ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ. 'ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ' ಎಂಬ ಪ್ರಧಾನಿ ಹೇಳಿಕೆಗೆ ವಿರುದ್ಧವಾಗಿ ಈ ಕ್ರಮವಿದೆ ಎಂದು ಅವರು ಆರೋಪಿಸಿದ್ದಾರೆ.
ನವದೆಹಲಿ (ಜು.29): ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ನೀಡದ್ದರು, ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ, ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ' ಎಂದು ಹಾಗಾದರೆ ಪಾಕಿಸ್ತಾನ ಜೊತೆ ಕ್ರಿಕೆಟ್ ಹೇಗೆ ಆಡುತ್ತೀರಿ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ನಾಗರಿಕರ ಸಾವಿನ ನಂತರವೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯಕ್ಕೆ ಸರ್ಕಾರ ಅನುಮತಿ ನೀಡಿರುವುದನ್ನು ಓವೈಸಿ ತೀವ್ರವಾಗಿ ಖಂಡಿಸಿರು. ರಕ್ತ ಮತ್ತು ನೀರಿನ ತತ್ವವನ್ನು ಒಪ್ಪಿಕೊಂಡಿರುವ ಸರ್ಕಾರವು ಕ್ರಿಕೆಟ್ ಪಂದ್ಯವನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?' ಎಂದು ಅವರು ಪ್ರಶ್ನಿಸಿದ್ದಾರೆ.
ವ್ಯಾಪಾರಕ್ಕೆ ನಿಷೇಧ, ಆದರೆ ಕ್ರಿಕೆಟ್‌ಗೆ ಅನುಮತಿ?
ಪಾಕಿಸ್ತಾನದೊಂದಿಗಿನ ವ್ಯಾಪಾರ ನಿಷೇಧ ಮತ್ತು ಜಲಪ್ರದೇಶಕ್ಕೆ ಅವರ ದೋಣಿಗಳ ಪ್ರವೇಶವನ್ನು ತಡೆಯುವ ಕ್ರಮಗಳನ್ನು ಉಲ್ಲೇಖಿಸಿದ ಓವೈಸಿ, ಅವರ ದೋಣಿಗಳು ನಮ್ಮ ನೀರಿನಲ್ಲಿ ಬರಲು ಸಾಧ್ಯವಿಲ್ಲವಾದರೆ, ಕ್ರಿಕೆಟ್ ಪಂದ್ಯವನ್ನು ಹೇಗೆ ಆಡುತ್ತೀರಿ? ಬೈಸರನ್ ಕಣಿವೆಯಲ್ಲಿ ಜನರನ್ನು ಕೊಂದವರ ಬಗ್ಗೆ ಸರ್ಕಾರಕ್ಕೆ ಯಾವುದೇ ಆತ್ಮಸಾಕ್ಷಿ ಇಲ್ಲವೇ? ನನ್ನ ಆತ್ಮಸಾಕ್ಷಿಯು ಆ ಪಂದ್ಯವನ್ನು ನೋಡಲು ಅನುಮತಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ಸಮನ್ವಯ ಕೊರತೆ
ಬೈಸರನ್ ಕಣಿವೆಯ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನಿಸಿದ ಓವೈಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದ ಕೊರತೆಯೇ ಕಾರಣ ಎಂದಿದ್ದಾರೆ. ಮೊದಲು ಕಣಿವೆಯನ್ನು ಮುಚ್ಚಲಾಗಿದೆ ಎಂದು ಹೇಳಲಾಯಿತು, ಆದರೆ ಈಗ ವರ್ಷವಿಡೀ ತೆರೆದಿರುತ್ತದೆ ಎಂದು ತಿಳಿದುಬಂದಿದೆ. ಇದು ನೀತಿಯ ವಿರೋಧಾಭಾಸವಲ್ಲವೇ? ಎಂದು ಅವರು ಕೇಳಿದ್ದಾರೆ.
ಪಾಕಿಸ್ತಾನ ಮತ್ತು ಇಸ್ರೇಲ್ ಎರಡು ವಿಫಲ ರಾಷ್ಟ್ರ
ಪಾಕಿಸ್ತಾನ ಮತ್ತು ಇಸ್ರೇಲ್ ಎರಡನ್ನೂ ವಿಫಲ ರಾಷ್ಟ್ರಗಳು ಎಂದು ಕರೆದ ಓವೈಸಿ, ಪಾಕಿಸ್ತಾನದ ಸೇನಾ ಮುಖ್ಯಸ್ಥರೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧವನ್ನು ಟೀಕಿಸಿದ್ದಾರೆ. ಅವರು ನಮ್ಮ ಜನರನ್ನು ಕೊಂದವರೊಂದಿಗೆ ಊಟ ಮಾಡುತ್ತಿದ್ದಾರೆ. ಇದು ನಮ್ಮ ವಿದೇಶಾಂಗ ನೀತಿಯ ಯಶಸ್ಸೇ? ಎಂದು ಅವರು ವ್ಯಂಗ್ಯವಾಡಿದ್ದಾರೆ.
