- Home
- News
- India News
- India Latest New Live: 10 ಸಾವಿರಕ್ಕಿಂತ ಹೆಚ್ಚು UPIನಲ್ಲಿ ಹಣ ಹಾಕ್ತೀರಾ? ಇನ್ಮುಂದೆ ಹೊಸ ರೂಲ್ಸ್- ಏನಿದು ನಿಯಮ, ಯಾರಿಗೆಲ್ಲಾ ಅನ್ವಯ
India Latest New Live: 10 ಸಾವಿರಕ್ಕಿಂತ ಹೆಚ್ಚು UPIನಲ್ಲಿ ಹಣ ಹಾಕ್ತೀರಾ? ಇನ್ಮುಂದೆ ಹೊಸ ರೂಲ್ಸ್- ಏನಿದು ನಿಯಮ, ಯಾರಿಗೆಲ್ಲಾ ಅನ್ವಯ

ಪಾಟ್ನಾ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರಲ್ಲ ಎನ್ನುವುದಕ್ಕೆ ಸದ್ಯ ಬಿಹಾರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ. 2023ರಲ್ಲಿ ಎನ್ಡಿಎ ಕೂಟ ತೊರೆದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕಾಂಗ್ರೆಸ್ ಸಾರಥ್ಯದ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ್ದರು. ಇದು ಬಿಜೆಪಿಯಲ್ಲಿದ್ದ ಸಾಮ್ರಾಟ್ ಚೌಧರಿಗೆ ಹಿಡಿಸಿರಲಿಲ್ಲ. ಆಗ ಅವರು ''ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತೇನೆ. ಅಲ್ಲಿಯ ತನಕ ಪೇಟ ಧರಿಸಿಯೇ ಇರುತ್ತೇನೆ'' ಎಂದು ಪ್ರತಿಜ್ಞೆ ಮಾಡಿದರು. ಅದರಂತೆ ಸದಾ ಪೇಟ ಧರಿಸಿಯೇ ಇರುತ್ತಿದ್ದರು.
ಇಂಡಿ ಕೂಟಕ್ಕೆ ಹಾರಿದ ವರ್ಷಗಳ ಬಳಿಕ ನಿತೀಶ್ ಮತ್ತೆ ಎನ್ಡಿಎಗೆ ಸೇರಿದರು. ಆಗ ಸಾಮ್ರಾಟ್ ಅಯೋಧ್ಯೆಗೆ ತೆರಳಿ ರಾಮನ ಸಮ್ಮುಖದಲ್ಲಿ ತಮ್ಮ ಪೇಟ ಕಳಚಿದರು. '' ನಿತೀಶ್ ಕೂಟಕ್ಕೆ ಮರಳಿದ್ದಾರೆ. ಹೀಗಾಗಿ ಪೇಟ ಬಿಚ್ಚಿ ರಾಮನಿಗೆ ಸಮರ್ಪಿಸುತ್ತಿದ್ದೇನೆ '' ಎಂದಿದ್ದರು.
India Latest New Live 15 April 202610 ಸಾವಿರಕ್ಕಿಂತ ಹೆಚ್ಚು UPIನಲ್ಲಿ ಹಣ ಹಾಕ್ತೀರಾ? ಇನ್ಮುಂದೆ ಹೊಸ ರೂಲ್ಸ್- ಏನಿದು ನಿಯಮ, ಯಾರಿಗೆಲ್ಲಾ ಅನ್ವಯ
India Latest New Live 15 April 2026ಭಾರತದಲ್ಲಿ ಹೇಳದ Toxic ಚಿತ್ರದ ಬಹುದೊಡ್ಡ ಗುಟ್ಟು ಅಮೆರಿಕದಲ್ಲಿ ರಿವೀಲ್ ಮಾಡಿದ ಯಶ್! ನಟ ಹೇಳಿದ್ದೇನು?
