ಪಾಕಿಸ್ತಾನದ ನಿರಂತರ ಉಗ್ರವಾದದ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ೧೯೬೦ರ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನದ ಕೃಷಿ, ಆರ್ಥಿಕತೆ ಮತ್ತು ಜನಜೀವನ ಸಿಂಧೂ ನದಿಯನ್ನೇ ಅವಲಂಬಿಸಿದೆ. ಈ ಕ್ರಮ ಪಾಕಿಸ್ತಾನಕ್ಕೆ ತೀವ್ರ ನೀರಿನ ಬಿಕ್ಕಟ್ಟು ಸೃಷ್ಟಿಸಬಹುದು.
ನವದೆಹಲಿ (ಏ.23): ತನ್ನ ತಲೆಯ ಮೇಲೆ ಕಲ್ಲು ಚಪ್ಪಡಿ ಎಳೆದುಕೊಳ್ಳೋದನ್ನ ಕಲಿಯಬೇಕಾಗಿರುವುದು ಪಾಕಿಸ್ತಾನದಿಂದ ಮಾತ್ರ. ಸ್ವಂತ ನೆಲವನ್ನು ಉಗ್ರಕೃತ್ಯಗಳಲ್ಲಿ ಬಳಸಿಕೊಳ್ಳಲು ಬಿಟ್ಟ ಪಾಕಿಸ್ತಾನದ ಅದಕ್ಕೆ ದೊಡ್ಡ ಬೆಲೆ ತೆತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲಿಯೇ ಭಾರತ ಸರ್ಕಾರ ಇಂದು ನಡೆದ ಭದ್ರತಾ ಸಂಪುಟ ಸಭೆಯಲ್ಲಿ ಅತ್ಯಂತ ಮಹತ್ವದ ನಿರ್ಧಾರ ಮಾಡಿದೆ. ಪಾಕಿಸ್ತಾನದ ಜೊತೆಗೆ 1960 ರಿಂದಲೂ ಇದ್ದ ಸಿಂಧೂ ನದಿ ಒಪ್ಪಂದವನ್ನೇ ಸಸ್ಪೆಂಡ್ ಮಾಡುವ ನಿರ್ಧಾರ ಮಾಡಿದೆ.
ರಾಜತಾಂತ್ರಿಕ ನಿಟ್ಟಿನಲ್ಲಿ ಭಾರತದ ಅತಿದೊಡ್ಡ ಕ್ರಮ ಇದು ಎಂದರೆ ತಪ್ಪಾಗಲಾರದು. ಪಾಕಿಸ್ತಾನದ ಪಾಲಿಗೆ ಇಂಡಸ್ ಅಥವಾ ಸಿಂಧೂ ಕೇವಲ ನದಿಯಲ್ಲ. ಜೀವನದಿ. ಸಿಂಧೂ ನದಿ ಇಲ್ಲದೆ ಪಾಕಿಸ್ತಾನದ ಜನಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇಲ್ಲಿಯವರೆಗೂ ಪಾಕ್ ಪ್ರಾಯೋಜಿತ ಭಯೋತ್ಪಾದನೆಗಳಾದ ಬಳಿಕ ಅಲ್ಲಿನ ನಾಗರೀಕರ ಬಗ್ಗೆ ಕನಿಕರ ತೋರುತ್ತಿದ್ದ ಭಾರತ ಸಿಂಧೂ ನದಿ ಒಪ್ಪಂದವನ್ನು ಮುಂದುವರಿಸಿತ್ತು.