ಭಾರತ-ಪಾಕ್ ಯುದ್ಧ ತಡೆಯಲು ಟ್ರಂಪ್ ಯಾರು?
ಶ್ವೇತಭವನದಿಂದ ಯುದ್ಧ ವಿರಾಮ ಘೋಷಿಸುವ ವಿದೇಶಿಯರನ್ನು ಒಪ್ಪಿಕೊಳ್ಳುವುದು ನಮ್ಮ ರಾಷ್ಟ್ರೀಯ ಹೆಮ್ಮೆಗೆ ಒಗ್ಗುತ್ತದೆಯೇ? ಇದು ನಮ್ಮ ಸೈನ್ಯ ಮತ್ತು ಪೈಲಟ್‌ಗಳಿಗೆ ಅವಮಾನವಲ್ಲವೇ? ಎಂದು ಓವೈಸಿ ಕೇಳಿದ್ದಾರೆ. ಅಮೆರಿಕವನ್ನು ಸ್ನೇಹಿತ ರಾಷ್ಟ್ರ ಎಂದು ಪರಿಗಣಿಸುವ ಭಾರತವು ಅವರಿಗೆ ಯಾವುದೇ ಪ್ರಶ್ನೆ ಕೇಳದಿರುವುದು ಯಾವ ರೀತಿಯ ಸ್ನೇಹ? ಎಂದು ಅವರು ಪ್ರಶ್ನಿಸಿದ್ದಾರೆ.
ಚೀನಾದ ಶಸ್ತ್ರಾಸ್ತ್ರ ಪೂರೈಕೆಯ ಬಗ್ಗೆ ಆಕ್ಷೇಪ
ಚೀನಾವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಒದಗಿಸುತ್ತಿರುವ ಬಗ್ಗೆ ಭಾರತವು ಎಂದಾದರೂ ಪ್ರಶ್ನೆ ಕೇಳಿದೆಯೇ ಎಂದು ಓವೈಸಿ ಸರ್ಕಾರವನ್ನು ಕೇಳಿದ್ದಾರೆ. "ವಿಶ್ವಗುರು ಎಂದು ಹೇಳಿಕೊಳ್ಳುವ ಭಾರತವು ಪಾಕಿಸ್ತಾನವನ್ನು ಎಫ್‌ಎಟಿಎಫ್ ವೀಕ್ಷಣಾ ಪಟ್ಟಿಗೆ ಸೇರಿಸಲು ಜಿ7, ಕೊಲ್ಲಿ ರಾಷ್ಟ್ರಗಳು ಮತ್ತು ಅಮೆರಿಕವನ್ನು ಮನವೊಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯನ್ನು ರಾಜಕೀಯಗೊಳಿಸಬೇಡಿ
ಕೊನೆಯಲ್ಲಿ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಓವೈಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. "ಗಾಲ್ವಾನ್ ಸಂಘರ್ಷದ ಸಮಯದಲ್ಲಿ ಅಮೆರಿಕದ ಮಧ್ಯಸ್ಥಿಕೆಯನ್ನು ತಿರಸ್ಕರಿಸಿದ ಭಾರತವು ಇಂದು ಟ್ರಂಪ್‌ರ ಹೇಳಿಕೆಗಳಿಗೆ ಒಪ್ಪಿಕೊಳ್ಳುತ್ತಿದೆ. ಇದು ರಾಜತಾಂತ್ರಿಕ ದೌರ್ಬಲ್ಯವಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.ನಿಮ್ಮ ಪ್ರತಿಕ್ರಿಯೆ ಏನು?
ಈ ವಿವಾದಾತ್ಮಕ ಹೇಳಿಕೆಗಳು ರಾಷ್ಟ್ರೀಯ ಚರ್ಚೆಗೆ ಕಾರಣವಾಗಿವೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಯಾವ ರೀತಿಯ ಉತ್ತರ ಬರಲಿದೆ ಎಂಬುದು ಕಾದುನೋಡಬೇಕಾಗಿದೆ.


