- Home
- News
- India News
- India Latest News Live: ಸ್ವಾತಂತ್ರ್ಯದ 79ನೇ ವರ್ಷ - ದೇಶಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾವನಾತ್ಮಕ ಸಂದೇಶ
India Latest News Live: ಸ್ವಾತಂತ್ರ್ಯದ 79ನೇ ವರ್ಷ - ದೇಶಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾವನಾತ್ಮಕ ಸಂದೇಶ

ಬೆಂಗಳೂರು (ಆ.14): ಈಗ ಕಾಂಗ್ರೆಸ್ ವಿರುದ್ಧವೇ ಚುನಾವಣಾ ಅಕ್ರಮ ಆರೋಪ ಹೊರಿಸಲಾಗಿದೆ. ವಿದೇಶಿ ಪ್ರಜೆ ಆಗಿದ್ದಾಗಲೂ ವೋಟರ್ ಲಿಸ್ಟ್ಅಲ್ಲಿ ಸೋನಿಯಾ ಗಾಂಧಿ ಅವರ ಹೆಸರಿತ್ತು ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಅಧಿನಾಯಕಿಗೆ ಭಾರತೀಯ ಪೌರತ್ವ ದೊರೆತಿದ್ದೇ 1983ನೇ ಇಸವಿಯಲ್ಲಿ. ಆದರೆ, 1980ರ ಮತದಾರರ ಪಟ್ಟಿಯಲ್ಲಿ ಅವರ ಹೆಸರಿತ್ತು ಎಂದು ದಾಖಲೆ ಬಿಡುಗಡೆ ಮಾಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 14th August: ಸ್ವಾತಂತ್ರ್ಯದ 79ನೇ ವರ್ಷ - ದೇಶಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾವನಾತ್ಮಕ ಸಂದೇಶ
India News Live 14th August: ಅಮೆರಿಕಾದಲ್ಲಿ ಹಿಂದೂ ಪುರೋಹಿತನಾದ ಆಫ್ರಿಕನ್ ಪ್ರಜೆ - ಮಂತ್ರೋಚ್ಛಾರದ ವೀಡಿಯೋ ಭಾರಿ ವೈರಲ್
ಅಮೆರಿಕದಲ್ಲಿ ಆಫ್ರಿಕನ್ ಮೂಲದ ಹಿಂದೂ ಪುರೋಹಿತರೊಬ್ಬರು ಸಂಸ್ಕೃತ ಮಂತ್ರಗಳನ್ನು ನಿರರ್ಗಳವಾಗಿ ಪಠಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಸ್ಪಷ್ಟ ಉಚ್ಛಾರಣೆ ಮತ್ತು ಭಕ್ತಿಯಿಂದ ಕೂಡಿದ ಆತನ ಶೈಲಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
India News Live 14th August: ಆಪರೇಷನ್ ಸಿಂದೂರದಲ್ಲಿ ಭಾಗಿಯಾದ ವಾಯುಪಡೆ ಅಧಿಕಾರಿಗಳಿಗೆ ಶೌರ್ಯ ಪದಕ
ಸಿಂದೂರ್ ಕಾರ್ಯಾಚರಣೆಯ ವಾಯುಪಡೆ ಅಧಿಕಾರಿಗಳು ಮತ್ತು ದೇಶಾದ್ಯಂತ 1,090 ಪೊಲೀಸ್ ಸಿಬ್ಬಂದಿಗೆ ಕೇಂದ್ರ ಸರ್ಕಾರವು ಶೌರ್ಯ ಮತ್ತು ಸೇವಾ ಪದಕಗಳನ್ನು ನೀಡಿ ಗೌರವಿಸಿತು
India News Live 14th August: ಭಾರಿ ಮಳೆಗೆ ಬೈಕ್ ಮೇಲೆ ಬಿದ್ದ ಬೃಹದಾಕಾರ ಮರ - ಅಪ್ಪ ಸಾವು, ಮಗಳಿಗೆ ಗಾಯ
ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾರೆ. ಕಲ್ಕಾಜಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.
India News Live 14th August: ಗೆಳೆಯನಿಗೆ ರಕ್ಷಿಸು ಎಂದು ಮೇಸೇಜ್ ಹಾಕಿದ ಹುಡುಗಿ ಶವವಾಗಿ ಪತ್ತೆ - ಚಿಕ್ಕಪ್ಪನ ಬಂಧನ ಅಪ್ಪ ನಾಪತ್ತೆ
ಗೆಳೆಯನಿಗೆ ರಕ್ಷಿಸುವಂತೆ ಸಂದೇಶ ಕಳುಹಿಸಿದ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಗೆಳೆಯ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ಅಪ್ಪ ಚಿಕ್ಕಪ್ಪನನ್ನು ಬಂಧಿಸಲಾಗಿದೆ.
