- Home
- News
- India News
- India Latest News Live: ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ
India Latest News Live: ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ

ಕೋಲ್ಕತಾ: ಭಾನುವಾರ ಚುನಾವಣಾ ಪ್ರಚಾರಕ್ಕೆಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ವೇಳೆಪ್ರಧಾನಿ ನರೇಂದ್ರ ಮೋದಿ, ಕುರುಕಲು ತಿಂಡಿ ಅಂಗಡಿಯಲ್ಲಿ ಮಂಡಕ್ಕಿ ಖರೀದಿಸಿದ್ದು ಬರೀ ನಾಟಕ ಎಂದು ಸಿಎಂ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಹೆಸರು ಹೇಳದೆಯೇ ಚುನಾವಣಾ ರ್ಯಾಲಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ದೀದಿ, ‘ಇದೆಲ್ಲ ನಾಟಕ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಇದ್ದಕ್ಕಿದ್ದಂತೆ ಅಂಗಡಿಗೆ ತೆರಳಿದಾಗ ಅಂಗಡಿಗೆ ಕ್ಯಾಮರಾಮ್ಯಾನ್ ಏಕೆ ಬಂದಿದ್ದ? ಇಡೀ ಘಟನೆಯನ್ನು ಹೇಗೆ ಚಿತ್ರೀಕರಿಸಲಾಯಿತು? ಅವರು ಜೇಬಿನಲ್ಲಿ 10 ರು. ನೋಟು ಇರಿಸಿಕೊಂಡಿದ್ದು ಕಂಡು ಬಂದಿದೆ. ಇದು ನಂಬುವುದಕ್ಕೆ ಸಾಧ್ಯವೇ?’ ಎಂದು ಪ್ರಶ್ನಿಸಿದರು.
ಮೋದಿ ಚುನಾವಣಾ ಪ್ರಚಾರಕ್ಕೆಂದು ಭಾನುವಾರ ಬಂಗಾಳಕ್ಕೆ ಬಂದಾಗ ಝಾರ್ಗ್ರಾಮದ ಕುರುಕಲು ತಿಂಡಿ ಅಂಗಡಿಗೆ ‘ಅನಿರೀಕ್ಷಿತವಾಗಿ’ ತೆರಳಿ, ಮಂಡಕ್ಕಿ ಖರಿದಿಸಿ ತಿಂದಿದ್ದಲ್ಲದೆ ಮಕ್ಕಳಿಗೆ ಹಂಚಿದ್ದರು.
India Latest News Live 21 April 2026ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ
India Latest News Live 21 April 2026ಇಂದು ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ₹80000 ವೆಚ್ಚದ ಕೋಟಿ ತೈಲ ಘಟಕಕ್ಕೆ ನಿನ್ನೆ ಬೆಂಕಿ!
ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಬೇಕಿದ್ದ ರಾಜಸ್ಥಾನದ ಪಚ್ಪದ್ರಾದಲ್ಲಿನ ನೂತನ ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಿಂದಾಗಿ ₹80000 ಕೋಟಿ ವೆಚ್ಚದ, ದೇಶದ ಮೊದಲ ಗ್ರೀನ್ಫೀಲ್ಡ್ ರಿಫೈನರಿಯ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.