- Home
- News
- India News
- India latest news live: ಐಪಿಎಲ್ 2026 - ವಿಡಿಯೋ ಗೇಮ್ ಕ್ರಿಕೆಟ್ ಆಡಿದ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್; ಕಂಗೆಟ್ಟ ಆರ್‌ಸಿಬಿ ಬೌಲರ್ಸ್
India latest news live: ಐಪಿಎಲ್ 2026 - ವಿಡಿಯೋ ಗೇಮ್ ಕ್ರಿಕೆಟ್ ಆಡಿದ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್; ಕಂಗೆಟ್ಟ ಆರ್‌ಸಿಬಿ ಬೌಲರ್ಸ್

ಕೋಲ್ಕತಾ: ಪ.ಬಂಗಾಳದಲ್ಲಿ ಚುನಾವಣಾಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ 7ನೇ ವೇತನ ಆಯೋಗ ಜಾರಿ ಸೇರಿ 6 ಗ್ಯಾರಂಟಿಗಳನ್ನು ಗುರುವಾರ ಘೋಷಿಸಿದ್ದಾರೆ. ಹಲ್ಲಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, 'ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾನೂನು ಸುವ್ಯವಸ್ಥೆ ಸ್ಥಾಪಿಸುತ್ತೇವೆ. ಒಳನುಸುಳುಕೋರರನ್ನು ಹೊರಹಾಕುತ್ತೇವೆ, 7ನೇ ವೇತನ ಆಯೋಗ ಜಾರಿಗೆ ತರುತ್ತೇವೆ, ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಇವು ಮೋದಿಯ ಗ್ಯಾರಂಟಿ' ಎಂದು ಹೇಳಿದರು.
India latest news live:ಐಪಿಎಲ್ 2026 - ವಿಡಿಯೋ ಗೇಮ್ ಕ್ರಿಕೆಟ್ ಆಡಿದ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್; ಕಂಗೆಟ್ಟ ಆರ್‌ಸಿಬಿ ಬೌಲರ್ಸ್
India latest news live:ಡಾನ್ಸ್ ಮಾಡುತ್ತಾ ಗಂಡಿಗೆ ಮೊಟ್ಟೆ ವರ್ಗಾಯಿಸೋ ಹೆಂಡ್ತಿ - 2 ಸಾವಿರ ಮಕ್ಕಳ ಹೆರುವ ಏಕಪತ್ನಿ ವೃತಸ್ಥ! Video ನೋಡಿ
India latest news live:ಮಹಿಳಾ ಸಹೋದ್ಯೋಗಿಯ ಎದೆ ದಿಟ್ಟಿಸೋದು ಅಸಭ್ಯ ವರ್ತನೆ, ಕಾಮಪ್ರಚೋದಿತ ಕೃತ್ಯವಲ್ಲ ಎಂದ ಹೈಕೋರ್ಟ್
India latest news live:ಕಾರ್ಗಿಲ್ ವೀರ, ‘ಲಯನ್ ಆಫ್ ಲಡಾಖ್ ’ ಕರ್ನಲ್ ಸೋನಮ್ ವಾಂಗ್ಚುಕ್ ನಿಧನ - ಭಾರತದ ಹೆಮ್ಮೆಯ ಪುತ್ರನಿಗೆ ಕಂಬನಿ
ಕಾರ್ಗಿಲ್ ಯುದ್ಧದ ಹೀರೋ, 'ಲಡಾಖ್ ಸಿಂಹ' ಖ್ಯಾತಿಯ ಮಹಾವೀರ ಚಕ್ರ ಪುರಸ್ಕೃತ ಕರ್ನಲ್ ಸೋನಮ್ ವಾಂಗ್ಚುಕ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 1999ರ 'ಆಪರೇಷನ್ ವಿಜಯ್' ಕಾರ್ಯಾಚರಣೆಯಲ್ಲಿ ತೋರಿದ ಅದಮ್ಯ ಸಾಹಸಕ್ಕಾಗಿ ಅವರು ಪ್ರಸಿದ್ಧರಾಗಿದ್ದರು.
India latest news live:ದೋಸೆ ಹಿಟ್ಟು ತಿಂದು ಸತ್ತ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್ - ಸಾವಿನ ಹಿಂದೆ ಬೇರೆಯದ್ದೇ ಕಾರಣ?