India News Live 14th August: ಪೆಸಿಫಿಕ್ ಸಾಗರದಲ್ಲಿ ಬೃಹತ್ ಬಾಲದ ದೈತ್ಯ ವೈರಸ್ ಪತ್ತೆ
ಫೆಸಿಫಿಕ್ ಸಾಗರದಲ್ಲಿ ದೈತ್ಯ ವೈರಸ್ ಪತ್ತೆಯಾಗಿದ್ದು, ಇದು ಅಸಾಮಾನ್ಯವಾಗಿ ಉದ್ದವಾದ ಬಾಲವನ್ನು ಹೊಂದಿದೆ. ಈ ವೈರಸ್ ಪ್ಲ್ಯಾಂಕ್ಟನ್‌ಗೆ ಸೋಂಕು ತರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
India News Live 14th August: ಆನ್‌ಲೈನ್ ಶಾಪಿಂಗ್‌ಗೆ SBI ಕಾರ್ಡ್ ಸಕ್ರಿಯಗೊಳಿಸುವುದು ಹೇಗೆ?
ಆನ್‌ಲೈನ್ ಶಾಪಿಂಗ್‌ಗೆ ಕ್ರೆಡಿಟ್ ಕಾರ್ಡ್ ಬಳಸಲು, SBI ಮತ್ತು ICICI ಕಾರ್ಡ್‌ಗಳನ್ನು ಆಕ್ಟಿವೇಟ್ ಮಾಡುವುದು ಅಗತ್ಯ. ಕಾರ್ಡ್ ಆಕ್ಟಿವೇಟ್ ಮಾಡುವ ಬಗ್ಗೆ ಇಲ್ಲಿ ಹಂತ-ಹಂತದ ಮಾರ್ಗದರ್ಶನ ಇದೆ.
India News Live 14th August: ರೇಣುಕಾಸ್ವಾಮಿ ಕೊಲೆ ಪ್ರಕರಣ - ನಟಿ ಪವಿತ್ರ ಗೌಡ ಬಂಧನ
ರೇಣುಕಾಸ್ವಾಮಿ ಕೊಲೆಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪವಿತ್ರ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.
India News Live 14th August: Rich Dad Poor Dad ಪುಸ್ತಕದಿಂದ ಪ್ರೇರಣೆಗೊಂಡ ಅಪ್ಪ ಮಗಳು ಏನ್ ಮಾಡಿದ್ರು ನೋಡಿ
ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದಿಂದ ಪ್ರೇರಣೆಗೊಂಡಿರುವ ಅಪ್ಪ ಮಗಳು ಉದ್ಯಮವೊಂದನ್ನು ಆರಂಭಿಸಿದ್ದು ಪುಟ್ಟ ಮಗಳಿಗೆ ಅಪ್ಪ ಬದುಕಿನ ಮಾರ್ಗದರ್ಶನ ನೀಡುತ್ತಿರುವ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
India News Live 14th August: ಇಂತಹ ಹೆಂಡ್ತಿರು ಇದ್ದಾರೆ - ಗಂಡನಿಗೆ ಕನಸಿನ ಬೈಕ್ ಗಿಫ್ಟ್ ಮಾಡಿ ಸರ್‌ಫ್ರೈಸ್ ನೀಡಿದ ಪತ್ನಿ ವೀಡಿಯೋ ವೈರಲ್
India News Live 14th August: ಸೇನಾ ಸಮವಸ್ತ್ರದಲ್ಲೇ ಕೆಬಿಸಿಗೆ ಬಂದ ಕರ್ನಲ್ ಖುರೇಷಿ,ವ್ಯೋಮಿಕಾ, ಪ್ರೇರಣಾ!
India News Live 14th August: ವಿದೇಶಿ ಪ್ರಜೆ ಆಗಿದ್ದಾಗಲೂ ವೋಟರ್ ಲಿಸ್ಟಲ್ಲಿ ಸೋನಿಯಾ ಹೆಸರಿತ್ತು: ಬಿಜೆಪಿ
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಭಾರೀ ಮತಕಳವು ನಡೆಸಿವೆ ಎಂದು ಆರೋಪಿಸಿದ್ದ ಕಾಂಗ್ರೆಸ್ ವಿರುದ್ಧವೇ ಈಗ ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದಿದೆ.
