ನಿನ್ನೆ ಮಹಾಶಿವರಾತ್ರಿಯನ್ನು ದೇಶದೆಲ್ಲೆಡೆಯ ಜನ ಸಂಭ್ರಮ ಸಡಗರದಿಂದ ಆಚರಿಸಿದ್ರು, ಸರತಿ ಸಾಲಿನಲ್ಲಿ ನಿಂತು ಜನ ದೇವರ ದರ್ಶನ ಪಡೆದರು. ಸನಾತನ ಧರ್ಮದ ಗಂಧಗಾಳಿ ಇಲ್ಲದ ದೂರದ ದೇಶದಲ್ಲೂ ಜನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿನ್ನೆ ಮಹಾಶಿವರಾತ್ರಿಯನ್ನು ದೇಶದೆಲ್ಲೆಡೆಯ ಜನ ಸಂಭ್ರಮ ಸಡಗರದಿಂದ ಆಚರಿಸಿದ್ರು, ದೇಶದೆಲ್ಲೆಡೆಯ ಶಿವ ದೇಗುಲಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜನರು ದೇವರ ದರ್ಶನ ಪಡೆದರು. ಅನೇಕ ಭಕ್ತರು ಪ್ರಾರ್ಥನೆ, ಉಪವಾಸ ಮತ್ತು ಮಾಡುತ್ತಾ ರಾತ್ರಿಯಿಡೀ ಸಭೆ ಸಮಾರಂಭ ಜಾಗರಣೆಗಾಗಿ ಒಟ್ಟು ಸೇರಿದರು. ಹೀಗೆ ಭಾರತದಲ್ಲಿ ದೇವಾಲಯಗಳು ಮತ್ತು ಮನೆಗಳಲ್ಲಿ ಆಚರಣೆಗಳು ನಡೆಯುತ್ತಿರುವಾಗ ಸನಾತನ ಧರ್ಮದ ಗಂಧಗಾಳಿ ಇಲ್ಲದ ದೂರದ ದೇಶದಲ್ಲೂ ಜನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆದ ವೀಡಿಯೋದಲ್ಲಿ ಶಿವನ ಭಕ್ತರು ಕಿರಿದಾದ ಓಣಿಯಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ತಾಳ್ಮೆಯಿಂದ ನಿಂತು, ಪೂಜಾ ಸಾಮಗ್ರಿಗಳನ್ನು ಹಿಡಿದು ಪ್ರಾರ್ಥನೆ ಸಲ್ಲಿಸಲು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಸೂರ್ಯನ ಮೊದಲ ಕಿರಣಗಳು ಬೀಳುವ ಮೊದಲೇ ಜನರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಅತ್ಯಂತ ಭಕ್ತಿಯಿಂದ ಶಿವನ ಆಶೀರ್ವಾದ ಪಡೆಯಲು ಸಾಲುಗಟ್ಟಿ ನಿಂತರು. ಇದು ಭಾರತದಾದ್ಯಂತ ಸಾಮಾನ್ಯ ದೃಶ್ಯವಾಗಿದ್ದರೂ, ವೀಡಿಯೊದಲ್ಲಿ ಸೆರೆಹಿಡಿಯಲಾದ ದೃಶ್ಯವೂ ಭಾರತದ್ದು ಅಲ್ಲ, ಹೀಗಾಗಿ ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