ಅಹಮದಾಬಾದ್‌ನಲ್ಲಿ ದೋಸೆ ಹಿಟ್ಟು ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆಗೆ ಆಘಾತಕಾರಿ ತಿರುವು ಸಿಕ್ಕಿದೆ. ಇದು ಫುಡ್ ಪಾಯ್ಸನಿಂಗ್ ಅಲ್ಲ, ಬದಲಿಗೆ ಕೀಟನಾಶಕ ಸೇವನೆಯಿಂದಾದ ಸಾವು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಂಪತಿಯ ಅನುಮಾನಾಸ್ಪದ ನಡವಳಿಕೆ ಮತ್ತು ಹೇಳಿಕೆಗಳು ಇದೊಂದು ಕುಟುಂಬ ಆತ್ಮಹ*ತ್ಯಾ ಯತ್ನವಿರಬಹುದೆಂಬ ಶಂಕೆಯನ್ನು ಹುಟ್ಟುಹಾಕಿದೆ.
India latest news live:ಆನ್‌ಲೈನ್ ಪೇಮೆಂಟ್‌ನಲ್ಲಿ ಬಿಗ್ ಚೇಂಜ್ - ₹10,000 ಮೇಲ್ಪಟ್ಟ ಹಣ ವರ್ಗಾವಣೆ ಇನ್ನು 1 ಗಂಟೆ ಲೇಟ್!
ಡಿಜಿಟಲ್ ವಂಚನೆ ತಡೆಯಲು, ಆರ್‌ಬಿಐ ₹10,000 ಕ್ಕಿಂತ ಹೆಚ್ಚಿನ ಆನ್‌ಲೈನ್ ಹಣ ವರ್ಗಾವಣೆಗೆ ಒಂದು ಗಂಟೆಯ ವಿಳಂಬವನ್ನು ಪ್ರಸ್ತಾಪಿಸಿದೆ. ಈ ಹೊಸ ನಿಯಮವು ಗ್ರಾಹಕರಿಗೆ ತಪ್ಪಾದ ವಹಿವಾಟುಗಳನ್ನು ರದ್ದುಗೊಳಿಸಲು ಅವಕಾಶ ನೀಡಲಿದೆ.
India latest news live:Durandhar-2 ಸಕ್ಸಸ್ ಬೆನ್ನಲ್ಲೇ ಕ್ಷಮೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ನಟ ರಣವೀರ್ ಸಿಂಗ್ - ಆಗಿದ್ದೇನು?
ಚಾವುಂಡಿ ದೈವವನ್ನು ಅನುಕರಿಸಿ ಅಪಹಾಸ್ಯ ಮಾಡಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಹಿಂದಿನ ಕ್ಷಮೆಯಾಚನೆ ಪ್ರಾಮಾಣಿಕವಾಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ಪರಿಷ್ಕೃತ ಅಫಿಡವಿಟ್ ಸಲ್ಲಿಸಿ, ‘ದೇವಸ್ಥಾನಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ.
India latest news live:'ನೀನು ಕರಿಯ, ನನಗೆ ಬೆಳ್ಳಗಿದ್ದವನು ಬೇಕಿತ್ತು..' ಲವರ್ ಜೊತೆ ಸೇರಿ ಗಂಡನ ಕೊ*ಲೆಗೈದು ಆಸ್ಕರ್ ರೇಂಜ್ ಆಕ್ಟಿಂಗ್ ಮಾಡಿದ ಪತ್ನಿ
India latest news live:ಬೃಂದಾವನದ ಯಮುನಾ ನದಿಯಲ್ಲಿ ಪ್ರವಾಸಿಗರಿದ್ದ ದೋಣಿ ಉರುಳಿ ಭೀಕರ ದುರಂತ, 10 ಸಾವು
India latest news live:ದಳಪತಿ ವಿಜಯ್ 'ಜನ ನಾಯಗನ್' ವಿಡಿಯೋ ಲೀಕ್; ಈ ದುಷ್ಕೃತ್ಯದ ಹಿಂದೆ ಭಾರೀ ಷಡ್ಯಂತ್ರ ಇದೆಯಾ?