India Latest New Live 15 April 2026RCB ಬೌಲರ್‌ಗಳ ಅಬ್ಬರಕ್ಕೆ ಎಲ್‌ಎಸ್‌ಜಿ ಉಡೀಸ್ - 150 ರನ್‌ಗಳ ಗಡಿ ದಾಟದ ಲಕ್ನೋ
ಈ ಬಾರಿಯ ಐಪಿಎಲ್‌ನಲ್ಲಿ ಬೌಲಿಂಗ್‌ನಲ್ಲಿ ನೀರಸ ನಿರ್ವಹಣೆ ತೋರುತ್ತಿದ್ದ ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದೆ. ರಸಿಕ್ ದರ್ ಅವರ 4 ವಿಕೆಟ್‌ಗಳ ನೆರವಿನಿಂದ ಎಲ್‌ಎಸ್‌ಜಿಯನ್ನು ಕೇವಲ 146 ರನ್‌ಗಳಿಗೆ ಕಟ್ಟಿಹಾಕಿದ್ದು, ಸುಲಭ ಗುರಿ ಬೆನ್ನಟ್ಟಲಿದೆ.
India Latest New Live 15 April 2026Rajinikanth - ರಜನಿ ತಲೈವರ್ 173 ಚಿತ್ರದಿಂದ ನಿರ್ದೇಶಕರು ಓಡಿ ಹೋಗ್ತಿರೋದ್ಯಾಕೆ? ಕಾರಣ ಇದೇನಾ?
ರಜನಿಕಾಂತ್ ನಟನೆಯ 'ತಲೈವರ್ 173' ಚಿತ್ರದ ಮೇಲೆ ಆರಂಭದಿಂದಲೂ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಸಿನಿಮಾ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಅದರ ಸುತ್ತ ನಡೆಯುತ್ತಿರುವ ಬದಲಾವಣೆಗಳು ಸದಾ ಚರ್ಚೆಯ ವಿಷಯವಾಗಿದೆ.
India Latest New Live 15 April 2026Arya Stunt - ಹಾಲಿವುಡ್ ರೇಂಜ್ ಸಾಹಸ - ಹೆಪ್ಪುಗಟ್ಟುವ ಚಳಿಯಲ್ಲಿ 90 ನಿಮಿಷ ನೀರೊಳಗೆ ಫೈಟ್ ಮಾಡಿದ ನಟ ಆರ್ಯ!
ನಿರ್ದೇಶಕ ಮನು ಆನಂದ್ ಅವರ ಆಕ್ಷನ್ ಥ್ರಿಲ್ಲರ್ 'ಮಿಸ್ಟರ್ ಎಕ್ಸ್' ಚಿತ್ರಕ್ಕಾಗಿ ನಟ ಆರ್ಯ ತೋರಿರುವ ಬದ್ಧತೆ ಇಡೀ ಚಿತ್ರರಂಗವನ್ನೇ ನಿಬ್ಬೆರಗಾಗಿಸಿದೆ. ಒಂದೂವರೆ ಗಂಟೆಗಳ ಕಾಲ ಅವರು ನೀರೊಳಗೇ ಇದ್ದು ಚಿತ್ರೀಕರಣಕ್ಕೆ ಸಹಕರಿಸಿದ್ದಾರೆ.
India Latest New Live 15 April 2026'ನಾರಿ ಶಕ್ತಿ' ಕಾರ್ಯಕ್ರಮದಲ್ಲೇ ವಿದ್ಯಾರ್ಥಿನಿಗೆ ಅವಮಾನ - ಸ್ಲೀವ್‌ಲೆಸ್ ಕುರ್ತಾ ಧರಿಸಿದ್ದಕ್ಕೆ ಕೇಂದ್ರ ಸಚಿವರ ಸ್ವಾಗತಕ್ಕೆ ತಡೆ!
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ 'ನಾರಿ ಶಕ್ತಿ' ಕಾರ್ಯಕ್ರಮದಲ್ಲಿ, ಸ್ಲೀವ್‌ಲೆಸ್ ಕುರ್ತಿ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬರನ್ನು ಕೇಂದ್ರ ಸಚಿವರಿಗೆ ಸ್ವಾಗತ ಕೋರದಂತೆ ತಡೆಯಲಾಗಿದೆ. ಮಹಿಳಾ ಸಬಲೀಕರಣದ ಕುರಿತಾದ ಕಾರ್ಯಕ್ರಮದಲ್ಲೇ ವಿದ್ಯಾರ್ಥಿನಿಯ ಉಡುಗೆಯ ಬಗ್ಗೆ ತಾರತಮ್ಯ ಎಸಗಲಾಗಿದೆ.
