ಯೆಮೆನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಕೆ.ಎ. ಪಾಲ್ ಕ್ಷಮೆ ಕೇಳಿದ್ದಾರೆ. ತಲಾಲ್ ಕುಟುಂಬದ ಷರತ್ತುಗಳನ್ನು ಪೂರೈಸಲು ಸಿದ್ಧ ಎಂದಿದ್ದಾರೆ. ನಿಮಿಷಾ ಪ್ರಿಯಾಳ ಮಗಳು ಭಾವುಕ ಮನವಿ ಮಾಡಿದ್ದಾಳೆ.
ಯೆಮೆನ್: ನಿಮಿಷಾ ಪ್ರಿಯಾ ಕೇಸ್‌ನಲ್ಲಿ ಕೊಲೆಯಾದ ತಲಾಲ್ ಕುಟುಂಬಕ್ಕೆ ಕ್ರೈಸ್ತ ಧರ್ಮಪ್ರಚಾರಕ ಕೆ.ಎ. ಪಾಲ್ ಕ್ಷಮೆ ಕೇಳಿದ್ದಾರೆ. ಕಾಂತಪುರಂ ಪರವಾಗಿ ಕ್ಷಮೆ ಕೇಳ್ತೀನಿ ಅಂತ ಕೆ.ಎ. ಪಾಲ್ ವಿಡಿಯೋದಲ್ಲಿ ಹೇಳಿದ್ದಾರೆ. ತಲಾಲ್ ಕುಟುಂಬದ ಷರತ್ತುಗಳನ್ನು ಪೂರೈಸಲು ನಾನು ಸಿದ್ಧ ಅಂತಲೂ ಹೇಳಿದ್ದಾರೆ. ನಿಮಿಷಾ ಪ್ರಿಯಾ ಮಗಳ ಜೊತೆ ವಿಡಿಯೋ ಮಾಡಿದ್ದಾರೆ.
ನಿಮಿಷಾ ಪ್ರಿಯಾ ಬಿಡುಗಡೆಗೆ ಅನೇಕರು ಪ್ರಯತ್ನ ಮಾಡ್ತಿದ್ದಾರೆ. ಇವರ ನಡುವೆ ವಾದವಿವಾದಗಳಿದ್ರೂ, ಪರಸ್ಪರ ವೈಯಕ್ತಿಕ ದಾಳಿ ಮಾಡಿರಲಿಲ್ಲ. ಆದರೆ ಕೆ.ಎ. ಪಾಲ್ ವಿಡಿಯೋದಲ್ಲಿ ಕಾಂತಪುರಂ ಬಗ್ಗೆ ವೈಯಕ್ತಿಕವಾಗಿ ಉಲ್ಲೇಖ ಮಾಡಿದ್ದಾರೆ. ನಿಮಿಷಾ ಜೈಲಿನಲ್ಲಿದ್ರೆ ಅದಕ್ಕೆ ಕಾಂತಪುರಂ ಹೇಳಿಕೆಗಳೇ ಕಾರಣ ಅಂತ ಕೆ.ಎ. ಪಾಲ್ ಹೇಳಿದ್ದಾರೆ.
ಯೆಮೆನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾಳ ಮರಣದಂಡನೆ ತಪ್ಪಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ತಲಾಲ್ ಕುಟುಂಬ ಪರಿಹಾರ ಹಣ ಒಪ್ಪಿಕೊಳ್ಳೋದು ಮುಖ್ಯ. 2017ರಲ್ಲಿ ಯೆಮೆನ್‌ನಲ್ಲಿ ನರ್ಸ್ ಆಗಿದ್ದ ನಿಮಿಷಾ ಪ್ರಿಯಾ, ತಲಾಲ್ ಅಬ್ದುಲ್ ಮಹದಿ ಎಂಬುವವರನ್ನು ಕೊಂದಿದ್ದರು. ತಲಾಲ್ ಪಾಸ್‌ಪೋರ್ಟ್ ತೆಗೆದುಕೊಂಡು ಕಿರುಕುಳ ಕೊಟ್ಟಿದ್ದರಿಂದ ಕೊಲೆ ಮಾಡಿದೆ ಅಂತ ನಿಮಿಷಾ ಹೇಳಿದ್ದರು. ತಲಾಲ್‌ಗೆ ಹೆಚ್ಚಿನ ಡೋಸ್ ಔಷಧಿ ಕೊಟ್ಟು ಕೊಂದು, ಮೃತದೇಹವನ್ನು ನೀರಿನ ಟ್ಯಾಂಕ್‌ನಲ್ಲಿಟ್ಟಿದ್ದರು ಎನ್ನಲಾಗಿದೆ.
ನಿಮಿಷಾ ಅವರಿಗೆ ಜುಲೈ 16, 2025 ರಂದು ಮರಣದಂಡನೆ ನಿಗದಿಯಾಗಿತ್ತು. ಆದರೆ ಭಾರತೀಯ ಅಧಿಕಾರಿಗಳ ರಾಜತಾಂತ್ರಿಕ ಹಸ್ತಕ್ಷೇಪದಿಂದಾಗಿ ಅದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅವರು ಪ್ರಸ್ತುತ ಯೆಮೆನ್ ರಾಜಧಾನಿ ಸನಾದಲ್ಲಿ ಹೌತಿ ಗುಂಪಿನ ನಿಯಂತ್ರಣದಲ್ಲಿರುವ ಜೈಲಿನಲ್ಲಿ ಬಂಧಿತರಾಗಿದ್ದಾರೆ.