ಪಾಕಿಸ್ತಾನಕ್ಕೆ ಸಿಂಧೂ ನದಿ ಒಪ್ಪಂದ ಯಾಕೆ ಪ್ರಮುಖ
1. ಪಾಕಿಸ್ತಾನದ ವಿಶ್ವದಲ್ಲಿಯೇ ಅತ್ಯಂತ ಬರ ಪೀಡಿತ ದೇಶಗಳಲ್ಲೊಂದು. ಇಡೀ ಪಾಕಿಸ್ತಾನ ವಾರ್ಷಿಕವಾಗಿ ಸರಾಸರಿ 240 ಎಂಎಂ ಮಳೆ ಮಾತ್ರವೇ ಪಡೆಯುತ್ತದೆ. ಹೀಗಿರುವಾಗ ಅವರಿಗೆ ಭಾರತದಿಂದ ಬರುವ ಸಿಂಧೂ ನದಿ ನೀರು ಪ್ರಮುಖ.
2. ಪಾಕಿಸ್ತಾನದ ಶೇ. 76ರಷ್ಟು ನೀರು ಬರುವುದು ಬಾಹ್ಯ ಮೂಲಗಳಿಂದ. ಅದರಲ್ಲೂ ಪ್ರಮುಖವಾಗಿ ಇಂಡಸ್ ಅಥವಾ ಸಿಂಧೂ ಎಂದು ಹೇಳಲಾಗುವ ನದಿಯಿಂದ.
3. ಪಾಕಿಸ್ತಾನದ ಶೇ. 90ರಷ್ಟು ಕೃಷಿ ಚಟುವಟಿಗಳು ಇಂಡಸ್ ನದಿಯ ನೀರಾವರಿ ಮೇಲೆಯೇ ಅವಲಂಬಿತವಾಗಿದೆ.
4. ಪಾಕಿಸ್ತಾನದ ಅತ್ಯಂತ ಪ್ರಮುಖ ಬೆಳೆಗಳಾದ ಗೋಧಿ, ಭತ್ತ, ಹತ್ತಿ ಬೆಳೆಯಲು ಸಿಂಧೂ ನದಿ ನೀರು ಬೇಕೇ ಬೇಕು.
5. ನಿಸ್ಸಂಶಯವಾಗಿ ಸಿಂಧೂ ನದಿ ಹಾಗೂ ಅದರ ಉಪನದಿಗಳಿಂದ ಪಾಕ್ GDP ಯ 24%, 45% ಉದ್ಯೋಗಗಳು, 60% ರಫ್ತುಗಳಿಗೆ ಶಕ್ತಿ ನೀಡುತ್ತವೆ.
6. ಒಪ್ಪಂದವು ಪಾಕ್ ಅನ್ನು ಭಾರತದ ಮೇಲ್ಮುಖ ನಿಯಂತ್ರಣದಿಂದ ರಕ್ಷಿಸುತ್ತದೆ - ಸ್ಥಿರತೆಗೆ ಪ್ರಮುಖ ಆದ್ಯತೆ ನೀಡುತ್ತದೆ
7. ಪಾಕಿಸ್ತಾನದ ಮನೆಗಳು, ಇಂಧನ, ಕಾರ್ಖಾನೆಗಳು ಮತ್ತು ನಗರಗಳಿಗೆ ಸಿಂಧೂ ನದಿ ನೀರು ಅತ್ಯಗತ್ಯ.
Breaking: ಪಾಕ್ ಮೇಲೆ ಮೋದಿ ಜಲಬಾಂಬ್, ಭಾರತದಲ್ಲಿನ ಪಾಕ್ ಪ್ರಜೆಗಳಿಗೆ ದೇಶ ಬಿಡಲು 48 ಗಂಟೆ ಗಡುವು!
8. ಎಲ್ಲಕ್ಕಿಂತ ಮುಖ್ಯವಾಗಿ ಪಾಕಿಸ್ತಾನದ ಬಳಿ ಪ್ಲ್ಯಾನ್ ಬಿ ಇಲ್ಲವೇ ಇಲ್ಲ. ಸಿಂಧೂ ಇಲ್ಲದೆ ಪಾಕಿಸ್ತಾನ ನೀರಿನ ದೊಡ್ಡ ಮಟ್ಟದ ಅಭಾವವನ್ನು ಎದುರಿಸಲಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ: ಪಾಕ್ಗೆ ಪಾಠ ಕಲಿಸಲು ಭಾರತದ ಮುಂದಿರುವ ಕ್ರಮಗಳೇನು?