ದುಬೈನ ದೇವಾಲಯದ ಹೊರಗೆ ಸಾಲುಗಟ್ಟಿ ನಿಂತ ಭಕ್ತರು

ಈ ದೃಶ್ಯವನ್ನು ಭಾರತದಲ್ಲಿ ಜನ ದೇವರ ದರ್ಶನಕ್ಕಾಗಿ ನಿಂತ ಸರತಿ ಸಾಲು ಎಂದು ಸುಲಭವಾಗಿ ತಪ್ಪಾಗಿ ಗ್ರಹಿಸಬಹುದು. ಆದರೆ ಇದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಹಿಂದೂ ದೇವಾಲಯದ ಹೊರಗಿನ ದೃಶ್ಯ. ದುಬೈನಲ್ಲಿರುವ ದೇವಾಲಯ ಇದಾಗಿದ್ದು, ಇಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದಲೇ ಭಕ್ತರು ಕಿರಿದಾದ ಹಾದಿಯ ಅಂಚುಗಳ ಉದ್ದಕ್ಕೂ ಎರಡು ಅಚ್ಚುಕಟ್ಟಾದ ಗೆರೆಗಳನ್ನು ರೂಪಿಸಿ, ದಾರಿಹೋಕರು ನಡೆದುಕೊಂಡು ಹೋಗಲು ಮಧ್ಯದಲ್ಲಿ ಜಾಗವನ್ನು ಬಿಟ್ಟು ದೇವರ ದರ್ಶನಕ್ಕಾಗಿ ನಿಂತಿದ್ದರು. ಅನೇಕರು ಶಿವನ ಪೂಜೆಗೆ ಬೇಕಾದ ಹಣ್ಣುಗಳು, ಹೂವುಗಳು, ನೀರು, ಹಾಲು ಮತ್ತು ಇತರ ಸಾಮಗ್ರಿಗಳಿಂದ ತುಂಬಿದ ಪೂಜಾ ಚೀಲಗಳನ್ನು ಹಿಡಿದುಕೊಂಡಿರುವುದು ಕಂಡು ಬಂತು.

ಇದನ್ನೂ ಓದಿ: ಪ್ರೇಮಿಗಳಿಗೆ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರವಿದು: ಭಾರತದಲ್ಲಿದೆ ಈ ಬಜೆಟ್ ಫ್ರೆಂಡ್ಲಿ ನಗರಿ

ಮಹಾಶಿವರಾತ್ರಿ ವೈಬ್ಸ್ ಇನ್ ಯುಎಇ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದು, ಲಕ್ಷಾಂತರ ಜನ ಈ ವೀಡಿಯೋ ನೋಡಿ ಅಚ್ಚರಿಯ ಜೊತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗಳಿಂದ ದೂರ ಹೋಗಿ ಅಲ್ಲಿ ನೆಲೆಸಿರುವ ಭಾರತೀಯರು ಶಿವರಾತ್ರಿಯನ್ನು ಹೇಗೆ ಆಚರಿಸಿದರು ಎಂಬುದನ್ನು ಈ ವೀಡಿಯೋ ತೋರಿಸುತ್ತಿದೆ. ದೇವಾಲಯ ಇರುವ ನಿಖರವಾದ ಸ್ಥಳ ಎಲ್ಲಿ ಎಂಬುದನ್ನು ಅವರು ಹಂಚಿಕೊಂಡಿಲ್ಲ,

ದುಬೈನಲ್ಲಿ ಮಹಾ ಶಿವರಾತ್ರಿ ಆಚರಣೆಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಟೆಂಟ್ ಕ್ರಿಯೇಟರ್‌ಗಳು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ದುಬೈನ ಜೆಬೆಲ್ ಅಲಿಯಲ್ಲಿರುವ ಹಿಂದೂ ದೇವಾಲಯದ ಹೊರಗೆ ಜನ ಸಾಲುಗಟ್ಟಿ ನಿಂತಿರುವ ದೃಶ್ಯವನ್ನು ಕಾಣಬಹುದು.ದುಬೈನ ಹಿಂದೂ ದೇವಾಲಯದಲ್ಲಿ ಮಹಾ ಶಿವರಾತ್ರಿಯಂದು ಶಿವನ ದರ್ಶನಕ್ಕಾಗಿ ಬೆಳಗ್ಗೆಯಿಂದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದು ತುಂಬಾ ಬಿಸಿಲಿನ ದಿನವಾಗಿದ್ದರೂ, ಜನರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಲು ಹಿಂಜರಿಯುವುದಿಲ್ಲ... ಹರ್ ಹರ್ ಮಹಾದೇವ ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ನಕಲಿ ಆಸ್ಪತ್ರೆ : ಪಿಯುಸಿ ವಿದ್ಯಾರ್ಥಿಯೇ ಡಾಕ್ಟರ್‌: ಸಿಸೇರಿಯನ್ ಮಾಡಲು ಹೋಗಿ ಮಹಿಳೆ ಸಾವು

View post on Instagram

View post on Instagram