ಪಾಲ್ ಮನವಿ
ವೀಡಿಯೊದಲ್ಲಿ ಪಾಲ್, ಅಬ್ದುಲ್ ಫತೇಹ್ ಅವರಿಗೆ ನೇರವಾಗಿ ಮನವಿ ಮಾಡುತ್ತಾ, "ನೀವು ನಿಮಿಷಾ ಅವರನ್ನು ಕ್ಷಮಿಸಿದರೆ, ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆಶೀರ್ವದಿಸುತ್ತಾನೆ" ಎಂದು ಹೇಳಿದ್ದಾರೆ. ಅವರು ಮಾತಿನಲ್ಲಿ ಮುಂದುವರೆದು, "ನಾವು ಹೌತಿ ನಾಯಕರು, ಸ್ಥಳೀಯ ನಾಯಕರು, ಎಲ್ಲರೊಂದಿಗೆ ಸಂಪರ್ಕದಲ್ಲಿದ್ದೇವೆ. ನಿಮಗೆ ಈ ವಿಷಯವು ತಿಳಿದೇ ಇದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪಾಲ್ ತಮ್ಮ ಮಾತಿನಲ್ಲಿ, ಫತೇಹ್ ಅವರ ಕುಟುಂಬ ಅಮೆರಿಕಕ್ಕೆ ಭೇಟಿ ನೀಡಲು ಇಚ್ಛಿಸಿದರೆ ಅದಕ್ಕಾಗಿ ತಾವು ವೈಯಕ್ತಿಕವಾಗಿ ಬೆಂಬಲ ನೀಡಲು ಸಿದ್ಧವಿದ್ದಾರೆಂದು ತಿಳಿಸಿದ್ದಾರೆ. ನೀವು ವಿಧಿಸಬಹುದಾದ ಯಾವುದೇ ಷರತ್ತುಗಳನ್ನು ನಾವು ಈಗಾಗಲೇ ತಿಳಿಸಿದ್ದೇವೆ. ಕ್ಷಮೆ ನೀಡಲು ನೀವು ತೋರಿಸಿರುವ ಮನಸ್ಸಿಗೆ ನಾನು ಧನ್ಯವಾದ ಕೊಡುತ್ತೇನೆ ಎಂದು ಹೇಳಿದ್ದಾರೆ.
ಕಿರಿಯ ಮಗಳು ಮಿಚೆಲ್‌ನ ಭಾವುಕ ಪ್ರಾರ್ಥನೆ
ವೀಡಿಯೊದ ಭಾವುಕ ಘಳಿಗೆಯೊಂದರಲ್ಲಿ, ಅವರ ಕಿರಿಯ ಮಗಳು ಮಿಚೆಲ್ ಪರದೆಯ ಮೇಲೆ ಕಾಣಿಸಿಕೊಂಡು, “ಅಬ್ದುಲ್ ಫತೇಹ್, ಕ್ಷಮಿಸಿ. ಮಮ್ಮಿ, ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮಮ್ಮಿ” ಎಂದು ಕಣ್ಣೀರಿನಿಂದ ಮನವಿ ಮಾಡಿದ್ದಾಳೆ.
ಪ್ರಕರಣದ ಹಿನ್ನೆಲೆ
ಪಾಲಕ್ಕಾಡ್ ಜಿಲ್ಲೆಯ ನಿವಾಸಿಯಾದ ನಿಮಿಷಾ, 2017ರಲ್ಲಿ ಯೆಮೆನ್‌ನಲ್ಲಿದ್ದಾಗ, ಹಣಕಾಸು ವಿವಾದ ಮತ್ತು ಕಿರುಕುಳದ ಹಿನ್ನೆಲೆಯಲ್ಲಿ ಮಹ್ದಿ ಎಂಬ ವ್ಯಕ್ತಿಯನ್ನು ಕೊಂದ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ದಾಖಲಾಗಿದ್ದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023ರ ನವೆಂಬರ್‌ನಲ್ಲಿ ತಿರಸ್ಕರಿಸಿತ್ತು.
ಯೆಮೆನ್‌ನಲ್ಲಿ ಭಾರತಕ್ಕೇನೂ ನೇರ ರಾಜತಾಂತ್ರಿಕ ಉಪಸ್ಥಿತಿ ಇಲ್ಲದ ಕಾರಣ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಪ್ರಕರಣದ ಕುರಿತು ಮಾತುಕತೆ ನಡೆಸುತ್ತಿದೆ. ಭಾರತೀಯ ವಿದೇಶಾಂಗ ಸಚಿವಾಲಯ ನೀಡಿರುವ ಮಾಹಿತಿಯಂತೆ, ಪರಸ್ಪರ ಒಪ್ಪಿಗೆಯ ಪರಿಹಾರವನ್ನು ತಲುಪಲು ಯೆಮೆನ್ ಸರ್ಕಾರದೊಂದಿಗೆ ಹಾಗೂ ಸ್ನೇಹಪರ ರಾಷ್ಟ್ರಗಳೊಂದಿಗೆ ಸತತ ಸಂಪರ್ಕ ಮುಂದುವರಿದಿದೆ.