ಏನಿದು ಇಂಡಸ್ ಜಲ ಒಪ್ಪಂದ: ಪುಲ್ವಾಮಾ ದಾಳಿಯ ವೇಳೆ ಪ್ರಧಾನಿ ನರೇಂದ್ರ ಮೋದಿ, ರಕ್ತ ಹಾಗೂ ನೀರು ಒಟ್ಟಿಗೆ ಹರಿಯಬಾರದು ಎಂದು ಹೇಳಿಕೆ ನೀಡಿದ್ದರು. ಆ ಹಂತದಲ್ಲಿ ಪ್ರಧಾನಿ ಮೋದಿ ಇಂಡಸ್ ವಾಟರ್ ಕಮೀಷನ್ನ ಸಭೆಯನ್ನು ರದ್ದು ಮಾಡುವ ತೀರ್ಮಾನ ಕೈಗೊಂಡಿದ್ದರು. 1960ರ ಸೆಪ್ಟೆಂಬರ್ 19 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಈ ಒಪ್ಪಂದ ನಡೆದಿತ್ತು. ವಿಶ್ವಬ್ಯಾಂಕ್ನ ಮಧ್ಯಸ್ಥಿಕೆಯಲ್ಲಿ ಆಗಿನ ಪ್ರಧಾನಿ ಜವಹರಲಾಲ್ ನೆಹರು ಹಾಗೂ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಭಾರತ ಹಾಗೂ ಪಾಕಿಸ್ತಾನದ ನಡುವೆ ಹರಿಯುವುದು ಸಿಂಧೂ ನದಿ ಮಾತ್ರವೇ ಅಲ್ಲ ಹಲವು ಉಪನದಿಗಳೂ ಹರಿಯುತ್ತವೆ. ನದಿಗಳಾದ ಬಿಯಾಸ್, ರಾವಿ ಹಾಗೂ ಸಟ್ಲೇಜ್ ನದಿಯ ಉಸ್ತುವಾರಿ ಭಾರತ ನೋಡಿಕೊಂಡಿದ್ದರೆ, ಸಿಂಧೂ, ಚೆನಾಬ್ ಹಾಗೂ ಝೇಲಂ ನದಿಯನ್ನು ಪಾಕಿಸ್ತಾನ ನಿರ್ವಹಣೆ ಮಾಡುತ್ತದೆ.
ಒಪ್ಪಂದದ ಅನುಸಾರ ಭಾರತ ಇಂಡಸ್ ನದಿಯಿಂದ ಕೇವಲ ಶೇ. 20ರಷ್ಟು ಅನ್ನು ಮಾತ್ರವೇ ಬಳಕೆ ಮಾಡುತ್ತದೆ. ಇದನ್ನು ನೀರಾವರಿ, ವಿದ್ಯುತ್ ಉತ್ಪಾದನೆ ಹಾಗೂ ಟ್ರಾನ್ಸ್ಪೋರ್ಟ್ಗಾಗಿ ಬಳಸಿಕೊಳ್ಳುತ್ತದೆ.
ಹಾಗೇನಾದರೂ ನದಿ ನೀರು ಹಂಚಿಕೆ ಕುರಿತಾಗಿ ಸಮಸ್ಯೆಗಳು ಎದುರಾದಲ್ಲಿ ಇಂಡಸ್ ವಾಟರ್ ಕಮೀಷನ್ ಎನ್ನುವ ಶಾಶ್ವತ ಮಂಡಳಿ ಇದರ ಪರಿಹಾರ ಮಾಡುತ್ತದೆ. ವಿಶೇಷವೆಂದರೆ ಸಿಂಧೂ ನದಿ ಹುಟ್ಟುವುದು ಚೀನಾದಲ್ಲಿ. ಆದರೆ, ಈ ಒಪ್ಪಂದದಲ್ಲಿ ಚೀನಾ ಇಲ್ಲ.
