ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ವಿಜ್ಞಾನಿಗಳ ತಂಡವು ತಮ್ಮ ಹೊಸ ಸ್ಯಾಟಲೈಟ್ ಲಾಂಚ್‌ಗೂ ಮೊದಲು ಆಂಧ್ರಪ್ರದೇಶದ ತಿರುಪತಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.
- Home
- News
- India News
- India Latest News Live: ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ
India Latest News Live: ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ

ಚಂಡೀಗಢ: ಪಂಜಾಬ್ನ ಆಮ್ ಆದ್ಮಿ ಸರ್ಕಾರವು ಅಮೃತಸರ ಸೇರಿದಂತೆ ರಾಜ್ಯದ ಮೂರು ನಗರಗಳನ್ನು ಪವಿತ್ರ ನಗರಗಳೆಂದು ಘೋಷಿಸಿ, ಅಲ್ಲಿ ಮದ್ಯ, ಮಾಂಸ, ತಂಬಾಕು ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ನಿಷೇಧಿಸಿದೆ. ಕಳೆದ ನವೆಂಬರ್ನಲ್ಲಿ ಅಂಗೀಕರಿಸಿದ್ದ ಈ ಕುರಿತ ಕಾಯ್ದೆ ಭಾನುವಾರದಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ವಿಡಿಯೋ ಮುಖೇನ ಮಾಹಿತಿ ಹಂಚಿಕೊಂಡಿದ್ದಾರೆ. ಅಮೃತಸರ, ತಲ್ವಾಂಡಿ ಸಾಬೊ ಮತ್ತು ಆನಂದಪುರ್ ಸಾಹಿಬ್ ಸೇರೊ ನಗರಗಳನ್ನು ಪವಿತ್ರ ನಗರಗಳೆಂದು ಘೋಷಿಸಲಾಗಿದೆ. ಈ ಮೂರೂ ನಗರಗಳು ಸಿಖ್ಖರ ಧಾರ್ಮಿಕ ಕೇಂದ್ರಗಳಿರುವ ನಗರಗಳಾಗಿವೆ.
India Latest News Live 22 December 2025 ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ
India Latest News Live 22 December 2025 ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಬ್ಯಾಟರ್‌ಗಳಿವರು! ಈ ಪಟ್ಟಿಯಲ್ಲಿದ್ದಾರೆ ಏಕೈಕ ಸಕ್ರಿಯ ಅಟಗಾರ
ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಬ್ಯಾಟರ್‌ಗಳು ಯಾರು ಎನ್ನುವುದನ್ನು ನೋಡೋಣ ಬನ್ನಿ.
India Latest News Live 22 December 2025 ಅಂಡರ್-19 ಏಷ್ಯಾಕಪ್ - ಪಾಕ್‌ನ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ತಂಡ!
ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದೆದುರು ಸೋತು ರನ್ನರ್-ಅಪ್ ಆದ ಭಾರತ ತಂಡ, ಪಾಕ್ ಸಚಿವ ಮತ್ತು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಪದಕ ಸ್ವೀಕರಿಸಲು ನಿರಾಕರಿಸಿದೆ. ಈ ಹಿಂದೆ ಹಿರಿಯರ ಏಷ್ಯಾಕಪ್‌ನಲ್ಲೂ ಇದೇ ರೀತಿ ಘಟನೆ ನಡೆದಿತ್ತು.