ಪಾಕಿಸ್ತಾನ ಪ್ರಾಯೋಜಿತ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು PIB ಎಚ್ಚರಿಸಿದೆ. ಮಾಹಿತಿಯನ್ನು ಪರಿಶೀಲಿಸಿ, #PIBFactCheck ಗೆ ವರದಿ ಮಾಡಿ. ಆಪರೇಷನ್ ಸಿಂಧೂರ್‌ಗೆ ಆನಂದ್ ಮಹೀಂದ್ರಾ ಮತ್ತು ಶ್ರೀಧರ್ ವೆಂಬು ಬೆಂಬಲ ವ್ಯಕ್ತಪಡಿಸಿದ್ದಾರೆ. ವೆಂಬು, ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಅವರ ಅಧಿಕೃತ ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ ಒಂದು ಪ್ರಮುಖ ಎಚ್ಚರಿಕೆ ನೀಡಿದೆ. ಪಾಕಿಸ್ತಾನದಿಂದ ಪ್ರಾಯೋಜಿತವಾಗಿರುವ ನಕಲಿ ಮತ್ತು ಸುಳ್ಳು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ ಎಂಬ ಮಾಹಿತಿ ನೀಡಿದ್ದು, ಎಚ್ಚರಿಕೆಯಿಂದ ಇರಿ ಎಂದು ಸೂಚನೆ ನೀಡಲಾಗಿದೆ.

ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನೀವು ನೋಡುವ ಪ್ರತಿಯೊಂದು ಮಾಹಿತಿ ನಿಜವಾಗಿದೆಯೇ ಎಂಬುದನ್ನು ಸರಿಯಾಗಿ ಪರಿಶೀಲಿಸಿ. ಯಾರಾದರೂ ಸುಳ್ಳು ಸುದ್ದಿ ಹರಡುತ್ತಿರುವ ಸಾಧ್ಯತೆ ಇದೆ, ಆದ್ದರಿಂದ ನಂಬುವ ಮುನ್ನ ಎರಡು ಬಾರಿ ಚೆಕ್‌ ಮಾಡಿಕೊಳ್ಳಿ ಎಂದು ವರದಿ ನೀಡಿದೆ.

ಪೋಸ್ಟ್‌ನಲ್ಲಿ ಪಿಐಬಿ ಹೇಳಿರುವುದೇನೆಂದರೆ:
"ಮುಂದಿನ ಕೆಲವು ದಿನಗಳಲ್ಲಿ ಪಾಕಿಸ್ತಾನದ ಪ್ರಚಾರದಿಂದ ನಿಮ್ಮ ಸಾಮಾಜಿಕ ಮಾಧ್ಯಮ ತುಂಬಿರಬಹುದು. ಹೀಗಾಗಿ, ನೀವು ನೋಡುವ ಪ್ರತಿಯೊಂದು ಮಾಹಿತಿಯನ್ನೂ ಎಚ್ಚರಿಕೆಯಿಂದ ಪರಿಶೀಲಿಸಿ." ಪಿಐಬಿ ಫ್ಯಾಕ್ಟ್ ಚೆಕ್ ಇದು ಸರ್ಕಾರದ ಅಧಿಕೃತ ಸಂಸ್ಥೆಯಾಗಿದ್ದು, ಯಾವುದೇ ಶಂಕಾಸ್ಪದ (ಡೌಟ್‌ಫುಲ್) ಮಾಹಿತಿ, ವಿಶೇಷವಾಗಿ ಭಾರತೀಯ ಸೇನೆ ಅಥವಾ ಭಾರತ-ಪಾಕಿಸ್ತಾನ ಸಂಬಂಧಿತ ವಿಷಯಗಳ ಬಗ್ಗೆ ಇದ್ದರೆ, ತಕ್ಷಣವೇ ಅವರಿಗೆ ತಿಳಿಸಲು ನಾಗರಿಕರನ್ನು ಮನವಿ ಮಾಡಿದೆ.