India Latest New Live 15 April 2026ಬಟ್ಟೆ ಬಿಚ್ಚಿ ಕಿಚ್ಚು ಹಚ್ಚಿದ ನಟಿ ಅಕೌಂಟ್‌ಗೆ ಹರಿದು ಬಂತು ಲಕ್ಷ ಲಕ್ಷ ಹಣ; ಕೇಸ್ ದಾಖಲು, ಟ್ವಿಸ್ಟ್ ಮೇಲೆ ಟ್ವಿಸ್ಟ್!
ಗ್ಲಾಮರ್ ಲೋಕದ ಗಮ್ಮತ್ತೇ ಅಂತಹದ್ದು! ಇಲ್ಲಿ ವಿವಾದಗಳು ಸುಮ್ಮನೆ ಬರುವುದಿಲ್ಲ, ಬಂದರೂ ಬರಿಗೈನಲ್ಲಿ ವಾಪಸ್ ಹೋಗುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಕಣ್ಣು ಆಕೆಯ ಮೇಲೆ ನೆಟ್ಟಿದೆ. ಹಣಕ್ಕಾಗಿ ಹಪಾಹಪಿಯೇ ಅಥವಾ ಸ್ಮಾರ್ಟ್ ಬಿಸಿನೆಸ್ಸಾ?
India Latest New Live 15 April 2026'ಆಂಟಿ' ಎಂದು ಕರೆವ ಮುನ್ನ ಎಚ್ಚರ! 2 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್ ಆದೇಶ- ಏನಿದು ಕೇಸ್?
ಭಾರತೀಯ ಮೂಲದ ಮಹಿಳೆಯೊಬ್ಬರು, ಸಹೋದ್ಯೋಗಿ 'ಆಂಟಿ' ಎಂದು ಕರೆದಿದ್ದಕ್ಕೆ ಕಿರುಕುಳದ ಕೇಸ್ ದಾಖಲಿಸಿದ್ದರು. ನ್ಯಾಯಾಲಯವು ಇದನ್ನು ವಯಸ್ಸು ಮತ್ತು ಲಿಂಗದ ಆಧಾರದ ಕಿರುಕುಳವೆಂದು ಪರಿಗಣಿಸಿ, ಮಹಿಳೆಗೆ ಸುಮಾರು ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
India Latest New Live 15 April 2026ಯಶ್ ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್ - 'ಟಾಕ್ಸಿಕ್' ಬಿಡುಗಡೆ ಮತ್ತೆ ಮುಂದಕ್ಕೆ? ರಿಲೀಸ್ ಡೇಟ್ ಬಗ್ಗೆ ಇಲ್ಲಿದೆ ಸತ್ಯ!
'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದೆ ಎಂದು ಹಲವು ವರದಿಗಳು ಹೇಳುತ್ತಿವೆ. ಈ ಸಿನಿಮಾ ಜೂನ್ 4, 2026 ರಂದು ತೆರೆಗೆ ಬರುವುದಿಲ್ಲ ಎಂದು ಸುದ್ದಿ ಹಬ್ಬಿದೆ.
India Latest New Live 15 April 2026ಆಶಾ ಭೊಸ್ಲೆ 250 ಕೋಟಿ ಆಸ್ತಿಗೆ ವಾರಸುದಾರ ಯಾರು? ಯಾವ್ಯಾವ ದೇಶದಲ್ಲಿವೆ ಸಂಪತ್ತು? ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ
92ನೇ ವಯಸ್ಸಿನಲ್ಲಿ ನಿಧನರಾದ ಗಾಯಕಿ ಆಶಾ ಭೋಸ್ಲೆ ಅವರು 200 ರಿಂದ 250 ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ಬಿಟ್ಟು ಹೋಗಿದ್ದಾರೆ. ಹಾಡುಗಾರಿಕೆ, ರೆಸ್ಟೋರೆಂಟ್ ಉದ್ಯಮ ಮತ್ತು ರಿಯಲ್ ಎಸ್ಟೇಟ್ ಮೂಲಕ ಗಳಿಸಿದ ಈ ಅಗಾಧ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ನಿರೀಕ್ಷೆಯಿದೆ. ಅವರು ಯಾರು?