ಅಭಿಮಾನಿಗಳ ಪಾಲಿಗೆ ಇದು ಕೇವಲ ಸಿನಿಮಾವಲ್ಲ, ಇದು ತಮ್ಮ ನೆಚ್ಚಿನ ನಟನ ಸಿನಿರಂಗದ 'ಲಾಸ್ಟ್ ಶೋ'. ಇಂತಹ ಭಾವನಾತ್ಮಕ ಚಿತ್ರಕ್ಕೆ ಈ ರೀತಿ ಸೋರಿಕೆ ಮತ್ತು ಕಾನೂನು ವಿಘ್ನಗಳು ಎದುರಾಗುತ್ತಿರುವುದು ವಿಜಯ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಚಿತ್ರತಂಡವು ಶೀಘ್ರದಲ್ಲೇ ಈ ಎಲ್ಲಾ ಅಡೆತಡೆಗಳನ್ನು ದಾಟಿ ಬರುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
India latest news live:'ತಮ್ಮದು ರಾಧಾಕೃಷ್ಣ ಲವ್ ಸ್ಟೋರಿ..' ಎಂದಿದ್ದ ಕುಂಭಮೇಳ ಗರ್ಲ್ ಮೋನಾಲಿಸಾ ಅಪ್ರಾಪ್ತೆ; ಮುಸ್ಲಿಂ ಪತಿಯ ವಿರುದ್ಧ ಪೋಕ್ಸೋ ಕೇಸ್
ಕುಂಭಮೇಳದಲ್ಲಿ ಖ್ಯಾತಿ ಪಡೆದಿದ್ದ ಮೋನಾಲಿಸಾಳ ವಿವಾಹವು ಇದೀಗ ವಿವಾದಕ್ಕೆ ಕಾರಣವಾಗಿದೆ. ತನಿಖೆಯಲ್ಲಿ ಆಕೆ ಅಪ್ರಾಪ್ತೆ ಎಂದು ದೃಢಪಟ್ಟಿದ್ದು, ಆಕೆಯ ಪತಿ ಫರ್ಮಾನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
India latest news live:ಪೊಲೀಸ್ ಅಧಿಕಾರಿಯ 80 ಕೋಟಿ ಬೇನಾಮಿ ಆಸ್ತಿಗೆ ಮನೆಗೆಲಸದವಳೇ ಬಾಸ್ - ರೀಲ್ಸ್ ನೋಡಿ ಬೆಚ್ಚಿಬಿದ್ದ ತನಿಖಾ ತಂಡ!
ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತುಗೊಂಡಿರುವ ಕಿಶನ್‌ಗಂಜ್ ಎಸ್‌ಡಿಪಿಒ ಗೌತಮ್ ಕುಮಾರ್ ಅವರ ಮನೆಯ ಕೆಲಸದಾಕೆ ಪಾರೋ, ಅವರ ಬೇನಾಮಿ ಆಸ್ತಿಯನ್ನು ನಿರ್ವಹಿಸುತ್ತಿದ್ದಳು. ಸೋಷಿಯಲ್ ಮೀಡಿಯಾ ರೀಲ್ಸ್‌ನಿಂದ ಆಕೆಯ ಅದ್ದೂರಿ ಜೀವನ ಬಯಲಾಗಿದೆ.
India latest news live:ಟ್ರಾಫಿಕ್ ಚಲನ್ ನೀಡಿದ ಸುಳಿವು - ಕದ್ದ ವಾಹನವನ್ನು ರಾಜಾರೋಷವಾಗಿ ಓಡಿಸ್ತಿದ್ದ ಕಳ್ಳನ ಕಡೆಗೂ ಬಂಧಿಸಿದ ಪೊಲೀಸರು
ಕೆಲ ದಿನಗಳ ಹಿಂದೆ ಹೈದರಾಬಾದ್ ವ್ಯಕ್ತಿಯೊಬ್ಬರು ಹಾಕಿದ್ದ ಟ್ವಿಟ್ಟರ್ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮ್ಮ ಮೂರು ತಿಂಗಳ ಹಿಂದೆ ಕಳವಾದ ಸ್ಕೂಟರ್‌ಗೆ ಸಂಬಂಧಿಸಿದಂತೆ ಅವರಿಗೆ ಬಂದ ಟ್ರಾಫಿಕ್ ಚಲನ್‌ಗೆ ಸಂಬಂಧಿಸಿದ ಪೋಸ್ಟ್ ಅದಾಗಿತ್ತು. ಇದಾದ ಬಳಿಕ ಈಗ ಕಡೆಗೂ ಕಳ್ಳನ ಬಂಧನವಾಗಿದೆ.
India latest news live:ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ ಭಾರತದ ಡಲ್ಕೋಫ್ಲೆಕ್ಸ್!
India latest news live:ಸುಪ್ರಿಯಾ, ನಿಮಗಿಂತ ಹೆಚ್ಚು ಬ್ಲಾಕ್‌ಬಸ್ಟರ್ ಯಶಸ್ಸಿಗೆ ಬೇರೆ ಯಾರೂ ಅರ್ಹರಿಲ್ಲ; ಸಮಂತಾ ಹೇಳಿಕೆ ವೈರಲ್!
ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಡಕಾಯಿತ' ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರದ ನಿರ್ಮಾಪಕಿ ಸುಪ್ರಿಯಾ ಯರ್ಲಾಗಡ್ಡ ಅವರನ್ನು ವಿಶೇಷವಾಗಿ ಕೊಂಡಾಡಿದ್ದಾರೆ. "ನಿಮ್ಮ ಕೆಲಸ, ನಿಮ್ಮ ಛಲ ಮತ್ತು ಸಿನಿಮಾದ ಮೇಲಿರುವ ನಿಮ್ಮ ಪ್ರೀತಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸುಪ್ರಿಯಾ, ನಿಮಗಿಂತ ಹೆಚ್ಚು ಬ್ಲಾಕ್‌ಬಸ್ಟರ್ ಯಶಸ್ಸಿಗೆ ಬೇರೆ ಯಾರೂ ಅರ್ಹರಿಲ್ಲ' ಎಂದಿದ್ದಾರೆ.
