ತ್ರಿಕ್ಕಾಕರದ ಸ್ವತಂತ್ರ ಅಭ್ಯರ್ಥಿ ಸಾಬು ಫ್ರಾನ್ಸಿಸ್, ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ 12,000 ಲಡ್ಡುಗಳನ್ನು ತಯಾರಿಸುವ ಮೂಲಕ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದರು. ಇದು ವ್ಯರ್ಥ ಕೂಡ ಆಗಲಿಲ್ಲ. ಆತ 142 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 

ಕೊಚ್ಚಿ (ಡಿ.15): ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಅನ್ನೋದಕ್ಕೆ ಸ್ಪಷ್ಟ ಅಂದಾಜು ಚುನಾವಣಾ ಫಲಿತಾಂಶ ಬರೋ ಮುನ್ನವೇ ಹೆಚ್ಚೂ ಕಡಿಮೆ ಖಚಿತವಾಗಿರುತ್ತದೆ. ಅದಕ್ಕೆ ಕಾರಣ ಆಯಾ ಪಕ್ಷಗಳು ಮಾಡಿಕೊಂಡಿರುವ ವ್ಯವಸ್ಥೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೀಗಾಗೋದು ಭಾರೀ ಕಷ್ಟ. ಇಲ್ಲಿ ಗೆಲುವಿನ ಮಾರ್ಜಿನ್‌ ಕೂಡ ಕಡಿಮೆ ಇರುತ್ತದೆ. ಹಾಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಫಲಿತಾಂಶ ಬರುವ ಮುನ್ನವೇ ಗೆಲುವಿನ ಸಂಭ್ರಮ ಆಚರಣೆ ಮಾಡೋದು ಬಹಳ ಕಡಿಮೆ. ಆದರೆ, ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬ ಫಲಿತಾಂಶ ಬರುವ ಮುನ್ನವೇ ಬರೋಬ್ಬರಿ 12 ಸಾವಿರ ಲಡ್ಡು ತಯಾರಿಸಿ ಇಡುವ ಮೂಲಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದ.

ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ, ತ್ರಿಕ್ಕಾಕರದಲ್ಲಿ ಸ್ವತಂತ್ರ ಅಭ್ಯರ್ಥಿ 12,000 ಲಡ್ಡುಗಳನ್ನು ಸಿದ್ದಪಡಿಸಿ ಇಟ್ಟಿದ್ದರು. ಫಲಿತಾಂಶಗಳು ಬಂದಾಗ, ಸ್ವತಂತ್ರ ಅಭ್ಯರ್ಥಿ ಸಾಬು ಫ್ರಾನ್ಸಿಸ್ ಅವರ ವಿಶ್ವಾಸ ವ್ಯರ್ಥವಾಗಲಿಲ್ಲ ಎಂಬುದು ಸ್ಪಷ್ಟವಾಯಿತು. ಅವರು 142 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು.

ಚುನಾವಣಾ ಫಲಿತಾಂಶಗಳು ಹೊರಬರುವ ಮೊದಲೇ, ಸಾಬು ಫ್ರಾನ್ಸಿಸ್, ಅವರ ಕುಟುಂಬ ಮತ್ತು ಸ್ನೇಹಿತರು 12,000 ಲಡ್ಡುಗಳನ್ನು ಸಿದ್ಧಪಡಿಸಿದ್ದರು. ಸ್ಥಳೀಯರು ಚುನಾವಣೆ ಫಲಿತಾಂಶಕ್ಕಿಂತ ಹೆಚ್ಚಾಗಿ, ಆತ ಸೋತರೆ ಲಡ್ಡು ಏನಾಗಲಿದೆ ಅನ್ನೋದರ ಬಗ್ಗೆಯೇ ಚಿಂತಿತರಾಗಿದ್ದರು. ಆದರೆ ಸಾಬು ಫ್ರಾನ್ಸಿಸ್ ಸ್ಥಳೀಯ ಚಿಂತೆ ದೂರ ಮಾಡಿದ್ದರು. 40ನೇವಾರ್ಡ್‌ನಿಂದ ಸಾಬು ಸ್ಪರ್ಧೆ ಮಾಡಿದ್ದರು. ಈ ವಾರ್ಡ್‌ನಲ್ಲಿ ಮಾತ್ರವಲ್ಲದೆ, ಸಾಬು ಮತ್ತು ಅವರ ಪತ್ನಿ ಓಮನಾ ಈ ಹಿಂದೆ ಸ್ಪರ್ಧಿಸಿ ಗೆದ್ದಿದ್ದ ವಾರ್ಡ್ 34 ರಲ್ಲೂ ಲಡ್ಡುಗಳನ್ನು ವಿತರಿಸಲಾಯಿತು. ಈ ಗೆಲುವಿನ ಬೆನ್ನಲ್ಲಿಯೇ ಕಾನ್ಪಿಡೆನ್ಸ್‌ನ ಮಾಲೀಕ ಅಂತಿದ್ದರೆ, ಸಾಬು ಫ್ರಾನ್ಸಿಸ್‌ ಮಾತ್ರ ಎನ್ನುವ ಸೋಶಿಯಲ್‌ ಮೀಡಿಯಾ ಕಾಮೆಂಟ್‌ಗಳು ವೈರಲ್‌ ಆಗಿವೆ.