India Latest New Live 15 April 2026CBSE Class 10 Results 2026 - ಶೇ. 93.70ರಷ್ಟು ಮಂದಿ ಪಾಸ್, ಬೆಂಗಳೂರಿಗೆ ಮೂರನೇ ಸ್ಥಾನ; ಅಂಕಪಟ್ಟಿ ಹೀಗೆ ಡೌನ್‌ಲೋಡ್ ಮಾಡಿ
India Latest New Live 15 April 202625 ಸಾವಿರ ಕೋಟಿ ಸಾಲದ ಭರವಸೆ ಬೆನ್ನಲ್ಲೇ ಮತ್ತೆ ಭಿಕ್ಷೆ ಪಾತ್ರೆ ಹಿಡಿದು ಸೌದಿ ಮುಂದೆ ನಿಂತ ಪಾಕಿಸ್ತಾನ
25 ಸಾವಿರ ಕೋಟಿ ಸಾಲದ ಭರವಸೆ ಬೆನ್ನಲ್ಲೇ ಮತ್ತೆ ಭಿಕ್ಷೆ ಪಾತ್ರೆ ಹಿಡಿದು ಸೌದಿ ಮುಂದೆ ನಿಂತ ಪಾಕಿಸ್ತಾನ, ಯಎಇಗೆ 3.5 ಬಿಲಿಯನ್ ಡಾಲರ್ ಸಾರ ಮರುಪಾವತಿ ಸಂಕಷ್ಟದಲ್ಲಿರುವ ಪಾಕಿಸ್ತಾನದ ಪರಿಸ್ಥಿತಿ ಶೋಚನೀಯವಾಗಿದೆ.
India Latest New Live 15 April 2026ಅಮೆರಿಕಾದಲ್ಲಿ ಭಾರತದ 'ರಾಮಾಯಣ'ದ ಸೀಕ್ರೆಟ್ ಬಿಚ್ಚಿಟ್ಟ ನಿರ್ಮಾಪಕ; 'ರಾವಣ' ಯಶ್ ಬಗ್ಗೆ ಏನ್ ಹೇಳಿದ್ರು?
ನಾನು ಸಿನಿಮಾವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ನಲ್ಲಿ ನೋಡುತ್ತೇನೆ. ಅಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ ವಡಾಪಾವ್ ಮೆಲ್ಲುತ್ತ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇನೆ. ಅದರೆ, ಸಿನಿಮಾಗಳ ಜೊತೆಗೆ, ನಮ್ಮತನದ, ನಮ್ಮ ಸಾಂಸ್ಕೃತಿಕ ಪರಂಪರೆಯ ಜ್ಞಾನವನ್ನು ಕೂಡ ಪಡೆಯುತ್ತೇನೆ. ಮತ್ತೇನು ಹೇಳಿದ್ರು ನೋಡಿ…
India Latest New Live 15 April 2026ಬಾಟಲಿಗೇ ಬಾಯಿ ಹಾಕಿ ನೀರು ಕುಡಿದ ಕಯಾದು ಲೋಹರ್ - ಲುಕ್ ಮಾತ್ರ ಇದೆ, ಕಾಮನ್ ಸೆನ್ಸ್ ಇಲ್ಲ ಅಂತ ಟ್ರೋಲ್!
ಮಲಯಾಳಂ ಪ್ರೇಕ್ಷಕರಿಗೆ ಚಿರಪರಿಚಿತ ಮುಖ ಮುಗಿಲ್‌ಪೇಟೆ ಖ್ಯಾತಿಯ ನಟಿ ಕಯಾದು ಲೋಹರ್. ಮೂಲತಃ ಕನ್ನಡದವರಾದ ಇವರು, ವಿನಯನ್ ನಿರ್ದೇಶನದ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು.
India Latest New Live 15 April 2026Girl Dad - ಮಗಳ ಹೇರ್‌ಕ್ಲಿಪ್ ಹಾಕಿಕೊಂಡ ನಟ ಸಿದ್ಧಾರ್ಥ್ ಮಲ್ಹೋತ್ರಾ - ಫೋಟೋ ಸಖತ್ ವೈರಲ್!
ಸಿದ್ಧಾರ್ಥ್ ಮಲ್ಹೋತ್ರಾ ಅವರ ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಅಭಿಮಾನಿಗಳನ್ನು ಫಿದಾ ಆಗುವಂತೆ ಮಾಡಿದ್ದು, ಅದರಲ್ಲಿ ಅವರು 'ಗರ್ಲ್ ಡ್ಯಾಡ್' ಎನರ್ಜಿಯನ್ನು ತೋರಿಸಿದ್ದಾರೆ.