India latest news live:ಸಲ್ಮಾನ್ ಖಾನ್ ಹೆಗಲ ಮೇಲೆ ಕೈ ಹಾಕಿದ ಅಪರಿಚಿತ ವ್ಯಕ್ತಿ; ಬಿಷ್ಣೋಯ್ ಗ್ಯಾಂಗ್ ಕಡೆಯವ್ನಾ ಆಗುಂತಕ?
ಸದ್ಯ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಯುದ್ಧ ಆಧಾರಿತ ಚಿತ್ರ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಶುಕ್ರವಾರವಷ್ಟೇ ಚಿತ್ರದ ಹೊಸ ಹಾಡು 'ಮೇರಾ ಜೀ ನಹೀ ಭರಾ' ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ಹೊಸ ಪ್ರತಿಭೆಗಳನ್ನು ಈ ಹಾಡಿನ ಮೂಲಕ ಪರಿಚಯಿಸಲಾಗಿದೆ.
India latest news live:ಪಾಕ್ ಎಡವಟ್ಟಿನಿಂದ ಲೆಬನಾನ್ ಗೊಂದಲ - ಬೇರೆ ಬೇರೆ ಸಂಧಾನ ಪ್ರತಿ ಹಂಚಿ ಎಡವಟ್ಟು - ಇಸ್ರೇಲ್ ದಾಳಿಗೆ ಲೆಬನಾನ್‌ಲ್ಲಿ 300 ಬಲಿ
US-Iran ceasefire deal : ಅಮೆರಿಕ-ಇರಾನ್ ನಡುವೆ ಬುಧವಾರ ಏರ್ಪಟ್ಟ 2 ವಾರಗಳ ತಾತ್ಕಾಲಿಕ ಕದನ ವಿರಾಮ ಕುರಿತ ಗೊಂದಲ ಗುರುವಾರವೂ ಮುಂದುವರಿದಿದೆ. ಈ ಗೊಂದಲಕ್ಕೆ ಕಾರಣ ಮಧ್ಯವರ್ತಿಯಾಗಿ ಕೆಲಸ ಮಾಡಿದ ಪಾಕಿಸ್ತಾನ ಎಂಬ ಆರೋಪ ಕೇಳಿ ಬರುತ್ತಿದೆ.
India latest news live:COVID ಟೈಂನಲ್ಲಿ ಡಿಎಂಕೆ ಅಧಿಕಾರದಲ್ಲಿದ್ದಿದ್ರೆ ಸ್ಟಾಲಿನ್ ಸತ್ತೋಗಿರ್ತಿದ್ರು; ಪಳನಿಸ್ವಾಮಿ
ಕೊರೋನಾ ಸಮಯದಲ್ಲಿ ಡಿಎಂಕೆ ಅಧಿಕಾರದಲ್ಲಿದ್ದರೆ ಸಿಎಂ ಸ್ಟಾಲಿನ್ ಸಾಯುತ್ತಿದ್ದರು ಎಂದು ಎಡಪ್ಪಾಡಿ ಪಳನಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸ್ಟಾಲಿನ್, ‘ಜನರಿಗಾಗಿ ಸಾಯಲು ಹೆದರುವುದಿಲ್ಲ’ ಎಂದು ಹೇಳಿದ್ದಾರೆ.
India latest news live:ಹೋರ್ಮುಜ್ ಮೂಲಕ ನಿತ್ಯ 15 ಹಡಗು ಸಾಗಲು ಇರಾನ್ ಅಸ್ತು - ಹೋರ್ಮುಜ್ ಜಲಸಂಧಿ ರಕ್ಷಣೆಗೆ ಧಾವಿಸಿ - ಇ.ಯು.ಗೆ ಟ್ರಂಪ್ ಕರೆ
ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಕದನವಿರಾಮದ ಅನ್ವಯ, ಹೋರ್ಮುಜ್ ಜಲಸಂಧಿಯಲ್ಲಿ ದಿನಕ್ಕೆ 15 ಹಡಗುಗಳಿಗೆ ಇರಾನ್ ಅನುಮತಿಯೊಂದಿಗೆ ಸಾಗಲು ಅವಕಾಶ ನೀಡಲಾಗಿದೆ. ಆದರೆ, ಜಲಸಂಧಿಯ ರಕ್ಷಣೆಗೆ ಮುಂದಾಗುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಯುರೋಪಿಯನ್ ಒಕ್ಕೂಟಕ್ಕೆ ಕರೆ ನೀಡಿದ್ದಾರೆ.