ಸಾಬು ಫ್ರಾನ್ಸಿಸ್ 142 ಮತಗಳ ಮುನ್ನಡೆಯೊಂದಿಗೆ ಗೆದ್ದರು. ಎಣಿಕೆಯ ಹಿಂದಿನ ದಿನ ಅವರು ಗೆಲುವು ಖಚಿತ ಎಂದು ಹೇಳಿದರು. 2020 ರಲ್ಲಿ, ಓಮನಾ ತ್ರಿಕ್ಕಾಕರದಲ್ಲಿ ಅತಿ ಹೆಚ್ಚು ಬಹುಮತದಿಂದ ಗೆದ್ದರು. ಆಗಲೂ, ಫಲಿತಾಂಶಗಳು ಪ್ರಕಟವಾಗುವ ಮೊದಲೇ ಲಡ್ಡು ಸಿದ್ಧವಾಗಿತ್ತು.

ಬಿಜೆಪಿ ಅಭ್ಯರ್ಥಿ ಗೆಲುವಿನ ಸಂಭ್ರಮದಲ್ಲಿ ಕುಣಿದ ಸೋತ ವ್ಯಕ್ತಿ

ಇದರ ನಡುವೆ, ಪಾಲಕ್ಕಾಡ್ ಮನ್ನಾರ್ಕ್ಕಾಡ್ ಪುರಸಭೆಗೆ ನಡೆದ ಚುನಾವಣೆಯಲ್ಲಿ ಸೋತ ಎಲ್‌ಡಿಎಫ್ ಅಭ್ಯರ್ಥಿ ನೇರವಾಗಿ ಬಿಜೆಪಿಯ ಸಂಭ್ರಮಕ್ಕೆ ಹೋಗಿದ್ದಾರೆ. ಪುರಸಭೆಯ ವಾರ್ಡ್‌ನಲ್ಲಿ ಎಲ್‌ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಜು ಸಂದೀಪ್ ಬಿಜೆಪಿಯ ಸಂಭ್ರಮದಲ್ಲಿ ಭಾಗಿಯಾದರು. ಬಿಜೆಪಿ ಅಭ್ಯರ್ಥಿಯ ವಿಜಯೋತ್ಸವದ ಜೊತೆಗೆ ಅವರು ನೃತ್ಯ ಮಾಡುತ್ತಿರುವ ವಿಡಿಯೋ ಹೊರಬಿದ್ದಿದೆ. ಕರಕುರಿಸ್ಸಿ ಪಂಚಾಯತ್‌ನ 6 ನೇ ವಾರ್ಡ್‌ನಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ಸ್ನೇಹಾ ರಾಮಕೃಷ್ಣನ್ ಅವರ ವಿಜಯೋತ್ಸವ ಮೆರವಣಿಗೆಯಲ್ಲಿ ಅಂಜು ಭಾಗವಹಿಸಿದ್ದರು. ನಿನ್ನೆ ಸಂಜೆ ಬಿಜೆಪಿ ಅಭ್ಯರ್ಥಿಯ ವಿಜಯೋತ್ಸವ ಮೆರವಣಿಗೆ ನಡೆಯಿತು. ಸ್ನೇಹಾ ನನ್ನ ಸ್ನೇಹಿತೆ ಹಾಗಾಗಿ ಆಕೆಯ ಗೆಲುವಿನ ಸಂಭ್ರಮದಲ್ಲಿ ಭಾಗಿಯಾಗಿದ್ದೆ ಎಂದು ಅಂಜು ಹೇಳಿದ್ದಾರೆ.