70ರ ಹರೆಯದಲ್ಲಿ ಸಿಕ್ಕಿಂ ಸುಂದರಿಗೆ ಮನಸೋತ ಆನಂದ್ ಮಹೀಂದ್ರ,ಅವಳಂದಕ್ಕೆ ಕಳೆದುಹೋಗ್ತೀರಿ, ಹೌದು ಆಕೆಯ ಸೌಂದರ್ಯಕ್ಕೆ ಉದ್ಯಮಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಯಾರೀಕೆ? ಆಕೆಯ ವಿಡಿಯೋ ಹಂಚಿಕೊಂಡಿದ್ದಾರೆ.

ಮುಂಬೈ (ಡಿ.22) ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಕಳಕಳಿ, ಅವಶ್ಯಕತೆ ಇರುವವರಿಗೆ ನೆರವು, ವಿದ್ಯಾರ್ಥಿಗಳಿಗೆ ಸಹಾಯಧನ, ಸ್ಕಾಲರ್‌ಶಿಪ್ ಸೇರಿದಂತೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದಾರೆ. ಭಾರತದ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಆನಂದ್ ಮಹೀಂದ್ರ ತನ್ನ ತಾಯಿಯ ರಿಂಗ್ ಹಿಡಿದು ಅನುರಾಧಾಗೆ ಪ್ರಪೋಸ್ ಮಾಡಿದ್ದರು. 1985ರಲ್ಲಿ ಅನಂದ್ ಮಹೀಂದ್ರ, ಅನುರಾಧ ಮಹೀಂದ್ರ ಮದುವೆಯಾಗಿದ್ದಾರೆ. ಇವರಿಗೆ ದಿವ್ಯ ಮಹೀಂದ್ರ ಹಾಗೂ ಆಲಿಕಾ ಮಹೀಂದ್ರ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. 70ರ ಹರೆಯದ ಆನಂದ್ ಮಹೀಂದ್ರ ಇದೀಗ ಸಿಕ್ಕಿಂದ ಸುಂದರಿಗೆ ಮನ ಸೋತಿದ್ದಾರೆ. ಆಕೆಯ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಯಾರಿದು ಸಿಕ್ಕಿಂ ಸುಂದರಿ?

ಪದ್ಮಭೂಷಣ ಪ್ರಶಸ್ತಿ ವಿಜೇತ ಉದ್ಯಮಿ ಆನಂದ್ ಮಹೀಂದ್ರ ಸಿಕ್ಕಿಂ ಸುಂದರಿಗೆ ಮನಸೋತಿದ್ದಾರಾ? ಹೌದು, ಈ ಸಿಕ್ಕಿಂ ಸುಂದರಿ ಹೆಸರು ಚುಕಾ. ಸೈಂಟ್‌ಫಿಕ್ ಹೆಸರು ರೆಯುಮ್ ನೊಬೈಲ್. ಇದರ ನಿಕ್ ನೇಮ್ ಗ್ಲಾಸ್ ಹೌಸ್ ಪ್ಲಾಂಟ್. ಹೌದು, ಈ ಸಿಕ್ಕಿಂ ಸುಂದರಿ ಭಾರತದ ವಿಶೇಷ ಹೂವು. ಸಿಕ್ಕಿಂ ಪರ್ವತ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಹೂವು. ಹಿಮಾಲಯನ್ ವಲದ ಬೆಟ್ಟದಲ್ಲಿ ಈ ಹೂವು ಕಾಣಸಿಗುತ್ತದೆ. ಭೂಮಿಯಿಂದ ಬರೋಬ್ಬರಿ 4000 ದಿಂದ 4,800 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ಈ ಹೂವು ಅರಳುತ್ತದೆ. ಈ ಸಿಕ್ಕಿಂ ಸುಂದರಿಯ ಸೌಂದರ್ಯಕ್ಕೆ ಎಂತವರೂ ಕಳೆದು ಹೋಗ್ತಾರೆ.

ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ

ಸಿಕ್ಕಿ ಸುಂದರಿಯ ವಿಡಿಯೋವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಸಿಕ್ಕಿಂ ಸುಂದರಿ ಎಂದು ಖದ್ದು ಆನಂದ್ ಮಹೀಂದ್ರ ಹೆಸರಿಟ್ಟಿದ್ದಾರೆ. ಇದು ದಶಕಗಳಿಗೊಮ್ಮೆ ಬಿಡುವ ಹೂವು. ಗಾಜಿನಮನೆಯಂತ ಹೂವು ಇದು. ಇದು ಪರ್ವತಗಳ ನಡುವೆ ಬೆಳಗುವ ಗೋಪುರದಂತಿದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ಮೊನೋಕಾರ್ಪಿಕ್ ಸಸ್ಯ 7 ರಿಂದ 30 ವರ್ಷದ ವರೆಗೆ ಬೆಳೆಯುತ್ತದೆ. ಬಳಿಕ ಹೂವು ಬಿಡುತ್ತದೆ. 7 ರಿಂದ 30 ವರ್ಷದ ವರೆಗೆ ಇದು ಹೂವು ಬಿಡುವುದಿಲ್ಲ. ತನ್ನ ಎಲ್ಲಾ ಶಕ್ತಿಯನ್ನು ಸಸ್ಯ ಇಟ್ಟುಕೊಂಡು ಹೂವು ಬಿಡುತ್ತದೆ. ಬಳಿಕ ಹೂವು 2 ಮೀಟರ್ ಎತ್ತರವಾಗಿ ಬೆಳೆಯುತ್ತದೆ. ಈ ಹೂವಿನಲ್ಲಿ ಸಣ್ಣ ಬೀಜಗಳಿರುತ್ತದೆ. ಈ ಹೂವು ಬಾಡುತ್ತಿದ್ದಂತೆ ಬೀಜಗಳು ಬಲಿತುಕೊಳ್ಳುತ್ತದೆ. ಈ ಬೀಜಗಳು ಮತ್ತೆ ಸಸ್ಯವಾಗಿ 7 ರಿಂದ 30 ವರ್ಷ ಬೆಳೆಯುತ್ತದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ಭಾರತದಲ್ಲಿರುವ ಈ ರೀತಿಯ ಅಪರೂಪದ ಹಾಗೂ ವಿಶೇಷ ಸಸ್ಯಗಳು, ಹೂವುಗಳ ಕುರಿತು ನಮ್ಮ ಪಠ್ಯ ಪುಸ್ತಕದಲ್ಲಿ ಪಠ್ಯವಿದೆಯಾ ಅನ್ನೋದು ಅನುಮಾನ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ಸಿಕ್ಕಿಂನ ಅತೀ ಎತ್ತರದ ಶಿಖರಗಳಲ್ಲಿ ಈ ರೀತಿಯ ಹೊಸತು ಅನ್ವೇಷಿಸಲು ಈ ಸಿಕ್ಕಿಂ ಸುಂದರಿ ಸ್ಪೂರ್ತಿ ಎಂದಿದ್ದಾರೆ.

Scroll to load tweet…

ಸೆಪ್ಟೆಂಬರ್‌ನಿಂದ ಫೆಬ್ರವರಿ ವರೆಗೆ ಈ ಹೂವುಗಳು ಸಾಮಾನ್ಯವಾಗಿ ಬಿಡುತ್ತದೆ. ಅತೀವ ಚಳಿಯಲ್ಲಿ ಚುಕಾ ಹೂವು ಬಿಡುತ್ತದೆ. ತಿಂಗಳು ಕಾಲ ಈ ಹೂವು ಅರಳಿರುತ್ತದೆ. ಆನಂದ್ ಮಹೀಂದ್ರ ಹಂಚಿಕೊಂಡ ಈ ಅಪರೂಪದ ಸಿಕ್ಕಿಂ ಸುಂದರಿ ಸೌಂದರ್ಯ ಕಣ್ತುಂಬಿಕೊಳ್ಳಿ.