India News Live 14th August: Power Point : ಭಾರತೀಯ ಪೌರತ್ವಕ್ಕೂ ಮೊದಲೇ ಸೋನಿಯಾಗೆ ಮತಹಕ್ಕು
ನಕಲಿ ವಿವರ/ದಾಖಲೆಗಳನ್ನು ತೋರಿಸಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ವಿಪರ್ಯಾಸವೆಂದರೆ, 1980ರಲ್ಲಿ ಮೊದಲ ಬಾರಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರ ತಾಯಿ ಸೋನಿಯಾ ಗಾಂಧಿ ಆಗ, ಮತದಾರರೆನಿಸಿಕೊಳ್ಳಲು ಇರುವ ಕನಿಷ್ಠ ಅರ್ಹತೆಯಾದ ಪೌರತ್ವವನ್ನೇ ಪಡೆದಿರಲಿಲ್ಲ!
India News Live 14th August: ಮತಗಳ್ಳತನ ಕುರಿತ ಕಾಂಗ್ರೆಸ್ ವಿಡಿಯೋ ಬಿಡುಗಡೆ
‘ಮತಗಳ್ಳತನ’ದ ಆರೋಪ - ಯಾವ ರೀತಿ ನಕಲಿ ಮತದಾನ ನಡೆಯತ್ತದೆಂಬ ವಿವರಣೆಯಿರುವ ಸುಮಾರು ಒಂದು ನಿಮಿಷದ ವಿಡಿಯೋವೊಂದನ್ನೂ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.
India News Live 14th August: ಸೆಪ್ಟೆಂಬರ್‌ನಲ್ಲಿ ಮೋದಿ ಅಮೆರಿಕ ಪ್ರವಾಸ : ಟ್ರಂಪ್ ಭೇಟಿ ಸಾಧ್ಯತೆ
ಭಾರತ ಮತ್ತು ಅಮೆರಿಕ ನಡುವೆ ತೆರಿಗೆ ಸಂಘರ್ಷ ಭುಗಿಲೆದ್ದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
India News Live 14th August: ರಾಹುಲ್, ಪ್ರಿಯಾಂಕಾ ಕ್ಷೇತ್ರದಲ್ಲೂ ಮತಗಳ್ಳತನ: ಬಿಜೆಪಿ ತಿರುಗೇಟು
ಸ್ವತಃ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರತಿಪಕ್ಷಗಳ ಹಲವು ಮುಖಂಡರು ಗೆದ್ದಿರುವ ಕ್ಷೇತ್ರದಲ್ಲೂ ಇಂಥದ್ದೇ ಪ್ರಕರಣಗಳು ಪತ್ತೆಯಾಗಿವೆ ಎಂದು ಬಿಜೆಪಿ ತಿರುಗೇಟು ನೀಡಿದೆ.
India News Live 14th August: ಶೆಡ್‌ಗೆ ನಾಯಿ ಪ್ರಶ್ನಿಸಿದ್ದ ಅರ್ಜಿ ಇಂದು ವಿಚಾರಣೆ
ರಾಜಧಾನಿ ನವದೆಹಲಿಯ ಜನವಸತಿ ಪ್ರದೇಶದ ಎಲ್ಲಾ ಶ್ವಾನಗಳನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರ್ಧರಿಸಿದೆ.
India News Live 14th August: 100 ಗಿ.ವ್ಯಾ. ಸಾಮರ್ಥ್ಯದ ಸೌರ ಫಲಕ ಉತ್ಪಾದನೆ : ದಾಖಲೆ
ಸ್ವಚ್ಛ ಇಂಧನ ಕನಸಿನ ಸಾಕಾರಕ್ಕೆ ಶ್ರಮಿಸುತ್ತಿರುವ ಭಾರತವು ಕಳೆದ 10 ವರ್ಷಗಳಲ್ಲಿ ಸೌರವಿದ್ಯುತ್ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ.
India News Live 14th August: ಸತ್ತವರು ಎದ್ದುಬಂದಾಗ.. ! 7 ಮತದಾರರ ಜತೆ ‘ಚಾಯ್ ಪೇ ಚರ್ಚಾ’
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸತತ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ‘ಮೃತಪಟ್ಟಿದ್ದಾರೆ’ ಎಂಬ ಕಾರಣ ನೀಡಿ ಚುನಾವಣಾ ಆಯೋಗ ಕೈಬಿಟ್ಟಿದ್ದ 7 ಮತದಾರರ ಜತೆ ‘ಚಾಯ್ ಪೇ ಚರ್ಚಾ’ ನಡೆಸಿದ್ದಾರೆ.