ಅದನ್ನು #PIBFactCheck ಗೆ ವರದಿ ಮಾಡಿ.
ವಾಟ್ಸಾಪ್ ಸಂಖ್ಯೆ: +91 8799711259
ಇಮೇಲ್ ವಿಳಾಸ: factcheck@pib.gov.in

ನಿಮ್ಮ ಜವಾಬ್ದಾರಿ:
ಹೆಚ್ಚುವರಿ ಉದ್ವಿಗ್ನತೆ ಮತ್ತು ಗೊಂದಲವನ್ನು ತಪ್ಪಿಸಲು, ನೀವು ಓದುವ ಅಥವಾ ನೋಡುವ ಯಾವುದೇ ಸುದ್ದಿ ನಿಖರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾರಾದರೂ ನಕಲಿ ಸುದ್ದಿ ಹರಡುತ್ತಿದ್ದಾರೆ ಎಂದು ನಿಮಗೆ ಅನುಮಾನವಾದರೆ, ಪಿಐಬಿ ಫ್ಯಾಕ್ಟ್ ಚೆಕ್‌ಗೆ ವರದಿ ಮಾಡಿ.

Scroll to load tweet…

ಭಾರತ ಸರ್ಕಾರ ನಡೆಸುತ್ತಿರುವ ಆಪರೇಷನ್ ಸಿಂಧೂರ್ ಬಗ್ಗೆ ಜನಪ್ರಿಯ ಉದ್ಯಮಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಸಿಂಧೂರ್ ಬಗ್ಗೆ ಆನಂದ್ ಮಹೀಂದ್ರ ಮತ್ತು ಶ್ರೀಧರ್ ವೆಂಬು ಪ್ರತಿಕ್ರಿಯೆ ನೀಡಿದ್ದಾರೆ. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಟ್ವೀಟ್‌ನಲ್ಲಿ (ಇದೀಗ X ಎಂಬ ಪ್ಲಾಟ್‌ಫಾರ್ಮ್) ಹೀಗೆ ಬರೆದಿದ್ದಾರೆ:

“ನಮ್ಮ ಪ್ರಾರ್ಥನೆಗಳು ನಮ್ಮ ಯೋಧರೊಂದಿಗೆ ಇವೆ. ಒಂದು ದೇಶ.... ಎಲ್ಲರೂ ಒಟ್ಟಾಗಿ ನಿಲ್ಲುತ್ತೇವೆ.”

Scroll to load tweet…

ಜೊಹೊ ಕಂಪನಿಯ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಅವರು ಕೂಡ ಭಾರತೀಯ ಸೇನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅವರು ಆಪರೇಷನ್ ಸಿಂಧೂರ್ ಕುರಿತು ಭಾರತೀಯ ಸೇನೆಯ ಪ್ರಕಟಣೆಯೊಂದನ್ನು ಹಂಚಿಕೊಂಡು “ನ್ಯಾಯವು ದೊರೆತಿದೆ, ಜೈ ಹಿಂದ್.” ಎಂದು ಬರೆದಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ವೆಂಬು ಅವರು ಪ್ರಧಾನಮಂತ್ರಿ ಮೋದಿ ಅವರ ನೇತೃತ್ವವನ್ನು ಶ್ಲಾಘಿಸಿದ್ದು, “ನಮ್ಮ ಪ್ರಧಾನಿ ಮೋದಿ-ಜಿ ಅವರ ಶಕ್ತಿ ಮತ್ತು ನಿಶ್ಚಯದಿಂದಲೇ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂಟಿಯಾಗಿ ತೋರಿಸಲು ಮತ್ತು ಭಯೋತ್ಪಾದನೆಗೆ ತಕ್ಕ ಉತ್ತರ ನೀಡಲು ಸಾಧ್ಯವಾಯಿತು. ನಾವು ಬಲವಾಗಿ ಮತ್ತು ನಿಶ್ಚಯದಿಂದ ಇರಬೇಕು. ಶಕ್ತಿ ಇದ್ದರೆ ಮಾತ್ರ ಶಾಂತಿ ಸಾಧ್ಯ. ದುರ್ಬಲತೆ ಶತ್ರುಗಳಿಗೆ ಧೈರ್ಯ ನೀಡುತ್ತದೆ. ಶಕ್ತಿಯ ಮೂಲಕ ಶಾಂತಿ. ಜೈ ಹಿಂದ್.” ಎಂದು ಬರೆದುಕೊಂಡಿದ್ದಾರೆ.

Scroll to load tweet…