India Latest New Live 15 April 2026'ನಿಮ್ಮ ಹತ್ತಿರ ಇರೋದು ಐಪಿಎಲ್ ರಿಜೆಕ್ಟ್ ಮಾಡಿದ ಪ್ಲೇಯರ್ಸ್ ಮಾತ್ರ' - PSL ಮರ್ಯಾದೆ ಹರಾಜು ಮಾಡಿದ ಪಾಕ್ ಕ್ರಿಕೆಟಿಗ!
ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್, ಐಪಿಎಲ್ ಮತ್ತು ಪಿಎಸ್‌ಎಲ್ ನಡುವಿನ ಹೋಲಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪಿಎಸ್‌ಎಲ್‌ನಲ್ಲಿ ಆಡುವ ವಿದೇಶಿ ಆಟಗಾರರು ಐಪಿಎಲ್‌ನಿಂದ ನಿವೃತ್ತರಾದವರು ಅಥವಾ ತಿರಸ್ಕೃತರಾದವರು ಎಂದು ಅವರು ಹೇಳಿದ್ದಾರೆ.
India Latest New Live 15 April 2026ವಿರಾಟ್ ಕೊಹ್ಲಿಯಲ್ಲ, ಬೆಂಗಳೂರಿಗೆ ಬಂದ ಹೊಸ ಕಿಂಗ್! ಮ್ಯಾಚ್‌ಗೂ ಮೊದಲೇ ಲಖನೌಗೆ ಶುರುವಾಯ್ತು ನಡುಕ!
ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎಲ್ಲರ ಕಣ್ಣು ಕೊಹ್ಲಿ ಮೇಲೆ ಮಾತ್ರವಲ್ಲ, ಇನ್ನು ಕೆಲವೇ ರನ್ ಗಳಿಸಿದರೆ ನಂಬರ್ 1 ಪಟ್ಟಕ್ಕೇರುವ ಆಟಗಾರನ ಮೇಲೂ ಇದೆ. ಆ ಆಟಗಾರ ಯಾರು? ಯಾಕೆ ನಂಬರ್ 1 ಆಗ್ತಾರೆ? ಇಲ್ಲಿದೆ ವಿವರ.
India Latest New Live 15 April 2026ಲೆನ್ಸ್‌ಕಾರ್ಟ್ ಪಾಲಿಸಿ ವಿರುದ್ಧ ಭುಗಿಲೆದ್ದ ಆಕ್ರೋಶ - ಬಿಂದಿ, ಸಿಂಧೂರಕ್ಕೆ ನಿರ್ಬಂಧ, ಹಿಜಾಬ್‌ಗೆ ಅನುಮತಿ
ಲೆನ್ಸ್‌ಕಾರ್ಟ್ ತನ್ನ ಉದ್ಯೋಗಿಗಳಿಗೆ ಜಾರಿಗೊಳಿಸಿರುವ ಹೊಸ ಡ್ರೆಸ್ ಕೋಡ್ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಿಯಮದ ಪ್ರಕಾರ, ಹಿಂದೂ ಧಾರ್ಮಿಕ ಸಂಕೇತಗಳಾದ ಬಿಂದಿ, ಸಿಂಧೂರ ಮತ್ತು ಕೈಗೆ ಕಟ್ಟುವ ದಾರವನ್ನು ನಿರ್ಬಂಧಿಸಿ, ಹಿಜಾಬ್ ಧರಿಸಲು ಅನುಮತಿ ನೀಡಿರುವುದು ತಾರತಮ್ಯದ ಆರೋಪಕ್ಕೆ ಗುರಿಯಾಗಿದೆ.
India Latest New Live 15 April 2026ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ಕುತ್ತು? ಹೊಸ ಕ್ಯಾಪ್ಟನ್‌ಗಾಗಿ ಬಿಸಿಸಿಐ ಹುಡುಕಾಟ!
India Latest New Live 15 April 2026ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಸುಪ್ರೀಂ ಆದೇಶ, ನಾಯಕ ಪವನ್ ಖೆರಾ ಮಧ್ಯಂತರ ಜಾಮೀನಿಗೆ ತಡೆ
ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಸುಪ್ರೀಂ ಆದೇಶ, ನಾಯಕ ಪವನ್ ಖೆರಾ ಮಧ್ಯಂತರ ಜಾಮೀನಿಗೆ ತಡೆ, ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿದ್ದ ಕಾಂಗ್ರೆಸ್ ನಾಯಕ ಪವನ್ ಖೆರಾ ಇದೀಗ ಕಂಗಾಲಾಗಿದ್ದಾರೆ.