪಿಯನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.


